Karnataka Farm Loan Waiver: ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಹಿನ್ನಲೆ ರೈತರ ಸಾಲ ಮನ್ನಾ | ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುಳಿವು!

Spread the love

WhatsApp Group Join Now
Telegram Group Join Now

Karnataka Farm Loan Waiver: ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಜಾರಿಗೆ ಬರಲಿದೆಯೇ? ಸಿಎಂ ಡಿಕೆ ಶಿವಕುಮಾರ್ ನೀಡಿದ ಮಹತ್ವದ ಸುಳಿವು ಏನು? ಬರಗಾಲ, ಸಾಲ ಮನ್ನಾ ಬಗ್ಗೆ ರಾಜ್ಯ ಸರ್ಕಾರದ ಮುಂದಿನ ನಿರ್ಧಾರದ ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯದಲ್ಲಿ ಬರಗಾಲ (Drought) ಪರಿಸ್ಥಿತಿ ಗಂಭೀರವಾಗುತ್ತಿರುವ ಹಿನ್ನೆಲೆ ರೈತರ ಸಾಲ ಮನ್ನಾ (Farm Loan Waiver) ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.

ಇದನ್ನೂ ಓದಿ: Heavy Rain Karnataka: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಜುಲೈ 11ರವರೆಗೆ ರಾಜ್ಯದಲ್ಲಿ ಭಾರೀ ಮಳೆ | ಯಾವ ಜಿಲ್ಲೆಗಳಿಗೆ ಹೆಚ್ಚು ಮಳೆ?

ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆ ರೈತರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಬರಗಾಲ ಘೋಷಣೆ ಮಾಡುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಅದೇ ವೇಳೆ ರೈತರ ಸಾಲ ಮನ್ನಾ ವಿಚಾರವನ್ನೂ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಇದನ್ನೂ ಓದಿ: NMMS Scholarship 2026-27: ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹12,000 ನೆರವು | 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಬರಗಾಲ ಪರಿಸ್ಥಿತಿ ಪರಿಶೀಲನೆಗೆ ಸರ್ಕಾರದ ಒತ್ತು

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಂಟಾಗಿರುವ ಬರಗಾಲದ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲು ಭೇಟಿ ನೀಡಿದ್ದಾಗಿ ಹೇಳಿದರು.

ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿಯ ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದೆ. ಸರ್ಕಾರ ಕಾನೂನು ಚೌಕಟ್ಟಿನ (Legal Framework) ಒಳಗೆ ಎಲ್ಲ ಅಂಶಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Mudra Loan: ಗ್ಯಾರಂಟಿ ಇಲ್ಲದೆ ₹20 ಲಕ್ಷ ಮುದ್ರಾ ಲೋನ್ | ಈ ಸಾಲ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ

ಸಾಲ ಮನ್ನಾ ಬಗ್ಗೆ ಏನು ಹೇಳಿದರು?

ಇದೇ ವೇಳೆ ‘ರೈತರ ಸಾಲ ಮನ್ನಾ’ ಕುರಿತು ಕೇಳಿದ ಪ್ರಶ್ನೆಗೆ ‘ಯಾವ ಸಾಲ? ಯಾವ ಬ್ಯಾಂಕ್‌ನ ಸಾಲ? ಯಾವ ವರ್ಗದ ರೈತರಿಗೆ ಸಂಬಂಧಿಸಿದ ಸಾಲ? ಎಂಬುದನ್ನು ಮೊದಲು ಪರಿಶೀಲಿಸಬೇಕು. ರಾಜ್ಯದ ಎಲ್ಲಾ ಭಾಗಗಳ ಪರಿಸ್ಥಿತಿಯನ್ನು ಅಧ್ಯಯನ ಮಾಡಿದ ನಂತರವೇ ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು’ ಎಂದು ಸಿಎಂ ಹೇಳಿದ್ದಾರೆ.

ಇದರಿಂದ ತಕ್ಷಣ ಸಾಲ ಮನ್ನಾ ಘೋಷಣೆ ಆಗಿಲ್ಲವಾದರೂ, ಸರ್ಕಾರ ಈ ವಿಷಯವನ್ನು ಸಂಪೂರ್ಣವಾಗಿ ತಳ್ಳಿಹಾಕಿಲ್ಲ ಎಂಬ ಸಂದೇಶ ರೈತರಿಗೆ ದೊರೆತಿದೆ.

ಇದನ್ನೂ ಓದಿ: Gruha Jyothi Free Electricity: ಗೃಹಜ್ಯೋತಿ ಉಚಿತ ವಿದ್ಯುತ್ ಪಡೆಯುವವರಿಗೆ ಹೊಸ ರೂಲ್ಸ್ | ಈ ದಾಖಲೆ ಇಲ್ಲದಿದ್ದರೆ ಕರೆಂಟ್ ಕಟ್!

ತಮಿಳುನಾಡಿನ ಸಾಲ ಮನ್ನಾ ಮಾದರಿ

ಇತ್ತೀಚೆಗೆ ತಮಿಳುನಾಡು ಸರ್ಕಾರ ರೈತರಿಗೆ ಮಹತ್ವದ ನೆರವು ಘೋಷಿಸಿದೆ. ಅಲ್ಲಿ ಸಹಕಾರಿ ಬ್ಯಾಂಕುಗಳಲ್ಲಿ (Co-operative Banks) ಪಡೆದಿರುವ ₹75,000 ವರೆಗಿನ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ.

ಇದಕ್ಕಿಂತ ಹೆಚ್ಚಿನ ಸಾಲ ಹೊಂದಿರುವ ರೈತರಿಗೆ ₹35,000 ವರೆಗೆ ವಿಶೇಷ ಸಾಲ ರಿಯಾಯಿತಿ ನೀಡುವ ನಿರ್ಧಾರವನ್ನೂ ಕೈಗೊಂಡಿದೆ. ಸರ್ಕಾರದ ಪ್ರಕಟಣೆಯ ಪ್ರಕಾರ, 2025ರ ಮೇ 1ರಿಂದ 2026ರ ಫೆಬ್ರವರಿ 28ರವರೆಗೆ ಇರುವ ಅರ್ಹ ಸಾಲಗಳನ್ನು ಈ ಯೋಜನೆಯಡಿ ಪರಿಗಣಿಸಲಾಗಿದೆ.

WhatsApp Group Join Now
Telegram Group Join Now

ಈ ಯೋಜನೆಯಿಂದ ಸುಮಾರು 14.43 ಲಕ್ಷ ರೈತರಿಗೆ ನೇರ ಪ್ರಯೋಜನವಾಗಲಿದ್ದು, ಸರ್ಕಾರದ ಖಜಾನೆಗೆ ಸುಮಾರು ₹5,932 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ.

ಇದನ್ನೂ ಓದಿ: Government Employees DA Hike: ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ | ಜುಲೈನಿಂದ 3% ಡಿಎ ಹೆಚ್ಚಳ? ಸಂಬಳ ಎಷ್ಟು ಏರಿಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

Karnataka Farm Loan Waiver
Karnataka Farm Loan Waiver

ಮಹಾರಾಷ್ಟ್ರದಲ್ಲೂ ಸಾಲ ಮನ್ನಾ ಚರ್ಚೆ

ತಮಿಳುನಾಡಿನ ನಂತರ ಮಹಾರಾಷ್ಟ್ರದಲ್ಲೂ ರೈತರ ನೆರವಿಗಾಗಿ ಹೊಸ ಸಾಲ ಮನ್ನಾ ಯೋಜನೆ ಕುರಿತು ಚರ್ಚೆ ನಡೆಯುತ್ತಿದೆ. ರೈತರ ಆರ್ಥಿಕ ಸಂಕಷ್ಟ ನಿವಾರಣೆಗೆ ವಿವಿಧ ರಾಜ್ಯಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲ ಮನ್ನಾ ಅಥವಾ ವಿಶೇಷ ಪ್ಯಾಕೇಜ್‌ಗಳನ್ನು ಘೋಷಿಸುತ್ತಿವೆ. ಈ ಬೆಳವಣಿಗೆಗಳು ಕರ್ನಾಟಕದಲ್ಲೂ ಸಾಲ ಮನ್ನಾ ಕುರಿತು ಚರ್ಚೆಗೆ ಮತ್ತಷ್ಟು ವೇಗ ನೀಡಿವೆ.

ಇದನ್ನೂ ಓದಿ: Karnataka Gram Panchayat Election 2026: ಇನ್ನೆರಡು ತಿಂಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ? ರಾಜ್ಯ ಸರ್ಕಾರದಿಂದ ಬಂತು ಮಹತ್ವದ ಮಾಹಿತಿ

ಕರ್ನಾಟಕದಲ್ಲೂ ಸಾಲ ಮನ್ನಾ ಸಾಧ್ಯವೇ?

ಸದ್ಯಕ್ಕೆ ಕರ್ನಾಟಕ ಸರ್ಕಾರ ಯಾವುದೇ ಅಧಿಕೃತ ಸಾಲ ಮನ್ನಾ ಯೋಜನೆಯನ್ನು ಘೋಷಿಸಿಲ್ಲ. ಆದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಪರಿಶೀಲಿಸಲಾಗುವುದು’ ಎಂದು ಹೇಳಿರುವುದು ರೈತರಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ಮುಂದಿನ ದಿನಗಳಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ, ಬರಗಾಲದ ತೀವ್ರತೆ ಹಾಗೂ ರೈತರ ಬೇಡಿಕೆಯನ್ನು ಆಧರಿಸಿ ಸರ್ಕಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: Mane Manege e-Swathu: ‘ಮನೆ ಮನೆಗೆ ಇ-ಸ್ವತ್ತು’ ಅಭಿಯಾನ | ಮುಂದಿನ ತಿಂಗಳಿಂದ ಮನೆ ಬಾಗಿಲಲ್ಲೇ ಸಿಗಲಿದೆ ಇ-ಸ್ವತ್ತು

ಕರ್ನಾಟಕದಲ್ಲಿ ಸಾಲ ಮನ್ನಾ ಇತಿಹಾಸ

ಹಾಗೇ ನೋಡಿದರೆ, ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಹೊಸ ವಿಷಯವಲ್ಲ. ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರ ಕೃಷಿ ಸಾಲ ಮನ್ನಾ ಯೋಜನೆ ಜಾರಿಗೊಂಡಿತ್ತು.

ಆ ಸಂದರ್ಭದಲ್ಲಿ ಗರಿಷ್ಠ ₹1 ಲಕ್ಷದವರೆಗೆ ಕೃಷಿ ಸಾಲ ಮನ್ನಾ ಘೋಷಿಸಲಾಗಿತ್ತು. ಲಕ್ಷಾಂತರ ರೈತರು ಇದರ ಲಾಭ ಪಡೆದು ಸಾಲದ ಒತ್ತಡದಿಂದ ಹೊರಬಂದಿದ್ದರು. ಆ ಯೋಜನೆ ರಾಜ್ಯದ ಕೃಷಿ ಕ್ಷೇತ್ರದಲ್ಲಿ ಪ್ರಮುಖ ನಿರ್ಧಾರವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Indira Kit Distribution: ಬಿಪಿಎಲ್ ಕಾರ್ಡುದಾರರಿಗೆ ಇಂದಿರಾ ಕಿಟ್ ವಿತರಣೆ | ಸರ್ಕಾರದ ಮಹತ್ವದ ಮಾಹಿತಿ ಇಲ್ಲಿದೆ…

ನಂತರದ ಸರ್ಕಾರಗಳು ಯಾವ ಕ್ರಮ ಕೈಗೊಂಡವು?

ನAತರ ಅಧಿಕಾರಕ್ಕೆ ಬಂದ ಸರ್ಕಾರಗಳು ನೇರ ಸಾಲ ಮನ್ನಾ ಘೋಷಿಸದಿದ್ದರೂ, ರೈತರ ನೆರವಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದವು.

ಬಡ್ಡಿ ಸಬ್ಸಿಡಿ (Interest Subsidy), ಬೆಳೆ ಪರಿಹಾರ (Crop Compensation), ಕೃಷಿ ಯಾಂತ್ರೀಕರಣ (Farm Mechanization), ನೀರಾವರಿ (Irrigation) ಯೋಜನೆಗಳು ಹಾಗೂ ವಿವಿಧ ಕೃಷಿ ಸಹಾಯಧನ (Subsidy) ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಯಿತು.

ಇದನ್ನೂ ಓದಿ: Gruha Jyothi Scheme Status: ಗೃಹಜ್ಯೋತಿ ಉಚಿತ ವಿದ್ಯುತ್: ನಿಮ್ಮ ಹೆಸರು ಲಿಸ್ಟ್’ನಲ್ಲಿದೆಯಾ? ಸುಲಭವಾಗಿ ಚೆಕ್ ಮಾಡಿಕೊಳ್ಳಿ!

ಸಾಲ ಮನ್ನಾ ಘೋಷಣೆ ಏಕೆ ಆಗಲಿಲ್ಲ?

ಹಿಂದಿನ ಸರ್ಕಾರದ ಅವಧಿಯಲ್ಲಿ ರೈತ ಸಂಘಟನೆಗಳು ಹಲವು ಬಾರಿ ಸಾಲ ಮನ್ನಾಕ್ಕೆ ಒತ್ತಾಯಿಸಿದ್ದವು. ಆದರೆ ರಾಜ್ಯ ಸರ್ಕಾರದ ಮೇಲೆ ಈಗಾಗಲೇ ವಿವಿಧ ಗ್ಯಾರಂಟಿ ಯೋಜನೆಗಳ (Guarantee Schemes) ಆರ್ಥಿಕ ಹೊರೆ ಹೆಚ್ಚಾಗಿತ್ತು.

ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಸೇರಿದಂತೆ ಹಲವು ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚವಾಗುತ್ತಿರುವ ಕಾರಣ, ದೊಡ್ಡ ಪ್ರಮಾಣದ ಸಾಲ ಮನ್ನಾ ಯೋಜನೆ ಜಾರಿಗೆ ತರುವುದು ಆರ್ಥಿಕವಾಗಿ ಸವಾಲಿನ ವಿಷಯವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಬಡ್ಡಿ ರಿಯಾಯಿತಿ, ಸಾಲ ಸೌಲಭ್ಯ ವಿಸ್ತರಣೆ ಹಾಗೂ ಕೃಷಿ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡಿತ್ತು.

ಇದನ್ನೂ ಓದಿ: July Monsoon Rain: ಜುಲೈ ತಿಂಗಳಲ್ಲಿ ಹೇಗಿದೆ ಮುಂಗಾರು ಮಳೆ? ಹವಾಮಾನ ಇಲಾಖೆ ಎಚ್ಚರಿಕೆ ವರದಿ ಇಲ್ಲಿದೆ…

ಈಗ ರೈತರು ಏನನ್ನು ನಿರೀಕ್ಷಿಸಬಹುದು?

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಇತ್ತೀಚಿನ ಹೇಳಿಕೆಯಿಂದ ರೈತರಲ್ಲಿ ಹೊಸ ನಿರೀಕ್ಷೆ ಮೂಡಿದೆ. ಆದರೆ ಸದ್ಯಕ್ಕೆ ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಘೋಷಣೆ ಆಗಿಲ್ಲ ಎಂಬುದನ್ನು ಗಮನದಲ್ಲಿಡಬೇಕು.

ಸರ್ಕಾರ ರಾಜ್ಯದ ಬರಗಾಲ ಪರಿಸ್ಥಿತಿ, ರೈತರ ಸಮಸ್ಯೆಗಳು, ಆರ್ಥಿಕ ಸ್ಥಿತಿ ಹಾಗೂ ಕಾನೂನು ಪ್ರಕ್ರಿಯೆಗಳನ್ನು ಪರಿಶೀಲಿಸಿದ ಬಳಿಕವೇ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ಹೀಗಾಗಿ ರೈತರು ಸರ್ಕಾರದಿಂದ ಹೊರಬರುವ ಅಧಿಕೃತ ಪ್ರಕಟಣೆಗಳತ್ತ ಗಮನ ಹರಿಸುವುದು ಸೂಕ್ತ. ಮುಂದಿನ ದಿನಗಳಲ್ಲಿ ಸರ್ಕಾರ ಯಾವ ರೀತಿಯ ನೆರವು ಘೋಷಿಸುತ್ತದೆ ಎಂಬುದರ ಮೇಲೆ ಲಕ್ಷಾಂತರ ರೈತರ ನಿರೀಕ್ಷೆ ನೆಟ್ಟಿದೆ.

PM-Kisan Hosa arji: ಪಿಎಂ ಕಿಸಾನ್ ಹೊಸ ಅರ್ಜಿ ಆಹ್ವಾನ | ಯಾವ ರೈತರು ಅರ್ಜಿ ಹಾಕಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ


Spread the love
error: Content is protected !!