Aditya Birla Scholarship 2026: ಆದಿತ್ಯ ಬಿರ್ಲಾ ಕ್ಯಾಪಿಟಲ್ ಸ್ಕಾಲರ್‌ಶಿಪ್ 2026-27: ಹೆಣ್ಣುಮಕ್ಕಳ ಶಿಕ್ಷಣಕ್ಕೆ ₹60,000 ವರೆಗೂ ಆರ್ಥಿಕ ನೆರವು

WhatsApp Group Join Now
Telegram Group Join Now

Aditya Birla Scholarship 2026: 9ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ಓದುತ್ತಿರುವ ವಿದ್ಯಾರ್ಥಿನಿಯರಿಗೆ 60,000 ರೂ.ಗಳವರೆಗೆ ವಿದ್ಯಾರ್ಥಿವೇತನ. ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ದಾಖಲೆಗಳು, ಕೊನೆಯ ದಿನಾಂಕ ಮತ್ತು ಅರ್ಹತೆಗಳ ಸಂಪೂರ್ಣ ಮಾಹಿತಿ…

ಒಂದು ಮನೆಯಲ್ಲಿ ಹೆಣ್ಣುಮಗು ಓದಿದರೆ ಇಡೀ ಕುಟುಂಬವೇ ವಿದ್ಯಾವಂತವಾಗುತ್ತದೆ. ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಬಹಳ ಮುಖ್ಯ. ಆದರೆ ಆರ್ಥಿಕ ತೊಂದರೆಯಿAದ ಎಷ್ಟೋ ಪ್ರತಿಭಾವಂತ ಹೆಣ್ಣುಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು (Education) ಅರ್ಧಕ್ಕೆ ನಿಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: Gruha Lakshmi 34th Installment: ಗೃಹಲಕ್ಷ್ಮೀ 34ನೇ ಕಂತಿನ ಹಣ ಕೊನೆಗೂ ಜಮೆ: ನಿಮ್ಮ ಖಾತೆಗೆ ಹಣ ಬಂತಾ? ಇಲ್ಲೇ ಸುಲಭವಾಗಿ ಚೆಕ್ ಮಾಡಿ

ಇಂತಹ ಹೆಣ್ಣುಮಕ್ಕಳ ಬೆಂಬಲಕ್ಕೆ ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ (Aditya Birla Capital Foundation) ಮುಂದಾಗಿದೆ. ಹಣಕಾಸಿನ ಸಮಸ್ಯೆಯಿಂದ ಯಾವೊಬ್ಬ ವಿದ್ಯಾರ್ಥಿನಿಯ ಶಿಕ್ಷಣವೂ ನಿಲ್ಲಬಾರದು ಎಂಬ ಉದ್ದೇಶದಿಂದ ಒಂದು ವಿಶೇಷ ಕಾರ್ಯಕ್ರಮ ಶುರು ಮಾಡಿದೆ.

ಅದೇ ಆದಿತ್ಯ ಬಿರ್ಲಾ ಕ್ಯಾಪಿಟಲ್ ಸ್ಕಾಲರ್‌ಶಿಪ್ ಕಾರ್ಯಕ್ರಮ 2026-27 (Aditya Birla Capital Scholarship Programme 2026-27). ಇದು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ (Meritorious Girl Students) ಒಂದು ದೊಡ್ಡ ಆಸರೆಯಾಗಿದೆ.

ಇದನ್ನೂ ಓದಿ: Uchita Koli Mari Vitarane- Yojane: ಮಹಿಳೆಯರಿಗೆ ಉಚಿತ ಕೋಳಿ ಮರಿ ವಿತರಣೆಗೆ ಪಶು ಇಲಾಖೆಯಿಂದ ಅರ್ಜಿ ಆಹ್ವಾನ

ಎಷ್ಟಿದೆ ಆರ್ಥಿಕ ನೆರವು ಮತ್ತು ಯಾರಿಗೆ ಲಭ್ಯ? (Financial Assistance & Eligibility)

ಈ ಯೋಜನೆಯಡಿ ಆಯ್ಕೆಯಾಗುವ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಉತ್ತಮ ಆರ್ಥಿಕ ಸಹಾಯ (Financial Assistance) ಸಿಗುತ್ತದೆ. ಪ್ರತಿ ವಿದ್ಯಾರ್ಥಿನಿಗೆ ಗರಿಷ್ಠ 60,000 ರೂಪಾಯಿಗಳವರೆಗೆ ಸ್ಕಾಲರ್‌ಶಿಪ್ ಹಣ ದೊರೆಯಲಿದೆ.

ಈ ಹಣವನ್ನು ಶಾಲಾ ಕಾಲೇಜು ಶುಲ್ಕ ಕಟ್ಟಲು ಅಥವಾ ಪುಸ್ತಕಗಳ ಖರೀದಿಗೆ ಬಳಸಬಹುದು. ಹಾಸ್ಟೆಲ್ ಖರ್ಚು ಅಥವಾ ಊಟದ ವೆಚ್ಚಗಳಿಗೆ (Mess Expenses) ಕೂಡ ಇದನ್ನು ಉಪಯೋಗಿಸಿಕೊಳ್ಳಬಹುದು. ಈ ವಿದ್ಯಾರ್ಥಿವೇತನ ಕೇವಲ ಹೆಣ್ಣುಮಕ್ಕಳಿಗೆ ಮಾತ್ರ ಮೀಸಲಾಗಿದೆ.

ಇದನ್ನೂ ಓದಿ: Karnataka e-Swathu: ಇ-ಸ್ವತು ಭರ್ಜರಿ ಸಿಹಿಸುದ್ದಿ: ಕಂದಾಯ ಜಾಗದಲ್ಲಿ ಮನೆ, ಸೈಟ್ ಇದೆಯೇ? ಇ-ಸ್ವತ್ತು ನೀಡಲು ಸರ್ಕಾರದಿಂದ ಮಹತ್ವದ ಸೂಚನೆ

ಪ್ರಸ್ತುತ 9ನೇ ತರಗತಿಯಿಂದ 12ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಶಾಲಾ ವಿದ್ಯಾರ್ಥಿನಿಯರು ಇದಕ್ಕೆ ಅರ್ಜಿ ಸಲ್ಲಿಸಬಹುದು. ಹಾಗೆಯೇ ಪಾಲಿಟೆಕ್ನಿಕ್ ಡಿಪ್ಲೊಮಾ (Polytechnic Diploma) ಓದುತ್ತಿರುವವರೂ ಅರ್ಜಿ ಹಾಕಬಹುದು.

ಯಾವುದೇ ಸಾಮಾನ್ಯ ಅಥವಾ ವೃತ್ತಿಪರ ಪದವಿ (Undergraduate Course) ಓದುತ್ತಿರುವವರಿಗೂ ಇದು ಲಭ್ಯವಿದೆ. ಇದರ ಜೊತೆಗೆ ಉನ್ನತ ಶಿಕ್ಷಣವಾದ ಸ್ನಾತಕೋತ್ತರ ಪದವಿ (Postgraduate Course) ಮಾಡುತ್ತಿರುವ ಹೆಣ್ಣುಮಕ್ಕಳಿಗೂ ಈ ಅವಕಾಶ ಮುಕ್ತವಾಗಿದೆ.

ಇದನ್ನೂ ಓದಿ: Term Insurance Complete Guide: ತಿಂಗಳಿಗೆ ₹400 ಸಾಕು! ನಿಮ್ಮ ಕುಟುಂಬಕ್ಕೆ ಸಿಗಲಿದೆ ₹1 ಕೋಟಿ ಆರ್ಥಿಕ ಭದ್ರತೆ | ಟರ್ಮ್ ಇನ್ಶೂರೆನ್ಸ್ನ ಸಂಪೂರ್ಣ ಮಾಹಿತಿ ಇಲ್ಲಿದೆ

ಅರ್ಜಿ ಸಲ್ಲಿಸುವ ವಿದ್ಯಾರ್ಥಿನಿಯರು ಭಾರತದಾದ್ಯಂತ ಮಾನ್ಯತೆ ಪಡೆದ ಸರ್ಕಾರಿ ಶಾಲೆಗಳು ಅಥವಾ ಕಾಲೇಜುಗಳಲ್ಲಿಯೇ ಓದುತ್ತಿರಬೇಕು. ಇದರ ಜೊತೆಗೆ ತಮ್ಮ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಅಂದರೆ ಕಳೆದ ವರ್ಷದ ಪರೀಕ್ಷೆಯಲ್ಲಿ ಕನಿಷ್ಠ ಶೇಕಡಾ 60ರಷ್ಟು (60% Marks) ಅಂಕಗಳನ್ನು ಗಳಿಸಿರಬೇಕು.

ಇಲ್ಲಿ ವಿದ್ಯಾರ್ಥಿನಿಯ ಕುಟುಂಬದ ಆರ್ಥಿಕ ಸ್ಥಿತಿ ಕೂಡ ಬಹಳ ಮುಖ್ಯ. ಅರ್ಜಿದಾರರ ಪೋಷಕರ ಒಟ್ಟು ವಾರ್ಷಿಕ ಆದಾಯ (Annual Family Income) ಎಲ್ಲಾ ಮೂಲಗಳಿಂದ ಸೇರಿ ಆರು ಲಕ್ಷ ರೂಪಾಯಿಗಳನ್ನು ಮೀರಬಾರದು. ಆದಿತ್ಯ ಬಿರ್ಲಾ ಕ್ಯಾಪಿಟಲ್ ಸಂಸ್ಥೆ ಹಾಗೂ ಬಡ್ಡಿ4ಸ್ಟುಡಿ (Buddy4Study) ಸಂಸ್ಥೆಯ ಉದ್ಯೋಗಿಗಳ ಮಕ್ಕಳಿಗೆ ಈ ಸ್ಕಾಲರ್‌ಶಿಪ್ ಸೌಲಭ್ಯ ಅನ್ವಯಿಸುವುದಿಲ್ಲ.

WhatsApp Group Join Now
Telegram Group Join Now

ಇದನ್ನೂ ಓದಿ: Ration Shop New e-Voucher System: ರೇಷನ್ ಕಾರ್ಡ್‌ದಾರರಿಗೆ ಬಿಗ್ ಅಪ್ಡೇಟ್ | ಇನ್ಮುಂದೆ ಅಕ್ಕಿ ಬದಲು ಡಿಜಿಟಲ್ ವೋಚರ್ | ಕೇಂದ್ರ ಸರ್ಕಾರದ ಹೊಸ ಪ್ಲಾನ್

Aditya Birla Scholarship 2026
Aditya Birla Scholarship 2026

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು (Required Documents)

ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಥಿನಿಯರು ಕೆಲವು ಪ್ರಮುಖ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಿದ್ಧವಾಗಿಟ್ಟುಕೊಳ್ಳುವುದು ಕಡ್ಡಾಯ. ಮೊದಲನೆಯದಾಗಿ ವಿದ್ಯಾರ್ಥಿನಿಯ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ ಬೇಕಾಗುತ್ತದೆ. ಹಿಂದಿನ ತರಗತಿಯ ಅಥವಾ ಸೆಮಿಸ್ಟರ್ ಅಂಕಪಟ್ಟಿ (Marksheet) ನೀಡಬೇಕು.

ಉನ್ನತ ವ್ಯಾಸಂಗ ಮಾಡುತ್ತಿದ್ದರೆ 10ನೇ ಮತ್ತು 12ನೇ ತರಗತಿಯ ಅಂಕಪಟ್ಟಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಇದರೊಂದಿಗೆ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದಾದರೂ ಒಂದು ಗುರುತಿನ ಚೀಟಿಯನ್ನು (Government ID Proof) ನೀಡಬೇಕು.

ಇದನ್ನೂ ಓದಿ: Karnataka Farmers Input Subsidy: ರೈತರಿಗೆ ₹5,000 ರಿಂದ ₹60,000 ವರೆಗೆ ಬೆಳೆ ಪರಿಹಾರ | ಯಾರಿಗೆ ಎಷ್ಟು ಹಣ ಸಿಗಲಿದೆ? ಸರ್ಕಾರದ ಮಹತ್ವದ ಘೋಷಣೆ

ಇದಕ್ಕಾಗಿ ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಅಥವಾ ಪ್ಯಾನ್ ಕಾರ್ಡ್ ಬಳಸಬಹುದು. ಈ ವರ್ಷ ನೀವು ಶಾಲಾ-ಕಾಲೇಜಿಗೆ ಪ್ರವೇಶ ಪಡೆದಿರುವ ಬಗ್ಗೆ ಪುರಾವೆ (Admission Proof) ಒದಗಿಸುವುದು ಕಡ್ಡಾಯ. ಇದಕ್ಕಾಗಿ ಶುಲ್ಕ ಕಟ್ಟಿದ ರಶೀದಿ, ಪ್ರವೇಶ ಪತ್ರ ಅಥವಾ ಕಾಲೇಜು ಐಡಿ ಕಾರ್ಡ್ ಲಗತ್ತಿಸಬಹುದು.

ಕಾಲೇಜಿನ ಫೀ ಸ್ಟ್ರಕ್ಚರ್ ಇದ್ದರೆ ಅದನ್ನು ಕೂಡ ನೀಡಬಹುದು. ನೀವು ಶಿಕ್ಷಣಕ್ಕಾಗಿ ಈಗಾಗಲೇ ಮಾಡಿರುವ ಖರ್ಚುಗಳ ರಸೀದಿಗಳಿದ್ದರೂ ಅದನ್ನು ಸೇರಿಸಬಹುದು. ವಿದ್ಯಾರ್ಥಿವೇತನದ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ಇದನ್ನೂ ಓದಿ: Lowest Personal Loan: ಕಡಿಮೆ ಬಡ್ಡಿದರದಲ್ಲಿ ಪರ್ಸನಲ್ ಲೋನ್ ಬೇಕೇ? ಇಲ್ಲಿದೆ ಬ್ಯಾಂಕ್‌ಗಳ ಪೂರ್ಣ ಮಾಹಿತಿ…

ಆದ್ದರಿಂದ ವಿದ್ಯಾರ್ಥಿನಿಯ ಹೆಸರಿನ ಬ್ಯಾಂಕ್ ಪಾಸ್‌ಬುಕ್ (Bank Passbook) ಪ್ರತಿಯನ್ನು ನೀಡಬೇಕು. ಇದರ ಜೊತೆಗೆ ಸರ್ಕಾರಿ ಅಧಿಕಾರಿಗಳಿಂದ ಪಡೆದ ಈ ವರ್ಷದ ಆದಾಯ ಪ್ರಮಾಣಪತ್ರವನ್ನು (Income Certificate) ಸಲ್ಲಿಸಬೇಕು.

ಪೋಷಕರು ಖಾಸಗಿ ಅಥವಾ ಇತರ ಕಡೆ ಉದ್ಯೋಗಿಗಳಾಗಿದ್ದರೆ ವೇತನ ಚೀಟಿ (Salary Slips) ಅಥವಾ ಐಟಿಆರ್ (ITR) ಒದಗಿಸಬಹುದು. ಅನ್ವಯವಾದರೆ ಅಂಗವೈಕಲ್ಯ ಪ್ರಮಾಣಪತ್ರ ನೀಡಬೇಕು. ಪೋಷಕರು ತೀರಿಕೊಂಡಿದ್ದರೆ ಮರಣ ಪ್ರಮಾಣಪತ್ರ ಹಾಗೂ ಅರ್ಜಿದಾರರ ಮನೆಯ ಇತ್ತೀಚಿನ ಫೋಟೋವನ್ನು ಕೂಡ ಕಡ್ಡಾಯವಾಗಿ ಲಗತ್ತಿಸಬೇಕು.

ಇದನ್ನೂ ಓದಿ: District Court Jobs: 10ನೇ ತರಗತಿ ಪಾಸಾದವರಿಗೆ ನ್ಯಾಯಾಲಯದಲ್ಲಿ ಸರ್ಕಾರಿ ಉದ್ಯೋಗ | ಅರ್ಜಿ ಆಹ್ವಾನ

ಆನ್‌ಲೈನ್ ಅರ್ಜಿ ಸಲ್ಲಿಕೆ ಮತ್ತು ಪ್ರಮುಖ ನಿಯಮಗಳು (Online Application Rules)

ಈ ಸ್ಕಾಲರ್‌ಶಿಪ್ ಪಡೆಯಲು ಅರ್ಜಿ ಸಲ್ಲಿಕೆಯು ಕೇವಲ ಆನ್‌ಲೈನ್ ಮೂಲಕ (Online Application Mode) ಮಾತ್ರ ನಡೆಯುತ್ತದೆ. ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸುವ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ನೀವು ಅಪ್‌ಲೋಡ್ ಮಾಡುವ ಎಲ್ಲಾ ದಾಖಲೆಗಳು ಬಹಳ ಸ್ಪಷ್ಟವಾಗಿರಬೇಕು.

ಇದನ್ನೂ ಓದಿ: Udyogini Scheme Karnataka 2026: ಮಹಿಳೆಯರಿಗೆ ಬಡ್ಡಿ ಇಲ್ಲದೇ ₹3 ಲಕ್ಷ ಸಾಲ, ಜೊತೆಗೆ ₹1.5 ಲಕ್ಷ ಸಹಾಯಧನ | ಉದ್ಯೋಗಿನಿ ಯೋಜನೆಗೆ ಈಗಲೇ ಅರ್ಜಿ ಹಾಕಿ

ಅವುಗಳನ್ನು ಸುಲಭವಾಗಿ ಓದಲು ಬರುವಂತಿರಬೇಕು. ದಾಖಲೆಗಳ ಫೈಲ್‌ಗಳು ಕೇವಲ ಪಿಡಿಎಫ್ (PDF) ಅಥವಾ ಜೆಪಿಇಜಿ (JPEG) ಮಾದರಿಯಲ್ಲಿರಬೇಕು. ಪ್ರತಿಯೊಂದು ಫೈಲ್‌ನ ಗಾತ್ರ ಗರಿಷ್ಠ 1.5 ಎಮ್‌ಬಿ (1.5 MB) ಮಾತ್ರ ಇರಬೇಕು. ಅರ್ಜಿಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಸಂಪೂರ್ಣವಾಗಿ ತುಂಬಬೇಕು. ಅಪೂರ್ಣವಾದ ಅರ್ಜಿಗಳನ್ನು ಮುಲಾಜಿಲ್ಲದೆ ತಿರಸ್ಕರಿಸಲಾಗುತ್ತದೆ.

ನೀವು ಒದಗಿಸುವ ಪ್ರತಿಯೊಂದು ಮಾಹಿತಿಯನ್ನು ನಿಮ್ಮ ಮೂಲ ದಾಖಲೆಗಳೊಂದಿಗೆ (Original Documents) ಕಟ್ಟುನಿಟ್ಟಾಗಿ ಪರಿಶೀಲನೆ ಮಾಡಲಾಗುತ್ತದೆ. ಸ್ಕಾಲರ್‌ಶಿಪ್ ಪಡೆಯುವ ಆಸೆಯಿಂದ ಯಾವುದೇ ಸುಳ್ಳು ಮಾಹಿತಿ ಅಥವಾ ನಕಲಿ ದಾಖಲೆ ನೀಡಬಾರದು. ಹಾಗೇನಾದರೂ ತಪ್ಪು ಮಾಹಿತಿ ನೀಡಿದರೆ ಅರ್ಜಿಯನ್ನು ತಕ್ಷಣ ರದ್ದು ಮಾಡಲಾಗುತ್ತದೆ (Disqualification). ಇದರ ಜೊತೆಗೆ ಕಾನೂನು ಕ್ರಮ ಕೂಡ ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: Karnataka Govt Employees DA Hike- ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ | ತುಟ್ಟಿಭತ್ಯೆ (DA) ಹೆಚ್ಚಳ | ಸಂಬಳ ಭರ್ಜರಿ ಏರಿಕೆ!

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ (Last Date)

ಈ ಅತ್ಯುತ್ತಮ ಅವಕಾಶವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ. ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 22, 2026 (November 22, 2026) ಆಗಿರುತ್ತದೆ.

ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ನಿಮಗೆ ತಿಳಿದಿರುವ ಗುಂಪುಗಳಲ್ಲಿ ಖಂಡಿತವಾಗಿ ಹಂಚಿಕೊಳ್ಳಿ. ನಿಮ್ಮ ಒಂದು ಸಣ್ಣ ಶೇರ್‌ನಿಂದ, ಓದಲು ಆಸಕ್ತಿ ಇರುವ ಯಾವುದೋ ಒಬ್ಬ ಬಡ ಹೆಣ್ಣುಮಗಳ ಭವಿಷ್ಯ ಉಜ್ವಲವಾಗಬಹುದು (Bright Future).

Udyogini Scheme Karnataka 2026: ಮಹಿಳೆಯರಿಗೆ ಬಡ್ಡಿ ಇಲ್ಲದೇ ₹3 ಲಕ್ಷ ಸಾಲ, ಜೊತೆಗೆ ₹1.5 ಲಕ್ಷ ಸಹಾಯಧನ | ಉದ್ಯೋಗಿನಿ ಯೋಜನೆಗೆ ಈಗಲೇ ಅರ್ಜಿ ಹಾಕಿ

Share0Shares
error: Content is protected !!