Indira Kit Distribution: ಬಿಪಿಎಲ್ ಕಾರ್ಡುದಾರರಿಗೆ ಇಂದಿರಾ ಕಿಟ್ ವಿತರಣೆ | ಸರ್ಕಾರದ ಮಹತ್ವದ ಮಾಹಿತಿ ಇಲ್ಲಿದೆ…

Spread the love

WhatsApp Group Join Now
Telegram Group Join Now

Indira Kit Distribution: ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ ಇಂದಿರಾ ಕಿಟ್ ವಿತರಣೆ ಕುರಿತು ರಾಜ್ಯ ಸರ್ಕಾರ ಮಹತ್ವದ ನಿರ್ಣಯ ಕೈಗೊಳ್ಳುವ ಸೂಚನೆ ಇದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ….

ರಾಜ್ಯದ ಬಿಪಿಎಲ್ (BPL) ಮತ್ತು ಅಂತ್ಯೋದಯ (Antyodaya) ಪಡಿತರ ಕಾರ್ಡುದಾರರಿಗೆ ಅಕ್ಕಿಯ ಜೊತೆಗೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ಒಳಗೊಂಡ ಇಂದಿರಾ ಕಿಟ್ (Indira Kit) ನೀಡುವ ಯೋಜನೆ ಸದ್ಯಕ್ಕೆ ಆರಂಭವಾಗುವುದಿಲ್ಲ ಎನ್ನುವುದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ: Gruha Jyothi Revision Gruha Lakshmi Verification: ಗೃಹಜ್ಯೋತಿ ಜೊತೆಗೆ ಗೃಹಲಕ್ಷ್ಮಿ ಯೋಜನೆ ಮನೆ ಮನೆ ಪರಿಶೀಲನೆ | ಸಿಎಂ ಡಿಕೆಶಿ ಸೂಚನೆ

ಕಳೆದ ಹಲವು ತಿಂಗಳುಗಳಿಂದ ಈ ಯೋಜನೆ ಬಗ್ಗೆ ಸಾಕಷ್ಟು ಚರ್ಚೆ ನಡೆದಿದ್ದರೂ, ಟೆಂಡರ್ (Tender) ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಸರ್ಕಾರ ತಾತ್ಕಾಲಿಕವಾಗಿ ಈ ಯೋಜನೆಯನ್ನು ಮುಂದೂಡಿದೆ.

ಹೀಗಾಗಿ ಸದ್ಯಕ್ಕೆ ಅನ್ನಭಾಗ್ಯ (Anna Bhagya) ಯೋಜನೆಯಡಿ ಈಗ ನೀಡುತ್ತಿರುವಂತೆ ಅಕ್ಕಿ ವಿತರಣೆಯನ್ನೇ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: July Monsoon Rain: ಜುಲೈ ತಿಂಗಳಲ್ಲಿ ಹೇಗಿದೆ ಮುಂಗಾರು ಮಳೆ? ಹವಾಮಾನ ಇಲಾಖೆ ಎಚ್ಚರಿಕೆ ವರದಿ ಇಲ್ಲಿದೆ…

ಇಂದಿರಾ ಕಿಟ್‌ನಲ್ಲಿ ಏನೆಲ್ಲ ಸಿಗಬೇಕಿತ್ತು?

ಸರ್ಕಾರ ರೂಪಿಸಿದ್ದ ಯೋಜನೆಯ ಪ್ರಕಾರ, ಬಿಪಿಎಲ್ ಮತ್ತು ಅಂತ್ಯೋದಯ ಕುಟುಂಬಗಳಿಗೆ ಅಕ್ಕಿಯ ಬದಲು ಅಥವಾ ಅದರೊಂದಿಗೆ ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ ಮತ್ತು ಅಯೋಡಿನ್ ಉಪ್ಪು ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳನ್ನು ಒಳಗೊಂಡ ಕಿಟ್ ನೀಡುವ ಉದ್ದೇಶವಿತ್ತು.

ಈ ಯೋಜನೆ ಜಾರಿಗೆ ಬರಲೆಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಈಗಾಗಲೇ ರಾಜ್ಯದ 31 ಜಿಲ್ಲೆಗಳನ್ನು ಐದು ವಿಭಾಗಗಳಾಗಿ ವಿಂಗಡಿಸಿ ಸಿದ್ಧತೆ ಆರಂಭಿಸಿತ್ತು.

ಇದನ್ನೂ ಓದಿ: Pitrarjita Aasti Hakku: ಪಿತ್ರಾರ್ಜಿತ ಆಸ್ತಿ ಎಂದರೇನು? ಯಾರಿಗೆಲ್ಲ ಹಕ್ಕು ಇರುತ್ತದೆ? ಆಸ್ತಿ ಹಕ್ಕುಗಳ ಸಂಪೂರ್ಣ ಮಾಹಿತಿ

ಟೆಂಡರ್ ಪ್ರಕ್ರಿಯೆಯಲ್ಲೇ ಸಿಲುಕಿದ ಯೋಜನೆ

ಆಹಾರ ಪದಾರ್ಥಗಳ ಖರೀದಿಗಾಗಿ ಸರ್ಕಾರ ಟೆಂಡರ್ ಆಹ್ವಾನಿಸಿತ್ತು. ಸುಮಾರು 20ಕ್ಕೂ ಹೆಚ್ಚು ಕಂಪನಿಗಳು ಬಿಡ್ ಸಲ್ಲಿಸಿದ್ದವು. ಆದರೆ ಟೆಂಡರ್ ಹಂಚಿಕೆ ವಿಚಾರದಲ್ಲಿ ಹಲವು ರೀತಿಯ ಭಿನ್ನಾಭಿಪ್ರಾಯಗಳು ಮತ್ತು ಲಾಬಿ ನಡೆದಿವೆ ಎಂಬ ಆರೋಪಗಳು ಕೇಳಿಬಂದವು.

ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ಕೆಲವು ಕಂಪನಿಗಳು ನ್ಯಾಯಾಲಯದ ಮೊರೆ ಹೋಗಲು ಮುಂದಾದವು. ಪರಿಣಾಮ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಇಂದಿರಾ ಕಿಟ್ ಯೋಜನೆಯೂ ವಿಳಂಬವಾಗಿದೆ.

ಈಗ ಕೆಲವು ಷರತ್ತುಗಳನ್ನು ಬದಲಾಯಿಸಿ ಮತ್ತೊಮ್ಮೆ ಟೆಂಡರ್ ಕರೆಯುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: PM Awas Yojana 2026: ಪಿಎಂ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನ | ಯಾರಿಗೆ ಸಿಗಲಿದೆ ಈ ಸೌಲಭ್ಯ? ಇಲ್ಲಿದೆ ಸಂಪೂರ್ಣ ಮಾಹಿತಿ

Indira Kit Distribution
Indira Kit Distribution

ಸರ್ಕಾರ ಏಕೆ ಹಿಂದೆ ಸರಿಯಿತು?

ಟೆಂಡರ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಮತ್ತೊಂದೆಡೆ ಯೋಜನೆ ಜಾರಿಗೆ ತರುವುದು ಸರ್ಕಾರ ಅಂದುಕೊAಡಷ್ಟು ಸುಲಭವಾಗಿಲ್ಲ.

WhatsApp Group Join Now
Telegram Group Join Now

ಪ್ರತಿ ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೆ ಎಂಬುದನ್ನು ಆಧರಿಸಿ ಆಹಾರ ಪದಾರ್ಥಗಳನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಬೇಕು. ಅದಕ್ಕೆ ಸಾಕಷ್ಟು ಸಮಯ, ಸಿಬ್ಬಂದಿ ಮತ್ತು ದೊಡ್ಡ ಪ್ರಮಾಣದ ಗೋದಾಮುಗಳ ಅಗತ್ಯವಿದೆ.

ಇದರ ಜೊತೆಗೆ ತೊಗರಿಬೇಳೆ, ಎಣ್ಣೆ, ಸಕ್ಕರೆ ಹಾಗೂ ಉಪ್ಪನ್ನು ಪ್ರತ್ಯೇಕ ಟೆಂಡರ್ ಮೂಲಕ ಖರೀದಿಸಬೇಕಾಗುತ್ತದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆಯ ನಿಯಮಗಳನ್ನು ಪಾಲಿಸಿಕೊಂಡು ಈ ಪ್ರಕ್ರಿಯೆ ಪೂರ್ಣಗೊಳಿಸುವುದೂ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ.

ಇದನ್ನೂ ಓದಿ: Gruha Lakshmi Scheme Doorstep Verification: ಮನೆ ಬಾಗಿಲಲ್ಲೇ ಗೃಹಲಕ್ಷ್ಮೀ ಯೋಜನೆಗೆ ಮರು ಅರ್ಜಿ | ಸರ್ಕಾರದ ಮಹತ್ವದ ನಿರ್ಧಾರ

ಕ್ಯೂಆರ್ ಕೋಡ್‌ನಿಂದ ದುರ್ಬಳಕೆ ತಡೆಗೆ ಯೋಜನೆ

ಕಿಟ್ ದುರ್ಬಳಕೆಯಾಗದಂತೆ ಪ್ರತಿಯೊಂದು ಕಿಟ್ ಮೇಲೂ ಕ್ಯೂಆರ್ ಕೋಡ್ ಅಳವಡಿಸುವ ಯೋಜನೆಯೂ ಇತ್ತು. ಅಲ್ಲದೆ ಪ್ರತಿ ತಿಂಗಳು ಸುಮಾರು 1.25 ಕೋಟಿ ಪಡಿತರ ಕಾರ್ಡುದಾರರಿಗೆ 57 ಸಾವಿರ ಮೆಟ್ರಿಕ್ ಟನ್‌ಗಿಂತ ಹೆಚ್ಚು ಆಹಾರ ಪದಾರ್ಥಗಳನ್ನು ಗೋದಾಮುಗಳಿಂದ ನ್ಯಾಯಬೆಲೆ ಅಂಗಡಿಗಳಿಗೆ ತಲುಪಿಸುವುದು ಕೂಡ ದೊಡ್ಡ ಜವಾಬ್ದಾರಿಯಾಗಿದೆ. ಈ ಎಲ್ಲ ಕಾರಣಗಳಿಂದ ಯೋಜನೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: E-Swathu: ಗ್ರಾಮ ಪಂಚಾಯತಿ ವ್ಯಾಪ್ತಿಯ ‘ಇ-ಸ್ವತ್ತು’ ನಿಯಮ ಸಡಿಲಿಕೆ | ಸರ್ಕಾರದ ಮಹತ್ವದ ಘೋಷಣೆ

ಕಾರ್ಡುದಾರರು ಈಗ ಏನು ಮಾಡಬೇಕು?

ಸದ್ಯಕ್ಕೆ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರು ಇಂದಿರಾ ಕಿಟ್ ವಿತರಣೆ ಆರಂಭವಾಗಲಿದೆ ಎಂಬ ಸುದ್ದಿಗಳ ಬಗ್ಗೆ ಗೊಂದಲಕ್ಕೊಳಗಾಗಬೇಕಿಲ್ಲ. ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳುವವರೆಗೆ ಅನ್ನಭಾಗ್ಯ ಯೋಜನೆಯಡಿ ಈಗಿನಂತೆ ಅಕ್ಕಿ ವಿತರಣೆ ಮುಂದುವರಿಯಲಿದೆ.

ಮುAದಿನ ದಿನಗಳಲ್ಲಿ ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಸರ್ಕಾರ ಅಂತಿಮ ನಿರ್ಧಾರ ಕೈಗೊಂಡರೆ ಮಾತ್ರ ಇಂದಿರಾ ಕಿಟ್ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಫಲಾನುಭವಿಗಳು ಯಾವುದೇ ವದಂತಿಗಳನ್ನು ನಂಬದೆ ಸರ್ಕಾರದ ಅಧಿಕೃತ ಮಾಹಿತಿಯನ್ನೇ ಗಮನಿಸುವುದು ಒಳಿತು.

BPL Ration Card New Application: ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ | ಮಹತ್ವದ ಮಾಹಿತಿ ಇಲ್ಲಿದೆ…


Spread the love
error: Content is protected !!