PM Surya Ghar Yojana: ಪಿಎಂ ಸೂರ್ಯ ಘರ್ ಯೋಜನೆಯಡಿ ಮನೆಗೆ ಸೋಲಾರ್ ಘಟಕ ಅಳವಡಿಸಿಕೊಳ್ಳಲು ₹78,000 ವರೆಗೆ ಸಹಾಯಧನ ಪಡೆಯಿರಿ. ಆನ್‌ಲೈನ್ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ…
ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಸೂರ್ಯ ಘರ್: ಮುಫ್ತ್ ವಿದ್ಯುತ್ ಯೋಜನೆ (PM Surya Ghar Muft Bijli Yojana) ಅಡಿಯಲ್ಲಿ ಉಚಿತ ಸೋಲಾರ್ ವಿದ್ಯುತ್ ಸಹಾಯಧನ ನೀಡಲು ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯ ಮೂಲಕ ದೇಶದ ಒಂದು ಕೋಟಿ ಮನೆಗಳ ಮೇಲ್ಚಾವಣಿಗಳಲ್ಲಿ ರೂಫ್‌ಟಾಪ್ ಸೋಲಾರ್ ಸಿಸ್ಟಮ್ (Rooftop Solar System) ಅಳವಡಿಸಿ, ಮನೆಗಳೇ ತಮ್ಮ ಅಗತ್ಯದ ವಿದ್ಯುತ್ ಉತ್ಪಾದಿಸಿಕೊಳ್ಳುವಂತೆ ಮಾಡಲು ಸರ್ಕಾರ ಯೋಜಿಸಿದೆ.
ವಿಶೇಷವಾಗಿ ಮಧ್ಯಮ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಈ ಯೋಜನೆ ದೊಡ್ಡ ವರದಾನವಾಗಿದ್ದು, ಅರ್ಹ ಫಲಾನುಭವಿಗಳಿಗೆ ₹78,000 ವರೆಗೆ ಸಹಾಯಧನ (Subsidy) ನೀಡಲಾಗುತ್ತಿದೆ.
ಒಮ್ಮೆ ಸೋಲಾರ್ ಘಟಕ ಅಳವಡಿಸಿಕೊಂಡರೆ ಹಲವು ವರ್ಷಗಳವರೆಗೆ ಕಡಿಮೆ ವೆಚ್ಚದಲ್ಲಿ ಅಥವಾ ಬಹುತೇಕ ಉಚಿತವಾಗಿ ವಿದ್ಯುತ್ ಪಡೆಯಬಹುದು. ಇದರಿಂದ ಕುಟುಂಬದ ಮಾಸಿಕ ಖರ್ಚು ಕಡಿಮೆಯಾಗುವುದರ ಜೊತೆಗೆ ಪರಿಸರ ಸಂರಕ್ಷಣೆಯಲ್ಲಿಯೂ ಮಹತ್ವದ ಪಾತ್ರ ವಹಿಸಬಹುದು.
ಇದನ್ನೂ ಓದಿ: June 2026 Bank Holidays: ಜೂನ್‌ನಲ್ಲಿ ಬ್ಯಾಂಕ್‌ಗಳಿಗೆ ಎಷ್ಟು ದಿನ ರಜೆ? ಕರ್ನಾಟಕದ ಬ್ಯಾಂಕ್ ರಜಾ ಪಟ್ಟಿ ಇಲ್ಲಿದೆ
ಏನಿದು ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ?
ದೇಶದಲ್ಲಿ ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ 2024ರಲ್ಲಿ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯನ್ನು ಘೋಷಿಸಿತು. ಸುಮಾರು ₹75,000 ಕೋಟಿ ವೆಚ್ಚದಲ್ಲಿ ಜಾರಿಯಾಗಿರುವ ಈ ಯೋಜನೆಯ ಮುಖ್ಯ ಗುರಿ ದೇಶದ ಮನೆಗಳಿಗೆ ಶುದ್ಧ ಮತ್ತು ಪರಿಸರ ಸ್ನೇಹಿ ವಿದ್ಯುತ್ ಒದಗಿಸುವುದಾಗಿದೆ.
ಈ ಯೋಜನೆಯಡಿ ಮನೆಗಳ ಮೇಲ್ಚಾವಣಿಯಲ್ಲಿ ಸೌರ ಫಲಕಗಳನ್ನು (Solar Panels) ಅಳವಡಿಸಲಾಗುತ್ತದೆ. ಸೂರ್ಯನ ಬೆಳಕಿನಿಂದ ಉತ್ಪಾದನೆಯಾಗುವ ವಿದ್ಯುತ್ ನೇರವಾಗಿ ಮನೆಯ ಬಳಕೆಗೆ ಬರುತ್ತದೆ. ಹೀಗಾಗಿ ವಿದ್ಯುತ್ ಸರಬರಾಜು ಕಂಪನಿಗಳ ಮೇಲೆ ಅವಲಂಬನೆ ಕಡಿಮೆಯಾಗುತ್ತದೆ.
ಸರ್ಕಾರದ ಅಂದಾಜಿನ ಪ್ರಕಾರ, ಯೋಜನೆಯ ಫಲಾನುಭವಿಗಳು ವರ್ಷಕ್ಕೆ ಸಾವಿರಾರು ರೂಪಾಯಿ ವಿದ್ಯುತ್ ಬಿಲ್ ಉಳಿತಾಯ ಮಾಡಬಹುದು. ಅಲ್ಲದೆ, ಹೆಚ್ಚುವರಿಯಾಗಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ವಿದ್ಯುತ್ ವಿತರಣಾ ಸಂಸ್ಥೆಗಳಿಗೆ ಮಾರಾಟ ಮಾಡುವ ಅವಕಾಶವೂ ದೊರೆಯುತ್ತದೆ.
ಯೋಜನೆಯ ಪ್ರಮುಖ ಲಾಭಗಳು
1. ವಿದ್ಯುತ್ ಬಿಲ್‌ನಲ್ಲಿ ಭಾರಿ ಉಳಿತಾಯ: ಸೋಲಾರ್ ಘಟಕ ಅಳವಡಿಸಿದ ನಂತರ ಮನೆಯ ಬಹುತೇಕ ವಿದ್ಯುತ್ ಅಗತ್ಯವನ್ನು ಸೌರಶಕ್ತಿ ಪೂರೈಸುತ್ತದೆ. ಹೀಗಾಗಿ ಪ್ರತಿ ತಿಂಗಳು ಪಾವತಿಸಬೇಕಾಗುವ ವಿದ್ಯುತ್ ಬಿಲ್ ಗಣನೀಯವಾಗಿ ಕಡಿಮೆಯಾಗುತ್ತದೆ.
2. 300 ಯೂನಿಟ್ ವರೆಗೆ ಉಚಿತ ವಿದ್ಯುತ್: ಈ ಯೋಜನೆಯ ಪ್ರಮುಖ ಆಕರ್ಷಣೆಯೇ ಪ್ರತಿ ತಿಂಗಳು 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ. ಸಾಮಾನ್ಯ ಕುಟುಂಬದ ಮಾಸಿಕ ಬಳಕೆಗೆ ಇದು ಸಾಕಾಗಬಹುದು.
3. ಸರ್ಕಾರದಿಂದ ನೇರ ಸಹಾಯಧನ: ಸೋಲಾರ್ ಘಟಕ ಅಳವಡಿಸುವ ವೆಚ್ಚವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಹಾಯಧನ ವರ್ಗಾವಣೆ ಮಾಡುತ್ತದೆ.
ಇದನ್ನೂ ಓದಿ: IMD Monsoon Forecast 2026: ಈ ವರ್ಷ ಕಡಿಮೆ ಮಳೆ; ದೇಶದಲ್ಲಿ ಬರದ ಛಾಯೆ! | ಹವಾಮಾನ ಇಲಾಖೆ ಪರಿಷ್ಕೃತ ಮುನ್ಸೂಚನೆ ಬಿಡುಗಡೆ
4. ಕಡಿಮೆ ಬಡ್ಡಿದರದಲ್ಲಿ ಸಾಲ: ಸೋಲಾರ್ ಘಟಕ ಅಳವಡಿಸಲು ಅಗತ್ಯವಿರುವ ಮೊತ್ತವನ್ನು ಒಮ್ಮೆಲೇ ಭರಿಸಲು ಸಾಧ್ಯವಾಗದವರಿಗೆ ಬ್ಯಾಂಕುಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ.
5. ಹೆಚ್ಚುವರಿ ಆದಾಯ ಗಳಿಸುವ ಅವಕಾಶ: ನಿಮ್ಮ ಮನೆಯ ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದನೆಯಾದರೆ ಅದನ್ನು ಗ್ರಿಡ್‌ಗೆ (ಉಡಿiಜ) ಪೂರೈಸಬಹುದು. ಇದಕ್ಕಾಗಿ ವಿದ್ಯುತ್ ಸಂಸ್ಥೆಗಳು ಹಣ ಪಾವತಿಸುತ್ತವೆ.
6. ದೀರ್ಘಾವಧಿಯ ಪ್ರಯೋಜನ: ಒಮ್ಮೆ ಅಳವಡಿಸಿದ ಸೋಲಾರ್ ಘಟಕಗಳು ಸಾಮಾನ್ಯವಾಗಿ 20 ರಿಂದ 25 ವರ್ಷಗಳವರೆಗೆ ಉತ್ತಮ ಕಾರ್ಯಕ್ಷಮತೆ ನೀಡುತ್ತವೆ. ಹೀಗಾಗಿ ಇದು ದೀರ್ಘಾವಧಿಯ ಹೂಡಿಕೆಯಾಗುತ್ತದೆ.
ಇದನ್ನೂ ಓದಿ: PM Kisan 23rd Installment: ಪಿಎಂ ಕಿಸಾನ್ 23ನೇ ಕಂತಿನ ಹಣ ಬಿಡುಗಡೆ | ಸರ್ಕಾರದಿಂದ ಹೊಸ ಅಪ್ಡೇಟ್

ಎಷ್ಟು ಸಹಾಯಧನ ಸಿಗಲಿದೆ?
ಸೋಲಾರ್ ಘಟಕದ ಸಾಮರ್ಥ್ಯವನ್ನು ಆಧರಿಸಿ ಸರ್ಕಾರ ಸಹಾಯಧನ ನೀಡುತ್ತದೆ.
- 1 ಕಿಲೋವ್ಯಾಟ್ ಸೋಲಾರ್ ಘಟಕ: ಒಂದು ಕಿಲೋವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಅಳವಡಿಸಿದರೆ ₹30,000 ಸಹಾಯಧನ ದೊರೆಯುತ್ತದೆ.
- 2 ಕಿಲೋವ್ಯಾಟ್ ಸೋಲಾರ್ ಘಟಕ: ಎರಡು ಕಿಲೋವ್ಯಾಟ್ ಸಾಮರ್ಥ್ಯದ ಘಟಕಕ್ಕೆ ₹60,000 ಸಹಾಯಧನ ನೀಡಲಾಗುತ್ತದೆ.
- 3 ಕಿಲೋವ್ಯಾಟ್ ಅಥವಾ ಹೆಚ್ಚಿನ ಸಾಮರ್ಥ್ಯ: ಮೂರು ಕಿಲೋವ್ಯಾಟ್ ಸಾಮರ್ಥ್ಯದ ಸೋಲಾರ್ ವ್ಯವಸ್ಥೆ ಅಳವಡಿಸಿದರೆ ಗರಿಷ್ಠ ₹78,000 ಸಹಾಯಧನ ಪಡೆಯಬಹುದು.
ಮಧ್ಯಮ ಗಾತ್ರದ ಕುಟುಂಬಗಳಿಗೆ 3 ಕಿಲೋವ್ಯಾಟ್ ಸಾಮರ್ಥ್ಯದ ಸೋಲಾರ್ ವ್ಯವಸ್ಥೆ ಅತ್ಯಂತ ಸೂಕ್ತವೆಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಇದನ್ನೂ ಓದಿ: CET Result: ಜೂನ್ ಮೊದಲ ವಾರ ಸಿಇಟಿ ಫಲಿತಾಂಶ ಪ್ರಕಟ | ಕೆಇಎ ಪ್ರಮುಖ ಮಾಹಿತಿ
ಯಾರು ಅರ್ಜಿ ಸಲ್ಲಿಸಬಹುದು?
ಯೋಜನೆಯ ಲಾಭ ಪಡೆಯಲು ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕು.
- ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು.
- ಕನಿಷ್ಠ 18 ವರ್ಷ ವಯಸ್ಸು ಪೂರ್ಣಗೊಂಡಿರಬೇಕು.
- ಸ್ವಂತ ಮನೆ ಹೊಂದಿರಬೇಕು.
- ಮನೆಯ ಮೇಲ್ಚಾವಣಿಯಲ್ಲಿ ಸೋಲಾರ್ ಫಲಕ ಅಳವಡಿಸಲು ಸೂಕ್ತ ಸ್ಥಳ ಇರಬೇಕು.
- ಬ್ಯಾಂಕ್ ಖಾತೆ ಆಧಾರ್‌ಗೆ ಲಿಂಕ್ ಆಗಿರಬೇಕು.
- ಕುಟುಂಬದ ಸದಸ್ಯರು ಇದೇ ಉದ್ದೇಶಕ್ಕಾಗಿ ಬೇರೆ ಯಾವುದೇ ಸರ್ಕಾರಿ ಸಹಾಯಧನ ಪಡೆದಿರಬಾರದು.
ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವಾಗ ಈ ದಾಖಲೆಗಳು ಅಗತ್ಯವಾಗುತ್ತವೆ.
- ಆಧಾರ್ ಕಾರ್ಡ್
- ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
- ವೋಟರ್ ಐಡಿ
- ಬ್ಯಾಂಕ್ ಪಾಸ್‌ಬುಕ್
- ಕಳೆದ ಆರು ತಿಂಗಳ ವಿದ್ಯುತ್ ಬಿಲ್
- ಆದಾಯ ಪ್ರಮಾಣ ಪತ್ರ
- ಮನೆಯ ಮಾಲೀಕತ್ವದ ದಾಖಲೆ
- ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
- ಅರ್ಜಿ ಸಲ್ಲಿಸುವ ವಿಧಾನ
ಇದನ್ನೂ ಓದಿ: LPG Cylinder New Rules: ಎಲ್‌ಪಿಜಿ ಸಿಲಿಂಡರ್ ಹೊಸ ನಿಯಮಗಳು | ಈ ತಪ್ಪು ಮಾಡಿದ್ರೆ ನಿಮ್ಮ ಗ್ಯಾಸ್ ಕನೆಕ್ಷನ್ ಬ್ಲಾಕ್!
ಅರ್ಜಿ ಸಲ್ಲಿಕೆ ಹೇಗೆ?
ಯೋಜನೆಗೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮೊದಲು ಯೋಜನೆಯ ಅಧಿಕೃತ ಪೋರ್ಟಲ್ pmsuryaghar.gov.in ಗೆ ಭೇಟಿ ನೀಡಿ ಹೊಸ ಬಳಕೆದಾರರಾಗಿ ನೋಂದಣಿ ಮಾಡಿಕೊಳ್ಳಬೇಕು. ರಾಜ್ಯ, ವಿದ್ಯುತ್ ವಿತರಣಾ ಕಂಪನಿ ಹಾಗೂ ಗ್ರಾಹಕರ ಸಂಖ್ಯೆಯನ್ನು ನಮೂದಿಸಿ ಖಾತೆ ತೆರೆಯಬೇಕು.
ನಂತರ ಮೊಬೈಲ್ ಸಂಖ್ಯೆ ಮತ್ತು ಗ್ರಾಹಕರ ಸಂಖ್ಯೆಯ ಮೂಲಕ ಲಾಗಿನ್ ಆಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿಯ ಪರಿಶೀಲನೆಯ ನಂತರ ವಿದ್ಯುತ್ ಸರಬರಾಜು ಕಂಪನಿಯಿಂದ ಅನುಮೋದನೆ ದೊರೆಯುತ್ತದೆ. ಬಳಿಕ ಸರ್ಕಾರದಿಂದ ಮಾನ್ಯತೆ ಪಡೆದ ಮಾರಾಟಗಾರರ ಮೂಲಕ ಸೋಲಾರ್ ಘಟಕ ಅಳವಡಿಸಬಹುದು.
ಸೋಲಾರ್ ಘಟಕ ಅಳವಡಿಕೆಯ ನಂತರ ನೆಟ್ ಮೀಟರ್‌ಗಾಗಿ ಅರ್ಜಿ ಸಲ್ಲಿಸಬೇಕು. ಅಧಿಕಾರಿಗಳು ತಪಾಸಣೆ ನಡೆಸಿ ಕಾರ್ಯಾರಂಭ ಪ್ರಮಾಣ ಪತ್ರ ನೀಡುತ್ತಾರೆ.
ಕೊನೆಗೆ ಬ್ಯಾಂಕ್ ವಿವರಗಳು ಮತ್ತು ರದ್ದುಗೊಂಡ ಚೆಕ್ ಸಲ್ಲಿಸಿದ ಬಳಿಕ ಸಹಾಯಧನದ ಹಣ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಇದನ್ನೂ ಓದಿ: New BPL Card Income Limit Hike: ಹೊಸ ಬಿಪಿಎಲ್ ಕಾರ್ಡ್ ಅರ್ಜಿದಾರರಿಗೆ ಶುಭಸುದ್ದಿ | ಹೊಸ ರೂಲ್ಸ್ ಜಾರಿಗೆ ಸರ್ಕಾರ ಚಿಂತನೆ
ಶೀಘ್ರದಲ್ಲೇ ಅರ್ಜಿ ಸಲ್ಲಿಸಿ…
ವಿದ್ಯುತ್ ಬಿಲ್ ಕಡಿಮೆ ಮಾಡಿಕೊಳ್ಳಲು ಮತ್ತು ದೀರ್ಘಾವಧಿಯ ಉಳಿತಾಯ ಸಾಧಿಸಲು ಬಯಸುವವರಿಗೆ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಅತ್ಯುತ್ತಮ ಅವಕಾಶವಾಗಿದೆ.
ಸರ್ಕಾರದಿಂದ ₹78,000 ವರೆಗೆ ಸಹಾಯಧನ, ಕಡಿಮೆ ಬಡ್ಡಿದರದ ಸಾಲ, 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಹಾಗೂ ಹೆಚ್ಚುವರಿ ಆದಾಯ ಗಳಿಸುವ ಅವಕಾಶ ಒಂದೇ ಯೋಜನೆಯಲ್ಲಿ ದೊರೆಯುತ್ತಿದೆ.
ಹೀಗಾಗಿ ಅರ್ಹ ಕುಟುಂಬಗಳು ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಶೀಘ್ರದಲ್ಲೇ ಅರ್ಜಿ ಸಲ್ಲಿಸುವುದು ಒಳಿತು. ಇಂದೇ ಸೋಲಾರ್ ಅಳವಡಿಸಿ, ನಾಳೆಯ ವಿದ್ಯುತ್ ವೆಚ್ಚದಿಂದ ಮುಕ್ತಿ ಪಡೆಯಿರಿ.
- ಅರ್ಜಿ ಲಿಂಕ್: Apply Now
PM Kisan 23rd Installment: ಪಿಎಂ ಕಿಸಾನ್ 23ನೇ ಕಂತಿನ ಹಣ ಬಿಡುಗಡೆ | ಸರ್ಕಾರದಿಂದ ಹೊಸ ಅಪ್ಡೇಟ್

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.