
ಕೆನರಾ ಬ್ಯಾಂಕಿನಲ್ಲಿ ಅತ್ಯಂತ ಸುಲಭ, ಸರಳ ಬಡ್ಡಿದರದಲ್ಲಿ ಪರ್ಸನಲ್ ಲೋನ್ (Canara Bank Personal Loan) ಸೌಲಭ್ಯವಿದ್ದು; ಆಸಕ್ತರು ಇದರ ಪ್ರಯೋಜನ ಪಡೆಯಬಹುದಾಗಿದೆ. ಸಾಲ ಪಡೆಯುವ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಪ್ರತಿಷ್ಠಿತ ಸರ್ಕಾರಿ ಬ್ಯಾಂಕುಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕಿನ ನಿವ್ವಳ ಲಾಭ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು; ಸಾಲ ನೀಡುವ ಪ್ರಕ್ರಿಯೆಯನ್ನು ಕೂಡ ಬ್ಯಾಂಕ್ ಸರಳಗೊಳಿಸಿದೆ. ಅದರಲ್ಲೂ ಪರ್ಸನಲ್ ಲೋನ್ ಸೌಲಭ್ಯವನ್ನು ಅತ್ಯಂತ ಸುಲಭದಲ್ಲಿ ಒದಗಿಸುತ್ತಿದೆ.
ಕಳೆದ ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ಅವಧಿಯ ಆರ್ಥಿಕ ಫಲಿತಾಂಶಗಳನ್ನು ಕೆನರಾ ಬ್ಯಾಂಕ್ ಪ್ರಕಟಿಸಿದ್ದು, ನಿವ್ವಳ ಲಾಭದಲ್ಲಿ ಶೇ.18.93ರಷ್ಟು ಬೆಳವಣಿಗೆಯೊಂದಿಗೆ 4,774 ಕೋಟಿ ರು. ತಲುಪಿದೆ. ವರ್ಷದಿಂದ ವರ್ಷಕ್ಕೆ ಬ್ಯಾಂಕಿನ ನಿವ್ವಳ ಲಾಭ ಏರಿಕೆಯಾಗುತ್ತಿದೆ.
ಸುಲಭದಲ್ಲಿ ಪರ್ಸನಲ್ ಲೋನ್
ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲವು ತುರ್ತು ಅಗತ್ಯಗಳಿಗೆ ಆಪದ್ಭಾಂಧವನಿದ್ದಂತೆ. ಕೊಂಚ ಬಡ್ಡಿ ದರ ಹೆಚ್ಚಳವಿದ್ದರೂ ಹೆಚ್ಚು ದಾಖಲೆಗಳ ಅಗತ್ಯವಿಲ್ಲದೇ, ಅತ್ಯಂತ ಸರಳವಾಗಿ ಪರ್ಸನಲ್ ಲೋನ್ ಸೌಲಭ್ಯ ಸಿಗುತ್ತದೆ. ಅದರಲ್ಲೂ ಸರ್ಕಾರಿ ಬ್ಯಾಂಕುಗಳಲ್ಲಿ ಈ ಸಾಲ ಸೌಲಭ್ಯ ಬಹಳ ಸುರಕ್ಷಿತ ಮತ್ತು ಸರಳವಾಗಿರುತ್ತದೆ.
2025ರ ಯೋಜನೆಯಡಿ ಕೆನರಾ ಬ್ಯಾಂಕ್ ಅತ್ಯಂತ ಸರಳ ಬಡ್ಡಿದರದಲ್ಲಿ ಹಾಗೂ ಸುಲಭ ದಾಖಲೆಗಳೊಂದಿಗೆ ಪರ್ಸನಲ್ ಲೋನ್ ಒದಗಿಸುತ್ತಿದೆ. ಈ ಸಾಲ ಪಡೆಯಲು ಯಾವುದೇ ಜಾಮೀನು, ಗ್ಯಾರಂಟಿಯ ಅಗತ್ಯವಿಲ್ಲದೆ 50,000 ರೂ.ದಿಂದ 10 ಲಕ್ಷ ರೂ. ವರೆಗೂ ಸಾಲ ಪಡೆಯಬಹುದು.

ಸರಳ ಬಡ್ಡಿ, ಸುಲಭ ದಾಖಲೆಗಳು
ಮೊದಲೇ ಹೇಳಿದಂತೆ ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ಪಡೆಯಲು ವಿಶೇಷವಾದ ದಾಖಲೆಗಳ ಅಗತ್ಯವಿಲ್ಲ. ಅರ್ಜಿದಾರರ ಕ್ರೇಡಿಟ್ ಸ್ಕೋರ್ ಆಧರಿಸಿ ಶೇ.10 ರಿಂದ ಶೇ.16ರ ಬಡ್ಡಿದರಲ್ಲಿ ವೈಯಕ್ತಿ ಸಾಲ ಪಡೆಯಬಹುದಾಗಿದೆ.
ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ 12 ರಿಂದ 84 ತಿಂಗಳ ವರೆಗೆ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಮುಂಚಿತ ಪಾವತಿಗೆ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದಿರುವುದು ವಿಶೇಷವಾಗಿದ್ದು; ಇದು ಸಾಲಗಾರರಿಗೆ ಬಹಳ ಉಪಯುಕ್ತವಾಗಿದೆ.
ಸಾಲ ಪಡೆಯಲು ಅರ್ಹತೆ, ದಾಖಲೆಗಳೇನು?
ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ಪಡೆಯಲು ಅರ್ಜಿದಾರರು 21ರಿಂದ 60 ವರ್ಷ ವಯಸ್ಸಿನವರಾಗಿರಬೇಕು. ಪ್ರತಿ ತಿಂಗಳು ಕನಿಷ್ಠ 15,000 ರೂ. ಆದಾಯ ಹೊಂದಿರಬೇಕು. ಕ್ರೇಡಿಟ್ ಸ್ಕೋರ್ 700ಕ್ಕಿಂತ ಮೇಲ್ಪಟ್ಟಿರಬೇಕು.
ಲೋನ್ ಪಡೆಯಲು ಅರ್ಜಿದಾರರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಭಾವಚಿತ್ರ ಮತ್ತು ಆರು ತಿಂಗಳ ಸಂಬಳದ ರಸೀದಿಯಂತ ದಾಖಲಾತಿಗಳು ಸಾಕು.
ಇದನ್ನೂ ಓದಿ: E-Swathu- ಇನ್ಮುಂದೆ ಗ್ರಾಮ ಪಂಚಾಯತಿ ಎಲ್ಲಾ ಆಸ್ತಿಗಳಿಗೂ ಕೇವಲ 15 ದಿನಗಳಲ್ಲಿ ಇ-ಸ್ವತ್ತು ವಿತರಣೆ | ಹೊಸ ಅಧಿಸೂಚನೆ ಬಿಡುಗಡೆ
ಅರ್ಜಿ ಸಲ್ಲಿಕೆ ಹೇಗೆ?
ಕೆನರಾ ಬ್ಯಾಂಕಿನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ‘ಪರ್ಸನಲ್ ಲೋನ್’ ವಿಭಾಗದಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಅಥವಾ ನೇರವಾಗಿನಿಮ್ಮ ಹತ್ತಿರದ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಅವಕಾಶವಿದೆ.
ನೀವು ಅರ್ಹರಿದ್ದರೆ ಅರ್ಜಿ ಸಲ್ಲಿಕೆಯಾದ 2 ರಿಂದ 7 ದಿನಗಳ ಒಳಗೆ ಸಾಲ ಮಂಜೂರಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ. ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ಗ್ರಾಹಕರಿಗೆ ಅತ್ಯಂತ ವಿಶ್ವಾಸಾರ್ಹ ಆಯ್ಕೆಯಾಗಿದ್ದು; ಮಕ್ಕಳ ಶಿಕ್ಷಣ, ಮದುವೆ, ಪ್ರವಾಸದಂತಹ ಯಾವುದೇ ತುರ್ತು ಕಾರ್ಯಗಳಿಗೆ ಪರ್ಸನಲ್ ಲೋನ್ ಪಡೆಯಬಹುದಾಗಿದೆ.
ಕೆನರಾ ಬ್ಯಾಂಕ್ ಅಧಿಕೃತ ವೆಬ್‌ಸೈಟ್: canarabank.bank.in



