Post Matric Prize Money Scholarship 2026: ಕರ್ನಾಟಕ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ₹35,000 ವರೆಗೆ ಪ್ರೋತ್ಸಾಹಧನ: ಅರ್ಜಿ ಸಲ್ಲಿಕೆ ಹೇಗೆ? ಸಂಪೂರ್ಣ ಮಾಹಿತಿ

Spread the love

WhatsApp Group Join Now
Telegram Group Join Now

Post Matric Prize Money Scholarship 2026: ಕರ್ನಾಟಕ ಸರ್ಕಾರವು ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಇಂಜಿನಿಯರಿಂಗ್, ಕೃಷಿ, ಮೆಡಿಕಲ್ ವಿದ್ಯಾರ್ಥಿಗಳಿಗೆ ₹20 ಸಾವಿರದಿಂದ ₹35 ಸಾವಿರವರೆಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಿದೆ.

ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ನೆರವು (Financial Assistance) ಅಗತ್ಯವಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಸಮಾಜ ಕಲ್ಯಾಣ ಇಲಾಖೆಯು ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡುವ ಮಹತ್ವಾಕಾಂಕ್ಷಿ ಉದ್ದೇಶದಿಂದ ‘ಮೆಟ್ರಿಕ್ ನಂತರದ ಪ್ರೋತ್ಸಾಹಧನ 2026’ (Post Metric Prize Money Scholarship 2026) ಯೋಜನೆಗೆ ಅಧಿಕೃತವಾಗಿ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

ಪಿಯುಸಿ, ಪದವಿಯಂತಹ ವಿವಿಧ ಕೋರ್ಸ್ಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ₹20,000 ದಿಂದ ₹35,000 ವರೆಗೆ ಭಾರಿ ನಗದು ಪ್ರೋತ್ಸಾಹಧನವನ್ನು ಜಮಾ ಮಾಡಲಾಗುತ್ತದೆ. ಈ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಪೂರ್ಣ ವಿವರ ಇಲ್ಲಿದೆ.

ಇದನ್ನೂ ಓದಿ: RTE Free Education Extended: ಇನ್ಮುಂದೆ 10ನೇ ತರಗತಿವರೆಗೂ ಆರ್‌ಟಿಇ ಸೀಟು | ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

ಯಾರಿಗೆ ಸಿಗಲಿದೆ ಈ ಪ್ರೈಸ್ ಮನಿ? (Eligibility Criteria)

ಈ ವಿದ್ಯಾರ್ಥಿವೇತನವನ್ನು ಪಡೆಯಲು ಕೇವಲ ಪಾಸ್ ಆದರೆ ಸಾಲದು, ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಿರಬೇಕು. ಅರ್ಹತೆಯ ಪ್ರಮುಖ ಅಂಶಗಳು ಹೀಗಿವೆ:

ಮೀಸಲಾತಿ: ಈ ಪ್ರೋತ್ಸಾಹಧನ ಯೋಜನೆಯು ಕೇವಲ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.

ಶ್ರೇಣಿ ನಿಯಮ: ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಪಿಯುಸಿ (PUC), ಪದವಿ (UG Degree), ಸ್ನಾತಕೋತ್ತರ ಪದವಿ (PG Degree) ಅಥವಾ ವೃತ್ತಿಪರ ಕೋರ್ಸ್’ಗಳನ್ನು ಕಡ್ಡಾಯವಾಗಿ ಪ್ರಥಮ ಪ್ರಯತ್ನದಲ್ಲಿಯೇ ಹಾಗೂ ಪ್ರಥಮ ದರ್ಜೆಯಲ್ಲಿ (First Class) ಪೂರ್ಣಗೊಳಿಸಿರಬೇಕು.

ಇದನ್ನೂ ಓದಿ: A Kharabu B Kharabu Land: ‘ಅ’ ಖರಾಬು, ‘ಬ’ ಖರಾಬು ಜಮೀನು ಅಂದ್ರೇನು? ರೈತರು ತಪ್ಪದೇ ತಿಳಿಯಬೇಕಾದ ಮಾಹಿತಿ

ಯಾವ ಕೋರ್ಸ್’ಗೆ  ಎಷ್ಟು ಪ್ರೋತ್ಸಾಹಧನ? (Scholarship Amount Details)

ವಿದ್ಯಾರ್ಥಿಗಳು ತಾವು ಉತ್ತೀರ್ಣರಾದ ಕೋರ್ಸ್ ಆಧಾರದ ಮೇಲೆ ಸಮಾಜ ಕಲ್ಯಾಣ ಇಲಾಖೆಯು ಪ್ರೋತ್ಸಾಹಧನವನ್ನು ನಿಗದಿಪಡಿಸಿದೆ. ಇದರ ವಿವರ ಈ ಕೆಳಗಿನಂತಿದೆ:

  • ಪಿಯುಸಿ (PUC): ₹20,000
  • ಪದವಿ (UG – Under Graduate): ₹25,000
  • ಸ್ನಾತಕೋತ್ತರ ಪದವಿ (PG – Post Graduate): ₹30,000
  • ಇಂಜಿನಿಯರಿಂಗ್, ಕೃಷಿ, ಮೆಡಿಕಲ್ (Engg/Agri/Medical): ₹35,000

ಇದನ್ನೂ ಓದಿ: Gruhalakshmi Pending Money: ಗೃಹಲಕ್ಷ್ಮಿ ಬಾಕಿ ಹಣ ಬಿಡುಗಡೆ | ಮಾರ್ಚ್ ಮತ್ತು ಏಪ್ರಿಲ್ ಕಂತು ಜಮಾ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಮಹತ್ವದ ಮಾಹಿತಿ

ವಿದ್ಯಾರ್ಥಿಗಳು ಗಮನಿಸಲೇಬೇಕಾದ ಪ್ರಮುಖ ನಿಯಮಗಳು (Important Rules)

ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಥಿಗಳು ಈ ಕೆಳಗಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅನಿವಾರ್ಯವಾಗಿದೆ:

ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಕೇವಲ 15 ದಿನಗಳ ಒಳಗಾಗಿ, ಆ ಅರ್ಜಿಯ ಪ್ರಿಂಟ್‌ಔಟ್ ಹಾಗೂ ಎಲ್ಲಾ ಅಗತ್ಯ ದಾಖಲೆಗಳನ್ನು ನಿಮ್ಮ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಛೇರಿಗೆ (District Social Welfare Office) ಖುದ್ದಾಗಿ ಭೇಟಿ ನೀಡಿ ಕಡ್ಡಾಯವಾಗಿ ಸಲ್ಲಿಸಬೇಕು.

Post Matric Prize Money Scholarship 2026
Post Matric Prize Money Scholarship 2026

ಪಿಯುಸಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಉನ್ನತ ಕೋರ್ಸ್ನ ವಿದ್ಯಾರ್ಥಿಗಳು ಇಲಾಖೆ ನೀಡುವ ‘ದೃಢೀಕರಣ ಪತ್ರ’ವನ್ನು ಭರ್ತಿ ಮಾಡಿ, ತಾವು ವ್ಯಾಸಂಗ ಮಾಡಿದ ಕಾಲೇಜಿನ ಪ್ರಾಂಶುಪಾಲರ ಸಹಿ ಮತ್ತು ಮೊಹರು ಪಡೆದು ಸಲ್ಲಿಸುವುದು ಕಡ್ಡಾಯವಾಗಿದೆ.

ಬಹುಮುಖ್ಯವಾಗಿ ಪ್ರೈಸ್ ಮನಿಯ ಮೊತ್ತವು ನೇರವಾಗಿ ವಿದ್ಯಾರ್ಥಿಗಳ ಆಧಾರ್‌ಗೆ ಲಿಂಕ್ ಆಗಿರುವ (Aadhaar Linked) ಹಾಗೂ NPCI ಮ್ಯಾಪ್ ಮಾಡಲಾದ ಸಕ್ರಿಯ ಬ್ಯಾಂಕ್ ಖಾತೆಗೆ (Active Bank Account) ಮಾತ್ರ ಜಮಾ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಿದ ನಂತರ ಯಾವುದೇ ಕಾರಣಕ್ಕೂ ಬ್ಯಾಂಕ್ ಅಥವಾ ಆಧಾರ್ ವಿವರಗಳನ್ನು ಬದಲಾಯಿಸುವಂತಿಲ್ಲ.

WhatsApp Group Join Now
Telegram Group Join Now

ಇದನ್ನೂ ಓದಿ: Ather Cheap Electric Scooter: ₹1 ಲಕ್ಷಕ್ಕೆ ಅಥರ್ ಎಲೆಕ್ಟ್ರಿಕ್ ಸ್ಕೂಟರ್ | ಪೆಟ್ರೋಲ್ ಬೈಕ್‌ಗೆ ಬಿಗ್ ಶಾಕ್

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ (How to Apply Online)

ಅರ್ಹ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯ ಸರಳ ಹಂತಗಳು ಇಲ್ಲಿವೆ:

ಹಂತ-1: ಕೆಳಗೆ ನೀಡಿದ ಲಿಂಕ್ ಮೂಲಕ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮುಖಪುಟದಲ್ಲಿರುವ ‘Register’ (ನೋಂದಣಿ) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: Water Powered Hydrogen Stove: ಗ್ಯಾಸ್ ಸಿಲಿಂಡರ್ ಬೇಡ; ಕೇವಲ ನೀರಿನಿಂದಲೇ ಉರಿಯುವ ಹೊಸ ಒಲೆ ಬಂತು!

ಹಂತ-2: ಯೋಜನೆಗಳ ಪಟ್ಟಿಯಲ್ಲಿ ‘POST METRIC PRIZE MONEY’ (ಮೆಟ್ರಿಕ್ ನಂತರದ ಪ್ರೈಸ್ ಮನಿ) ಎಂಬುದನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಿ.

ಹಂತ-3: ವಿದ್ಯಾರ್ಥಿಯ ಆಧಾರ್ ಸಂಖ್ಯೆಯನ್ನು (Aadhaar Number) ನಮೂದಿಸಿ, ಮೊಬೈಲ್‌ಗೆ ಬರುವ ಒಟಿಪಿ ಮೂಲಕ ಪರಿಶೀಲನೆ (Verification) ಮಾಡಿ.

ಹಂತ-4: ಆ ನಂತರ ನಿಮ್ಮ ಜಾತಿ, ಆದಾಯ ಹಾಗೂ ಕೋರ್ಸ್’ನ  ಸಂಪೂರ್ಣ ವಿವರಗಳನ್ನು ಮತ್ತು ಅಂಕಗಳನ್ನು ಸ್ಪಷ್ಟವಾಗಿ ಭರ್ತಿ ಮಾಡಿ ಅರ್ಜಿಯನ್ನು ‘Submit’ ಮಾಡಿ.

ಇದನ್ನೂ ಓದಿ: LPG Cylinder New Rules: ಗ್ಯಾಸ್ ಸಿಲಿಂಡರ್ ಬುಕ್ಕಿಂಗ್‌ಗೆ ಹೊಸ ರೂಲ್ಸ್ | ಮೇ 1ರಿಂದಲೇ ಸರ್ಕಾರದ ಹೊಸ ನಿಯಮಗಳು ಜಾರಿ

ಪ್ರಮುಖ ಲಿಂಕ್‌ಗಳು ಹಾಗೂ ಸಂಪರ್ಕ ವಿವರ (Important Links & Helpline)

  • ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್: Apply ಮಾಡಿ 
  • ಅಧಿಕೃತ ವೆಬ್‌ಸೈಟ್: swd.karnataka.gov.in

ಅರ್ಜಿ ಸಲ್ಲಿಸುವಾಗ ಯಾವುದೇ ತಾಂತ್ರಿಕ ದೋಷಗಳು ಅಥವಾ ಗೊಂದಲಗಳಿದ್ದರೆ, ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ಸಹಾಯವಾಣಿ ಸಂಖ್ಯೆ 9482300400 ಗೆ ಕರೆ ಮಾಡಬಹುದು. ಅಥವಾ ನಿಮ್ಮ ತಾಲೂಕು/ಜಿಲ್ಲಾ ಸಮಾಜ ಕಲ್ಯಾಣ ಕಚೇರಿಗೆ ನೇರವಾಗಿ ಭೇಟಿ ನೀಡಿ ಮಾಹಿತಿ ಪಡೆಯಬಹುದು.

Low Interest Loan Eligibility- ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ | ಮೊಬೈಲ್‌ನಲ್ಲೇ ಚೆಕ್ ಮಾಡಿ ನಿಮ್ಮ ಸಾಲ ಪಡೆಯುವ ಅರ್ಹತೆ


Spread the love
error: Content is protected !!