JobsNews

KSSIDC Recruitment 2025- ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನೇಮಕಾತಿ | ಪಿಯುಸಿ, ಪದವೀಧರರಿಂದ ಅರ್ಜಿ ಆಹ್ವಾನ

KSSIDC Recruitment 2025

Spread the love

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ (KSSIDC Recruitment 2025) ವಿವಿಧ ಹುದ್ದೆಗಳ ಭರ್ತಿಗೆ ಕೆಇಎ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದಲ್ಲಿ (Karnataka State Industrial and Infrastructure Development Corporation- KSIIDC) ಖಾಲಿ ಇರುವ ಉಳಿಕೆ ಮೂಲವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಸೂಚನೆ ಹೊರಡಿಸಿದೆ.

ನವೆಂಬರ್ 14ರೊಳಗೆ ಆನ್‌ಲೈನ್ ಮೂಲಕ ಅರ್ಜಿ ನಲ್ಲಿಸಬಹುದು. ಇದರ ಜತೆಗೆ, ಈಗಾಗಲೇ ಅಧಿಸೂಚನೆ ಹೊರಡಿಸಲಾಗಿರುವ ವಿವಿಧ ಇಲಾಖೆಗಳ 708 ಹುದ್ದೆಗಳಿಗೂ ಅರ್ಜಿ ಸಲ್ಲಿಕೆ ಅವಧಿಯನ್ನು ನವೆಂಬರ್ 14ರ ವರೆಗೆ ವಿಸ್ತರಣೆ ಮಾಡಿದೆ.

ಇದನ್ನೂ ಓದಿ: Canara Bank Personal Loan- ಕೆನರಾ ಬ್ಯಾಂಕ್ ಪರ್ಸನಲ್ ಲೋನ್ | ಕಮ್ಮಿ ಬಡ್ಡಿದರದಲ್ಲಿ 10 ಲಕ್ಷ ರೂ. ವರೆಗೂ ಸಾಲ ಸೌಲಭ್ಯ

ಹುದ್ದೆಗಳ ವಿವರ

ಪ್ರಸ್ತುತ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದಲ್ಲಿ ಒಟ್ಟು 33 ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಹುದ್ದೆಗಳ ವಿವರ ಹೀಗಿದೆ:

  • ವ್ಯವಸ್ಥಾಪಕರು (ಗ್ರೂಪ್ ಎ) 04 ಹುದ್ದೆಗಳು
  • ಸಹಾಯಕ ವ್ಯವಸ್ಥಾಪಕರು (ಗ್ರೂಪ್ ಬಿ) 05 ಹುದ್ದೆಗಳು
  • ಹಿರಿಯ ಸಹಾಯಕರು (ಗ್ರೂಸ್ ಸಿ) 05 ಹುದ್ದೆಗಳು
  • ಕಿರಿಯ ಸಹಾಯಕರು (ಗ್ರೂಪ್ ಸಿ) 13 ಹುದ್ದೆಗಳು
  • ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್-ಗ್ರೂಪ್ ಎ) 01 ಹುದ್ದೆ
  • ಸಹಾಯಕ ಅಭಿಯಂತರರು (ಸಿವಿಲ್- ಗ್ರೂಪ್ ಬಿ) 03 ಹುದ್ದೆಗಳು
  • ಸಹಾಯಕ ಅಭಿಯಂತರರ (ವಿದ್ಯುತ್ ಗ್ರೂಪ್ ಬಿ) 02 ಹುದ್ದೆಗಳು
ವಿದ್ಯಾರ್ಹತೆ ಏನಿರಬೇಕು?

ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು, ಹಿರಿಯ ಸಹಾಯಕರ ಹುದ್ದೆಗೆ ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಕಿರಿಯ ಸಹಾಯಕರ ಹುದ್ದೆಗೆ ದ್ವಿತೀಯ ಪಿಯು ಪಾಸಾಗಿರಬೇಕು. ಸಹಾಯಕ ಕಾರ್ಯಪಾಲಕ ಅಭಿಯಂತರರ ಹುದ್ದೆಗಳಿಗೆ ಆಯಾ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಹೊಂದಿರಬೇಕು.

ಇದನ್ನೂ ಓದಿ: Anganwadi Recruitment 2025- 843 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್ಸೆಸ್ಸೆಲ್ಸಿ, ಪಿಯುಸಿ ಪಾಸಾದ ಮಹಿಳೆಯರಿಗೆ ಅವಕಾಶ

ವಯೋಮಿತಿ ವಿವರ

ಸಾಮಾನ್ಯ ವರ್ಗದವರಿಗೆ ಗರಿಷ್ಠ ವಯೋಮಿತಿ 38 ವರ್ಷಗಳು, ಪ್ರವರ್ಗ2, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 41 ವರ್ಷಗಳು ಹಾಗೂ ಪ್ರವರ್ಗ-1, ಪರಿಶಿಷ್ಟ ಅಭ್ಯರ್ಥಿಗಳಿಗೆ 43 ವರ್ಷ ನಿಗದಿ ಮಾಡಲಾಗಿದೆ. ವಿವಿಧ ಮೀಸಲು ಅನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವಿವಿಧ ಹುದ್ದೆಗಳ ಭರ್ತಿಗೆ ಕೆಇಎ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ...
KSSIDC Recruitment 2025
ವೇತನ ಶ್ರೇಣಿ

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಹುದ್ದೆಗಳಿಗೆ ನೇಮಕವಾದ ಅಭ್ಯರ್ಥಿಗಳಿಗೆ 2018ರ ಪರಿಷ್ಕೃತ ವೇತನಶ್ರೇಣಿ ಅನ್ವಯವಾಗಲಿದ್ದು; ಹುದ್ದೆಗಳಿಗೆ ಅನುಸಾರ ವೇತನ ವಿವರ ಈ ಕೆಳಗಿನಂತಿದೆ:

  • ವ್ಯವಸ್ಥಾಪಕರು (ಗ್ರೂಪ್ ಎ): ₹43100 – ₹83900
  • ಸಹಾಯಕ ವ್ಯವಸ್ಥಾಪಕರು (ಗ್ರೂಪ್ ಬಿ): ₹37900 – ₹70850
  • ಹಿರಿಯ ಸಹಾಯಕರು (ಗ್ರೂಸ್ ಸಿ): ₹30350 – ₹58250
  • ಕಿರಿಯ ಸಹಾಯಕರು (ಗ್ರೂಪ್ ಸಿ): ₹21400 – ₹42000
  • ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್) (ಗ್ರೂಪ್ ಎ): ₹52620 – ₹97100
  • ಸಹಾಯಕ ಅಭಿಯಂತರರು (ಸಿವಿಲ್- ಗ್ರೂಪ್ ಬಿ): ₹43100 – ₹83900
  • ಸಹಾಯಕ ಅಭಿಯಂತರರ (ವಿದ್ಯುತ್ ಗ್ರೂಪ್ ಬಿ): ₹43100 – ₹83900

ಇದನ್ನೂ ಓದಿ: SBI Specialist Officers Recruitment 2025- ಎಸ್‌ಬಿಐನಲ್ಲಿ ಸ್ಪೆಷಲಿಸ್ಟ್ ಆಫೀಸರ್ಸ್ ನೇಮಕಾತಿ | 103 ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಯ್ಕೆ ವಿಧಾನ ಹೇಗೆ?

ಅರ್ಜಿ ಸಲ್ಲಿಕೆ ಮಾಡಿದ ಅರ್ಹ ಅಭ್ಯರ್ಥಿಗಳಿಗೆ ಆಫ್‌ಲೈನ್ ಮೂಲಕ ಓಎಂಆರ್ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಈ ಹಿಂದೆ ಅಕ್ಟೋಬರ್ 8ರಂದು ಹೊರಡಿಸಿದ್ದ ಅಧಿಸೂಚನೆಯೂ ಸೇರಿದಂತೆ ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಒಂದೇ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಒಂದೇ ಪಠ್ಯಕ್ರಮದ ಹೆಚ್ಚುವರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಲ್ಲಿ ಪ್ರತಿ ಹೆಚ್ಚುವರಿ ಹುದ್ದೆಗೆ 100 ರೂ. ಪಾವತಿಸತಕ್ಕದ್ದು ಎಂದು ತಿಳಿಸಲಾಗಿದೆ.

ಅರ್ಜಿ ಶುಲ್ಕದ ವಿವರ
  • ಸಾಮಾನ್ಯ ಮತ್ತು 2ಎ, 2ಬ, 3ಎ, 3ಬಿ ಪ್ರವರ್ಗಗಳಿಗೆ: ₹750
  • ಎಸ್‌ಸಿ/ಎಸ್‌ಟಿ, ಪ್ರವರ್ಗ-1, ಮಾಜಿ ಸೈನಿಕ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ: ₹500
  • ವಿಶೇಷ ಚೇತನ ಅಭ್ಯರ್ಥಿಗಳಿಗೆ: ₹250

ಆನ್‌ಲೈನ್ ಮೂಲಕ ಮಾತ್ರ ಶುಲ್ಕ ಪಾವತಿಸಬೇಕಾಗಿರುತ್ತದೆ. ಪಾವತಿಸಿದ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ. ವಿಶೇಷ ಚೇತನ ಅಭ್ಯರ್ಥಿಯೆಂದರೆ ಶೇ.40ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವವರು ಮತ್ತು ಅದಕ್ಕೆ ಸಂಬಂಧಿಸಿದಂತೆ ಜಿಲ್ಲಾ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ಹೊಂದಿರುವವರು.

ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01-11-2025
  • ಅರ್ಜಿ ಸಲ್ಲಿಕೆ ಕೊನೇ ದಿನಾಂಕ: 14-11-2025

ಅಧಿಸೂಚನೆ: Download
ಅಧಿಕೃತ ವೆಬ್‌ಸೈಟ್: kssidc.co.in

Gramathana Map Information- ನಿಮ್ಮೂರಿನ ನಕ್ಷೆ ನಿಮಗೆ ಗೊತ್ತಾ? | ಪ್ರತಿಯೊಬ್ಬರೂ ಅರಿತಿರಬೇಕಾದ ಗ್ರಾಮಠಾಣಾ ನಕ್ಷೆ ಮಾಹಿತಿ ಇಲ್ಲಿದೆ…


Spread the love
WhatsApp Group Join Now
Telegram Group Join Now

Related Articles

Back to top button
error: Content is protected !!