Voter ID SIR Status: ಮತದಾರರೇ ಗಮನಿಸಿ | ನಿಮ್ಮ SIR ಯಶಸ್ವಿಯಾಗಿದೆಯೇ? ಮೊಬೈಲ್‌ನಲ್ಲಿಯೇ ನಿಮ್ಮ SIR ಸ್ಟೇಟಸ್ ಚೆಕ್ ಮಾಡಿ..

Spread the love

WhatsApp Group Join Now
Telegram Group Join Now

Voter ID SIR Status: ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿದೆಯೇ? ಮೊಬೈಲ್ ಮೂಲಕ ನಿಮ್ಮ ವೋಟರ್ ಐಡಿ ಸ್ಟೇಟಸ್, ಎನ್ಯೂಮರೇಷನ್ ಫಾರಂ ಸಲ್ಲಿಕೆಯನ್ನು ಸುಲಭವಾಗಿ ಚೆಕ್ ಮಾಡುವ ಸಂಪೂರ್ಣ ಮಾಹಿತಿ ಇಲ್ಲಿದೆ…

ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ನಮ್ಮೆಲ್ಲರ ಗಮನ ರಾಜಕೀಯದ ಕಡೆ ಹರಿಯುವುದು ಸಹಜ. ಆದರೆ, ನಾಯಕರನ್ನು ಆಯ್ಕೆ ಮಾಡುವ ಆ ಒಂದು ದಿನ ನಾವು ಮತಗಟ್ಟೆಗೆ ಹೋದಾಗ, ‘ನಿಮ್ಮ ಹೆಸರೇ ಲಿಸ್ಟ್’ನಲ್ಲಿ ಇಲ್ಲ ಸಾರ್/ಮೇಡಂ’ ಎಂಬ ಮಾತು ಕೇಳಿದರೆ ಎಷ್ಟು ಬೇಸರವಾಗುತ್ತದೆ ಅಲ್ವಾ?

ಇಂತಹ ಮುಜುಗರ ಹಾಗೂ ಹಕ್ಕು ಕಳೆದುಕೊಳ್ಳುವ ಪರಿಸ್ಥಿತಿ ತಪ್ಪಿಸಲು ಚುನಾವಣಾ ಆಯೋಗ ಈಗ ‘ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ’ (Special Intensive Revision – SIR) ಆರಂಭಿಸಿದೆ. ಇದು ಕೇವಲ ಸರ್ಕಾರಿ ಕೆಲಸವಷ್ಟೇ ಅಲ್ಲ, ನಮ್ಮೆಲ್ಲರ ಜವಾಬ್ದಾರಿ ಕೂಡ. ಬನ್ನಿ, ಈ ಪ್ರಕ್ರಿಯೆಯ ಬಗ್ಗೆ ಸರಳವಾಗಿ ತಿಳಿದುಕೊಳ್ಳೋಣ.

ಇದನ್ನೂ ಓದಿ: State Government Drought Declaration: ರಾಜ್ಯ ಸರ್ಕಾರದಿಂದ ಬರ ಘೋಷಣೆ | ರೈತರಿಗೆ ₹22,500 ವರೆಗೂ ಪರಿಹಾರ?

ಮನೆ ಬಾಗಿಲಿಗೆ ಬರಲಿದ್ದಾರೆ ಅಧಿಕಾರಿಗಳು (BLO)

ಈಗಾಗಲೇ ನಿಮ್ಮ ಏರಿಯಾದ ಬೂತ್ ಮಟ್ಟದ ಅಧಿಕಾರಿಗಳು (Booth Level Officer – BLO) ಮನೆ ಮನೆಗೆ ಭೇಟಿ ನೀಡುತ್ತಿರಬಹುದು. ಅವರು ನಿಮಗೆ ಒಂದು ಎನ್ಯೂಮರೇಷನ್ ಫಾರಂ (Enumeration Form) ಕೊಡುತ್ತಾರೆ.

ಅದರಲ್ಲಿ ನಿಮ್ಮ ವಿವರಗಳನ್ನು ಸರಿಯಾಗಿ ತುಂಬಿ, ಒಂದು ಪಾಸ್‌ಪೋರ್ಟ್ ಸೈಜ್ ಫೋಟೋ ಅಂಟಿಸಿ ಇಡಿ. ಎರಡು-ಮೂರು ದಿನ ಬಿಟ್ಟು ಅವರೇ ಬಂದು ಅದನ್ನು ತೆಗೆದುಕೊಂಡು ಹೋಗುತ್ತಾರೆ.

ಒಂದು ವೇಳೆ ಅವರು ಬರಲಿಲ್ಲ ಎಂದರೆ, ನೀವೇ ಖುದ್ದಾಗಿ ಹೋಗಿ ಸಲ್ಲಿಸುವುದು ಉತ್ತಮ. ನಿರ್ಲಕ್ಷ್ಯ ಮಾಡಿದರೆ ನಿಮ್ಮ ಮತದಾನದ ಹಕ್ಕೇ ಕೈತಪ್ಪಿ ಹೋಗಬಹುದು!

ಇದನ್ನೂ ಓದಿ: Crop Insurance Release: ರೈತರಿಗೆ ಬೆಳೆ ವಿಮೆ ಪರಿಹಾರ ಬಿಡುಗಡೆ: ₹585.72 ಕೋಟಿ ಮಂಜೂರು, ಮೊಬೈಲ್‌ನಲ್ಲೇ ಸ್ಟೇಟಸ್ ಪರಿಶೀಲಿಸುವುದು ಹೇಗೆ?

ನಿಮ್ಮ ಕೆಲಸ ಪೂರ್ಣಗೊಂಡಿದೆಯೇ? ಮೊಬೈಲ್‌ನಲ್ಲೇ ಚೆಕ್ ಮಾಡಿ!

ಅರ್ಜಿ ಕೊಟ್ಟ ಮೇಲೆ ಸುಮ್ಮನೆ ಕೂರುವಂತಿಲ್ಲ, ಅದು ವ್ಯವಸ್ಥೆಯಲ್ಲಿ ಅಪ್‌ಡೇಟ್ ಆಗಿದೆಯಾ ಅಂತ ಒಮ್ಮೆ ಚೆಕ್ ಮಾಡಿಕೊಳ್ಳಿ. ಇದು ತುಂಬಾ ಸುಲಭ:

  1. ನಿಮ್ಮ ಮೊಬೈಲ್‌ನಲ್ಲಿ ಕೇಂದ್ರ ಚುನಾವಣಾ ಆಯೋಗದ ವೆಬ್‌ಸೈಟ್ voters.eci.gov.in ಓಪನ್ ಮಾಡಿ.
  2. ಅಲ್ಲಿ ಮುಖಪುಟದಲ್ಲಿ ಕಾಣುವ ‘Fill Enumeration Form’ ಮೇಲೆ ಕ್ಲಿಕ್ ಮಾಡಿ.
  3. ನಿಮ್ಮ ಮೊಬೈಲ್ ನಂಬರ್ ಅಥವಾ ವೋಟರ್ ಐಡಿ (Voter ID) ನಂಬರ್ ಹಾಕಿ, ಅಲ್ಲಿರುವ ಕ್ಯಾಪ್ಚಾ (Captcha) ಕೋಡ್ ಟೈಪ್ ಮಾಡಿ.
Voter ID SIR Status
Voter ID SIR Status
  1. ‘Request OTP’ ಒತ್ತಿ, ನಿಮ್ಮ ಮೊಬೈಲ್‌ಗೆ ಬರುವ ಓಟಿಪಿ ಹಾಕಿ ಲಾಗಿನ್ ಆಗಿ.
  2. ನಿಮ್ಮ ರಾಜ್ಯವನ್ನು (State) ಆಯ್ಕೆ ಮಾಡಿ, ವೋಟರ್ ಐಡಿ ನಂಬರ್ ಹಾಕಿ ‘Search’ ಕೊಡಿ.
  3. ನಿಮ್ಮ ಸ್ಕ್ರೀನ್ ಮೇಲೆ ‘Your form has already been submitted. For more details contact your BLO’ ಎಂದು ಬಂದರೆ, ಟೆನ್ಷನ್ ಫ್ರೀ! ನಿಮ್ಮ ಎಸ್‌ಐಆರ್ ಪ್ರಕ್ರಿಯೆ ಯಶಸ್ವಿಯಾಗಿ ಮುಗಿದಿದೆ ಎಂದರ್ಥ.

ಇದನ್ನೂ ಓದಿ: Gruhalakshmi Scheme Money Transfer: ಗೃಹಲಕ್ಷ್ಮಿ ಹಣ ಜಮೆ ಆರಂಭ: ರಾಜ್ಯದ ಮಹಿಳೆಯರಿಗೆ ಸರ್ಕಾರದಿಂದ ಮಹತ್ವದ ಮಾಹಿತಿ

ಆನ್‌ಲೈನ್‌ನಲ್ಲೇ ಫಾರಂ ತುಂಬಬಹುದು ಗೊತ್ತಾ?

ಯಾರೋ ಬರ್ತಾರೆ ಅಂತ ಕಾಯುವ ಬದಲು, ನೀವೇ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಆನ್‌ಲೈನ್‌ನಲ್ಲಿ ಫಾರಂ ತುಂಬಬಹುದು.

ಅದೇ ವೆಬ್‌ಸೈಟ್‌ಗೆ ಹೋಗಿ, ‘Fill Enumeration Form’ ಕ್ಲಿಕ್ ಮಾಡಿ. ಓಟಿಪಿ ಮೂಲಕ ಲಾಗಿನ್ ಆಗಿ, ಕೇಳಿರುವ ಅಗತ್ಯ ವಿವರಗಳನ್ನು ತುಂಬಿ.

ಆ ಭರ್ತಿಯಾದ ಫಾರಂ ಅನ್ನು ಡೌನ್‌ಲೋಡ್ (Download) ಮಾಡಿಕೊಂಡು ನಿಮ್ಮ BLOಗೆ ಕೊಟ್ಟರೆ ಕೆಲಸ ಮುಗಿಯಿತು.

WhatsApp Group Join Now
Telegram Group Join Now

ಇದನ್ನೂ ಓದಿ: PM-Kisan Hosa arji: ಪಿಎಂ ಕಿಸಾನ್ ಹೊಸ ಅರ್ಜಿ ಆಹ್ವಾನ | ಯಾವ ರೈತರು ಅರ್ಜಿ ಹಾಕಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

2002ರ ಹಳೆಯ ಲಿಸ್ಟ್ ಬೇಕೆ?

ಕೆಲವೊಂದು ಆಸ್ತಿ ಅಥವಾ ವಿಳಾಸದ ದಾಖಲೆಗಳಿಗಾಗಿ ನಮ್ಮ ಹಳೆಯ ವೋಟರ್ ಐಡಿ ವಿವರಗಳು ಬೇಕಾಗುತ್ತವೆ. ಅಂತವರು sirhnosearch.shop ವೆಬ್‌ಸೈಟ್‌ಗೆ ಭೇಟಿ ನೀಡಿ.

2002ರಲ್ಲಿ ನೀವು ಎಲ್ಲಿದ್ದೀರಿ (ಜಿಲ್ಲೆ, ವಿಧಾನಸಭಾ ಕ್ಷೇತ್ರ, ಮನೆ ನಂಬರ್) ಎಂಬ ಮಾಹಿತಿ ಟೈಪ್ ಮಾಡಿದರೆ ನಿಮ್ಮ ಹಳೆಯ ವಿವರಗಳು ಸುಲಭವಾಗಿ ಸಿಗುತ್ತವೆ.

ಮತದಾನ ನಮ್ಮ ಅತಿ ದೊಡ್ಡ ಶಕ್ತಿ. ಆ ಶಕ್ತಿಯನ್ನು ಉಳಿಸಿಕೊಳ್ಳಲು ಇಂದೇ ನಿಮ್ಮ ವೋಟರ್ ಐಡಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ!

Karnataka Cancelled BPL Card: ಹೊಸ ಬಿಪಿಎಲ್ ಕಾರ್ಡ್ ವಿತರಣೆ | ಸರ್ಕಾರದಿಂದ ಸಿಹಿಸುದ್ದಿ


Spread the love
error: Content is protected !!