Govt Employee Transfer New Guidelines: ರಾಜ್ಯ ಸರ್ಕಾರ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಹೊಸ ನಿಯಮಗಳು, ಕಡ್ಡಾಯ ನಿರೀಕ್ಷಣೆ, ಸಿಎಂ ಅನುಮತಿ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ…
ರಾಜ್ಯ ಸರ್ಕಾರವು ಸರ್ಕಾರಿ ನೌಕರರ ವರ್ಗಾವಣೆ (Govt Employee Transfer) ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಹತ್ವದ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಇನ್ನು ಮುಂದೆ ಸಾಮಾನ್ಯ ಸಂದರ್ಭಗಳಲ್ಲಿ ಯಾವುದೇ ನೌಕರರನ್ನು ವರ್ಗಾವಣೆ ಮಾಡುವಾಗ ಅವರು ಯಾವ ಹುದ್ದೆಗೆ ಅಥವಾ ಯಾವ ಕಚೇರಿಗೆ ನಿಯುಕ್ತಿಯಾಗುತ್ತಾರೆ ಎಂಬುದನ್ನು ವರ್ಗಾವಣೆ ಆದೇಶದಲ್ಲೇ ಸ್ಪಷ್ಟವಾಗಿ ನಮೂದಿಸಬೇಕು. ಇದರಿಂದ ವರ್ಗಾವಣೆ ನಂತರ ಉಂಟಾಗುತ್ತಿದ್ದ ಗೊಂದಲಗಳಿಗೆ ತೆರೆ ಬೀಳುವ ನಿರೀಕ್ಷೆಯಿದೆ.
ಹೊಸ ನಿಯಮದ ಅಗತ್ಯ ಏಕೆ ಬಂತು?
ಇದುವರೆಗೆ ಕೆಲವು ಸಂದರ್ಭಗಳಲ್ಲಿ ಅಧಿಕಾರಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆ ಮಾಡಿದರೂ, ಹೊಸ ಸ್ಥಳದ ನಿಯುಕ್ತಿ ತಕ್ಷಣ ನೀಡಲಾಗುತ್ತಿರಲಿಲ್ಲ. ಪರಿಣಾಮ, ಹಲವು ನೌಕರರು ಕಡ್ಡಾಯ ನಿರೀಕ್ಷಣೆಯಲ್ಲಿ (Compulsory Waiting) ಉಳಿಯಬೇಕಾಗುತ್ತಿತ್ತು.
ಇದರಿಂದ ನೌಕರರಿಗೆ ಮಾತ್ರವಲ್ಲ, ಇಲಾಖೆಗಳ ಆಡಳಿತಾತ್ಮಕ ಕಾರ್ಯಗಳಿಗೂ ತೊಂದರೆಯಾಗುತ್ತಿತ್ತು. ಈ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ಸರ್ಕಾರ ಹೊಸ ಮಾರ್ಗಸೂಚಿಯನ್ನು ಜಾರಿಗೆ ತಂದಿದೆ.
ಇದನ್ನೂ ಓದಿ: State Government Drought Declaration: ರಾಜ್ಯ ಸರ್ಕಾರದಿಂದ ಬರ ಘೋಷಣೆ | ರೈತರಿಗೆ ₹22,500 ವರೆಗೂ ಪರಿಹಾರ?
ಹೈಕೋರ್ಟ್ ತೀರ್ಪಿನ ಬಳಿಕ ಸರ್ಕಾರದ ಕ್ರಮ
ಅಬಕಾರಿ ಇಲಾಖೆಯ ಉಪ ಆಯುಕ್ತ ಕೆ. ಅರುಣ್ ಕುಮಾರ್ ಅವರಿಗೆ ಸ್ಥಳ ನಿಯುಕ್ತಿ ನೀಡದೆ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು.
ಈ ಪ್ರಕರಣದ ವಿಚಾರಣೆಯ ವೇಳೆ ಹೈಕೋರ್ಟ್ ನೀಡಿದ ತೀರ್ಪಿನ ಆಧಾರದ ಮೇಲೆ ಸರ್ಕಾರ ಕಳೆದ ಮಾರ್ಚ್ 30ರಂದು ಸುತ್ತೋಲೆ ಹೊರಡಿಸಿತ್ತು. ಬಳಿಕ ಕೆಲವು ಆಡಳಿತಾತ್ಮಕ ಸಮಸ್ಯೆಗಳು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಈಗ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಸಾಮಾನ್ಯ ವರ್ಗಾವಣೆಗೆ ಹೊಸ ನಿಯಮ
ಹೊಸ ಮಾರ್ಗಸೂಚಿಯ ಪ್ರಕಾರ, ಸಾಮಾನ್ಯ ವರ್ಗಾವಣೆಗಳಲ್ಲಿ ನೌಕರರನ್ನು ವರ್ಗಾವಣೆ ಮಾಡುವಾಗಲೇ ಮುಂದಿನ ಹುದ್ದೆ ಅಥವಾ ಕಾರ್ಯನಿರ್ವಹಿಸಬೇಕಾದ ಸ್ಥಳವನ್ನು ಕಡ್ಡಾಯವಾಗಿ ಸೂಚಿಸಬೇಕು. ಕೇವಲ ವರ್ಗಾವಣೆ ಆದೇಶ ನೀಡಿ, ನಂತರ ಸ್ಥಳ ನಿಯುಕ್ತಿ ನೀಡುವ ಪದ್ಧತಿಗೆ ಅವಕಾಶ ಇರುವುದಿಲ್ಲ.

ಯಾವಾಗ ನಿರೀಕ್ಷಣೆಯಲ್ಲಿ ಇರಿಸಬಹುದು?
ಆಡಳಿತಾತ್ಮಕ ಕಾರಣಗಳಿಂದ ತಕ್ಷಣ ಹೊಸ ಸ್ಥಳಕ್ಕೆ ನಿಯುಕ್ತಿ ನೀಡಲು ಸಾಧ್ಯವಾಗದಿದ್ದರೆ, ಸಂಬಂಧಿತ ಸಕ್ಷಮ ಪ್ರಾಧಿಕಾರ ಗರಿಷ್ಠ ಒಂದು ತಿಂಗಳವರೆಗೆ ನೌಕರರನ್ನು ಕಡ್ಡಾಯ ನಿರೀಕ್ಷಣೆಯಲ್ಲಿ ಇರಿಸಬಹುದು.
ಒಂದು ತಿಂಗಳಿಗಿಂತ ಹೆಚ್ಚು ಕಾಲ ನಿರೀಕ್ಷಣೆಯಲ್ಲಿ ಇರಿಸುವ ಅನಿವಾರ್ಯತೆ ಎದುರಾದರೆ, ಅದರ ಕಾರಣಗಳನ್ನು ಲಿಖಿತವಾಗಿ ದಾಖಲಿಸಿ ಮುಖ್ಯಮಂತ್ರಿಗಳ ಪೂರ್ವಾನುಮತಿ ಪಡೆಯಬೇಕು. ಈ ಅನುಮತಿ ದೊರೆತ ನಂತರವೂ ಗರಿಷ್ಠ ಮೂರು ತಿಂಗಳವರೆಗೆ ಮಾತ್ರ ನಿರೀಕ್ಷಣೆಯಲ್ಲಿ ಇರಿಸಲು ಅವಕಾಶವಿರುತ್ತದೆ.
ಇದನ್ನೂ ಓದಿ: 8th Pay Commission Salary Hike: ಸರ್ಕಾರಿ ನೌಕರರ ಸಂಬಳ ಶೇ. 65ರಷ್ಟು ಹೆಚ್ಚಳ | ಮಹತ್ವದ ಅಪ್ಡೇಟ್ಸ್
ಯಾವ ಪ್ರಕರಣಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ?
ಸರ್ಕಾರ ಸ್ಪಷ್ಟಪಡಿಸಿರುವಂತೆ, ಈ ಹೊಸ ಮಾರ್ಗಸೂಚಿ ಎಲ್ಲ ಪ್ರಕರಣಗಳಿಗೆ ಅನ್ವಯಿಸುವುದಿಲ್ಲ. ಕೆಳಗಿನ ಸಂದರ್ಭಗಳಿಗೆ ಇದು ಅನ್ವಯವಾಗುವುದಿಲ್ಲ.
- ಕಾನೂನು ಸಂಬಂಧಿತ ಪ್ರಕರಣಗಳು
- ಅಮಾನತು ಪ್ರಕರಣಗಳು
- ಹಣ ದುರ್ಬಳಕೆ ಅಥವಾ ಭ್ರಷ್ಟಾಚಾರಕ್ಕೆ ಸಂಬAಧಿಸಿದ ಪ್ರಕರಣಗಳು
- ಇತರೆ ಶಿಸ್ತು ಕ್ರಮದ ಪ್ರಕರಣಗಳು
ಈ ರೀತಿಯ ಪ್ರಕರಣಗಳಲ್ಲಿ ಸರ್ಕಾರ ಅಗತ್ಯಕ್ಕೆ ಅನುಗುಣವಾಗಿ ಪ್ರತ್ಯೇಕ ಕ್ರಮ ಕೈಗೊಳ್ಳಬಹುದು.
ನೌಕರರಿಗೆ ಆಗುವ ಪ್ರಯೋಜನವೇನು?
ಈ ಹೊಸ ನಿಯಮದಿಂದ ವರ್ಗಾವಣೆಯಾದ ನೌಕರರಿಗೆ ತಮ್ಮ ಮುಂದಿನ ಕಾರ್ಯಸ್ಥಳದ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ. ಅನಗತ್ಯ ನಿರೀಕ್ಷೆ, ಗೊಂದಲ ಮತ್ತು ವಿಳಂಬ ಕಡಿಮೆಯಾಗಲಿದ್ದು, ಇಲಾಖೆಗಳ ಆಡಳಿತಾತ್ಮಕ ಕಾರ್ಯಕ್ಷಮತೆಯೂ ಹೆಚ್ಚುವ ಸಾಧ್ಯತೆ ಇದೆ.
ಇದನ್ನೂ ಓದಿ: Karnataka Cancelled BPL Card: ಹೊಸ ಬಿಪಿಎಲ್ ಕಾರ್ಡ್ ವಿತರಣೆ | ಸರ್ಕಾರದಿಂದ ಸಿಹಿಸುದ್ದಿ
ಒಟ್ಟಾರೆ ಏನು ಬದಲಾವಣೆ?
ರಾಜ್ಯ ಸರ್ಕಾರದ ಈ ಹೊಸ ಮಾರ್ಗಸೂಚಿಯಿಂದ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆ ಇನ್ನಷ್ಟು ಪಾರದರ್ಶಕ ಮತ್ತು ವ್ಯವಸ್ಥಿತವಾಗಲಿದೆ. ಸಾಮಾನ್ಯ ವರ್ಗಾವಣೆಗಳಲ್ಲಿ ಸ್ಥಳ ನಿಯುಕ್ತಿ ಇಲ್ಲದೆ ಆದೇಶ ಹೊರಡಿಸುವ ಪದ್ಧತಿಗೆ ಅಂತ್ಯವಾಗಿದೆ.
ವಿಶೇಷ ಸಂದರ್ಭಗಳಲ್ಲಿ ಮಾತ್ರ ಸೀಮಿತ ಅವಧಿಗೆ ಕಡ್ಡಾಯ ನಿರೀಕ್ಷಣೆಯಲ್ಲಿ ಇರಿಸಲು ಅವಕಾಶ ನೀಡಲಾಗಿದೆ. ಇದರಿಂದ ನೌಕರರ ಹಿತಾಸಕ್ತಿ ಕಾಪಾಡುವುದರ ಜೊತೆಗೆ ಆಡಳಿತದ ಕಾರ್ಯನಿರ್ವಹಣೆಯೂ ಮತ್ತಷ್ಟು ಸುಗಮವಾಗಲಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.