ಇಂದಿನ ದಿನಗಳಲ್ಲಿ ಏಕಾಏಕಿ ಹಣಕಾಸು ಮುಗ್ಗಟ್ಟು ಎದುರಾದಾಗ, ತುರ್ತಾಗಿ ಸಾಲ (Instant Loan) ದೊರಕುವುದು ಬಹಳ ಕಷ್ಟ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗೆ ತೆರಳಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೂ ಬಹಳಷ್ಟು ಸಮಯ ಹಿಡಿಯುತ್ತದೆ. ಇಂತಹ ಸಮಯದಲ್ಲಿ ಗೂಗಲ್ ಪೇ (Google Pay) ತ್ವರಿತ ವೈಯಕ್ತಿಕ ಸಾಲ (Personal Loan) ಪ್ರಯೋಜನವಾಗಬಹುದು.
ಹಾಗಿದ್ದರೆ, ಗೂಗಲ್ ಪೇ ಅಪ್ಲಿಕೇಶನ್ ಮೂಲಕ ಸಾಲ ಪಡೆಯುವುದು ಹೇಗೆ? ಎಷ್ಟು ಮೊತ್ತ ಸಾಲ ಸಿಗುತ್ತದೆ? ಅರ್ಜಿ ಸಲ್ಲಿಕೆ ಹೇಗೆ? ಯಾವೆಲ್ಲ ದಾಖಲಾತಿಗಳು ಬೇಕು? ಮರುಪಾವತಿ ಹೇಗೆ? ಇತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿದೆ…
ಗೂಗಲ್ ಪೇ ಮೂಲಕ ಎಷ್ಟು ಮೊತ್ತ ಸಾಲ ಸಿಗುತ್ತದೆ?
ಗೂಗಲ್ ಪೇ ಅಪ್ಲಿಕೇಶನ್ ಮೂಲಕ ಕನಿಷ್ಠ ₹10,000 ದಿಂದ ಗರಿಷ್ಠ ₹9,00,000ರ ವರೆಗೆ ಸಾಲ ಪಡೆಯಲು ಅವಕಾಶವಿದೆ. ಸಂಪೂರ್ಣ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಮತ್ತು ಲೋನ್ ಪಡೆಯಲು ಅತೀ ಕಡಿಮೆ ದಾಖಲಾತಿಗಳು ಸಾಕು.
ನೀವು ಸಾಲ ಪಡೆಯಲು ಅರ್ಹರಾಗಿದ್ದರೆ ಕೆಲವೇ ನಿಮಿಷಗಳಲ್ಲಿ ನಿಮ್ಮ ಅರ್ಜಿ ಪ್ರಕ್ರಿಯೆ ಪೂರ್ಣಗೊಂಡು ಹಣ ನೇರವಾಗಿ ನೀವು ನೀಡಿದ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಇದಕ್ಕೆ ಯಾವುದೇ ಮಧ್ಯವರ್ತಿಗಳಿಲ್ಲ, ನೇರವಾಗಿ Google Pay App ಬಳಸಿ ಅರ್ಜಿ ಸಲ್ಲಿಸಬೇಕು.
Gold Silver Price- ಚಿನ್ನದ ಬೆಲೆ ಭಾರೀ ಇಳಿಕೆ | 10 ಗ್ರಾಂಗೆ ಕೇವಲ ₹55,000 ಇಳಿಯಲಿದೆಯೇ?
ಯಾರೆಲ್ಲ ಅರ್ಜಿ ಹಾಕಬಹುದು?
ಪ್ರಮುಖವಾಗಿ ಗೂಗಲ್ ಪೇನಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿದ್ದು, ಯುಪಿಐ ಮೂಲಕ ವ್ಯವಹಾರ ಮಾಡುವವರು ಮಾತ್ರ ಈ ಸಾಲ ಪಡೆಯಲು ಅರ್ಹರು.
ಅರ್ಜಿದಾರರು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 57 ವರ್ಷ ವಯೋಮಿತಿಯಲ್ಲಿ ಇರಬೇಕು. ಕನಿಷ್ಠ 600ರ ವರೆಗೆ ಸಿಬಿಲ್ ಸ್ಕೋರ್ (CIBIL Score) ಇರಬೇಕು. ಅರ್ಜಿದಾರರು ಸಾಲ ಮರುಪಾವತಿ ಮಾಡಲು ಆದಾಯ ಮೂಲ ಹೊಂದಿರಬೇಕು.

ಸಾಲ ಪಡೆಯಲು ಏನೆಲ್ಲ ದಾಖಲೆಗಳು (Required Documents)
- ಪಿನ್ ಕೋಡ್ (ವಿಳಾಸ ಪರಿಶೀಲನೆಗಾಗಿ)
- ಉದ್ಯೋಗ ಅಥವಾ ಆದಾಯ ವಿವರಗಳು
- ಯುಪಿಐ ಲಿಂಕ್ಡ್ ಆಗಿರುವ ಬ್ಯಾಂಕ್ ಖಾತೆ
- ಪ್ಯಾನ್ ಕಾರ್ಡ್ ವಿವರ
ಇನ್ಮುಂದೆ ಸರ್ಕಾರಿ ನೌಕರರಿಗೆ ಕಡಿಮೆ ಬಡ್ಡಿ ಸಾಲ ಸೌಲಭ್ಯ | ಏನೆಲ್ಲ ಸೌಲಭ್ಯ ಸಿಗಲಿದೆ? ಇಲ್ಲಿದೆ ಮಾಹಿತಿ…
ಅರ್ಜಿ ಸಲ್ಲಿಸುವ ವಿಧಾನ (Loan Application Process on Google Pay)
ಮೊದಲಿಗೆ ಗೂಗಲ್ ಪ್ಲೇ ಸ್ಟೋರ್‌ನಿಂದ ಗೂಗಲ್ ಪೇ ಅಪ್ಲಿಕೇಶನ್‌ನ್ನು ಸರ್ಚ್ ಮಾಡಿ ಲೇಟೆಸ್ಟ್ ವರ್ಶನ್ ಇನ್‌ಸ್ಟಾಲ್ ಮಾಡಿಕೊಳ್ಳಿ. ಮುಖಪುಟದಲ್ಲಿ ‘Loans’ ಅಥವಾ ‘Personal Loan’ ಎಂಬ ಆಯ್ಕೆಯ ಮೇಲೆ ಟ್ಯಾಪ್ ಮಾಡಿ. ನಿಮ್ಮ ಪಿನ್ ಕೋಡ್, ಹೆಸರು, ಪ್ಯಾನ್ ಕಾರ್ಡ್ ಹಾಗೂ ಉದ್ಯೋಗ ವಿವರಗಳನ್ನು ನಮೂದಿಸಿ.
ನಂತರ ‘Check Eligibility’ ಕ್ಲಿಕ್ ಮಾಡಿ. ನೀವು ಅರ್ಹರಾಗಿದ್ದರೆ, ನಿಮಗೆ ಲಭ್ಯವಿರುವ ಸಾಲ ಮೊತ್ತ, ಬಡ್ಡಿ ದರ ಹಾಗೂ ಇತರ ವಿವರಗಳು ತೋರಿಸಲಾಗುತ್ತದೆ. ಷರತ್ತುಗಳಿಗೆ ಒಪ್ಪಿಗೆ ನೀಡಿ ಹಾಗೂ ‘Apply Now’ ಬಟನ್ ಮೇಲೆ ಕ್ಲಿಕ್ ಮಾಡಿ. ಮಂಜೂರಾದ ಲೋನ್ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
ಅರ್ಜಿ ತಿರಸ್ಕಾರವಾದರೆ ಏನು ಮಾಡಬೇಕು?
ನೀವು ಸಾಲ ಪಡೆಯಲು ಅರ್ಹರಾಗಿಲ್ಲದಿದ್ದರೆ ಅಥವಾ ಸಿಬಿಲ್ ಸ್ಕೋರ್ ಕಡಿಮೆಯಿದ್ದರೆ, ಗೂಗಲ್ ಪೇ ಲೋನ್ ಅರ್ಜಿ ತಿರಸ್ಕರಿಸಲಾಗುತ್ತದೆ. ಹಾಗಿದ್ದಾಗ ‘Loan Not Approved’ ಎಂಬ ಸಂದೇಶ ಗೋಚರಿಸುತ್ತದೆ.
ಆಗ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಹೆಚ್ಚಿಸುವ ಪ್ರಯತ್ನಿಸಿ. ಹಳೆಯ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ತೀರಿಸಿ, ಸಮಯಕ್ಕೆ ಮೊತ್ತ ಪಾವತಿಸಿ. ಪುನಃ ಅರ್ಜಿ ಹಾಕುವ ಮೊದಲು ಕನಿಷ್ಠ ಮೂರು ತಿಂಗಳು ಕಾಯುವುದು ಉತ್ತಮ.
Unified Pension Scheme- ಏಪ್ರಿಲ್‌ನಿಂದ ಸರ್ಕಾರಿ ನೌಕರರಿಗೆ ಭರ್ಜರಿ ಪಿಂಚಣಿ | ಯಾರಿಗೆ ಎಷ್ಟು ಸಿಗಲಿದೆ ಪೆನ್ಶನ್?
ಗೂಗಲ್ ಪೇ ಲೋನ್ ಬಗ್ಗೆ ಇದನ್ನು ತಿಳಿದಿರಿ
ಈ ಸೇವೆ ಎಲ್ಲಾ ಬಳಕೆದಾರರಿಗೆ ಲಭ್ಯವಿಲ್ಲ. ಗೂಗಲ್ ಪೇ ಲೋನ್ ಪಾರ್ಟನರ್ ಬ್ಯಾಂಕ್‌ಗಳು ಅಥವಾ NBFCs ಸಂಸ್ಥೆಗಳ ಮೂಲಕ ಆಯ್ಕೆ ಮಾಡಲಾದ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ.
ಲೋನ್ ಮಂಜೂರಾದ ನಂತರ EMI ಪಾವತಿ ನಿಮ್ಮ ಬ್ಯಾಂಕ್ ಖಾತೆಯಿಂದ ನೀವು ಆಯ್ಕೆ ಮಾಡಿಕೊಂಡ ದಿನಾಂಕದಲ್ಲಿ ಡೆಬಿಟ್ ಆಗುತ್ತದೆ. ಸರಿಯಾದ ಸಮಯಕ್ಕೆ EMI ಪಾವತಿಸುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿರುತ್ತದೆ.
ಗೂಗಲ್ ಪೇ ಮೂಲಕ ಲೋನ್ ಪಡೆಯುವುದು ಇಂದು ಸುಲಭ, ಸುರಕ್ಷಿತ ಮತ್ತು ವೇಗದ ಮಾರ್ಗವಾಗಿದೆ. ನಿಮಗೆ ತುರ್ತು ಹಣಕಾಸಿನ ಅವಶ್ಯಕತೆ ಇದ್ದರೆ ಮತ್ತು ನೀವು ಮೇಲಿನ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ, ಈ ಸಾಲಕ್ಕೆ ಪ್ರಯತ್ನಿಸಬಹುದು. ಆದರೆ, ಸಾಲ ಮರುಪಾವತಿಯ ನಿಮ್ಮ ಯೋಗ್ಯತೆಯನ್ನು ನೀವೇ ಮನನ ಮಾಡಿಕೊಂಡು ಇಂತಹ ಸಾಲಕ್ಕೆ ಪ್ರಯತ್ನಿಸಿ.