ಜೂನ್ 9ರಿಂದ ಕರ್ನಾಟಕದಲ್ಲಿ ಮುಂಗಾರು ಮಳೆ ಬಿರುಸು (Monsoon Alert) ಪಡೆಯಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಮೇ ತಿಂಗಳ ಕೊನೆಯಲ್ಲಿಯೇ ಕರ್ನಾಟಕಕ್ಕೆ ಪ್ರವೇಶಿಸಿದ್ದ ನೈಋತ್ಯ ಮುಂಗಾರು ಮಾರುತಗಳು ಕಳೆದ ಒಂದು ವಾರದಿಂದ ಹಠಾತ್ ದುರ್ಬಲಗೊಂಡು ರೈತರಲ್ಲಿ ಆತಂಕ ಮೂಡಿಸಿದ್ದವು. ಆದರೆ, ಇದೀಗ ಮತ್ತೆ ಮುಂಗಾರು ಬಲಗೊಳ್ಳುವ ಸೂಚನೆಗಳು ದೊರೆಯುತ್ತಿವೆ.
ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿರುವ ಮುನ್ಸೂಚನೆ ಪ್ರಕಾರ, ನಾಳೆ ಜೂನ್ 9 ರಿಂದ ನೈಋತ್ಯ ಮುಂಗಾರು ಮಾರುತಗಳು ಮತ್ತೆ ಬಲಗೊಂಡು, ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.
e-Swathu Abhiyana- ಇ-ಸ್ವತ್ತು ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಅಭಿಯಾನ | ಇನ್ನು ಸ್ವತ್ತು ವಿತರಣೆ ಮತ್ತಷ್ಟು ಸುಲಭ
ಅರಬ್ಬಿ ಸಮುದ್ರದಲ್ಲಿ ಪೂರಕ ವಾತಾವರಣ ಸೃಷ್ಟಿ
ಹವಾಮಾನ ಇಲಾಖೆ ಬೆಂಗಳೂರು ವಿಭಾಗದ ನಿರ್ದೇಶಕ ಡಾ. ಸಿ.ಎಸ್. ಪಾಟೀಲ್ ಅವರು ನೀಡಿದ ಮಾಹಿತಿಯಂತೆ, ಬಂಗಾಳ ಉಪಸಾಗರ ಹಾಗೂ ಅರಬ್ಬಿ ಸಮುದ್ರದಲ್ಲಿ ದಪ್ಪ ಮೋಡಗಳು ಹರಡಿಕೊಳ್ಳುತ್ತಿದ್ದು, ಮಳೆಯು ಬಲಗೊಳ್ಳಲು ಪೂರಕ ವಾತಾವರಣ ರೂಪುಗೊಳ್ಳುತ್ತಿದೆ.
ಈ ಹಿನ್ನೆಲೆಯಲ್ಲಿ ಮುಂಗಾರು ಚಟುವಟಿಕೆ ಜೂನ್ 9 ರಿಂದ ರಾಜ್ಯದ ಹಲವು ಕಡೆಗೆ ತೀವ್ರವಾಗಲಿದೆ. ಮುಂದಿನ ಕೆಲವೇ ದಿನಗಳಲ್ಲಿ ಜೂನ್ 12ರಿಂದ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಡಾ. ಸಿ.ಎಸ್. ಪಾಟೀಲ್ ಅವರು ಹೇಳಿದ್ದಾರೆ.

ಯಾವೆಲ್ಲ ಜಿಲ್ಲೆಗಳಿಗೆ ಮಳೆ ಎಚ್ಚರಿಕೆ?
ಭಾರತೀಯ ಹವಾಮಾನ ಇಲಾಖೆಥಿ ಮುನ್ಸೂಚನೆಯ ಪ್ರಕಾರ ಜೂನ್ 9ರಿಂದ ರಾಜ್ಯದ ಬಹುಭಾಗಗಳಲ್ಲಿ ಮಳೆ ಆರಂಭವಾಗಲಿದೆ. ಜೂನ್ 12ರಿಂದ 14ರ ವರೆಗೆ ಈ ಕೆಳಗಿನ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ:
- ಉತ್ತರ ಕರ್ನಾಟಕ: ಬಾಗಲಕೋಟೆ, ಬೆಳಗಾವಿ, ಧಾರವಾಡ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಗದಗ, ಬಳ್ಳಾರಿ, ವಿಜಯನಗರ.
- ಮಧ್ಯ ಕರ್ನಾಟಕ: ಚಿತ್ರದುರ್ಗ, ದಾವಣಗೆರೆ
- ಕರಾವಳಿ ಭಾಗ: ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ.
- ಮಲೆನಾಡು: ಶಿವಮೊಗ್ಗ, ಚಿಕ್ಕಮಗಳೂರು
RBI Repo Rate Cut- ಇನ್ಮುಂದೆ ಕಡಿಮೆ ಬಡ್ಡಿಗೆ ಸಾಲ | ಬ್ಯಾಂಕಿನ ಎಲ್ಲಾ ರೀತಿಯ ಸಾಲಗಳಿಗೂ ಕಡಿಮೆ ಬಡ್ಡಿದರ ನಿಗದಿ…
ಕರಾವಳಿ ಹಾಗೂ ಬೆಂಗಳೂರು ಭಾಗದಲ್ಲಿ ಹೇಗೆ?
ಕರಾವಳಿ ಭಾಗದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜೂನ್ 8ರಿಂದ 12ರ ವರೆಗೆ ಸಾಮಾನ್ಯವಾಗಿ ಒಣಹವೆ ಕಾಣಿಸಿಕೊಳ್ಳಬಹುದು. ಆದರೆ, ಜೂನ್ 13ರಿಂದ ಮಳೆ ಆರಂಭವಾಗುವ ನಿರೀಕ್ಷೆ ಇದೆ.
ಇದೇ ರೀತಿ ದಕ್ಷಿಣ ಕರ್ನಾಟಕದ ಭಾಗಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿಯೂ ಮುಂದಿನ ನಾಲ್ಕು ದಿನ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ.
ಬಿತ್ತನೆ ಕಾರ್ಯಗಳು ಚುರುಕು
ಬಿತ್ತನೆಗಾಗಿ ಬೀಜ, ಗೊಬ್ಬರ ಇತ್ಯಾದಿ ತಯಾರಿ ಮಾಡಿಕೊಂಡು ಕಾದು ಕೂತಿರುವ ರೈತಾಪಿ ವರ್ಗ ಮಳೆಯ ನಿರೀಕ್ಷೆಯಲ್ಲಿದೆ. ಕೃಷಿ ಇಲಾಖೆ ಕೂಡ ರೈತರಿಗೆ ಪೂರಕವಾದ ಸಲಹೆ-ಸೂಚನೆಗಳನ್ನು ನೀಡಿದ್ದು; ಇದೀಗ ಮುಂಗಾರು ಮಳೆ ಶುರುವಾದರೆ ಬಿತ್ತನೆ ಕಾರ್ಯಗಳು ಚುರುಕು ಪಡೆಯಲಿವೆ.
ಮುಂಗಾರು ತನ್ನ ಪ್ರಭಾವವನ್ನು ಮತ್ತೆ ತೋರಿಸಲು ಸಜ್ಜಾಗಿದ್ದು, ಈ ಬಾರಿ ಅದು ರಾಜ್ಯದ ಬಹುತೇಕ ಭಾಗಗಳನ್ನೂ ಒಳಗೊಂಡAತೆ ಬಿರುಗಾಳಿಯ ಸಹಿತ ಭಾರೀ ಮಳೆಯ ರೂಪದಲ್ಲಿ ಕಾಣಿಸಿಕೊಳ್ಳಲಿದೆ. ಹವಾಮಾನ ಇಲಾಖೆಯ ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಜನರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಸೂಕ್ತ.