E-Swathu- ಇನ್ಮುಂದೆ ಗ್ರಾಮ ಪಂಚಾಯತಿ ಎಲ್ಲಾ ಆಸ್ತಿಗಳಿಗೂ ಕೇವಲ 15 ದಿನಗಳಲ್ಲಿ ಇ-ಸ್ವತ್ತು ವಿತರಣೆ | ಹೊಸ ಅಧಿಸೂಚನೆ ಬಿಡುಗಡೆ
E-Swathu Gram Panchayat

ರಾಜ್ಯ ಸರ್ಕಾರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ‘ಇ-ಸ್ವತ್ತು’ (E-Swathu) ಸೌಲಭ್ಯಕ್ಕೆ ಚಾಲನೆ ನೀಡಲಾಗಿದ್ದು; ಹೊಸ ಅಧಿಸೂಚನೆ ಪ್ರಕಟಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯ ಸರ್ಕಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಸ್ತಿಗಳಿಗೆ ‘ಇ-ಸ್ವತ್ತು’ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸಿದ್ದು; ಇನ್ಮುಂದೆ ಕೇವಲ 15 ದಿನಗಳಲ್ಲಿಯೇ ಎಲ್ಲಾ ಆಸ್ತಿಗಳಿಗೂ ಈ ಇ-ಖಾತಾ ಸಿಗಲಿದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊಸ ಅಧಿಸೂಚನೆ ಪ್ರಕಟಿಸಿದೆ.
ಹೌದು, ಗ್ರಾಮ ಪಂಚಾಯತಿ ವ್ಯಾಪ್ತಿಯ ಆಸ್ತಿದಾರರ ಬಹುದಿನಗಳ ಬೇಡಿಕೆಯಾಗಿದ್ದ ‘ಇ-ಸ್ವತ್ತು’ ವಿತರಣೆ ಕುರಿತ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಎಲ್ಲಾ ಆಸ್ತಿಗಳಿಗೂ ತ್ವರಿತವಾಗಿ ಇ ಸ್ವತ್ತು ವಿತರಿಸುವಂತೆ ಅಧಿಸೂಚನೆ ಹೊರಡಿಸಿ ಆದೇಶಿಸಿದೆ.
ಇದನ್ನೂ ಓದಿ: Gruhalakshmi Yojana Diwali Payment- ಗೃಹಲಕ್ಷ್ಮಿ ಯೋಜನೆಗೆ ಎರಡು ವರ್ಷ: ಮಹಿಳೆಯರ ಖಾತೆಗೆ ದೀಪಾವಳಿಗೆ 2000 ರೂ. ಹಣ ಜಮಾ
95,75,935 ಆಸ್ತಿಗಳಿಗೆ ಇ-ಸ್ವತ್ತು ಪ್ರಮಾಣ ಪತ್ರ
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ಕ್ಕೆ ತಿದ್ದುಪಡಿ ತರುವ ಮೂಲಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿತರಿಸಲಾಗುವ ನಿರಕ್ಷೇಪಣ (NOC) ಪರವಾನಗಿ, ತೆರಿಗೆಗಳು, ಶುಲ್ಕ ಹಾಗೂ ದರಗಳನ್ನು ವೈಜ್ಞಾನಿಕವಾಗಿ ನಿಗದಿ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಈ ನಿಯಮಗಳ ಜಾರಿಯಿಂದ 95,75,935 ಆಸ್ತಿಗಳಿಗೆ ಆಸ್ತಿ ಪ್ರಮಾಣ ಪತ್ರ ನೀಡಲು ಅವಕಾಶ ಕಲ್ಪಿಸಲಾಗುತ್ತಿದೆ. ಮುಂದಿನ ಹದಿನೈದು ದಿನಗಳೊಳಗಾಗಿ ತಂತ್ರಾAಶದಲ್ಲಿ ತಾಂತ್ರಿಕ ಬದಲಾವಣೆಗಳನ್ನು ತಂದು ಗ್ರಾಮೀಣ ಜನರಿಗೆ ಸೌಲಭ್ಯವನ್ನು ಒದಗಿಸಲಾಗುವುದು.
ಇದನ್ನೂ ಓದಿ: Raitara Bele Nashta Parihara- ರೈತರ ಬೆಳೆನಷ್ಟ ಪರಿಹಾರ ಹೆಚ್ಚಳ | ಯಾವ ಬೆಳೆಗೆ ಎಷ್ಟು ಪರಿಹಾರ? ಇಲ್ಲಿದೆ ಸಂಪೂರ್ಣ ಮಾಹಿತಿ
15 ದಿನಗಳಲ್ಲೇ ಇ-ಸ್ವತ್ತು ವಿತರಣೆ
ನೂತನ ನಿಯಮಗಳಲ್ಲಿ ತೆರಿಗೆ ಲೆಕ್ಕಚಾರ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿದ್ದು, ಇ-ಸ್ವತ್ತು ನಮೂನೆ ವಿತರಿಸಲು ನಿಗದಿತ ಕಾಲಾವಧಿಯನ್ನು 45 ದಿನಗಳಿಂದ 15 ದಿನಗಳಿಗೆ ಕಡಿತಗೊಳಿಸಲಾಗಿದೆ. ಅಂದರೆ ಅಜೀ ಸಲ್ಲಿಸಿದ 15 ದಿನದಲ್ಲೇ ಪ್ರಮಾಣ ಪತ್ರ ವಿತರಣೆ ಆಗಲಿದೆ.
ನಿಗದಿತ ಅವಧಿಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಅನುಮೋದನೆ ನೀಡದಿದ್ದಲ್ಲಿ ಸ್ವಂಚಾಲಿತ ಅನುಮೋದನೆಗೆ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಪೂರಕವಾಗಿ ತಂತ್ರಾAಶ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಸಿಇಒಗೆ ಮೇಲ್ಮನವಿ ಅವಕಾಶ
ಗ್ರಾಮ ಪಂಚಾಯಿತಿಯ ಎಲ್ಲಾ ಆಸ್ತಿಗಳ ಕರಡು ಪ್ರತಿಗಳನ್ನು ಸಾರ್ವಜನಿಕರಿಗೆ ತಂತ್ರಾಂಶದ ಮೂಲಕ ಒದಗಿಸಿ ತಮ್ಮ ಆಸ್ತಿಗಳ ಮಾಹಿತಿಯನ್ನು ಮಾಲೀಕರು ತಮ್ಮ ಆಸ್ತಿಗಳ ತೆರಿಗೆಯನ್ನು ಗ್ರಾಪಂಗೆ ಪಾವತಿಸುವ ಮೂಲಕ ದಾಖಲೆ ಪಡೆಯಬಹುದಾಗಿದೆ.
ತೆರಿಗೆ, ದರ ಅಥವಾ ಶುಲ್ಕಗಳ ನಿರ್ಧರಣೆ, ವಸೂಲಿ ಅಥವಾ ವಿಧಿಸುವಿಕೆಯಿಂದ ಬಾಧಿತನಾದ ಯಾವುದೇ ವ್ಯಕ್ತಿಯು ಉಪಕಾರ್ಯದರ್ಶಿ (ಅಭಿವೃದ್ಧಿ) ಅವರಿಗೆ ಮೊದಲನೆ ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಲಾಗಿದೆ.
ಸದರಿ ಆದೇಶದಿಂದ ಬಾಧಿತನಾದ ವ್ಯಕ್ತಿಯು ಎರಡನೇ ಮೇಲ್ಮನವಿಯನ್ನು ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದೂ ಗ್ರಾಮೀಣ ಅಭಿವೃದ್ಧಿ ಸಚಿವರು ಹೇಳಿದ್ದಾರೆ.
ಯಾವೆಲ್ಲ ಆಸ್ತಿಗಳಿಗೆ ಇ-ಸ್ವತ್ತು (ಬಿ-ಖಾತಾ) ಸಿಗಲಿದೆ?
ಮೊದಲೇ ಹೇಳಿದಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಖಾಸಗಿ ಆಸ್ತಿಗಳಿಗೂ ಇ-ಸ್ವತ್ತು ಸೃಜಿಸಲಾಗುತ್ತದೆ. ಸರ್ಕಾರಿ ಭೂಮಿ, ಅರಣ್ಯ ಭೂಮಿ, ಸರ್ಕಾರದ ಒಡೆತನ ಅಥವಾ ನಿಯಂತ್ರಣದಲ್ಲಿರುವ ಯಾವುದೇ ಸ್ಥಳೀಯ ಸಂಸ್ಥೆಗೆ ಸೇರಿದ ಭೂಮಿಗಳಿಗೆ ಇ-ಸ್ವತ್ತು (ಬಿ-ಖಾತಾ) ಸಿಗುವುದಿಲ್ಲ
ಜೊತೆಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ (ತಿದ್ದುಪಡಿ) ಜಾರಿಯಾದ ನಂತರ ಅಭಿವೃದ್ಧಿಯಾದ ಯಾವುದೇ ಹೊಸ ಸ್ವತ್ತಿಗೆ ‘ಬಿ-ಖಾತಾ ನೀಡಲು ಅವಕಾಶ ಇರುವುದಿಲ್ಲ.
ಬೇಕಾಗುವ ದಾಖಲೆಗಳು
- ಭೂ ನೋಂದಣಿ ಪ್ರಮಾಣ ಪತ್ರ
- ಭೂ ಮಂಜೂರಾತಿ ಆದೇಶ
- ಕರೆಂಟ್ ಬಿಲ್, ಋಣಭಾರ ಪ್ರಮಾಣ ಪತ್ರ (ಇಸಿ)
- ಏಪ್ರಿಲ್ 2025ಕ್ಕಿಂತಲೂ ಹಿಂದಿನ ತೆರಿಗೆ ಪಾವತಿ ರಸೀದಿ
- ಭೂ ಪರಿವರ್ತನೆ ಆದೇಶ (ಇದ್ದರೆ ಮಾತ್ರ)
- ಬಡಾವಣೆ ಅನುಮೋದಿತ ವಿನ್ಯಾಸ (ಇದ್ದರೆ ಮಾತ್ರ)
- ನೋಂದಾಯಿತ ಪರಿತ್ಯಾಜನಾ ಪತ್ರ
ಇ-ಸ್ವತ್ತು ವಿತರಣೆ ಕುರಿತ ಹೊಸ ಅಧಿಸೂಚನೆ ಈಗಷ್ಟೇ ಬಿಡುಗಡೆಯಾಗಿದ್ದು; ಈ ಕುರಿತ ಹೆಚ್ಚಿನ ಮಾಹಿತಿಗೆ ನಿಮ್ಮ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು (ಪಿಡಿಓ) ಭೇಟಿಯಾಗಿ…



