SBI Apprentice Recruitment 2026: ಎಸ್‌ಬಿಐ ಭರ್ಜರಿ ನೇಮಕಾತಿ 2026: 7,150 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಕನ್ನಡಿಗರಿಗೆ ಸುವರ್ಣಾವಕಾಶ!

Spread the love

WhatsApp Group Join Now
Telegram Group Join Now

SBI Apprentice Recruitment 2026: ಎಸ್‌ಬಿಐ 7,150 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕದಲ್ಲಿ 276 ಹುದ್ದೆಗಳಿದ್ದು; ಅರ್ಹತೆ ಮತ್ತು ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಬ್ಯಾಂಕಿAಗ್ ಕ್ಷೇತ್ರದಲ್ಲಿ (Banking Sector) ವೃತ್ತಿಜೀವನ ರೂಪಿಸಿಕೊಳ್ಳಬೇಕು ಎಂದು ಕನಸು ಕಾಣುತ್ತಿರುವ ಯುವಜನತೆಗೆ ಭಾರತೀಯ ಸ್ಟೇಟ್ ಬ್ಯಾಂಕ್ (State Bank of India – SBI) ಬಂಪರ್ ಅವಕಾಶ ನೀಡಿದೆ.

ಇದನ್ನೂ ಓದಿ: Aadhaar Card Authentication History Check: ನಿಮಗೆ ಗೊತ್ತಿಲ್ಲದೆ ಆಧಾರ್ ಕಾರ್ಡ್ ಬೇರೆಡೆ ಬಳಕೆಯಾಗಿದೆಯೇ? ಮೊಬೈಲ್‌ನಲ್ಲೇ ಹೀಗೆ ಚೆಕ್ ಮಾಡಿ

ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 7,150 ಅಪ್ರೆಂಟಿಸ್ (Apprentice Jobs) ಹುದ್ದೆಗಳ ಭರ್ತಿಗೆ ಎಸ್‌ಬಿಐ ಅಧಿಕೃತ ಅಧಿಸೂಚನೆ (Official Notification) ಹೊರಡಿಸಿದೆ.

ನಿರುದ್ಯೋಗಿ ಯುವಕ-ಯುವತಿಯರಿಗೆ ಬ್ಯಾಂಕ್ ಉದ್ಯೋಗದ ಕನಸು ನನಸು ಮಾಡಿಕೊಳ್ಳಲು ಇದೊಂದು ಅತ್ಯುತ್ತಮ ವೇದಿಕೆಯಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: 15 Lakh Fake Old Age Pension Cancelled: 15 ಲಕ್ಷ ಅಕ್ರಮ ವೃದ್ಧಾಪ್ಯ ವೇತನ ರದ್ದು | ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕದ ಅಭ್ಯರ್ಥಿಗಳಿಗೆ ವಿಶೇಷ ಅವಕಾಶ (Bank Jobs in Karnataka)

ದೇಶಾದ್ಯಂತ ಒಟ್ಟು 7,150 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಇದರಲ್ಲಿ ನಮ್ಮ ಕರ್ನಾಟಕದ ವಿವಿಧ ಜಿಲ್ಲೆಗಳ ಬ್ಯಾಂಕ್ ಶಾಖೆಗಳಲ್ಲಿ ಒಟ್ಟು 276 ಹುದ್ದೆಗಳು ಖಾಲಿ ಇವೆ.

ಸ್ಥಳೀಯ ಕನ್ನಡಿಗರಿಗೆ ಈ ನೇಮಕಾತಿಯಲ್ಲಿ ಹೆಚ್ಚಿನ ಆದ್ಯತೆ ಸಿಗಲಿದ್ದು, ಕನ್ನಡ ಭಾಷೆಯಲ್ಲಿ (Local Language Proficiency) ಉತ್ತಮ ಹಿಡಿತ ಹೊಂದಿರುವ ಸ್ಥಳೀಯ ಅಭ್ಯರ್ಥಿಗಳು ಈ ಸುವರ್ಣಾವಕಾಶವನ್ನು ತಪ್ಪದೇ ಸದುಪಯೋಗಪಡಿಸಿಕೊಳ್ಳಬೇಕು.

ಇದನ್ನೂ ಓದಿ: CET Result: ಜೂನ್ ಮೊದಲ ವಾರ ಸಿಇಟಿ ಫಲಿತಾಂಶ ಪ್ರಕಟ | ಕೆಇಎ ಪ್ರಮುಖ ಮಾಹಿತಿ

ಅರ್ಜಿ ಸಲ್ಲಿಸಲು ಇರಬೇಕಾದ ಶೈಕ್ಷಣಿಕ ಅರ್ಹತೆಗಳು (Eligibility Criteria)

ಎಸ್‌ಬಿಐ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು:

ಪದವಿ ಕಡ್ಡಾಯ (Graduation / Any Degree): ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಅಭ್ಯರ್ಥಿಗಳು ಯಾವುದೇ ವಿಭಾಗದಲ್ಲಿ (ಆರ್ಟ್ಸ್, ಕಾಮರ್ಸ್, ಸೈನ್ಸ್ ಇತ್ಯಾದಿ) ಕಡ್ಡಾಯವಾಗಿ ಪದವಿ ಪೂರೈಸಿರಬೇಕು.

ಸ್ಥಳೀಯ ಭಾಷಾ ಜ್ಞಾನ (Language Skills): ಹುದ್ದೆ ಖಾಲಿ ಇರುವ ಆಯಾ ರಾಜ್ಯದ ಸ್ಥಳೀಯ ಭಾಷೆಯಲ್ಲಿ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು. ಅಂದರೆ, ಕರ್ನಾಟಕದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಓದಲು, ಬರೆಯಲು ಮತ್ತು ಮಾತನಾಡಲು ಬರುವುದು ಕಡ್ಡಾಯ.

SBI Apprentice Recruitment 2026
SBI Apprentice Recruitment 2026

ಇದನ್ನೂ ಓದಿ: LPG Cylinder New Rules: ಎಲ್‌ಪಿಜಿ ಸಿಲಿಂಡರ್ ಹೊಸ ನಿಯಮಗಳು | ಈ ತಪ್ಪು ಮಾಡಿದ್ರೆ ನಿಮ್ಮ ಗ್ಯಾಸ್ ಕನೆಕ್ಷನ್ ಬ್ಲಾಕ್!

ವಯೋಮಿತಿ ಮತ್ತು ಸಡಿಲಿಕೆ (Age Limit and Relaxation)

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ 28 ವರ್ಷ ಮೀರಿರಬಾರದು. ಸರ್ಕಾರದ ಮೀಸಲಾತಿ ನಿಯಮಗಳ ಪ್ರಕಾರ ವಿವಿಧ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ (Age Relaxation) ನೀಡಲಾಗಿದೆ:

  • ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (SC/ST): 5 ವರ್ಷಗಳ ಸಡಿಲಿಕೆ.
  • ಹಿಂದುಳಿದ ವರ್ಗ (OBC): 3 ವರ್ಷಗಳ ಸಡಿಲಿಕೆ.
  • ವಿಕಲಚೇತನ ಅಭ್ಯರ್ಥಿಗಳಿಗೆ (PWD): ನಿಯಮಾನುಸಾರ 10 ವರ್ಷಗಳ ಸಡಿಲಿಕೆ ಇರಲಿದೆ.
WhatsApp Group Join Now
Telegram Group Join Now

ಇದನ್ನೂ ಓದಿ: New BPL Card Income Limit Hike: ಹೊಸ ಬಿಪಿಎಲ್ ಕಾರ್ಡ್ ಅರ್ಜಿದಾರರಿಗೆ ಶುಭಸುದ್ದಿ | ಹೊಸ ರೂಲ್ಸ್ ಜಾರಿಗೆ ಸರ್ಕಾರ ಚಿಂತನೆ

ಅರ್ಜಿ ಶುಲ್ಕದ ವಿವರ (Application Fee Details)

ಅರ್ಜಿ ಸಲ್ಲಿಕೆಯ ವೇಳೆ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ (ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್) ಶುಲ್ಕವನ್ನು ಪಾವತಿಸಬೇಕಾಗುತ್ತದೆ:

  • ಸಾಮಾನ್ಯ ವರ್ಗ, ಒಬಿಸಿ ಹಾಗೂ ಇಡಬ್ಲ್ಯೂಎಸ್ (General/OBC/EWS): ₹300/-
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ದಿವ್ಯಾಂಗ (SC/ST/PWD): ಈ ವರ್ಗದ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದ್ದು, ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಇದನ್ನೂ ಓದಿ: Post Matric Prize Money Scholarship 2026: ಕರ್ನಾಟಕ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ₹35,000 ವರೆಗೆ ಪ್ರೋತ್ಸಾಹಧನ: ಅರ್ಜಿ ಸಲ್ಲಿಕೆ ಹೇಗೆ? ಸಂಪೂರ್ಣ ಮಾಹಿತಿ

ಆಯ್ಕೆ ಪ್ರಕ್ರಿಯೆ ಹೇಗಿರಲಿದೆ? (Selection Process)

ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲು ಬ್ಯಾಂಕ್ ಎರಡು ಹಂತದ ನೇಮಕಾತಿ ಪ್ರಕ್ರಿಯೆಗಳನ್ನು (Recruitment Process) ಹಮ್ಮಿಕೊಂಡಿದೆ:

ಆನ್‌ಲೈನ್ ಲಿಖಿತ ಪರೀಕ್ಷೆ (Online Written Examination): ಇದು ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದ್ದು, ಸಾಮಾನ್ಯ ಜ್ಞಾನ, ಇಂಗ್ಲಿಷ್ ಭಾಷೆ, ಗಣಿತ ಹಾಗೂ ರೀಸನಿಂಗ್ ವಿಷಯಗಳನ್ನು ಒಳಗೊಂಡಿರುತ್ತದೆ.

ಸ್ಥಳೀಯ ಭಾಷಾ ಪರೀಕ್ಷೆ (Local Language Test): ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ, ಅವರು ಆಯ್ಕೆ ಮಾಡಿಕೊಂಡ ರಾಜ್ಯದ ಸ್ಥಳೀಯ ಭಾಷೆಯ ಪ್ರಾವೀಣ್ಯತೆಯನ್ನು ಪರೀಕ್ಷಿಸಲಾಗುತ್ತದೆ. ಈ ಎರಡೂ ಹಂತಗಳಲ್ಲಿ ಯಶಸ್ವಿಯಾಗಿ ತೇರ್ಗಡೆಯಾದವರನ್ನು ಅಂತಿಮವಾಗಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: SBI Digital Personal Loan- ಎಸ್‌ಬಿಐ ಡಿಜಿಟಲ್ ಪರ್ಸನಲ್ ಲೋನ್ | ₹35 ಲಕ್ಷದ ವರೆಗೆ ಸಾಲ ಸೌಲಭ್ಯ | ಸಂಪೂರ್ಣ ಮಾಹಿತಿ ಇಲ್ಲಿದೆ…

ಗಮನಿಸಬೇಕಾದ ಪ್ರಮುಖ ದಿನಾಂಕಗಳು (Important Dates)

ಸರ್ಕಾರಿ ಹಾಗೂ ಬ್ಯಾಂಕ್ ಉದ್ಯೋಗಗಳ ನೇಮಕಾತಿಯಲ್ಲಿ ಕೊನೆಯ ಕ್ಷಣದ ಸರ್ವರ್ ಸಮಸ್ಯೆಗಳು ಸಾಮಾನ್ಯ. ಹಾಗಾಗಿ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದವರೆಗೂ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಜಾಣತನ.

  • ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ: ಮೇ 19, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 8, 2026

ಅಧಿಕೃತ ಅಧಿಸೂಚನೆ: Download
ಅರ್ಜಿ ಲಿಂಕ್: Apply ಮಾಡಿ 

Govt Housing Scheme 2026: ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದ ಸಹಾಯಧನ | ಗ್ರಾಮ ಪಂಚಾಯತಿಗಳಿಂದ ಅರ್ಜಿ ಆಹ್ವಾನ


Spread the love
error: Content is protected !!