PM Kisan 23rd Installment: ಪಿಎಂ ಕಿಸಾನ್ ಯೋಜನೆಯ 23ನೇ ಕಂತಿನ ಹಣ ಜೂನ್ ತಿಂಗಳಲ್ಲಿ ಬಿಡುಗಡೆ ಸಾಧ್ಯತೆ. ಯಾವ ರೈತರಿಗೆ ಹಣ ಸಿಗುವುದಿಲ್ಲ? ಕೆವೈಸಿ, ಆಧಾರ್ ಲಿಂಕ್ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ…
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan Samman Nidhi) ಯೋಜನೆಯ 23ನೇ ಕಂತಿನ ಹಣಕ್ಕಾಗಿ ದೇಶದ ಕೋಟ್ಯಂತರ ರೈತರು ಕಾತರದಿಂದ ಕಾಯುತ್ತಿದ್ದಾರೆ. ಇದುವರೆಗೆ ಯೋಜನೆಯಡಿ 22 ಕಂತುಗಳು ಯಶಸ್ವಿಯಾಗಿ ಬಿಡುಗಡೆಯಾಗಿದ್ದು, 22ನೇ ಕಂತಿನ ಹಣವನ್ನು ಕಳೆದ ಮಾರ್ಚ್ 13, 2026ರಂದು ಬಿಡುಗಡೆ ಮಾಡಲಾಗಿತ್ತು.
ಇದೀಗ 23ನೇ ಕಂತಿನ ಬಿಡುಗಡೆ ಕುರಿತು ರೈತರಲ್ಲಿ ಕುತೂಹಲ ಹೆಚ್ಚಾಗಿದೆ.ಕೇಂದ್ರ ಸರ್ಕಾರ ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಈ ಮಹತ್ವಾಕಾಂಕ್ಷಿ ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ₹6,000 ಆರ್ಥಿಕ ನೆರವು ನೀಡಲಾಗುತ್ತದೆ. ಈ ಮೊತ್ತವನ್ನು ಮೂರು ಸಮಾನ ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ (DBT) ಜಮಾ ಮಾಡಲಾಗುತ್ತದೆ.
ಇದನ್ನೂ ಓದಿ: LPG Cylinder New Rules: ಎಲ್‌ಪಿಜಿ ಸಿಲಿಂಡರ್ ಹೊಸ ನಿಯಮಗಳು | ಈ ತಪ್ಪು ಮಾಡಿದ್ರೆ ನಿಮ್ಮ ಗ್ಯಾಸ್ ಕನೆಕ್ಷನ್ ಬ್ಲಾಕ್!
23ನೇ ಕಂತು ಬಿಡುಗಡೆ ಯಾವಾಗ?
ಮಾಧ್ಯಮ ವರದಿಗಳ ಪ್ರಕಾರ, ಪಿಎಂ ಕಿಸಾನ್ ಯೋಜನೆಯ 23ನೇ ಕಂತಿನ ಹಣ ಜೂನ್ ಅಂತ್ಯ ಅಥವಾ ಜುಲೈ 2026ರೊಳಗೆ ರೈತರ ಖಾತೆಗಳಿಗೆ ಜಮಾ ಆಗುವ ಸಾಧ್ಯತೆ ಇದೆ. ಆದರೆ ಕೇಂದ್ರ ಸರ್ಕಾರ ಇನ್ನೂ ಅಧಿಕೃತ ದಿನಾಂಕವನ್ನು ಘೋಷಿಸಿಲ್ಲ.
ಸಾಮಾನ್ಯವಾಗಿ ಈ ಯೋಜನೆಯಡಿ ವರ್ಷದಲ್ಲಿ ಮೂರು ಬಾರಿ ಹಣ ಬಿಡುಗಡೆಯಾಗುತ್ತದೆ. ಮೊದಲ ಕಂತು ಏಪ್ರಿಲ್-ಜುಲೈ ಅವಧಿಯಲ್ಲಿ, ಎರಡನೇ ಕಂತು ಆಗಸ್ಟ್-ನವೆಂಬರ್ ಅವಧಿಯಲ್ಲಿ ಹಾಗೂ ಮೂರನೇ ಕಂತು ಡಿಸೆಂಬರ್-ಮಾರ್ಚ್ ಅವಧಿಯಲ್ಲಿ ರೈತರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.
ಇದನ್ನೂ ಓದಿ: Govt Housing Scheme 2026: ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದ ಸಹಾಯಧನ | ಗ್ರಾಮ ಪಂಚಾಯತಿಗಳಿಂದ ಅರ್ಜಿ ಆಹ್ವಾನ
ಈ ರೈತರಿಗೆ 23ನೇ ಕಂತಿನ ಹಣ ಸಿಗುವುದಿಲ್ಲ
ಕೇಂದ್ರ ಸರ್ಕಾರ ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿರುವಂತೆ, ಯೋಜನೆಯ ಲಾಭ ಪಡೆಯಲು ಕೆಲವು ಕಡ್ಡಾಯ ನಿಯಮಗಳನ್ನು ಪಾಲಿಸಲೇಬೇಕು. ಅಗತ್ಯ ದಾಖಲೆಗಳು ಮತ್ತು ಪ್ರಕ್ರಿಯೆಗಳನ್ನು ಪೂರ್ಣಗೊಳಿಸದಿದ್ದರೆ 23ನೇ ಕಂತಿನ ₹2,000 ಹಣ ಖಾತೆಗೆ ಜಮಾ ಆಗುವುದಿಲ್ಲ.
1. ಇ-ಕೆವೈಸಿ (e-KYC) ಮಾಡಿಸದ ರೈತರು
ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಲು ಇ-ಕೆವೈಸಿ ಕಡ್ಡಾಯವಾಗಿದೆ. ಅನೇಕ ರೈತರು ಇನ್ನೂ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ. ಇ-ಕೆವೈಸಿ ಪೂರ್ಣಗೊಳಿಸದ ಫಲಾನುಭವಿಗಳ ಕಂತು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ರೈತರು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ OTP ಆಧಾರಿತ e-KYC ಹಾಗೂ ಸಮೀಪದ ಸಾಮಾನ್ಯ ಸೇವಾ ಕೇಂದ್ರದಲ್ಲಿ ಬಯೋಮೆಟ್ರಿಕ್ e-KYC ಎರಡು ವಿಧಾನಗಳಲ್ಲಿ ಇ-ಕೆವೈಸಿ ಪೂರ್ಣಗೊಳಿಸಬಹುದು.
ಇದನ್ನೂ ಓದಿ: Low Pressure Heavy Rain Alert : ವಾಯುಭಾರ ಕುಸಿತ: ಕರ್ನಾಟದಲ್ಲಿ ಒಂದು ವಾರ ಭಾರೀ ಮಳೆ ಮುನ್ಸೂಚನೆ
2. ಆಧಾರ್-ಬ್ಯಾಂಕ್ ಖಾತೆ ಲಿಂಕ್ ಕಡ್ಡಾಯ
ಆಃಖಿ ಮೂಲಕ ಹಣ ಜಮಾ ಆಗುವುದರಿಂದ ರೈತರ ಬ್ಯಾಂಕ್ ಖಾತೆ ಆಧಾರ್ ಕಾರ್ಡ್’ಗೆ ಲಿಂಕ್ ಆಗಿರಬೇಕು. ಬ್ಯಾಂಕ್ ಖಾತೆ ಮತ್ತು ಆಧಾರ್ ವಿವರಗಳಲ್ಲಿ ವ್ಯತ್ಯಾಸ ಇದ್ದರೆ ಅಥವಾ ಲಿಂಕ್ ಆಗಿರದಿದ್ದರೆ ಹಣ ಜಮಾ ಆಗಲು ವಿಳಂಬವಾಗಬಹುದು.
ಆದ್ದರಿಂದ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆ ಆಧಾರ್‌ಗೆ ಸರಿಯಾಗಿ ಜೋಡಣೆಯಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಅಗತ್ಯ.
ಇದನ್ನೂ ಓದಿ: New BPL Card Income Limit Hike: ಹೊಸ ಬಿಪಿಎಲ್ ಕಾರ್ಡ್ ಅರ್ಜಿದಾರರಿಗೆ ಶುಭಸುದ್ದಿ | ಹೊಸ ರೂಲ್ಸ್ ಜಾರಿಗೆ ಸರ್ಕಾರ ಚಿಂತನೆ
3. ಭೂ ದಾಖಲೆ ಪರಿಶೀಲನೆ (Land Verification) ಪೂರ್ಣಗೊಳಿಸಬೇಕು
ಕೇಂದ್ರ ಸರ್ಕಾರ ನಕಲಿ ಫಲಾನುಭವಿಗಳನ್ನು ಗುರುತಿಸಲು ಭೂ ದಾಖಲೆಗಳ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ. ತಮ್ಮ ಭೂ ದಾಖಲೆಗಳನ್ನು ಪರಿಶೀಲಿಸದ ರೈತರು ಮುಂದಿನ ಕಂತು ಪಡೆಯಲು ಅನರ್ಹರಾಗಬಹುದು.
ಹೀಗಾಗಿ ಭೂ ದಾಖಲೆಗಳ ಪರಿಶೀಲನೆ ಪೂರ್ಣಗೊಂಡಿದೆಯೇ ಎಂಬುದನ್ನು ಸಂಬAಧಿಸಿದ ಕೃಷಿ ಇಲಾಖೆ ಅಥವಾ ಪಿಎಂ ಕಿಸಾನ್ ಪೋರ್ಟಲ್ ಮೂಲಕ ಪರಿಶೀಲಿಸಿಕೊಳ್ಳುವುದು ಉತ್ತಮ.

4. ಒಂದೇ ಕುಟುಂಬದ ಇಬ್ಬರು ಸದಸ್ಯರಿಗೆ ಸೌಲಭ್ಯ ಇಲ್ಲ
ಪಿಎಂ ಕಿಸಾನ್ ಯೋಜನೆಯ ನಿಯಮಗಳ ಪ್ರಕಾರ ಒಂದೇ ಕುಟುಂಬದ ಇಬ್ಬರು ಸದಸ್ಯರು ಒಂದೇ ಸಮಯದಲ್ಲಿ ಯೋಜನೆಯ ಲಾಭ ಪಡೆಯಲು ಅವಕಾಶವಿಲ್ಲ.
ಒಂದೇ ಕುಟುಂಬದ ಪತಿ-ಪತ್ನಿ ಅಥವಾ ಇತರ ಇಬ್ಬರು ಸದಸ್ಯರು ಪ್ರತ್ಯೇಕವಾಗಿ ನೋಂದಣಿ ಮಾಡಿಕೊಂಡಿದ್ದರೆ, ಪರಿಶೀಲನೆಯ ವೇಳೆ ಅವರ ಅರ್ಜಿಗಳನ್ನು ರದ್ದುಪಡಿಸಬಹುದು. ಕೆಲವು ಸಂದರ್ಭಗಳಲ್ಲಿ ಈಗಾಗಲೇ ಪಡೆದಿರುವ ಹಣವನ್ನು ಮರಳಿ ಪಾವತಿಸುವಂತೆ ಸೂಚನೆ ನೀಡುವ ಸಾಧ್ಯತೆಯೂ ಇದೆ.
5. ಅನರ್ಹ ಫಲಾನುಭವಿಗಳ ವಿರುದ್ಧ ಕ್ರಮ
ಸರ್ಕಾರ ಕಳೆದ ಕೆಲವು ವರ್ಷಗಳಿಂದ ಯೋಜನೆಯಲ್ಲಿ ಅನರ್ಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯವನ್ನು ತೀವ್ರಗೊಳಿಸಿದೆ. ತಪ್ಪು ಮಾಹಿತಿ ನೀಡಿ ನೋಂದಣಿ ಮಾಡಿಕೊಂಡಿರುವವರು ಅಥವಾ ನಿಯಮಗಳಿಗೆ ವಿರುದ್ಧವಾಗಿ ಸೌಲಭ್ಯ ಪಡೆಯುತ್ತಿರುವವರ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ.
ಅರ್ಹತಾ ಮಾನದಂಡಗಳನ್ನು ಪೂರೈಸದೇ ಇರುವ ರೈತರು ಮುಂದಿನ ಕಂತಿನಿಂದ ಹೊರಗೆ ಉಳಿಯುವ ಸಾಧ್ಯತೆ ಇದೆ. ಇಂತಹ ಅನರ್ಹ ಫಲಾನುಭವಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಂಭವವೂ ಇದೆ.
ಇದನ್ನೂ ಓದಿ: KCET Result 2026: ಸಿಇಟಿ ಫಲಿತಾಂಶ ಪ್ರಕಟಣೆ | ಕೆಇಎ ಮಹತ್ವದ ಅಪ್ಡೇಟ್!
23ನೇ ಕಂತಿನ ಹಣ ಜಮಾ ಹೀಗೆ ಪರಿಶೀಲಿಸಿ
23ನೇ ಕಂತು ಬಿಡುಗಡೆಯಾದ ಬಳಿಕ ರೈತರು ತಮ್ಮ ಹಣದ ಸ್ಥಿತಿಯನ್ನು (Beneficiary Status) ಆನ್‌ಲೈನ್ ಮೂಲಕ ಸುಲಭವಾಗಿ ಪರಿಶೀಲಿಸಬಹುದು. ಪರಿಶೀಲನೆ ಮಾಡುವ ವಿಧಾನ:
- ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ pmkisan.gov.inಗೆ ಭೇಟಿ ನೀಡಿ.
- ‘Farmer Corner’ ವಿಭಾಗಕ್ಕೆ ತೆರಳಿ.
- ‘Beneficiary Status’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನೋಂದಣಿ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ನಮೂದಿಸಿ.
- ಕ್ಯಾಪ್ಚಾ ಕೋಡ್ ನಮೂದಿಸಿ.
- ‘Get Data’ ಅಥವಾ ‘ಸ್ಥಿತಿ ಪಡೆಯಿರಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನಂತರ ನಿಮ್ಮ ಅರ್ಜಿ ಸ್ಥಿತಿ, ಕಂತು ಬಿಡುಗಡೆ ವಿವರಗಳು ಹಾಗೂ ಹಣ ಜಮಾ ಆಗಿರುವ ಮಾಹಿತಿಯನ್ನು ನೋಡಬಹುದು.
ಇದನ್ನೂ ಓದಿ: Monsoon Delay Karnataka: ಕರ್ನಾಟಕಕ್ಕೆ ಮುಂಗಾರು ಎಂಟ್ರಿ ಡೇಟ್ ಫಿಕ್ಸ್ | ಈ ದಿನದಿಂದ ಭಾರೀ ಮಳೆ ಶುರು
ದೇಶದ ಸುಮಾರು 9 ಕೋಟಿ ರೈತರಿಗೆ ನೆರವು
2018-19ರಲ್ಲಿ ಆರಂಭವಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಇಂದು ದೇಶದ ಅತ್ಯಂತ ದೊಡ್ಡ ರೈತ ಕಲ್ಯಾಣ ಯೋಜನೆಗಳಲ್ಲಿ ಒಂದಾಗಿದೆ. ಕೇಂದ್ರ ಸರ್ಕಾರದ ಮಾಹಿತಿಯ ಪ್ರಕಾರ ಸುಮಾರು 9 ಕೋಟಿ ರೈತ ಕುಟುಂಬಗಳು ಈ ಯೋಜನೆಯ ಲಾಭ ಪಡೆಯುತ್ತಿವೆ.
23ನೇ ಕಂತಿನ ಹಣವನ್ನು ಯಾವುದೇ ಅಡಚಣೆ ಇಲ್ಲದೆ ಪಡೆಯಲು ರೈತರು ಇ-ಕೆವೈಸಿ, ಆಧಾರ್-ಬ್ಯಾಂಕ್ ಲಿಂಕಿಂಗ್ ಹಾಗೂ ಭೂ ದಾಖಲೆ ಪರಿಶೀಲನೆ ಸೇರಿದಂತೆ ಎಲ್ಲ ಕಡ್ಡಾಯ ಪ್ರಕ್ರಿಯೆಗಳನ್ನು ತಕ್ಷಣ ಪೂರ್ಣಗೊಳಿಸುವುದು ಅಗತ್ಯವಾಗಿದೆ. ಸರ್ಕಾರ ಅಧಿಕೃತ ದಿನಾಂಕ ಘೋಷಿಸಿದ ಬಳಿಕ ಕೋಟ್ಯಂತರ ರೈತರ ಖಾತೆಗಳಿಗೆ ₹2,000 ಕಂತಿನ ಹಣ ಜಮಾ ಆಗಲಿದೆ.
Govt Housing Scheme 2026: ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದ ಸಹಾಯಧನ | ಗ್ರಾಮ ಪಂಚಾಯತಿಗಳಿಂದ ಅರ್ಜಿ ಆಹ್ವಾನ

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.