Karnataka Swavalambi Sarathi Scheme- ಸ್ವಾವಲಂಬಿ ಸಾರಥಿ ಯೋಜನೆ: ಕಾರು, ಗೂಡ್ಸ್ ವಾಹನ ಖರೀದಿಗೆ ₹3 ಲಕ್ಷ ಸಬ್ಸಿಡಿಗೆ ಅರ್ಜಿ ಆಹ್ವಾನ | ಜೂನ್ 30ರೊಳಗೆ ಅರ್ಜಿ ಸಲ್ಲಿಸಿ…

ಸ್ವಾವಲಂಬಿ ಸಾರಥಿ ಯೋಜನೆಯಡಿ (Karnataka Swavalambi Sarathi Scheme) ಕಾರು, ಆಟೋ ರಿಕ್ಷಾ, ಗೂಡ್ಸ್ ವಾಹನ ಖರೀದಿಗೆ ಸಹಾಯಧನ (ಸಬ್ಸಿಡಿ) ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ‘ಸ್ವಾವಲಂಬಿ ಸಾರಥಿ’ ಯೋಜನೆಯಡಿ ಕಾರು, ಆಟೋ ರಿಕ್ಷಾ, ಗೂಡ್ಸ್ ವಾಹನ ಖರೀದಿಗೆ ಸಹಾಯಧನ (Subsidy) ನೀಡಲು 2025-26ನೇ ಸಾಲಿಗೆ ಅರ್ಜಿ ಆಹ್ವಾನಿಸಿದೆ.
ಈ ಯೋಜನೆಯಡಿಯಲ್ಲಿ ಗರಿಷ್ಠ ₹3 ಲಕ್ಷ ರೂಪಾಯಿ ಅಥವಾ ವಾಹನದ ಮೌಲ್ಯದ ಶೇ.50ರಷ್ಟು ವರೆಗೆ ಸರ್ಕಾರದಿಂದ ಹಣಕಾಸು ಸಹಾಯ ಒದಗಿಸಲಾಗುತ್ತದೆ. ಅರ್ಹ ನಿರುದ್ಯೋಗಿ ಯುವಕರು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವ ಮೂಲಕ ಇದರ ಪ್ರಯೋಜನ ಪಡೆಯಬಹುದಾಗಿದೆ.
‘ಸ್ವಾವಲಂಬಿ ಸಾರಥಿ’ ಯೋಜನೆಯ ಪರಿಚಯ
‘ಸ್ವಾವಲಂಬಿ ಸಾರಥಿ’ ಎಂಬುದು 2023-24ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಘೋಷಿತವಾದ ಮಹತ್ವಾಕಾಂಕ್ಷೆಯ ಯೋಜನೆ.
ವಿವಿಧ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗಿ ಯುವಕರಿಗೆ ವಾಹನ ಖರೀದಿಯಲ್ಲಿ ಸಹಾಯ ಮಾಡಿ ಸ್ವಯಂ ಉದ್ಯೋಗಕ್ಕಾಗಿ ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ.
ಯೋಜನೆಯ ಅಡಿಯಲ್ಲಿ ದೊರೆಯುವ ಸಬ್ಸಿಡಿ
- ಟ್ಯಾಕ್ಸಿ, ಟಾಟಾ ಎಸಿ, ಲಘು ಗೂಡ್ಸ್ ವಾಹನ ಖರೀದಿಗೆ ರಾಷ್ಟ್ರೀಕೃತ ಅಥವಾ ಗ್ರಾಮೀಣ ಬ್ಯಾಂಕ್‌ಗಳಿAದ ಸಾಲ ಮಂಜೂರು
- ವಾಹನ ಮೌಲ್ಯದ ಶೇ.50% ಅಥವಾ ಗರಿಷ್ಠ ₹3 ಲಕ್ಷ ವರೆಗೆ ನಿಗಮಗಳಿಂದ ಸಬ್ಸಿಡಿ.
- ಉಳಿದ ಮೊತ್ತವನ್ನು ಬಡ್ಡಿಯೊಂದಿಗೆ ಅರ್ಹತಾ ಬ್ಯಾಂಕ್‌ನಿಂದ ಕಂತುಗಳ ಮೂಲಕ ಮರುಪಾವತಿಸಬೇಕು.
- ಖರೀದಿಸಿದ ವಾಹನವನ್ನು ಸ್ವಯಂ ಚಾಲನೆಯ ಉದ್ದೇಶಕ್ಕೆ ಬಳಸುವುದು ಕಡ್ಡಾಯ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಈ ಕೆಳಗಿನ ನಿಗಮಗಳ ವ್ಯಾಪ್ತಿಗೆ ಬರುವ ಸಮುದಾಯದ 21 ರಿಂದ 45 ವರ್ಷ ವಯಸ್ಸಿನ ನಿರುದ್ಯೋಗಿ ಯುವಕರು ಅರ್ಜಿ ಸಲ್ಲಿಸಬಹುದು:
- ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
- ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
- ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ
- ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮ
- ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ
- ನಿಜಗುಣ ಶರಣ ಅಂಬಿಗರ ಚೌಡಯ್ಯ ನಿಗಮ
- ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ
- ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
- ಕರ್ನಾಟಕ ಮರಾಠ ಸಮುದಾಯಗಳ ನಿಗಮ
- ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ
ಅರ್ಹತಾ ಮಾನದಂಡಗಳು
- ವಯಸ್ಸು: 21 ರಿಂದ 45 ವರ್ಷದೊಳಗೆ
- ಗ್ರಾಮಾಂತರ ಪ್ರದೇಶ ಆದಾಯ: ವಾರ್ಷಿಕ ಆದಾಯ ₹98,000 ಒಳಗೆ
- ನಗರ ಪ್ರದೇಶ ಆದಾಯ: ವಾರ್ಷಿಕ ಆದಾಯ ₹1,20,000 ಒಳಗೆ
- ಸಾರಿಗೆ ಇಲಾಖೆಯಿಂದ ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು
- ಅರ್ಜಿದಾರ ಕುಟುಂಬದ ಸದಸ್ಯರು ಈ ಹಿಂದೆ ಯಾವುದೇ ಸರ್ಕಾರಿ/ನಿಗಮದ ಇತರ ಯೋಜನೆಗಳಲ್ಲಿ ಸಾಲ/ಸಹಾಯಧನ ಪಡೆದಿರಬಾರದು.
Ration Card Raddu- ರೇಷನ್ ಕಾರ್ಡ್ ರದ್ದು | ಸಿಎಂ ಖಡಕ್ ಸೂಚನೆ | ನಿಮ್ಮ ಕಾರ್ಡ್ ರದ್ದಾಗಿದೆಯಾ? ಈಗಲೇ ಚೆಕ್ ಮಾಡಿ
ಅರ್ಜಿಗೆ ಅಗತ್ಯವಿರುವ ದಾಖಲೆಗಳು
- ಜಾತಿ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಆಧಾರ್ ಕಾರ್ಡ್ ಪ್ರತಿಯು (ನಿವಾಸ ಪುರಾವೆ)
- ಚಾಲನಾ ಪರವಾನಗಿ ಪ್ರತಿಯು
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ವಾಹನದ ಅಂದಾಜು ಬೆಲೆಪಟ್ಟಿ
- ಸ್ವಯಂ ಘೋಷಣಾ ಪತ್ರ
ಅರ್ಜಿ ಸಲ್ಲಿಕೆ ವಿಧಾನ ಹೇಗೆ?
ಅರ್ಹ ಯುವಕರು ತಮ್ಮ ಸಂಬಂಧಿತ ಸಮುದಾಯದ ಅಭಿವೃದ್ಧಿ ನಿಗಮದ ಮೂಲಕ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳ ಮೂಲಕ ಸಹ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ: ಜೂನ್ 30, 2025
ಹೆಚ್ಚಿನ ಮಾಹಿತಿ ಅಥವಾ ಸಹಾಯಕ್ಕಾಗಿ ಸಂಬಂಧಿತ ನಿಗಮದ ಜಿಲ್ಲಾ ಕಚೇರಿಯನ್ನು ಸಂಪರ್ಕಿಸಿ ಅಥವಾ ಸಹಾಯವಾಣಿ ಸಂಖ್ಯೆ: 080-22374832, 8050770004, 8050770005
ಅರ್ಜಿ ಲಿಂಕ್: Apply Now



