Revive Failed Dry Borewell: ಬೋರ್‌ವೆಲ್ ಕೊರೆಸಿದರೂ ನೀರು ಬರಲಿಲ್ಲವೇ? ಚಿಂತೆ ಬಿಡಿ! ವಿಫಲವಾದ ಬೋರ್‌ವೆಲ್‌ಗೆ ಮರುಜೀವ ನೀಡುವ ಪ್ರಮುಖ ವೈಜ್ಞಾನಿಕ ವಿಧಾನಗಳ ಮಾಹಿತಿ ಇಲ್ಲಿದೆ…
ಬಹುತೇಕ ರೈತರು ಬೋರ್‌ವೆಲ್‌ಗಳ (Borewell) ಮೇಲೆ ಅಪಾರ ನಂಬಿಕೆ ಇಡುತ್ತಾರೆ. ಸಾಲಸೋಲ ಮಾಡಿ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊರೆಸಿದ ಬೋರ್‌ವೆಲ್‌ನಲ್ಲಿ ಒಂದು ಹನಿ ನೀರು ಸಿಗದೇ ಹೋದರೆ, ಅದು ರೈತನ ಮನಸ್ಸಿಗೆ ಹಾಗೂ ಆರ್ಥಿಕತೆಗೆ ಬೀಳುವ ಅತಿದೊಡ್ಡ ಹೊಡೆತ.
ಆದರೆ, ಕೃಷಿಕರು ಒಂದು ಪ್ರಮುಖ ವಿಷಯವನ್ನು ಸದಾ ನೆನಪಿನಲ್ಲಿಡಬೇಕು: ಬೋರ್‌ವೆಲ್‌ನಲ್ಲಿ ನೀರು ಸಿಗಲಿಲ್ಲ ಎಂದರೆ ಆ ಬೋರ್‌ವೆಲ್ ಸಂಪೂರ್ಣ ವಿಫಲವಾಗಿದೆ (Borewell Failure) ಎಂದರ್ಥವಲ್ಲ.
ಸರಿಯಾದ ತಂತ್ರಜ್ಞಾನ ಮತ್ತು ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿದರೆ, ವಿಫಲವಾದ ಬೋರ್‌ವೆಲ್‌ಗೆ ಮರುಜೀವ ನೀಡುವ (Borewell Revival) ಸಾಧ್ಯತೆಗಳು ನೂರಕ್ಕೆ ನೂರರಷ್ಟಿವೆ.
ಇದನ್ನೂ ಓದಿ: Sheep Goat Dairy Farming Training: ಉಚಿತ ಕುರಿ-ಮೇಕೆ ಸಾಕಾಣಿಕೆ ಹಾಗೂ ಹೈನುಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ
ಡ್ರೈ ಗ್ಯಾಪ್ಸ್ (Dry Gaps) ಎಂದರೆ ನೀರಿಲ್ಲ ಎಂದರ್ಥವಲ್ಲ!
ಅಸಲಿಗೆ ಬೋರ್‌ವೆಲ್ ಕೊರೆಸುವಾಗ ಕೆಲವು ನೂರಾರು ಅಡಿಗಳವರೆಗೆ ಕೇವಲ ಒಣ ಕಲ್ಲು, ಮಣ್ಣು ಮತ್ತು ಧೂಳು ಮಾತ್ರ ಹೊರಬರುತ್ತದೆ. ಇದನ್ನು ಬೋರ್‌ವೆಲ್ ಭಾಷೆಯಲ್ಲಿ ಡ್ರೈ ಗ್ಯಾಪ್ಸ್ (Dry Gaps) ಎಂದು ಕರೆಯುತ್ತಾರೆ. ಇದನ್ನು ನೋಡಿ ರೈತರು ಆತಂಕಪಡುವ ಅಗತ್ಯವಿಲ್ಲ. ನೀವಿಲ್ಲಿ ಗಮನಿಸಬೇಕಾದ ಮುಖ್ಯ ಅಂಶಗಳೆಂದರೇ:
ಭೂಗರ್ಭದ ರಚನೆ (Geological Formation): ಭೂಮಿಯ ಒಳಗಿನ ರಚನೆ ಅತಿ ಸಂಕೀರ್ಣವಾಗಿರುತ್ತದೆ. ಡ್ರೈ ಗ್ಯಾಪ್ ಇದೆ ಎಂದರೆ ಆ ಜಾಗದಲ್ಲಿ ಅಂತರ್ಜಲವೇ ಇಲ್ಲ ಎಂದು ತೀರ್ಮಾನಿಸಬಾರದು.
ಕಲ್ಲಿನ ಬಿರುಕುಗಳು (Rock Fractures): ಭೂಮಿಯ ಆಳದಲ್ಲಿರುವ ಕಲ್ಲುಗಳಲ್ಲಿ ಸಣ್ಣ ಸಣ್ಣ ಬಿರುಕುಗಳಿರುತ್ತವೆ. ಈ ಬಿರುಕುಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿರುವ ಸಾಧ್ಯತೆಗಳಿರುತ್ತವೆ. ಡ್ರಿಲ್ ಮಾಡುವಾಗ ಈ ಬಿರುಕುಗಳು ಸರಿಯಾಗಿ ತೆರೆದುಕೊಳ್ಳದಿದ್ದರೆ ನೀರು ಹೊರಬರುವುದಿಲ್ಲ.
ಇದನ್ನೂ ಓದಿ: PM Surya Ghar Yojana: ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು 78,000 ವರೆಗೆ ಸಹಾಯಧನ | ಅರ್ಜಿ ಆಹ್ವಾನ
ತೇವಾಂಶ (Moisture) ಕಂಡಾಗ ರೈತರು ಏನು ಅರ್ಥ ಮಾಡಿಕೊಳ್ಳಬೇಕು?
ಸುಮಾರು 900 ರಿಂದ 1000 ಅಡಿ ಆಳಕ್ಕೆ ಹೋದಾಗ ಕಲ್ಲಿನ ಧೂಳಿನ ಬದಲು ಸ್ವಲ್ಪ ತೇವಾಂಶ (Moisture) ಅಥವಾ ಒದ್ದೆ ಮಣ್ಣು ಹೊರಬರುವುದು ಸಾಮಾನ್ಯ. ಆದರೆ ಅದುವೇ ಸ್ಥಿರ ಜಲಮಟ್ಟ (Water Table) ಆಗಿರಲೇಬೇಕೆಂದಿಲ್ಲ. ಕೇವಲ ಒಂದು ಇಂಚು ನೀರಿದ್ದರೂ, ಡ್ರಿಲ್ ಮಾಡುವಾಗ ಬರುವ ಧೂಳು ಪೇಸ್ಟ್ ರೀತಿ ಹೊರಬರುತ್ತದೆ.
ಬೋರ್‌ವೆಲ್ ಒಳಗೆ ನೀರಿನ ಒತ್ತಡ (Water Pressure) ಕಡಿಮೆ ಇದ್ದರೆ ನೀರು ಮೇಲಕ್ಕೆ ಚಿಮ್ಮುವುದಿಲ್ಲ. ಇದನ್ನು ನೋಡಿ ‘ನೀರು ಇಲ್ಲವೇ ಇಲ್ಲ’ ಎಂದು ತಪ್ಪಾಗಿ ಭಾವಿಸುವ ಸಾಧ್ಯತೆ ಇದೆ. ಅಂದರೆ, ನೀರು ಅಲ್ಲಿಯೇ ಇದೆ, ಆದರೆ ಅದು ತಕ್ಷಣಕ್ಕೆ ನಮ್ಮ ಕಣ್ಣಿಗೆ ಗೋಚರಿಸುತ್ತಿಲ್ಲ ಎಂದರ್ಥ.
ಫಾಸ್ಟ್ ರಿಗ್‌ಗಳ (Fast Drilling Rigs) ಲಾಭ ಮತ್ತು ನಷ್ಟಗಳು
ಇಂದಿನ ಆಧುನಿಕ ಯುಗದಲ್ಲಿ ಹೈ-ಟೆಕ್ ರಿಗ್‌ಗಳು (High-Tech Rigs) ಬಂದಿವೆ. ಇವು ಅತ್ಯಂತ ವೇಗವಾಗಿ ಬೋರ್‌ವೆಲ್ ಕೊರೆಯುತ್ತವೆ. ಇದು ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ, ಆದರೆ ಇದರಿಂದ ಕೆಲವು ದೊಡ್ಡ ಸಮಸ್ಯೆಗಳೂ ಇವೆ:
ಜಲಸಂಧಿಗಳು ಮಿಸ್ ಆಗುವುದು (Missing Water Veins): ವೇಗವಾಗಿ ಕೊರೆಯುವಾಗ ಕಲ್ಲುಗಳ ನಡುವಿನ ಸಣ್ಣ ಜಲಸಂಧಿಗಳು ಮುಚ್ಚಿಹೋಗುವ ಅಥವಾ ಯಂತ್ರದ ವೇಗಕ್ಕೆ ಕಣ್ತಪ್ಪಿ ಹೋಗುವ ಸಾಧ್ಯತೆ ಇರುತ್ತದೆ.
ನೀರು ಹೊರಬರಲು ಸಮಯ ಬೇಕು: ಒಳಗೆ ನೀರಿದ್ದರೂ, ಅದು ಪೈಪ್ ಮೂಲಕ ಮೇಲಕ್ಕೆ ಚಿಮ್ಮಲು ಸ್ವಲ್ಪ ಸಮಯ ಬೇಕಾಗುತ್ತದೆ. ವೇಗವಾಗಿ ಕೊರೆಯುವುದರಿಂದ ಈ ಸಮಯ ಸಿಗುವುದಿಲ್ಲ.
ತೇವಾಂಶವನ್ನೇ ‘ಡ್ರೈ’ ಎಂದು ತೀರ್ಮಾನಿಸುವುದು: ಯಂತ್ರದ ವಿಪರೀತ ಬಿಸಿಗೆ ಸಣ್ಣಪುಟ್ಟ ತೇವಾಂಶ ಆವಿಯಾಗಿ, ಬೋರ್‌ವೆಲ್ ಡ್ರೈ (Dry Borewell) ಎಂದು ತಪ್ಪಾಗಿ ನಿರ್ಣಯಿಸುವ ಅಪಾಯವಿರುತ್ತದೆ.
ಪರಿಹಾರ: ಕೆಲವೊಮ್ಮೆ ವಿಪರೀತ ವೇಗದ ಬದಲು, ಜಲಮೂಲಗಳಿರುವ ಜಾಗದಲ್ಲಿ ನಿಯಂತ್ರಿತವಾಗಿ ಅಥವಾ ನಿಧಾನವಾಗಿ ಕೊರೆಸುವುದು (Controlled Drilling) ಹೆಚ್ಚು ಸೂಕ್ತ.
ಇದನ್ನೂ ಓದಿ: IMD Monsoon Forecast 2026: ಈ ವರ್ಷ ಕಡಿಮೆ ಮಳೆ; ದೇಶದಲ್ಲಿ ಬರದ ಛಾಯೆ! | ಹವಾಮಾನ ಇಲಾಖೆ ಪರಿಷ್ಕೃತ ಮುನ್ಸೂಚನೆ ಬಿಡುಗಡೆ

ಕೇಸಿಂಗ್ ಪೈಪ್ (Casing Pipe) ತೆಗೆಯಬೇಡಿ!
1000 ಅಡಿಯಲ್ಲಿ ನೀರು ಸಿಗಲಿಲ್ಲ ಎಂದು ತಕ್ಷಣಕ್ಕೆ ಯಂತ್ರವನ್ನು ನಿಲ್ಲಿಸುವುದು ದೊಡ್ಡ ತಪ್ಪಾಗಬಹುದು. ಭೂಗರ್ಭಜಲ (Groundwater) ಭೂಮಿಯೊಳಗೆ ಸಮಾನವಾಗಿ ಹರಡಿರುವುದಿಲ್ಲ.
ಅದು ಕೇವಲ ನಿರ್ದಿಷ್ಟ ಪದರಗಳಲ್ಲಿ (Layers) ಮತ್ತು ಚಿರಕುಗಳಲ್ಲಿ ಮಾತ್ರ ಇರುತ್ತದೆ. 1000 ಅಡಿಗೆ ನೀರು ಸಿಗಲಿಲ್ಲ ಎಂದರೆ, ಮುಂದಿನ 50-100 ಅಡಿ ಒಳಗೆ ಉತ್ತಮ ಜಲಸಂಧಿ ಇರುವ ಸಾಧ್ಯತೆಗಳಿರುತ್ತವೆ.
ಅದೇ ರೀತಿ, ಬೋರ್‌ವೆಲ್ ವಿಫಲವಾಗಿದೆ ಎಂದು ಭಾವಿಸಿ ಹಾಕಿರುವ ಕೇಸಿಂಗ್ ಪೈಪ್ (Casing Pipe) ತೆಗೆದುಹಾಕುವುದು ರೈತರು ಮಾಡುವ ಅತ್ಯಂತ ದೊಡ್ಡ ತಪ್ಪು.
ಮಳೆಗಾಲದಲ್ಲಿ ಅಥವಾ ಸುತ್ತಮುತ್ತಲಿನ ಕೆರೆ ಕಟ್ಟೆಗಳು ತುಂಬಿದಾಗ, ಈ ಬೋರ್‌ವೆಲ್‌ನೊಳಗೆ ನೀರು ಮರುಪೂರಣ (Recharge) ಆಗಬಹುದು.
ಕೆಲವು ತಿಂಗಳ ನಂತರ ಏರ್ ಕಂಪ್ರೆಸರ್ (Air Compressor) ಬಳಸಿ ಗಾಳಿ ಬಿಡಿಸಿದರೆ (ಫ್ಲಶಿಂಗ್) ಮಣ್ಣು, ಕಸಬರಿಗೆಗಳು ಹೊರಬಂದು ನೀರು ಉಕ್ಕುವ ಸಾಧ್ಯತೆಗಳಿರುತ್ತವೆ.
ಇದನ್ನೂ ಓದಿ: LPG Cylinder New Rules: ಎಲ್‌ಪಿಜಿ ಸಿಲಿಂಡರ್ ಹೊಸ ನಿಯಮಗಳು | ಈ ತಪ್ಪು ಮಾಡಿದ್ರೆ ನಿಮ್ಮ ಗ್ಯಾಸ್ ಕನೆಕ್ಷನ್ ಬ್ಲಾಕ್!
ಬೋರ್‌ವೆಲ್ ಕ್ಯಾಮೆರಾ ಪರಿಶೀಲನೆ (Borewell Camera Inspection)
ತಂತ್ರಜ್ಞಾನ ಇಂದು ಸಾಕಷ್ಟು ಮುಂದುವರಿದಿದೆ. ಬೋರ್‌ವೆಲ್ ವಿಫಲವಾದರೆ ನಿರಾಶರಾಗುವ ಬದಲು, ಬೋರ್‌ವೆಲ್ ಒಳಗೆ ಕ್ಯಾಮೆರಾ ಬಿಟ್ಟು ಪರಿಶೀಲನೆ (Camera Inspection) ಮಾಡಿಸುವುದು ಅತ್ಯುತ್ತಮ ವಿಧಾನ.
ಇದರಿಂದ ಬೋರ್‌ವೆಲ್ ಒಳಗಿನ ನೈಜ ಚಿತ್ರಣ, ಕಲ್ಲಿನ ರಚನೆ, ಬಿರುಕುಗಳು (Fractures) ಮತ್ತು ಜಲಹಾದಿಗಳು ಸ್ಪಷ್ಟವಾಗಿ ಕಾಣುತ್ತವೆ. ನೀರು ಎಲ್ಲಿದೆ, ಎಷ್ಟು ಆಳದಲ್ಲಿದೆ ಎಂಬ ಖಚಿತ ಮಾಹಿತಿ ಸಿಗುತ್ತದೆ.
ಕಣ್ಣಿಗೆ ಕಾಣದಿದ್ದರೂ, ಒಳಗೆ ನೀರು ಜಿನುಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ನಂತರ ಸರಿಯಾದ ಪಂಪ್ ಅಳವಡಿಸಿ ನೀರು ಮೇಲೆತ್ತಬಹುದು.
ಇದನ್ನೂ ಓದಿ: Govt Housing Scheme 2026: ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದ ಸಹಾಯಧನ | ಗ್ರಾಮ ಪಂಚಾಯತಿಗಳಿಂದ ಅರ್ಜಿ ಆಹ್ವಾನ
ಬೋರ್‌ವೆಲ್ ರೀಚಾರ್ಜ್ (Borewell Recharge) ವಿಧಾನಗಳು
ನಿಮ್ಮ ಬೋರ್‌ವೆಲ್ ಶಾಶ್ವತವಾಗಿ ಜೀವಂತವಾಗಿರಬೇಕಾದರೆ, ಭೂಮಿಯಿಂದ ನೀರನ್ನು ತೆಗೆಯುವುದರ ಜೊತೆಗೆ ಮರಳಿ ಭೂಮಿಗೆ ನೀರನ್ನು ಸೇರಿಸುವ ಕೆಲಸವೂ ಆಗಬೇಕು.
ರೀಚಾರ್ಜ್ ಪಿಟ್ ನಿರ್ಮಾಣ (Recharge Pit): ಬೋರ್‌ವೆಲ್ ಸುತ್ತಮುತ್ತ ವೈಜ್ಞಾನಿಕವಾಗಿ ಇಂಗುಗುAಡಿಗಳನ್ನು ನಿರ್ಮಿಸಿ ಮಳೆನೀರನ್ನು ಇಂಗಿಸುವುದು.
ಮಳೆನೀರು ಕೊಯ್ಲು (Rainwater Harvesting): ಜಮೀನಿನಲ್ಲಿ ಬೀಳುವ ಪ್ರತಿಯೊಂದು ಹನಿ ಮಳೆನೀರನ್ನು ಬೋರ್‌ವೆಲ್ ಕಡೆಗೆ ಹರಿಯುವಂತೆ ಮಾಡಿ ಫಿಲ್ಟರ್ ಮೂಲಕ ಒಳಬಿಡುವುದು.
ಇದನ್ನೂ ಓದಿ: New BPL Card Income Limit Hike: ಹೊಸ ಬಿಪಿಎಲ್ ಕಾರ್ಡ್ ಅರ್ಜಿದಾರರಿಗೆ ಶುಭಸುದ್ದಿ | ಹೊಸ ರೂಲ್ಸ್ ಜಾರಿಗೆ ಸರ್ಕಾರ ಚಿಂತನೆ
ಬದುಗಳ ನಿರ್ಮಾಣ (Bunding): ಜಮೀನಿನ ಇಳಿಜಾರಿಗೆ ಅಡ್ಡಲಾಗಿ ಮಣ್ಣಿನ ಬದುಗಳನ್ನು ನಿರ್ಮಿಸುವುದು.
ಜಲ ಸಂರಕ್ಷಣೆ ಕ್ರಮಗಳು (Water Conservation Methods): ಕಂದಕಗಳನ್ನು ತೋಡುವುದು, ಕೃಷಿ ಹೊಂಡಗಳನ್ನು ನಿರ್ಮಿಸುವುದು.
ಈ ವಿಧಾನಗಳನ್ನು ಪ್ರಾಮಾಣಿಕವಾಗಿ ಅಳವಡಿಸಿಕೊಂಡರೆ, ಕೇವಲ ಒಂದೆರಡು ಮಳೆಗಾಲದ ನಂತರ ಸಂಪೂರ್ಣ ಒಣಗಿದ್ದ ಬೋರ್‌ವೆಲ್ ಮತ್ತೆ ಜೀವಕಳೆ ಪಡೆದು ನೀರು ಕೊಡಲು ಶುರುಮಾಡುತ್ತದೆ. ಈ ಎಲ್ಲಾ ಕ್ರಮಗಳನ್ನು ಅನುಸರಿಸಿದರೆ ನೂರರಲ್ಲಿ 90% ವಿಫಲ ಬೋರ್‌ವೆಲ್‌ಗಳನ್ನು ಖಂಡಿತವಾಗಿಯೂ ಸಫಲಗೊಳಿಸಬಹುದು.
PM Kisan 23rd Installment: ಪಿಎಂ ಕಿಸಾನ್ 23ನೇ ಕಂತಿನ ಹಣ ಬಿಡುಗಡೆ | ಸರ್ಕಾರದಿಂದ ಹೊಸ ಅಪ್ಡೇಟ್

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.