Karnataka Gram Panchayat Election 2026: ರಾಜ್ಯದಲ್ಲಿ ಮುಂದಿನ 2 ತಿಂಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದ್ದು, ವಾರ್ಡ್ ಮೀಸಲಾತಿ ಪ್ರಕ್ರಿಯೆ ಚುರುಕುಗೊಂಡಿದೆ. ಸರ್ಕಾರದ ಹೊಸ ಮಾರ್ಗಸೂಚಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ…
ಕರ್ನಾಟಕದಲ್ಲಿ ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಗ್ರಾಮ ಪಂಚಾಯಿತಿ ಚುನಾವಣೆಗಳ (Gram Panchayat Elections) ಕಾವು ಇದೀಗ ಮತ್ತೆ ಏರತೊಡಗಿದೆ. ಚುನಾವಣೆಗೆ ಬೇಕಾದ ಪೂರ್ವಸಿದ್ಧತೆಗಳನ್ನು ಸರ್ಕಾರ ಈಗಾಗಲೇ ಸಮರೋಪಾದಿಯಲ್ಲಿ ಆರಂಭಿಸಿದೆ.
ತಾAತ್ರಿಕ ಕಾರಣಗಳಿಂದಾಗಿ ಕೊಂಚ ವಿಳಂಬವಾಗಿದ್ದ ಈ ಚುನಾವಣೆಗಳು ಮುಂದಿನ ಎರಡು ತಿಂಗಳೊಳಗೆ ನಡೆಯಲಿವೆ ಎಂದು ಪಂಚಾಯತ್ರಾಜ್ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಬಾಕಿ ಅನುದಾನ ಬಿಡುಗಡೆಗೆ ಆಗ್ರಹ (Demand for Pending Funds)
ನವದೆಹಲಿಯಲ್ಲಿ ಇತ್ತೀಚೆಗೆ ನಡೆದ 16ನೇ ಹಣಕಾಸು ಆಯೋಗದ (16th Finance Commission) ಅನುದಾನ ಬಿಡುಗಡೆ ಪ್ರಕ್ರಿಯೆ ಕುರಿತ ಸಮಾವೇಶದಲ್ಲಿ ಸಚಿವ ಈಶ್ವರ ಖಂಡ್ರೆ ಅವರು ರಾಜ್ಯದ ಪರವಾಗಿ ಧ್ವನಿ ಎತ್ತಿದ್ದಾರೆ.
ಇದನ್ನೂ ಓದಿ: Hasu Emme Khareedi Subsidy: ಹಸು, ಎಮ್ಮೆ ಖರೀದಿಸಲು ಸರ್ಕಾರದ ಸಹಾಯಧನ | ಮಹಿಳೆಯರಿಂದ ಅರ್ಜಿ ಆಹ್ವಾನ
ಕೇಂದ್ರ ಪಂಚಾಯತ್ರಾಜ್ ಸಚಿವಾಲಯ ಕೇಳಿದ್ದ ಎಲ್ಲಾ ಪ್ರಶ್ನೆಗಳಿಗೂ ರಾಜ್ಯ ಸರ್ಕಾರ ಸೂಕ್ತ ಹಾಗೂ ಸಮರ್ಪಕ ಉತ್ತರ ನೀಡಿದೆ. ಆದರೂ, 2025-26ನೇ ಸಾಲಿನ ಅನುದಾನವನ್ನು ಕರ್ನಾಟಕದ ಗ್ರಾಮ ಪಂಚಾಯಿತಿಗಳಿಗೆ ಇನ್ನೂ ಬಿಡುಗಡೆ ಮಾಡಿಲ್ಲ.
ಸಣ್ಣಪುಟ್ಟ ಲೋಪದೋಷಗಳನ್ನು ಬದಿಗೊತ್ತಿ, 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ಬರಬೇಕಾದ 2,186 ಕೋಟಿ ರೂ. ಬಾಕಿ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಸಚಿವ ಈಶ್ವರ ಖಂಡ್ರೆ ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Indira Kit Distribution: ಬಿಪಿಎಲ್ ಕಾರ್ಡುದಾರರಿಗೆ ಇಂದಿರಾ ಕಿಟ್ ವಿತರಣೆ | ಸರ್ಕಾರದ ಮಹತ್ವದ ಮಾಹಿತಿ ಇಲ್ಲಿದೆ…
ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆ (Ward Delimitation & Reservation)
ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಹಲವು ಮಹತ್ವದ ಹೆಜ್ಜೆಗಳನ್ನು ಇರಿಸಿದೆ. ಈಗಾಗಲೇ ಅವಧಿ ಮುಕ್ತಾಯಗೊಂಡಿರುವ ಗ್ರಾಮ ಪಂಚಾಯಿತಿಗಳ ಕ್ಷೇತ್ರ ಪುನರ್ವಿಂಗಡಣೆ (Ward Delimitation) ಪ್ರಕ್ರಿಯೆ ಸಂಪೂರ್ಣಗೊAಡಿದೆ.
ಪ್ರಸ್ತುತ ವಾರ್ಡ್ವಾರು ಮೀಸಲಾತಿ (Ward-wise Reservation) ನಿಗದಿಪಡಿಸುವ ಕಾರ್ಯ ಬಿರುಸಿನಿಂದ ಸಾಗುತ್ತಿದೆ. ಈ ಕುರಿತಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ (District Commissioners) ಸರ್ಕಾರ ಅಧಿಕೃತ ಸುತ್ತೋಲೆ ಹೊರಡಿಸಿದ್ದು, ನಿಗದಿತ ಸಮಯದೊಳಗೆ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಇದನ್ನೂ ಓದಿ: Gruha Jyothi Scheme Status: ಗೃಹಜ್ಯೋತಿ ಉಚಿತ ವಿದ್ಯುತ್: ನಿಮ್ಮ ಹೆಸರು ಲಿಸ್ಟ್’ನಲ್ಲಿದೆಯಾ? ಸುಲಭವಾಗಿ ಚೆಕ್ ಮಾಡಿಕೊಳ್ಳಿ!
ಹೈಕೋರ್ಟ್ ಮೆಟ್ಟಿಲೇರಿದ್ದ ಚುನಾವಣಾ ಆಯೋಗ (State Election Commission in High Court)
ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ನಿಗದಿತ ಅವಧಿಯೊಳಗೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ಕೋರಿ ‘ರಾಜ್ಯ ಚುನಾವಣಾ ಆಯೋಗ’ವು (State Election Commission) ಹೈಕೋರ್ಟ್’ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL – Public Interest Litigation) ಸಲ್ಲಿಸಿತ್ತು.

ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿದ್ದು, ‘ಅವಧಿ ಮುಗಿದಿರುವ ಗ್ರಾ.ಪಂ.ಗಳ ಸದಸ್ಯರ ಸಂಖ್ಯೆಯನ್ನು ಈಗಾಗಲೇ ನಿರ್ಧರಿಸಲಾಗಿದೆ. ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಕಡತಗಳನ್ನು ರವಾನಿಸಲಾಗಿದೆ. ಅತಿ ಶೀಘ್ರದಲ್ಲಿಯೇ ಅಂತಿಮ ಮೀಸಲಾತಿ ಅಧಿಸೂಚನೆ ಪ್ರಕಟಿಸಲಾಗುವುದು’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: July Monsoon Rain: ಜುಲೈ ತಿಂಗಳಲ್ಲಿ ಹೇಗಿದೆ ಮುಂಗಾರು ಮಳೆ? ಹವಾಮಾನ ಇಲಾಖೆ ಎಚ್ಚರಿಕೆ ವರದಿ ಇಲ್ಲಿದೆ…
ವಾರ್ಡ್ ವಿಂಗಡಣೆಗೆ ಹೊಸ ಮಾರ್ಗಸೂಚಿ (New Guidelines for Delimitation)
ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಏಕರೂಪತೆ ಕಾಯ್ದುಕೊಳ್ಳಲು ಸರ್ಕಾರ ಕೆಲವೊಂದು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದೆ:
ಮತಗಟ್ಟೆಗಳೇ ವಾರ್ಡ್’ಗಳು: ಗ್ರಾಮ ಪಂಚಾಯಿತಿ ವ್ಯಾಪ್ತಿಯೊಳಗಿನ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳನ್ನೇ (Polling Stations) ವಾರ್ಡ್’ಗಳಾಗಿ ಪರಿಗಣಿಸಿ ಗಡಿಗಳನ್ನು ಗುರುತಿಸಲು ಸೂಚಿಸಲಾಗಿದೆ.
2011ರ ಜನಗಣತಿ ಆಧಾರ: ವಾರ್ಡ್’ಗಳ ಜನಸಂಖ್ಯೆ ಲೆಕ್ಕಾಚಾರಕ್ಕಾಗಿ ಕೇವಲ 2011ರ ಜನಗಣತಿಯ (Census 2011) ಅಂಕಿ-ಅಂಶಗಳನ್ನು ಮಾತ್ರ ಬಳಸಬೇಕು ಎಂದು ಸರ್ಕಾರ ಕಟ್ಟುನಿಟ್ಟಾಗಿ ಆದೇಶಿಸಿದೆ. ಇದರಿಂದ ರಾಜ್ಯಾದ್ಯಂತ ಏಕರೂಪದ ಮಾನದಂಡ (Uniform Criteria) ಅನುಸರಿಸಲು ಅನುಕೂಲವಾಗಲಿದೆ.
ಒಟ್ಟಾರೆಯಾಗಿ, ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ (Gram Panchayat Election 2026) ಕಹಳೆ ಮೊಳಗಲು ಕ್ಷಣಗಣನೆ ಶುರುವಾಗಿದ್ದು, ಮೀಸಲಾತಿ ಪಟ್ಟಿ ಹೊರಬೀಳುತ್ತಿದ್ದಂತೆಯೇ ಹಳ್ಳಿಗಳ ರಾಜಕೀಯ ಅಖಾಡ ರಂಗೇರಲಿದೆ.
Mane Manege e-Swathu: ‘ಮನೆ ಮನೆಗೆ ಇ-ಸ್ವತ್ತು’ ಅಭಿಯಾನ | ಮುಂದಿನ ತಿಂಗಳಿಂದ ಮನೆ ಬಾಗಿಲಲ್ಲೇ ಸಿಗಲಿದೆ ಇ-ಸ್ವತ್ತು

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.