984 Govt Schools Start English Medium Classes- 984 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭ | ಶಿಕ್ಷಣ ಇಲಾಖೆ ಅನುಮತಿ
984 Govt Schools Start English Medium Classes

984 ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್ ಮೀಡಿಯಂ ತರಗತಿ (984 Govt Schools Start English Medium Classes) ನಡೆಸಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿದ್ದು; ಈ ಕುರಿತ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿ ಮತ್ತೆ 984 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿ (ದ್ವಿ ಭಾಷಾ) ಆರಂಭಿಸಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.
ಸದ್ಯ ಕನ್ನಡ ಮತ್ತು ಇತರ ಭಾಷೆ ಭೋದಿಸುತ್ತಿರುವ ಕರ್ನಾಟಕದ ಸರ್ಕರಿ ಶಾಲೆಗಳಲ್ಲಿ ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲವನ್ನು ಬಳಸಿಕೊಂಡು 1ನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಕಲಿಸಲು ಅನುಮತಿ ನೀಡಲಾಗಿದೆ.

ಒಟ್ಟು 9,522 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಕಲಿಕೆ
ರಾಜ್ಯದಲ್ಲಿ ಕಳೆದ 2019-20ನೇ ಸಾಲಿನಿಂದ ಸರ್ಕರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಯನ್ನು ಆರಂಭಿಸಲಾಗಿದ್ದು; 2024-25ನೇ ಸಾಲಿನಲ್ಲಿ 1,792 ಹಾಗೂ ಕಳೆದ ಜುಲೈನಲ್ಲಿ 4,134 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ನಡೆಸಲು ಅನುಮತಿ ನೀಡಲಾಗಿದೆ.
ಇದೀ ಮತ್ತೆ 984 ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಕಲಿಸಲು ಅನುಮತಿಸಲಾಗಿದೆ. ಅಲ್ಲಿಗೆ ಸರ್ಕಾರಿ ಪ್ರಾಥಮಿಕ ಶಾಲೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಾಗೂ ಪಿಎಂಶ್ರೀ ಶಾಲೆಗಳು ಸೇರಿ ಈ ತನಕ ರಾಜ್ಯದಲ್ಲಿ ಒಟ್ಟು 9,522 ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಕಲಿಕೆ ಆರಂಭವಾದಂತಾಗಿದೆ.
ಇದನ್ನೂ ಓದಿ: Free Nati Kolimari – ಗ್ರಾಮೀಣ ಮಹಿಳೆಯರಿಗೆ ಉಚಿತ ನಾಟಿ ಕೋಳಿಮರಿ ವಿತರಣೆಗೆ ಅರ್ಜಿ ಆಹ್ವಾನ
ಕೂಡಲೇ ತರಗತಿ ಆರಂಭಿಸಲು ಸೂಚನೆ
ಹೊಸದಾಗಿ ಅನುಮತಿ ನೀಡಲಾದ 984 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕೂಡಲೇ ಆಂಗ್ಲ ಮಾಧ್ಯಮ ಭೋದನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಯಾ ಶಾಲಾ ಮುಖ್ಯಸ್ಥರಿಗೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಮಾಹಿತಿ ನೀಡಿದ್ದಾರೆ.
ಆಂಗ್ಲ ಮಾಧ್ಯಮ ತರಗತಿ ನಡೆಸಲು ಆಯಾ ಶಾಲೆಯಲ್ಲಿ ಇಎಂಟಿಐಪಿ ತರಬೇತಿ ಪಡೆದ ಶಿಕ್ಷಕರು ಇದ್ದರೆ ಅವರಿಂದಲೇ ಆಂಗ್ಲ ಮಾಧ್ಯಮ ತರಗತಿ ಆರಂಬಿಸುವAತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಾಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ.



