June 2026 Bank Holidays: ಮೊಹರಂ ಸೇರಿ ಜೂನ್‌ನಲ್ಲಿ ಬ್ಯಾಂಕ್‌ಗಳಿಗೆ ಎಷ್ಟು ದಿನ ರಜೆ? ಕರ್ನಾಟಕದ ಬ್ಯಾಂಕ್ ರಜಾ ಪಟ್ಟಿ ಇಲ್ಲಿದೆ

Spread the love

WhatsApp Group Join Now
Telegram Group Join Now

June 2026 Bank Holidays: ಜೂನ್ 2026ರಲ್ಲಿ ಕರ್ನಾಟಕದಲ್ಲಿ ಬ್ಯಾಂಕ್‌ಗಳಿಗೆ ಎಷ್ಟು ದಿನ ರಜೆ? ಜೂನ್ ತಿಂಗಳ ಸಂಪೂರ್ಣ ಬ್ಯಾಂಕ್ ರಜಾ ಪಟ್ಟಿ, ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ಮಾಹಿತಿ ಇಲ್ಲಿದೆ…

ಬೆಂಗಳೂರು: ಜೂನ್ ತಿಂಗಳಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸಗಳನ್ನು ಮಾಡಬೇಕೆಂದು ಯೋಚಿಸುತ್ತಿದ್ದರೆ, ಮೊದಲು ಬ್ಯಾಂಕ್ ರಜಾ ದಿನಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಏಕೆಂದರೆ ಜೂನ್ 2026ರಲ್ಲಿ ವಿವಿಧ ಹಬ್ಬಗಳು, ಪ್ರಾದೇಶಿಕ ಆಚರಣೆಗಳು ಹಾಗೂ ವಾರಾಂತ್ಯದ ರಜೆಗಳು (Weekend Holidays) ಸೇರಿ ದೇಶದ ಹಲವೆಡೆ ಬ್ಯಾಂಕ್‌ಗಳಿಗೆ ಸಾಕಷ್ಟು ದಿನ ರಜೆ ಇರಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India – RBI) ಬಿಡುಗಡೆ ಮಾಡಿರುವ ಅಧಿಕೃತ ರಜಾಪಟ್ಟಿಯ ಪ್ರಕಾರ, ಬ್ಯಾಂಕ್ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಕೆಲವು ಹಬ್ಬಗಳು ದೇಶಾದ್ಯಂತ ಆಚರಿಸಲ್ಪಟ್ಟರೆ, ಇನ್ನೂ ಕೆಲವು ನಿರ್ದಿಷ್ಟ ರಾಜ್ಯಗಳಿಗೆ ಮಾತ್ರ ಸೀಮಿತವಾಗಿರುತ್ತವೆ.

ಇದನ್ನೂ ಓದಿ: IMD Monsoon Forecast 2026: ಈ ವರ್ಷ ಕಡಿಮೆ ಮಳೆ; ದೇಶದಲ್ಲಿ ಬರದ ಛಾಯೆ! | ಹವಾಮಾನ ಇಲಾಖೆ ಪರಿಷ್ಕೃತ ಮುನ್ಸೂಚನೆ ಬಿಡುಗಡೆ

ಕರ್ನಾಟಕದಲ್ಲಿ ಜೂನ್ ತಿಂಗಳಲ್ಲಿ ಎಷ್ಟು ದಿನ ಬ್ಯಾಂಕ್ ಬಂದ್?

ಕರ್ನಾಟಕದಲ್ಲಿ ಜೂನ್ ತಿಂಗಳಲ್ಲಿ ಒಟ್ಟು 7 ದಿನಗಳು ಬ್ಯಾಂಕ್ ಶಾಖೆಗಳು (Bank Branches) ಕಾರ್ಯನಿರ್ವಹಿಸುವುದಿಲ್ಲ. ಈ ರಜೆಗಳಲ್ಲಿ ಭಾನುವಾರಗಳು, ಎರಡನೇ ಹಾಗೂ ನಾಲ್ಕನೇ ಶನಿವಾರಗಳು ಮತ್ತು ಮೊಹರಂ ಹಬ್ಬದ ರಜೆ ಸೇರಿವೆ.

ಇದನ್ನೂ ಓದಿ: PM Kisan 23rd Installment: ಪಿಎಂ ಕಿಸಾನ್ 23ನೇ ಕಂತಿನ ಹಣ ಬಿಡುಗಡೆ | ಸರ್ಕಾರದಿಂದ ಹೊಸ ಅಪ್ಡೇಟ್

ಕರ್ನಾಟಕದ ಬ್ಯಾಂಕ್ ರಜಾ ಪಟ್ಟಿ

  • ಜೂನ್ 7 ಭಾನುವಾರ: ವಾರಾಂತ್ಯದ ರಜೆ
  • ಜೂನ್ 13 ಶನಿವಾರ: ಎರಡನೇ ಶನಿವಾರ
  • ಜೂನ್ 14 ಭಾನುವಾರ: ವಾರಾಂತ್ಯದ ರಜೆ
  • ಜೂನ್ 21 ಭಾನುವಾರ: ವಾರಾಂತ್ಯದ ರಜೆ
  • ಜೂನ್ 26 ಶುಕ್ರವಾರ: ಮೊಹರಂ ಹಬ್ಬ
  • ಜೂನ್ 27 ಶನಿವಾರ: ನಾಲ್ಕನೇ ಶನಿವಾರ
  • ಜೂನ್ 28 ಭಾನುವಾರ: ವಾರಾಂತ್ಯದ ರಜೆ

ಈ ದಿನಗಳಲ್ಲಿ ಬ್ಯಾಂಕ್ ಶಾಖೆಗಳು ಮುಚ್ಚಿರಲಿದ್ದರೂ, ಗ್ರಾಹಕರು ಡಿಜಿಟಲ್ ಸೇವೆಗಳನ್ನು ನಿರ್ಬಂಧವಿಲ್ಲದೆ ಬಳಸಬಹುದು.

June 2026 Bank Holidays
June 2026 Bank Holidays

ಇದನ್ನೂ ಓದಿ: 15 Lakh Fake Old Age Pension Cancelled: 15 ಲಕ್ಷ ಅಕ್ರಮ ವೃದ್ಧಾಪ್ಯ ವೇತನ ರದ್ದು | ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯಾ? ಇಲ್ಲಿದೆ ಸಂಪೂರ್ಣ ಮಾಹಿತಿ

ದೇಶಾದ್ಯಂತ ಜೂನ್ 2026ರ ಬ್ಯಾಂಕ್ ರಜೆಗಳು

ಭಾರತದ ವಿವಿಧ ರಾಜ್ಯಗಳಲ್ಲಿ ಸ್ಥಳೀಯ ಹಬ್ಬಗಳು ಮತ್ತು ಸಾಂಸ್ಕೃತಿಕ ಆಚರಣೆಗಳ ಹಿನ್ನೆಲೆಯಲ್ಲಿ ಹೆಚ್ಚುವರಿ ಬ್ಯಾಂಕ್ ರಜೆಗಳನ್ನು ಘೋಷಿಸಲಾಗಿದೆ. ಅದರ ವಿವರ ಹೀಗಿದೆ:

  • ಜೂನ್ 7: ಭಾನುವಾರದ ನಿಯಮಿತ ರಜೆ.
  • ಜೂನ್ 13 ಮತ್ತು 14: ಎರಡನೇ ಶನಿವಾರ ಹಾಗೂ ಭಾನುವಾರದ ರಜೆ.
  • ಜೂನ್ 15: ರಾಜ ಸಂಕ್ರಾಂತಿ (Raja Sankranti) ಮತ್ತು ವೈಎಂಎ ದಿನ (YMA Day) ಪ್ರಯುಕ್ತ ಒಡಿಶಾ ಹಾಗೂ ಮಿಝೋರಾಂ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ.
  • ಜೂನ್ 17: ಮಹಾರಾಣಾ ಪ್ರತಾಪ್ ಜಯಂತಿ (Maharana Pratap Jayanti) ಹಿನ್ನೆಲೆಯಲ್ಲಿ ಹರಿಯಾಣ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಬ್ಯಾಂಕ್‌ಗಳು ಬಂದ್.
  • ಜೂನ್ 18: ಶ್ರೀ ಗುರು ಅರ್ಜುನ ದೇವ್ ಬಲಿದಾನ ದಿನ (Guru Arjan Dev Martyrdom Day) ಪ್ರಯುಕ್ತ ಪಂಜಾಬ್‌ನಲ್ಲಿ ರಜೆ.
  • ಜೂನ್ 21: ಭಾನುವಾರದ ನಿಯಮಿತ ರಜೆ.
  • ಜೂನ್ 26: ಮೊಹರಂ (Muharram) ಹಬ್ಬದ ಅಂಗವಾಗಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ.
  • ಜೂನ್ 27 ಮತ್ತು 28: ನಾಲ್ಕನೇ ಶನಿವಾರ ಹಾಗೂ ಭಾನುವಾರದ ರಜೆ.
  • ಜೂನ್ 29: ಸಂತ ಗುರು ಕಬೀರ್ ಜಯಂತಿ (Sant Guru Kabir Jayanti) ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಬ್ಯಾಂಕ್ ರಜೆ.
  • ಜೂನ್ 30: ರೆಮ್ನಾ ನೀ (Remna Ni) ಆಚರಣೆಯ ಪ್ರಯುಕ್ತ ಮಿಝೋರಾಂನಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.

ಇದನ್ನೂ ಓದಿ: LPG Cylinder New Rules: ಎಲ್‌ಪಿಜಿ ಸಿಲಿಂಡರ್ ಹೊಸ ನಿಯಮಗಳು | ಈ ತಪ್ಪು ಮಾಡಿದ್ರೆ ನಿಮ್ಮ ಗ್ಯಾಸ್ ಕನೆಕ್ಷನ್ ಬ್ಲಾಕ್!

ಯಾವ ರಾಜ್ಯದಲ್ಲಿ ಅತಿ ಹೆಚ್ಚು ಬ್ಯಾಂಕ್ ರಜೆ?

ಜೂನ್ ತಿಂಗಳಲ್ಲಿ ಮಿಝೋರಾಂ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಅತಿ ಹೆಚ್ಚು ಬ್ಯಾಂಕ್ ರಜೆಗಳಿವೆ. ಈ ಎರಡೂ ರಾಜ್ಯಗಳಲ್ಲಿ ಒಟ್ಟು 14 ದಿನಗಳವರೆಗೆ ಬ್ಯಾಂಕ್‌ಗಳು ಬಂದ್ ಇರಲಿವೆ.

ಬ್ಯಾಂಕ್ ರಜೆ ಇದ್ದರೂ ಈ ಸೇವೆಗಳು ಲಭ್ಯ

ಬ್ಯಾಂಕ್ ಶಾಖೆಗಳಿಗೆ ರಜೆ ಇದ್ದರೂ ಬ್ಯಾಂಕಿಂಗ್ ಸೇವೆಗಳು ಸಂಪೂರ್ಣವಾಗಿ ಸ್ಥಗಿತವಾಗುವುದಿಲ್ಲ. ಗ್ರಾಹಕರು ತಮ್ಮ ದಿನನಿತ್ಯದ ಹಣಕಾಸು ವ್ಯವಹಾರಗಳನ್ನು ಡಿಜಿಟಲ್ ಮಾರ್ಗಗಳ ಮೂಲಕ ಸುಲಭವಾಗಿ ನಡೆಸಬಹುದು. ಈ ಕೆಳಗಿನ ಸೇವೆಗಳು 24×7 ಲಭ್ಯವಿರುತ್ತವೆ:

  • ಯುಪಿಐ (UPI) ಮೂಲಕ ಹಣ ವರ್ಗಾವಣೆ
  • ನೆಟ್ ಬ್ಯಾಂಕಿಂಗ್ (Net Banking)
  • ಮೊಬೈಲ್ ಬ್ಯಾಂಕಿಂಗ್  ಆ್ಯಪ್‌ಗಳು (Mobile Banking Apps)
  • ಎಟಿಎಂ (ATM) ಮೂಲಕ ನಗದು ವಿತ್‌ಡ್ರಾ
  • ಖಾತೆ ಬ್ಯಾಲೆನ್ಸ್ ಪರಿಶೀಲನೆ
  • ಬಿಲ್ ಪಾವತಿಗಳು (Bill Payments)

ಇದನ್ನೂ ಓದಿ: New BPL Card Income Limit Hike: ಹೊಸ ಬಿಪಿಎಲ್ ಕಾರ್ಡ್ ಅರ್ಜಿದಾರರಿಗೆ ಶುಭಸುದ್ದಿ | ಹೊಸ ರೂಲ್ಸ್ ಜಾರಿಗೆ ಸರ್ಕಾರ ಚಿಂತನೆ

ಆದರೆ ಖಾತೆ ತೆರೆಯುವುದು, ಡಿಮ್ಯಾಂಡ್ ಡ್ರಾಫ್ಟ್ (Demand Draft) ಪಡೆಯುವುದು, ಚೆಕ್ ಕ್ಲಿಯರೆನ್ಸ್ (Cheque Clearance), ಪಾಸ್‌ಬುಕ್ ಅಪ್‌ಡೇಟ್ ಹಾಗೂ ಇತರೆ ಶಾಖಾ ಸೇವೆಗಳಿಗೆ ಬ್ಯಾಂಕ್ ಕಾರ್ಯದಿನಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಸೂಕ್ತ.

WhatsApp Group Join Now
Telegram Group Join Now

ರಾಜ್ಯದಲ್ಲಿ ಜೂನ್ ತಿಂಗಳು ಒಂದು ವಾರ ಕಾಲ ಬ್ಯಾಂಕುಗಳು ಮುಚ್ಚಿರುತ್ತವೆ. ತಿಂಗಳ ಕೊನೆಯ ವಾರದಲ್ಲಿ ಮೊಹರಂ ಹಾಗೂ ವಾರಾಂತ್ಯದ ರಜೆಗಳು ಒಂದರ ಹಿಂದೆ ಒಂದರAತೆ ಬರುವುದರಿಂದ ಗ್ರಾಹಕರು ತಮ್ಮ ಬ್ಯಾಂಕಿಂಗ್ ಕಾರ್ಯಗಳನ್ನು ಮೊದಲೇ ಪೂರ್ಣಗೊಳಿಸಿಕೊಳ್ಳುವುದು ಒಳಿತು.

Aadhaar Card Authentication History Check: ನಿಮಗೆ ಗೊತ್ತಿಲ್ಲದೆ ಆಧಾರ್ ಕಾರ್ಡ್ ಬೇರೆಡೆ ಬಳಕೆಯಾಗಿದೆಯೇ? ಮೊಬೈಲ್‌ನಲ್ಲೇ ಹೀಗೆ ಚೆಕ್ ಮಾಡಿ


Spread the love
error: Content is protected !!