BPL Ration Card Reactivation: ಬಿಪಿಎಲ್ ಕಾರ್ಡ್ ವಿತರಣೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್! ರದ್ದಾದ ಕಾರ್ಡ್ ಮತ್ತೆ ಪಡೆಯಲು ಅವಕಾಶ, ಇಲ್ಲಿದೆ ಸಂಪೂರ್ಣ ಮಾಹಿತಿ

Spread the love

WhatsApp Group Join Now
Telegram Group Join Now

BPL Ration Card Reactivation: ಬಿಪಿಎಲ್ ಕಾರ್ಡ್ ಮತ್ತೆ ಪಡೆಯಲು ರಾಜ್ಯ ಸರ್ಕಾರ ಅವಕಾಶ ನೀಡಿದೆ. ಅರ್ಹತಾ ಮಾನದಂಡಗಳು, ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ, ಹೊಸ ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯದ ಹಲವು ಕುಟುಂಬಗಳಿಗೆ ಸಂತಸದ ಸುದ್ದಿ ಸಿಕ್ಕಿದೆ. ವಿವಿಧ ಕಾರಣಗಳಿಂದ ರದ್ದಾಗಿದ್ದ ಬಿಪಿಎಲ್ (BPL) ರೇಷನ್ ಕಾರ್ಡ್ ಹೊಂದಿದ್ದ ಅರ್ಹ ಕುಟುಂಬಗಳಿಗೆ ಮತ್ತೆ ಕಾರ್ಡ್ ಪಡೆಯಲು ರಾಜ್ಯ ಸರ್ಕಾರ ಅವಕಾಶ ನೀಡಿದೆ.

ಈ ಹಿಂದೆ ಇದ್ದ 45 ದಿನಗಳ ಗಡುವನ್ನು ಕೂಡ ಸಡಿಲಿಸಲಾಗಿದ್ದು, ಅರ್ಹರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹಾಗಾದರೆ ಯಾರಿಗೆ ಈ ಅವಕಾಶ ಸಿಗಲಿದೆ? ಯಾವ ದಾಖಲೆಗಳನ್ನು ಸಲ್ಲಿಸಬೇಕು? ಅರ್ಜಿ ಎಲ್ಲಿಗೆ ನೀಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

ಇದನ್ನೂ ಓದಿ: Karnataka Gram Panchayat Election 2026: ಇನ್ನೆರಡು ತಿಂಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ? ರಾಜ್ಯ ಸರ್ಕಾರದಿಂದ ಬಂತು ಮಹತ್ವದ ಮಾಹಿತಿ

ರದ್ದಾದ ಬಿಪಿಎಲ್ ಕಾರ್ಡ್ ಮತ್ತೆ ಪಡೆಯಬಹುದು

ರಾಜ್ಯದಲ್ಲಿ ಹಲವು ವರ್ಷಗಳಿಂದ ವಿವಿಧ ಕಾರಣಗಳಿಂದ ಸುಮಾರು 4 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಿ, ಅವುಗಳನ್ನು ಎಪಿಎಲ್ (APL) ಕಾರ್ಡ್ ಆಗಿ ಪರಿವರ್ತಿಸಲಾಗಿತ್ತು.

ಆದರೆ, ಆ ಕುಟುಂಬಗಳು ನಿಜವಾಗಿಯೂ ಬಡತನದ ಮಾನದಂಡಕ್ಕೆ (Eligibility Criteria) ಒಳಪಡುವವರಾಗಿದ್ದರೆ, ಈಗ ಮತ್ತೆ ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರ್ (Tahsildar) ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಮನವಿ ಸಲ್ಲಿಸಬೇಕು.

ಇದನ್ನೂ ಓದಿ: Mudra Loan: ಗ್ಯಾರಂಟಿ ಇಲ್ಲದೆ ₹20 ಲಕ್ಷ ಮುದ್ರಾ ಲೋನ್ | ಈ ಸಾಲ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ

45 ದಿನಗಳ ಗಡುವು ಸಡಿಲಿಕೆ

ಈ ಹಿಂದೆ ರದ್ದಾದ ಕಾರ್ಡ್ ಮರುಸ್ಥಾಪನೆಗೆ 45 ದಿನಗಳ ಕಾಲಮಿತಿಯನ್ನು ಸರ್ಕಾರ ನಿಗದಿಪಡಿಸಿತ್ತು. ಆದರೆ ಅನೇಕ ಅರ್ಹ ಕುಟುಂಬಗಳಿಗೆ ಇದರಿಂದ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಆ ಗಡುವನ್ನು ಸಡಿಲಿಸಲಾಗಿದೆ.

ಹೀಗಾಗಿ, ಈಗ ಅರ್ಹ ಫಲಾನುಭವಿಗಳು ಯಾವುದೇ ಆತಂಕವಿಲ್ಲದೆ ಅರ್ಜಿ ಸಲ್ಲಿಸುವ ಅವಕಾಶ ಹೊಂದಿದ್ದಾರೆ.

ಇದನ್ನೂ ಓದಿ: Government Employees DA Hike: ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ | ಜುಲೈನಿಂದ 3% ಡಿಎ ಹೆಚ್ಚಳ? ಸಂಬಳ ಎಷ್ಟು ಏರಿಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಅರ್ಜಿ ಸಲ್ಲಿಸಿದ ಬಳಿಕ ಏನಾಗುತ್ತದೆ?

ಅರ್ಜಿ ಸಲ್ಲಿಸಿದ ನಂತರ ತಹಸೀಲ್ದಾರ್ ಕಚೇರಿ ಅಧಿಕಾರಿಗಳು ಸ್ಥಳ ಪರಿಶೀಲನೆ (Field Verification) ಹಾಗೂ ದಾಖಲೆಗಳ ಪರಿಶೀಲನೆ ನಡೆಸುತ್ತಾರೆ.

ಕುಟುಂಬವು ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿದ್ದರೆ, ಸಂಬಂಧಪಟ್ಟ ಅಧಿಕಾರಿಗಳು ಬಿಪಿಎಲ್ ಕಾರ್ಡ್ ಅನ್ನು ಮತ್ತೆ ಸಕ್ರಿಯ (Reactivate) ಮಾಡುತ್ತಾರೆ.

ಇದನ್ನೂ ಓದಿ: Karnataka Mungaru Churuku: ಮತ್ತೆ ರಿಟರ್ನ್ ಆದ ಮುಂಗಾರು | ಜುಲೈ 4ರಿಂದ ರಾಜ್ಯಾದ್ಯಂತ ಭಾರಿ ಮಳೆ | ಜಿಲ್ಲಾವಾರು ಮಳೆ ಮಾಹಿತಿ ಇಲ್ಲಿದೆ…

ಬಿಪಿಎಲ್ ಕಾರ್ಡ್ ಪಡೆಯಲು ಇರುವ ಪ್ರಮುಖ ಷರತ್ತುಗಳು

ಬಿಪಿಎಲ್ ಕಾರ್ಡ್ ಮರುಸ್ಥಾಪನೆ ಪಡೆಯಲು ಕೆಲವು ಪ್ರಮುಖ ಮಾನದಂಡಗಳನ್ನು ಪೂರೈಸಿರಬೇಕು.

  • ಆದಾಯ ತೆರಿಗೆ (Income Tax) ಪಾವತಿದಾರರಾಗಿರಬಾರದು.
  • 7 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರಬಾರದು.
  • ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷ ಮೀರಿರಬಾರದು.
  • ಸರ್ಕಾರದ ಇತರೆ ಅರ್ಹತಾ ನಿಯಮಗಳನ್ನು ಪೂರೈಸಿರಬೇಕು.
WhatsApp Group Join Now
Telegram Group Join Now

ಈ ಷರತ್ತುಗಳನ್ನು ಪೂರೈಸುವ ಕುಟುಂಬಗಳು ಮಾತ್ರ ಮರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ: Hasu Emme Khareedi Subsidy: ಹಸು, ಎಮ್ಮೆ ಖರೀದಿಸಲು ಸರ್ಕಾರದ ಸಹಾಯಧನ | ಮಹಿಳೆಯರಿಂದ ಅರ್ಜಿ ಆಹ್ವಾನ

ಹೊಸ ಬಿಪಿಎಲ್ ಕಾರ್ಡ್ ಯಾಕೆ ವಿತರಣೆ ಆಗಿಲ್ಲ?

2023ರಲ್ಲಿ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದುವರೆಗೆ ಹೊಸ ಬಿಪಿಎಲ್ ಕಾರ್ಡ್ಗಳನ್ನು ವಿತರಿಸಿಲ್ಲ.

ಮೊದಲು ಅನರ್ಹರ ಬಳಿ ಇರುವ ಕಾರ್ಡ್’ಗಳನ್ನು ಗುರುತಿಸಿ, ಅವುಗಳನ್ನು ಎಪಿಎಲ್‌ಗೆ ಪರಿವರ್ತಿಸುವ ಕೆಲಸಕ್ಕೆ ಆದ್ಯತೆ ನೀಡಲಾಗಿದೆ. ಅದರ ನಂತರವೇ ನಿಜವಾದ ಅರ್ಹ ಕುಟುಂಬಗಳಿಗೆ ಹೊಸ ಬಿಪಿಎಲ್ ಕಾರ್ಡ್ ವಿತರಿಸುವ ಉದ್ದೇಶ ಸರ್ಕಾರದ್ದಾಗಿದೆ.

ಇದನ್ನೂ ಓದಿ: Mane Manege e-Swathu: ‘ಮನೆ ಮನೆಗೆ ಇ-ಸ್ವತ್ತು’ ಅಭಿಯಾನ | ಮುಂದಿನ ತಿಂಗಳಿಂದ ಮನೆ ಬಾಗಿಲಲ್ಲೇ ಸಿಗಲಿದೆ ಇ-ಸ್ವತ್ತು

BPL Ration Card Reactivation
BPL Ration Card Reactivation

13.87 ಲಕ್ಷ ಅನರ್ಹ ಕಾರ್ಡ್ ಪತ್ತೆ

‘ಕುಟುಂಬ’ ತಂತ್ರಾಂಶದ (Kutumba Software) ಮೂಲಕ ಸರ್ಕಾರ ನಡೆಸಿದ ಪರಿಶೀಲನೆಯಲ್ಲಿ ಸುಮಾರು 13.87 ಲಕ್ಷ ಅನರ್ಹ ಪಡಿತರ ಚೀಟಿಗಳು ಪತ್ತೆಯಾಗಿವೆ.

ಈ ಪೈಕಿ 4 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್’ಗಳನ್ನು ಈಗಾಗಲೇ ಎಪಿಎಲ್ ಕಾರ್ಡ್ಗಳಾಗಿ ಪರಿವರ್ತಿಸಲಾಗಿದೆ. ಆದರೆ ತಪ್ಪಾಗಿ ರದ್ದಾಗಿರುವ ಅರ್ಹ ಕುಟುಂಬಗಳಿಗೆ ಈಗ ಮತ್ತೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Indira Kit Distribution: ಬಿಪಿಎಲ್ ಕಾರ್ಡುದಾರರಿಗೆ ಇಂದಿರಾ ಕಿಟ್ ವಿತರಣೆ | ಸರ್ಕಾರದ ಮಹತ್ವದ ಮಾಹಿತಿ ಇಲ್ಲಿದೆ…

ಆರು ತಿಂಗಳು ರೇಷನ್ ಪಡೆಯದಿದ್ದರೆ ಎಚ್ಚರ

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಾಹಿತಿ ಪ್ರಕಾರ, ಸತತ ಆರು ತಿಂಗಳ ಕಾಲ ಪಡಿತರ (Ration) ಪಡೆಯದ ಬಿಪಿಎಲ್ ಕಾರ್ಡ್ಗಳನ್ನು ಅಮಾನತು ಮಾಡುವ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ ಕಾರ್ಡ್ ಹೊಂದಿರುವವರು ನಿಯಮಿತವಾಗಿ ಪಡಿತರ ಪಡೆಯುವುದು ಅಗತ್ಯ.

ಇದನ್ನೂ ಓದಿ: Gruha Jyothi Scheme Status: ಗೃಹಜ್ಯೋತಿ ಉಚಿತ ವಿದ್ಯುತ್: ನಿಮ್ಮ ಹೆಸರು ಲಿಸ್ಟ್’ನಲ್ಲಿದೆಯಾ? ಸುಲಭವಾಗಿ ಚೆಕ್ ಮಾಡಿಕೊಳ್ಳಿ!

ರಾಜ್ಯದಲ್ಲಿ ಎಷ್ಟು ಪಡಿತರ ಚೀಟಿಗಳಿವೆ?

ಪ್ರಸ್ತುತ ರಾಜ್ಯದಲ್ಲಿ ವಿವಿಧ ವರ್ಗಗಳ ಪಡಿತರ ಚೀಟಿಗಳ ಸಂಖ್ಯೆ ಹೀಗಿದೆ.

  • ಅಂತ್ಯೋದಯ (AAY) ಕಾರ್ಡ್ – 10,47,080
  • ಫಲಾನುಭವಿಗಳು – 42,76,526
  • ಬಿಪಿಎಲ್ (BPL) ಕಾರ್ಡ್ – 1,14,38,886
  • ಫಲಾನುಭವಿಗಳು – 4,00,46,744
  • ಎಪಿಎಲ್ (APL) ಕಾರ್ಡ್ – 29,71,601
  • ಫಲಾನುಭವಿಗಳು – 1,02,18,470

ಒಟ್ಟಾರೆ ರಾಜ್ಯದಲ್ಲಿ 1,54,57,567 ಪಡಿತರ ಚೀಟಿಗಳು ಇದ್ದು, ಸುಮಾರು 5.45 ಕೋಟಿ ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Hennu Makkala Aasti Hakku: ಮದುವೆಯಾದ ಹೆಣ್ಣು ಮಕ್ಕಳಿಗೂ ತಂದೆಯ ಆಸ್ತಿಯಲ್ಲಿ ಹಕ್ಕಿದೆಯೇ? ಕಾನೂನು ಏನು ಹೇಳುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಆದಾಯ ಮಿತಿ ಹೆಚ್ಚಳಕ್ಕೂ ಚರ್ಚೆ

ಪ್ರಸ್ತುತ ಬಿಪಿಎಲ್ ಕಾರ್ಡ್ ಪಡೆಯಲು ವಾರ್ಷಿಕ ಆದಾಯ ಮಿತಿಯನ್ನು ₹1.20 ಲಕ್ಷ ಎಂದು ನಿಗದಿಪಡಿಸಲಾಗಿದೆ. ಆದರೆ ಈ ಮಾನದಂಡ ಹಲವು ವರ್ಷಗಳ ಹಿಂದೆ ನಿಗದಿಯಾಗಿದ್ದು, ಈಗಿನ ಜೀವನ ವೆಚ್ಚ ಹಾಗೂ ವೇತನದ ಮಟ್ಟಕ್ಕೆ ಇದು ಹೊಂದಿಕೆಯಾಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ: Gruha Jyothi Scheme Door to Door Verification: ಗೃಹ ಜ್ಯೋತಿ ಉಚಿತ ವಿದ್ಯುತ್ ಮನೆ-ಮನೆ ಪರಿಶೀಲನೆ ಆರಂಭ | ಈ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ

ಭದ್ರತಾ ಸಿಬ್ಬಂದಿ (Security Guard) ಸೇರಿದಂತೆ ಅನೇಕ ಸಣ್ಣ ಉದ್ಯೋಗಗಳಲ್ಲಿ ಕೆಲಸ ಮಾಡುವವರ ಆದಾಯವೂ ಈ ಮಿತಿಯನ್ನು ಮೀರುತ್ತಿದೆ. ಹೀಗಾಗಿ ವಾರ್ಷಿಕ ಆದಾಯ ಮಿತಿಯನ್ನು ಹೆಚ್ಚಿಸುವಂತೆ ಹಲವು ಕಡೆಗಳಿಂದ ಬೇಡಿಕೆ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಆದಾಯ ಮಿತಿಯನ್ನು ಪರಿಷ್ಕರಿಸುವ ಕುರಿತು ಆಹಾರ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ವಿವಿಧ ಇಲಾಖೆಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: PM Awas Yojana 2026: ಪಿಎಂ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನ | ಯಾರಿಗೆ ಸಿಗಲಿದೆ ಈ ಸೌಲಭ್ಯ? ಇಲ್ಲಿದೆ ಸಂಪೂರ್ಣ ಮಾಹಿತಿ

ಅರ್ಹರು ಏನು ಮಾಡಬೇಕು?

ನಿಮ್ಮ ಬಿಪಿಎಲ್ ಕಾರ್ಡ್ ಈ ಹಿಂದೆ ರದ್ದಾಗಿದ್ದು, ನೀವು ಸರ್ಕಾರದ ಅರ್ಹತಾ ಮಾನದಂಡಗಳನ್ನು ಪೂರೈಸುತ್ತಿದ್ದರೆ, ವಿಳಂಬ ಮಾಡದೆ ನಿಮ್ಮ ತಾಲೂಕಿನ ತಹಸೀಲ್ದಾರ್ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ.

ದಾಖಲೆಗಳ ಪರಿಶೀಲನೆ ಹಾಗೂ ಸ್ಥಳ ಪರಿಶೀಲನೆಯ ಬಳಿಕ ಅರ್ಹತೆ ದೃಢಪಟ್ಟರೆ ನಿಮ್ಮ ಬಿಪಿಎಲ್ ಕಾರ್ಡ್ ಅನ್ನು ಮತ್ತೆ ಸಕ್ರಿಯಗೊಳಿಸುವ ಅವಕಾಶ ಇದೆ. ಹೀಗಾಗಿ ಈ ಅವಕಾಶವನ್ನು ಅರ್ಹ ಕುಟುಂಬಗಳು ಸದುಪಯೋಗ ಮಾಡಿಕೊಳ್ಳುವುದು ಒಳಿತು.

Indira Kit Distribution: ಬಿಪಿಎಲ್ ಕಾರ್ಡುದಾರರಿಗೆ ಇಂದಿರಾ ಕಿಟ್ ವಿತರಣೆ | ಸರ್ಕಾರದ ಮಹತ್ವದ ಮಾಹಿತಿ ಇಲ್ಲಿದೆ…


Spread the love
error: Content is protected !!