ಜೂನ್ 6ರಿಂದ ಎಸ್ಎಸ್ಎಲ್ಸಿ ಪರೀಕ್ಷೆ 2ರ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಿದೆ. ಶೀಘ್ರದಲ್ಲೇ ಫಲಿತಾಂಶ (karnataka SSLC Exam-2 Results) ಪ್ರಕಟವಾಗಲಿದ್ದು; ಈ ಕುರಿತ ಪ್ರಮುಖ ಮಾಹಿತಿ ಇಲ್ಲಿದೆ…
ಕರ್ನಾಟಕ SSLC ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಥವಾ ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳಿಗಾಗಿ ನಡೆಸಲ್ಪಡುವ ‘SSLC ಪರೀಕ್ಷೆ-2 (ಪೂರಕ ಪರೀಕ್ಷೆ)’ ಫಲಿತಾಂಶ ಶೀಘ್ರದಲ್ಲೇ ಪ್ರಕಟವಾಗುವ ಸಾಧ್ಯತೆ ಇದೆ. ಈ ಪರೀಕ್ಷೆ ಮೇ ತಿಂಗಳ ಕೊನೆ ವಾರದಲ್ಲಿ ನಡೆದಿದ್ದು, ಇದೀಗ ಮೌಲ್ಯಮಾಪನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
ಗಮನಾರ್ಹವೆಂದರೆ, ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ 1ರ ಫಲಿತಾಂಶವನ್ನು ಕಳೆದ ಏಪ್ರಿಲ್ 30, 2025 ರಂದು ಘೋಷಿಸಲಾಯಿತು. ಒಟ್ಟು 8,42,173 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಅದರಲ್ಲಿ 5,24,984 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
e-Swathu Abhiyana- ಇ-ಸ್ವತ್ತು ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಅಭಿಯಾನ | ಇನ್ನು ಸ್ವತ್ತು ವಿತರಣೆ ಮತ್ತಷ್ಟು ಸುಲಭ
ಪರೀಕ್ಷೆ-2 ರಿಸಲ್ಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು
ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ 1ನಲ್ಲಿ ಅಂಕಗಳು ಕಡಿಮೆ ಇದ್ದವರು, ಒಂದು ಅಥವಾ ಎರಡು ವಿಷಯಗಳಲ್ಲಿ ಫೇಲ್ ಆದವರು ಮತ್ತು ಹೆಚ್ಚಿನ ಅಂಕಗಳೊಂದಿಗೆ ಉತ್ತಮ ಪ್ರಮಾಣಪತ್ರ ಪಡೆಯುವ ಇಚ್ಛೆಯುಳ್ಳವರು ಈ ಪರೀಕ್ಷೆ ಬರೆದಿದ್ದಾರೆ.
ಈ ಬಾರಿಯ SSಐಅ ಪರೀಕ್ಷೆ-2 (2025) ಮೇ 26ರಿಂದ 31ರ ವರೆಗೆ ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿದ್ದು, ಸುಮಾರು 3.16 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದಾರೆ. ಇದೀಗ ಇಷ್ಟೂ ವಿದ್ಯಾರ್ಥಿಗಳು ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಫಲಿತಾಂಶಕ್ಕೆ ಮುನ್ನ ಪೂರಕವಾಗಿ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿದೆ. ಅದರ ಲಿಂಕ್ ಲೇಖನದ ಕೊನೆಯಲ್ಲಿದೆ ಗಮನಿಸಿ.

ಪರೀಕ್ಷೆ-2 ಫಲಿತಾಂಶ ಯಾವಾಗ ಪ್ರಕಟವಾಗುತ್ತದೆ?
ಕಳೆದ ಜೂನ್ 6ರಿಂದ SSLC ಪೂರಕ ಪರೀಕ್ಷೆ-2 2025 ಮೌಲ್ಯಮಾಪನ ಕಾರ್ಯ ಆರಂಭವಾಗಿದೆ. ಬಹುಶಃ ಜೂನ್ ತಿಂಗಳ ಮಧ್ಯಭಾಗದಿಂದ ಕೊನೆ ವಾರದೊಳಗೆ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ. ಫಲಿತಾಂಶ ಪ್ರಕಟವಾದ ತಕ್ಷಣ ವಿದ್ಯಾರ್ಥಿಗಳು ತಮ್ಮ Registration Number ಬಳಸಿ ಅಧಿಕೃತ ವೆಬ್ಸೈಟ್ಗಳಲ್ಲಿ ಫಲಿತಾಂಶ ಪರಿಶೀಲಿಸಬಹುದು.
ಫಲಿತಾಂಶ ಪರೀಕ್ಷಿಸುವ ಅಧಿಕೃತ ವೆಬ್ಸೈಟ್:
RBI Repo Rate Cut- ಇನ್ಮುಂದೆ ಕಡಿಮೆ ಬಡ್ಡಿಗೆ ಸಾಲ | ಬ್ಯಾಂಕಿನ ಎಲ್ಲಾ ರೀತಿಯ ಸಾಲಗಳಿಗೂ ಕಡಿಮೆ ಬಡ್ಡಿದರ ನಿಗದಿ…
ಫಲಿತಾಂಶ ಡೌನ್ಲೋಡ್ ಮಾಡುವ ವಿಧಾನ
- ಅಧಿಕೃತ ವೆಬ್ಸೈಟ್ಗೆ ತೆರಳಿ karresults.nic.in
- SSLC EXAM-2 RESULT 2025 ಲಿಂಕ್ ಕ್ಲಿಕ್ ಮಾಡಿ
- ನಿಮ್ಮ Registration Number ಮತ್ತು ಇತರ ವಿವರಗಳನ್ನು ನಮೂದಿಸಿ
- Submit ಕ್ಲಿಕ್ ಮಾಡಿದ ಬಳಿಕ ಫಲಿತಾಂಶ ಪರದೆಯ ಮೇಲೆ ತೋರಿಸುತ್ತದೆ
- ನಿಮ್ಮ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿ, ಪ್ರಿಂಟ್ಔಟ್ ತೆಗೆದು ಭವಿಷ್ಯದ ಬಳಕೆಗಾಗಿ ಇರಿಸಿ
SSLC ಪೂರಕ ಪರೀಕ್ಷೆ-2 ಫಲಿತಾಂಶ 2025 ಅನ್ನು ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಜೂನ್ ತಿಂಗಳಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ. 3.16 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸಬಹುದಾದ ಈ ಫಲಿತಾಂಶ ಬಹುಮುಖ್ಯವಾಗಿದೆ. ಅಧಿಕೃತ ವೆಬ್ಸೈಟ್ನಲ್ಲಿ ಫಲಿತಾಂಶ ಲಭ್ಯವಿರುವ ತಕ್ಷಣ ನೀವು ಮೇಲ್ಕಂಡ ಹಂತಗಳನ್ನು ಅನುಸರಿಸಿ ತಪಾಸಣೆ ಮಾಡಬಹುದು…
2025ರ ಎಸ್ಎಸ್ಎಲ್ಸಿ ಪರೀಕ್ಷೆ 2ರ ಕೀ ಉತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ