ಲಿಂಗಾಯತ, ಒಕ್ಕಲಿಗ ಹಾಗೂ ಕುರುಬ ಸಮುದಾಯಗಳಿಗೆ ಅನ್ವಯವಾಗುವ 2025-26ನೇ ಸಾಲಿನ ಸರ್ಕಾರಿ ಸಬ್ಸಿಡಿ ಯೋಜನೆಗಳಿಗೆ (Subsidy Schemes 2025) ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದ ಎಲ್ಲ ಜಾತಿ-ಸಮುದಾಯಗಳ ನಿಗಮಗಳಿಂದ 2025-26ನೇ ಸಾಲಿನ ವಿವಿಧ ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿ ರಾಜ್ಯದ ಪ್ರಮುಖ ಸಮುದಾಯಗಳಾದ ಲಿಂಗಾಯತ, ಒಕ್ಕಲಿಗ ಹಾಗೂ ಕುರುಬ ಸಮುದಾಯಗಳಿಗೆ ಅನ್ವಯವಾಗುವ ಸರ್ಕಾರಿ ಸಬ್ಸಿಡಿ ಯೋಜನೆಗಳ ಕುರಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಗಂಗಾಕಲ್ಯಾಣ (ಜೀವಜಲ), ಸ್ವಾವಲಂಬಿ ಸಾರಥಿ, ಶೈಕ್ಷಣಿಕ ಸಾಲ, ಸ್ವಯಂ ಉದ್ಯೋಗ ಸಾಲ, ವಿದೇಶಿ ವ್ಯಾಸಂಗ ಸಾಲ, ಉಚಿಯ ಹೊಲಿಗೆ ಯಂತ್ರ ಯೋಜನೆಗಳ ವಿವರ, ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವ ಮೂಲಕ ನಿಗಮದ ಸೌಲಭ್ಯಗಳನ್ನು ಪಡೆಯುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
Monsoon Alert- ಮತ್ತೆ ಮುಂಗಾರು ಬಿರುಸು | ರಾಜ್ಯದ ಹಲವೆಡೆಗೆ ಮಳೆ ಎಚ್ಚರಿಕೆ
ಯಾವೆಲ್ಲ ಯೋಜನೆಗಳು ಅನುಷ್ಠಾನ?
- ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ
- ಗಂಗಾಕಲ್ಯಾಣ (ಜೀವಜಲ) ನೀರಾವರಿ ಯೋಜನೆ
- ಅರಿವು – ಶೈಕ್ಷಣಿಕ ಸಾಲ ಯೋಜನೆ
- ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ
- ಸ್ವಾವಲಂಭಿ ಸಾರಥಿ ಯೋಜನೆ
- ಸ್ವಯಂ ಉದ್ಯೋಗ ಸಾಲ ಯೋಜನೆ
- ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆ
- ಉಚಿತ ಹೊಲಿಗೆ ಯಂತ್ರ ವಿತರಣೆ
- ವಿಭೂತಿ ಘಟಕ ಸ್ಥಾಪನೆ
- ಹೋಟೆಲ್ ಉದ್ಯಮ ಸ್ಥಾಪನೆ
1. ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ
- ಕೃಷಿ, ವ್ಯಾಪಾರ, ಕೈಗಾರಿಕೆ, ಸಾರಿಗೆ ಹಾಗೂ ಸೇವಾ ಕ್ಷೇತ್ರದಲ್ಲಿ ಉದ್ಯಮ ಆರಂಭಿಸಲು ಹಣಕಾಸು ನೆರವು.
- ಸಾಲ ಮಿತಿ ಮತ್ತು ಬಡ್ಡಿ: ಶೇ.4ರ ಬಡ್ಡಿದರದಲ್ಲಿ ₹2 ಲಕ್ಷವರೆಗೆ
- ಸಹಾಯಧನ: ₹1 ಲಕ್ಷದವರೆಗೆ – ಶೇ.20 (ಗರಿಷ್ಠ ₹20,000) ಹಾಗೂ ₹2 ಲಕ್ಷದವರೆಗೆ – ಶೇ.15 (ಗರಿಷ್ಠ ₹30,000)
2. ಗಂಗಾಕಲ್ಯಾಣ ನೀರಾವರಿ ಯೋಜನೆ
- ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನಿಗೆ ಕೊಳವೆ ಬಾವಿ ಹಾಗೂ ವಿದ್ಯುತ್ ಸಂಪರ್ಕಕ್ಕೆ ನೆರವು ನೀಡಲಾಗುತ್ತದೆ.
- ಘಟಕ ವೆಚ್ಚ: ₹3.75 ಲಕ್ಷ – ₹4.75 ಲಕ್ಷ (ಜಿಲ್ಲೆಗಳ ಪ್ರಕಾರ ಬದಲಾಗುತ್ತದೆ)
- ವಿದ್ಯುತ್ ಸಂಪರ್ಕ ವೆಚ್ಚ: ₹75,000
- ಸಾಲ ನೆರವು: ₹50,000 (ಶೇ.1 ಬಡ್ಡಿದರ)
3. ಅರಿವು – ಶೈಕ್ಷಣಿಕ ಸಾಲ ಯೋಜನೆ
- CET ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್’ಗಳಿಗಾಗಿ ಸಾಲ.
- ಸಾಲ ಮಿತಿ-ಬಡ್ಡಿದರ: ಶೇ.2ರ ಬಡ್ಡಿದರದಲ್ಲಿ ₹5 ಲಕ್ಷವರೆಗೆ
- ವಾರ್ಷಿಕ ಆದಾಯ ಮಿತಿ: ₹3.50 ಲಕ್ಷ

4. ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ
- ವಿದೇಶಿ ವಿಶ್ವವಿದ್ಯಾಲಯಗಳಲ್ಲಿ Master’s, PhD, Post-Doctoral ಕೋರ್ಸ್’ಗಳಿಗೆ ಅರ್ಹ ಅಭ್ಯರ್ಥಿಗಳಿಗೆ ಬಡ್ಡಿರಹಿತ ಸಾಲ.
- ವಾರ್ಷಿಕ ಸಾಲ ಮಿತಿ: ₹10 ಲಕ್ಷ
- ಗರಿಷ್ಠ ಮಿತಿ: ₹20 ಲಕ್ಷ
- ಆದಾಯ ಮಿತಿ: ₹8 ಲಕ್ಷ
- ಅರ್ಹತೆ: ಶೇ.60ಕ್ಕಿಂತ ಹೆಚ್ಚು ಅಂಕ, ವಿಶ್ವದ ಟಾಪ್ 500 ಯೂನಿವರ್ಸಿಟಿಗಳಲ್ಲಿ ಪ್ರವೇಶ
5. ಸ್ವಾವಲಂಬಿ ಸಾರಥಿ ಯೋಜನೆ
- ನಿರುದ್ಯೋಗಿ ಯುವಕರಿಗೆ ಗೂಡ್ಸ್ ವಾಹ, ಟ್ಯಾಕ್ಸಿಯಂತಹ ನಾಲ್ಕು ಚಕ್ರದ ವಾಹನ ಖರೀದಿಗೆ ಸಹಾಯಧನ.
- ಸಹಾಯಧನ: ಬ್ಯಾಂಕ್ ಸಾಲದ ಶೇ.50 ಅಥವಾ ಗರಿಷ್ಠ ₹3 ಲಕ್ಷ
- ಅರ್ಹತೆ: 21-45 ವರ್ಷ, ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
e-Swathu Abhiyana- ಇ-ಸ್ವತ್ತು ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಅಭಿಯಾನ | ಇನ್ನು ಸ್ವತ್ತು ವಿತರಣೆ ಮತ್ತಷ್ಟು ಸುಲಭ
6. ವಾಣಿಜ್ಯ ಬ್ಯಾಂಕ್ ಆಧಾರಿತ ಸ್ವಯಂ ಉದ್ಯೋಗ ಸಾಲ ಯೋಜನೆ
- ವಾಣಿಜ್ಯ ಬ್ಯಾಂಕ್ ಮೂಲಕ ಉದ್ಯಮ ಆರಂಭಿಸಲು ಸಾಲ ಹಾಗೂ ಸಹಾಯಧ£ ನೀಡಲಾಗುತ್ತದೆÀ.
- ಸಹಾಯಧನ: ಶೇ.20 (ಗರಿಷ್ಠ ₹1 ಲಕ್ಷ)
- ಅರ್ಹತೆ: 18-55 ವರ್ಷ
7. ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆ
- ವಿದ್ಯಾವಂತ ಯುವಕರಿಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಉಚಿತ ತರಬೇತಿ.
- ಅರ್ಹತೆ: 10ನೇ ತರಗತಿ ಅಥವಾ ಹೆಚ್ಚಿನ ವಿದ್ಯಾರ್ಹತೆ, 18-25 ವರ್ಷ
- ಆದಾಯ ಮಿತಿ: ಪ್ರವರ್ಗ-1ಕ್ಕೆ ಆದಾಯ ಮಿತಿ ಇಲ್ಲ. ಇತರರು ₹6 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರಬೇಕು.
8. ಇತರ ಯೋಜನೆಗಳು
ಮೇಲ್ಕಾಣಿಸಿದ ಯೋಜನೆಗಳ ಹೊರತಾಗಿ ಹಿಂದುಳಿದ ವರ್ಗದ ಮಹಿಳೆಯರಿಗೆ ‘ಉಚಿತ ಹೊಲಿಗೆ ಯಂತ್ರ’, ಲಿಂಗಾಯದ ಸಮುದಾಯ ಫಲಾನುಭವಿಗಳಿಗೆ ‘ವಿಭೂತಿ ಘಟಕ ಸ್ಥಾಪನೆ’ಗೆ 4 ಲಕ್ಷ ರೂ. ಹಾಗೂ ‘ಹೋಟೆಲ್ ಉದ್ಯಮ ಸ್ಥಾಪನೆ’ಗೆ 5 ಲಕ್ಷ ರೂ. ಸಾಲ ಮತ್ತು ಸಬ್ಸಿಡಿ ಲಭ್ಯವಿದೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ಹಾಗೂ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದಿಂದ ಮೇಲ್ಕಾಣಿಸಿದ ಸಬ್ಸಿಡಿ ಯೋಜನೆಗಳ ಪ್ರಯೋಜನ ಪಡೆಯಲು ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. ನಿಗಮಗಳ ಅನ್ವಯ ಜಾತಿವಾರು ಅರ್ಹರ ವಿವರ ಈ ಕೆಳಗಿನಂತಿದೆ:
- ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ವ್ಯಾಪ್ತಿಗೆ ಒಳಪಡುವ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ರೀತಿಯ ಉಪ ಜಾತಿಯ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.
- ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ವ್ಯಾಪ್ತಿಯ ಹಿಂದುಳಿದ ವರ್ಗಗಳ ಪ್ರವರ್ಗ-3ಎ ನಲ್ಲಿ ಬರುವ ಒಕ್ಕಲಿಗ ಸಮುದಾಯಗಳಿಗೆ ಸೇರಿದ ಕ್ರಮ ಸಂಖ್ಯೆ 1ರ (ಎ) ಯಿಂದ (ಟಿ) ವರೆಗೆ ನಮೂದಾಗಿರುವ ಎಲ್ಲ ರೀತಿಯ ಉಪ ಜಾತಿಯ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.
- ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವ್ಯಾಪ್ತಿಗೆ ಒಳಪಡುವ ಹಿಂದುಳಿದ ವರ್ಗಗದ ಕುರುಬರು ಸೇರಿದಂತೆ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದ ಎಲ್ಲಾ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.
ಸೌಲಭ್ಯ ಪಡೆಯಲು ಮಾನದಂಡಗಳೇನು?
- ಈ ಮೇಲ್ಕಂಡ ಎಲ್ಲಾ ಯೋಜನೆಗಳಡಿಯಲ್ಲಿ ಸೌಲಭ್ಯ ಪಡೆಯಲು ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು.
- ಆಧಾರ್ ಕಾರ್ಡ್’ನಲ್ಲಿರುವಂತೆ ಆರ್ಜಿದಾರರ ಹೆಸರು, (ಶ್ರೀ ಶ್ರೀಮತಿ ಕುಮಾರಿ ಮುಂತಾದ ಮಾಹಿತಿಗಳೆಲ್ಲವು) ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದಲ್ಲಿಯೂ ಇದ್ದು ಹೊಂದಾಣಿಕೆಯಾಗಬೇಕು.
- ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಅರ್ಜಿ ಸಲ್ಲಿಕೆ ಹೇಗೆ?
ಮೇಲ್ಕಂಡ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಹಿಂದುಳಿದ ವರ್ಗಗಳ ಅರ್ಜಿದಾರರು ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ sevasindhu.karnataka.gov.in ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಜನ ಸೇವಾ ಕೇಂದ್ರಗಳಲ್ಲಿ ಆನ್ಲೈನ್ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕಗಳು
- ಲಿಂಗಾಯತರು: 31-07-2025
- ಒಕ್ಕಲಿಗರು: 02-07-2025
- ಹಿಂದುಳಿದ ವರ್ಗದವರು: 30-06-2023
ಹೆಚ್ಚಿನ ಮಾಹಿತಿಗೆ ಸಹಾಯವಾಣಿಗಳು
- ಲಿಂಗಾಯತರು: 8022865522, 9900012351
- ಒಕ್ಕಲಿಗರು: 080-29904350, 29904268
- ಹಿಂದುಳಿದ ವರ್ಗದವರು: 8050770004, 8050770005

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.