Gruha Lakshmi eKYC Rumours: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸರ್ಕಾರದ ಮಹತ್ವದ ಸ್ಪಷ್ಟನೆ: ಹಣ ಜಮಾ ಬಗ್ಗೆ ಮಾಹಿತಿ

Spread the love

WhatsApp Group Join Now
Telegram Group Join Now

Gruha Lakshmi eKYC Rumours: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸರ್ಕಾರದ ಮಹತ್ವದ ಸ್ಪಷ್ಟನೆ. ಇ-ಕೆವೈಸಿ ಮಾಡಿಸದಿದ್ದರೆ ಹಣ ನಿಲ್ಲುತ್ತದೆಯೇ? ವದಂತಿಗಳ ಬಗ್ಗೆ ಸರ್ಕಾರ ಹೇಳಿದ್ದೇನು, ಹಣ ಜಮೆ ಬಗ್ಗೆ ಮಾಹಿತಿ ಇಲ್ಲಿದೆ…

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ (Guarantee Scheme) ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ (Gruha Lakshmi) ಯೋಜನೆಗೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವದಂತಿಗಳು ಹರಿದಾಡುತ್ತಿವೆ.

‘ಇ-ಕೆವೈಸಿ (e-KYC) ಕಡ್ಡಾಯವಾಗಿ ಮಾಡಿಸದಿದ್ದರೆ ಗೃಹಲಕ್ಷ್ಮಿ ಹಣ ಖಾತೆಗೆ ಜಮೆಯಾಗುವುದಿಲ್ಲ’ ಎಂಬ ಸಂದೇಶಗಳು ಅನೇಕ ಫಲಾನುಭವಿಗಳಲ್ಲಿ ಆತಂಕ ಉಂಟುಮಾಡಿದ್ದವು. ಈಗ ಈ ಗೊಂದಲಕ್ಕೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರವೇ ಸ್ಪಷ್ಟನೆ ನೀಡಿದ್ದು, ಸಾರ್ವಜನಿಕರು ಯಾವುದೇ ಸುಳ್ಳು ಮಾಹಿತಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದೆ.

ಇದನ್ನೂ ಓದಿ: Karnataka Monsoon Rain Gap: ಕರ್ನಾಟಕದಲ್ಲಿ ಮತ್ತೆ ಮಾಯವಾದ ಮುಂಗಾರು | ಒಂದು ವಾರ ಮಳೆ ಗ್ಯಾಪ್ | 22 ಜಿಲ್ಲೆಗಳಲ್ಲಿ ಭಾರೀ ಮಳೆ ಕೊರತೆ

ಇ-ಕೆವೈಸಿ ಮಾಡಿಸದಿದ್ದರೆ ಹಣ ನಿಲ್ಲುತ್ತದೆಯೇ?

ಸದ್ಯಕ್ಕೆ ಇಲ್ಲ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು ಎಂದು ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಅಥವಾ ಮಾರ್ಗಸೂಚಿ ಹೊರಬಂದಿಲ್ಲ.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಈ ರೀತಿಯ ಸಂದೇಶಗಳು ಸಂಪೂರ್ಣ ವದಂತಿಗಳಾಗಿದ್ದು, ಜನರು ಅವುಗಳನ್ನು ನಂಬಬಾರದು ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Cow Rubber Mat Silage Bag Scheme: ಹಸುಗಳಿಗೆ ರಬ್ಬರ್ ಮ್ಯಾಟ್, ಸೈಲೇಜ್ ಬ್ಯಾಗ್ ವಿತರಣೆ | ಪಶು ಇಲಾಖೆಯಿಂದ ಅರ್ಜಿ ಆಹ್ವಾನ

ಸೈಬರ್ ಸೆಂಟರ್‌ಗಳಿಗೆ ಅನಗತ್ಯವಾಗಿ ಅಲೆದಾಡಬೇಡಿ

ಇ-ಕೆವೈಸಿ ಮಾಡಿಸಬೇಕೆಂಬ ಸುದ್ದಿಯನ್ನು ನಂಬಿ ಅನೇಕ ಮಹಿಳೆಯರು ಖಾಸಗಿ ಸೈಬರ್ ಸೆಂಟರ್ (Cyber Center), ಗ್ರಾಮ್ ಒನ್ (Grama One) ಹಾಗೂ ಕರ್ನಾಟಕ ಒನ್ (Karnataka One) ಕೇಂದ್ರಗಳಿಗೆ ತೆರಳಿ ಸಮಯ ಮತ್ತು ಹಣ ವ್ಯಯ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಆದ್ದರಿAದ ಯಾವುದೇ ಅಧಿಕೃತ ಪ್ರಕಟಣೆ ಬರುವವರೆಗೆ ಇಂತಹ ಕೇಂದ್ರಗಳಿಗೆ ಅನಗತ್ಯವಾಗಿ ತೆರಳಿ ಗೊಂದಲಕ್ಕೊಳಗಾಗಬೇಡಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Govt Employee Transfer New Guidelines: ಸರ್ಕಾರಿ ನೌಕರರ ವರ್ಗಾವಣೆಗೆ ಹೊಸ ರೂಲ್ಸ್ ಜಾರಿ | ಇನ್ನು ಮುಂದೆ ಈ ನಿಯಮ ಕಡ್ಡಾಯ | ರಾಜ್ಯ ಸರ್ಕಾರದ ಮಹತ್ವದ ಆದೇಶ

ಸರ್ಕಾರದ ಪರಿಷ್ಕರಣೆ ಪ್ರಕ್ರಿಯೆ ಬಗ್ಗೆ ಏನು ಹೇಳಿದೆ?

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮಾಹಿತಿಯನ್ನು ಪರಿಷ್ಕರಿಸುವ ಉದ್ದೇಶ ಸರ್ಕಾರಕ್ಕಿದೆ. ಆದರೆ ಈ ಪರಿಷ್ಕರಣೆ ಯಾವಾಗ ನಡೆಯಲಿದೆ, ಯಾವ ರೀತಿಯಲ್ಲಿ ನಡೆಯಲಿದೆ ಹಾಗೂ ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬ ಬಗ್ಗೆ ಸರ್ಕಾರ ಇನ್ನೂ ಯಾವುದೇ ಅಧಿಕೃತ ಮಾರ್ಗಸೂಚಿ ಪ್ರಕಟಿಸಿಲ್ಲ. ಹೀಗಾಗಿ ಸದ್ಯಕ್ಕೆ ಫಲಾನುಭವಿಗಳು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.

ಇದನ್ನೂ ಓದಿ: Crop Insurance Compensation: ರೈತರಿಗೆ ಸಿಹಿ ಸುದ್ದಿ: 55,326 ರೈತರ ಖಾತೆಗೆ ಬೆಳೆ ವಿಮೆ ಹಣ ಜಮಾ | ನಿಮ್ಮ ಬ್ಯಾಂಕ್ ಖಾತೆ ಚೆಕ್ ಮಾಡಿ…

30 ಕಂತುಗಳ ಹಣ ಯಶಸ್ವಿಯಾಗಿ ಜಮೆ

ಗೃಹಲಕ್ಷ್ಮಿ ಯೋಜನೆ ಆರಂಭವಾದ ದಿನದಿಂದಲೇ ರಾಜ್ಯದ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಪ್ರತಿ ತಿಂಗಳು ₹2,000 ನೇರವಾಗಿ ಡಿಬಿಟಿ (DBT – Direct Benefit Transfer) ಮೂಲಕ ಜಮೆಯಾಗುತ್ತಿದೆ.

ಈವರೆಗೆ ಒಟ್ಟು 30 ಕಂತುಗಳ ಹಣ ಯಶಸ್ವಿಯಾಗಿ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿದ್ದು, ಪ್ರಸ್ತುತವೂ ಯಾವುದೇ ಅಡಚಣೆಯಿಲ್ಲದೆ ಪಾವತಿ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

WhatsApp Group Join Now
Telegram Group Join Now

ಇದನ್ನೂ ಓದಿ: Karnataka VAO Recruitment 2026: 505 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪಿಯುಸಿ ಪಾಸಾದವರಿಗೆ ಭರ್ಜರಿ ಅವಕಾಶ | ಜಿಲ್ಲಾವಾರು ಹುದ್ದೆಗಳ ಪಟ್ಟಿ ಇಲ್ಲಿದೆ…

Gruha Lakshmi eKYC Rumours
Gruha Lakshmi eKYC Rumours

ಗೃಹಲಕ್ಷ್ಮಿ ಯೋಜನೆಯ ಉದ್ದೇಶವೇನು?

ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ. ಪ್ರತಿ ತಿಂಗಳು ₹2,000 ನೆರವು ಸಿಗುವುದರಿಂದ ಅನೇಕ ಕುಟುಂಬಗಳು ದೈನಂದಿನ ಖರ್ಚು, ಮಕ್ಕಳ ಶಿಕ್ಷಣ, ಆರೋಗ್ಯ ವೆಚ್ಚ ಹಾಗೂ ಇತರ ಅಗತ್ಯಗಳನ್ನು ಸುಲಭವಾಗಿ ನಿರ್ವಹಿಸುತ್ತಿವೆ.

ಇದನ್ನೂ ಓದಿ: Karnataka Cancelled BPL Card: ಹೊಸ ಬಿಪಿಎಲ್ ಕಾರ್ಡ್ ವಿತರಣೆ | ಸರ್ಕಾರದಿಂದ ಸಿಹಿಸುದ್ದಿ

ಗೃಹಲಕ್ಷ್ಮಿ ಯೋಜನೆಗೆ ಯಾರು ಅರ್ಹರು?

ಯೋಜನೆಯ ಪ್ರಯೋಜನ ಪಡೆಯಲು ಈ ಕೆಳಗಿನ ಅರ್ಹತೆಗಳು ಇರಬೇಕು.

  • ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ರೇಷನ್ ಕಾರ್ಡ್’ನಲ್ಲಿ ಮಹಿಳೆ ಕುಟುಂಬದ ಮುಖ್ಯಸ್ಥೆಯಾಗಿರಬೇಕು.
  • ಆಧಾರ್ (Aadhaar) ಸಂಖ್ಯೆಯು ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು.
  • ಸರ್ಕಾರಿ ನೌಕರರು ಹಾಗೂ ಆದಾಯ ತೆರಿಗೆ (Income Tax) ಪಾವತಿಸುವವರು ಈ ಯೋಜನೆಗೆ ಅರ್ಹರಲ್ಲ.

ಇದನ್ನೂ ಓದಿ: Desi Cow 20 Litres Milk: ₹15 ಸಾವಿರದಲ್ಲಿ 20 ಲೀಟರ್ ಹಾಲು ಕೊಡುವ ನಾಟಿ ಹಸು | ರೈತರಿಗೆ ಬಂಪರ್ ಅವಕಾಶ

ಗೃಹಲಕ್ಷ್ಮಿ ಹಣ ಜಮೆಯಾಗಿದೆ ಎಂದು ಹೇಗೆ ಪರಿಶೀಲಿಸಬಹುದು?

ಫಲಾನುಭವಿಗಳು ಈ ಕೆಳಗಿನ ವಿಧಾನಗಳ ಮೂಲಕ ಹಣ ಜಮೆಯಾದ ಮಾಹಿತಿಯನ್ನು ಪರಿಶೀಲಿಸಬಹುದು.

  1. ಆಹಾರ ಕರ್ನಾಟಕ (Ahara Karnataka) App
  2. ಸೇವಾ ಸಿಂಧು (Seva Sindhu) Portal
  3. ಬ್ಯಾಂಕ್ ಪಾಸ್‌ಬುಕ್ ಅಥವಾ ಬ್ಯಾಂಕ್ ಸ್ಟೇಟ್‌ಮೆಂಟ್
  4. ಬ್ಯಾಂಕ್‌ನಿಂದ ಬರುವ ಎಸ್‌ಎಂಎಸ್ (SMS) ಸಂದೇಶ

ಇದನ್ನೂ ಓದಿ: PM-Kisan Hosa arji: ಪಿಎಂ ಕಿಸಾನ್ ಹೊಸ ಅರ್ಜಿ ಆಹ್ವಾನ | ಯಾವ ರೈತರು ಅರ್ಜಿ ಹಾಕಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

ಹಣ ಜಮೆಯಾಗದಿದ್ದರೆ ಏನು ಮಾಡಬೇಕು?

ಒಂದು ವೇಳೆ ಗೃಹಲಕ್ಷ್ಮಿ ಹಣ ಖಾತೆಗೆ ಜಮೆಯಾಗದಿದ್ದರೆ ಮೊದಲು ಈ ಅಂಶಗಳನ್ನು ಪರಿಶೀಲಿಸಿ.

  • ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
  • ಬ್ಯಾಂಕ್‌ನಲ್ಲಿ ಅಗತ್ಯ ಇ-ಕೆವೈಸಿ (e-KYC) ಅಥವಾ ಖಾತೆ ವಿವರಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಿ.
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (Women & Child Development Department) ಕಚೇರಿ ಅಥವಾ ಹತ್ತಿರದ ಗ್ರಾಮ್ ಒನ್/ಕರ್ನಾಟಕ ಒನ್
  • ಕೇಂದ್ರದಲ್ಲಿ ಪಾವತಿ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಬಹುದು.

ಇದನ್ನೂ ಓದಿ: BPL Ration Card Reactivation: ಬಿಪಿಎಲ್ ಕಾರ್ಡ್ ವಿತರಣೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್! ರದ್ದಾದ ಕಾರ್ಡ್ ಮತ್ತೆ ಪಡೆಯಲು ಅವಕಾಶ, ಇಲ್ಲಿದೆ ಸಂಪೂರ್ಣ ಮಾಹಿತಿ

ಫಲಾನುಭವಿಗಳು ನೆನಪಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯ

ಸದ್ಯದ ಪರಿಸ್ಥಿತಿಯಲ್ಲಿ ಇ-ಕೆವೈಸಿ ಮಾಡಿಸದಿದ್ದರೆ ಗೃಹಲಕ್ಷ್ಮಿ ಹಣ ನಿಲ್ಲುತ್ತದೆ ಎಂಬ ಮಾಹಿತಿ ಅಧಿಕೃತವಲ್ಲ. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಯಾವುದೇ ವದಂತಿಗಳನ್ನು ನಂಬದೇ, ಸರ್ಕಾರದ ಅಧಿಕೃತ ಪ್ರಕಟಣೆಗಳನ್ನು ಮಾತ್ರ ಅನುಸರಿಸುವುದು ಉತ್ತಮ.

ಯಾವುದೇ ಹೊಸ ನಿಯಮ ಜಾರಿಗೆ ಬಂದರೆ ಸರ್ಕಾರವೇ ಅಧಿಕೃತವಾಗಿ ಮಾಹಿತಿ ನೀಡಲಿದೆ. ಅಲ್ಲಿಯವರೆಗೆ ಅನಗತ್ಯ ಗೊಂದಲಕ್ಕೆ ಒಳಗಾಗದೆ, ಸುಳ್ಳು ಸುದ್ದಿಗಳಿಂದ ಎಚ್ಚರಿಕೆಯಿಂದಿರುವುದು ಸೂಕ್ತ.

Gruhalakshmi Scheme Money Transfer: ಗೃಹಲಕ್ಷ್ಮಿ ಹಣ ಜಮೆ ಆರಂಭ: ರಾಜ್ಯದ ಮಹಿಳೆಯರಿಗೆ ಸರ್ಕಾರದಿಂದ ಮಹತ್ವದ ಮಾಹಿತಿ


Spread the love
error: Content is protected !!