Hasu Emme Khareedi Subsidy: ಹಸು ಮತ್ತು ಎಮ್ಮೆ ಖರೀದಿಸಲು ಸರ್ಕಾರದ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಜುಲೈ 29ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಹೈನುಗಾರಿಕೆ ಸಬ್ಸಿಡಿಯ ಸಂಪೂರ್ಣ ಮಾಹಿತಿ ಇಲ್ಲಿದೆ…
ರೈತ ಮಹಿಳೆಯರೆ, ನೀವೇನಾದರೂ ಹಸು ಅಥವಾ ಎಮ್ಮೆ ಸಾಕಾಣಿಕೆ (Dairy Farming) ಮಾಡಿ ನಾಲ್ಕು ಕಾಸು ಸಂಪಾದನೆ ಮಾಡಬೇಕು ಅಂತ ಯೋಚನೆ ಮಾಡ್ತಿದ್ದೀರಾ? ಹಾಗಿದ್ದರೆ, ನಿಮಗೊಂದು ಭರ್ಜರಿ ಸಿಹಿಸುದ್ದಿ ಇದೆ. ರೈತರಿಗೆ ಹಸು ಮತ್ತು ಎಮ್ಮೆ ಖರೀದಿಸಲು ಆರ್ಥಿಕ ಸಹಾಯ ಅಂದರೆ ಸಬ್ಸಿಡಿ (Subsidy) ನೀಡಲು ಪಶುಪಾಲನಾ ಇಲಾಖೆ ಅರ್ಜಿಗಳನ್ನು ಆಹ್ವಾನಿಸಿದೆ.
ಇದನ್ನೂ ಓದಿ: Gruha Jyothi Scheme Status: ಗೃಹಜ್ಯೋತಿ ಉಚಿತ ವಿದ್ಯುತ್: ನಿಮ್ಮ ಹೆಸರು ಲಿಸ್ಟ್’ನಲ್ಲಿದೆಯಾ? ಸುಲಭವಾಗಿ ಚೆಕ್ ಮಾಡಿಕೊಳ್ಳಿ!
ಯಾವ ಊರಿನವರಿಗೆ ಈ ಸೌಲಭ್ಯ ಸಿಗುತ್ತದೆ?
ಸದ್ಯಕ್ಕೆ ಹೊಸಪೇಟೆ ತಾಲೂಕಿನ ಗಣಿಬಾಧಿತ ಗ್ರಾಮಗಳ ಜನರಿಗೆ ಈ ಸೌಲಭ್ಯ ಸಿಗಲಿದೆ. ‘ಸಿಇಪಿಎಂಐಜೆಡ್’ (CEPMIZ) ಎಂಬ ಯೋಜನೆಯಡಿ, ಎರಡು ಮಿಶ್ರತಳಿ ಹಸು (Crossbred Cows) ಅಥವಾ ಒಳ್ಳೆ ತಳಿಯ ಎಮ್ಮೆಗಳನ್ನು (Upgraded Buffaloes) ಸಾಕಲು ಸರ್ಕಾರದಿಂದ ಈ ಸಹಾಯಧನ ಸಿಗುತ್ತಿದೆ.
ಇದನ್ನೂ ಓದಿ: Tande Maga PM Kisan Hana: ತಂದೆ-ಮಗ ಇಬ್ಬರಿಗೂ ಪಿಎಂ-ಕಿಸಾನ್ ಹಣ? ಇಲ್ಲಿದೆ ಸರ್ಕಾರದ ಹೊಸ ನಿಯಮ

ಯಾರೆಲ್ಲಾ ಅರ್ಜಿ ಹಾಕಬಹುದು?
ಗ್ರಾಮ ಪಂಚಾಯತಿ ಮಟ್ಟದ ಮಹಿಳಾ ಸ್ವಸಹಾಯ ಸಂಘಗಳಲ್ಲಿ (Self Help Group – SHG) ನೊಂದಣಿಯಾಗಿ, ಸಕ್ರಿಯವಾಗಿರುವ ಸದಸ್ಯರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಇದನ್ನೂ ಓದಿ: Pitrarjita Aasti Hakku: ಪಿತ್ರಾರ್ಜಿತ ಆಸ್ತಿ ಎಂದರೇನು? ಯಾರಿಗೆಲ್ಲ ಹಕ್ಕು ಇರುತ್ತದೆ? ಆಸ್ತಿ ಹಕ್ಕುಗಳ ಸಂಪೂರ್ಣ ಮಾಹಿತಿ
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸುವುದು ಕೂಡ ಬಹಳ ಸುಲಭ. ನೀವು ವಿಜಯನಗರ ಜಿಲ್ಲೆಯ ಅಧಿಕೃತ ವೆಬ್ಸೈಟ್ vijayanagara.nic.in ಗೆ ಭೇಟಿ ನೀಡಿ ಆನ್ಲೈನ್ ಮೂಲಕವೇ ಅರ್ಜಿ ಹಾಕಬಹುದು.
ನೆನಪಿರಲಿ: ಅರ್ಜಿ ಸಲ್ಲಿಸಲು ಜುಲೈ 29 ಕೊನೆಯ ದಿನವಾಗಿದೆ. ಕೊನೆ ಕ್ಷಣದವರೆಗೂ ಕಾಯದೆ, ಆಸಕ್ತಿ ಇದ್ದವರು ಆದಷ್ಟು ಬೇಗ ಅರ್ಜಿ ಸಲ್ಲಿಸಿಬಿಡಿ.
ಇನ್ನಷ್ಟು ಮಾಹಿತಿ ಎಲ್ಲಿ ಸಿಗುತ್ತದೆ?
ಈ ಯೋಜನೆಯ ಬಗ್ಗೆ ನಿಮಗೆ ಇನ್ನು ಏನಾದರೂ ಅನುಮಾನಗಳಿದ್ದರೆ, ಅಥವಾ ಅರ್ಜಿ ಸಲ್ಲಿಸಲು ಸಹಾಯ ಬೇಕಿದ್ದರೆ, ನಿಮ್ಮ ಊರಿನ ಗ್ರಾಮ ಪಂಚಾಯತಿ ಕಚೇರಿ ಅಥವಾ ಹತ್ತಿರದ ಪಶುವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಬಹುದು.
ಹೈನುಗಾರಿಕೆ ಮಾಡಿ ಬದುಕು ಕಟ್ಟಿಕೊಳ್ಳಲು ಇದೊಂದು ಒಳ್ಳೆಯ ಅವಕಾಶ. ಆಸಕ್ತಿ ಇರುವವರು ಇದರ ಸದುಪಯೋಗ ಪಡಿಸಿಕೊಳ್ಳಿ.
July Monsoon Rain: ಜುಲೈ ತಿಂಗಳಲ್ಲಿ ಹೇಗಿದೆ ಮುಂಗಾರು ಮಳೆ? ಹವಾಮಾನ ಇಲಾಖೆ ಎಚ್ಚರಿಕೆ ವರದಿ ಇಲ್ಲಿದೆ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.