Mini Tractor Subsidy Karnataka: ತೋಟಗಾರಿಕೆ ಇಲಾಖೆ ವತಿಯಿಂದ 20 ಹೆಚ್.ಪಿ ಒಳಗಿನ ಮಿನಿ ಟ್ರ‍್ಯಾಕ್ಟರ್ ಖರೀದಿ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ…
ರೈತರಿಗೆ ಆರ್ಥಿಕ ಹೊರೆಯಾಗದಂತೆ ಆಧುನಿಕ ತಂತ್ರಜ್ಞಾನ ಮತ್ತು ಯಾಂತ್ರೀಕರಣವನ್ನು ಅಳವಡಿಸಿಕೊಳ್ಳಲು ತೋಟಗಾರಿಕೆ ಇಲಾಖೆಯು (Horticulture Department) ರಾಜ್ಯಾದ್ಯಂತ ವಿವಿಧ ಯೋಜನೆಗಳಡಿ ಭರ್ಜರಿ ಸಹಾಯಧನ (Agriculture Subsidy) ನೀಡಲು ಅರ್ಜಿ ಆಹ್ವಾನಿಸಿದೆ.
ವಿಶೇಷವಾಗಿ ರೈತರಿಗೆ ಅನುಕೂಲವಾಗುವಂತೆ 20 ಹೆಚ್.ಪಿ ಒಳಗಿನ ಮಿನಿ ಟ್ರ‍್ಯಾಕ್ಟರ್ ಖರೀದಿ, ಹನಿ ನೀರಾವರಿ, ಕೃಷಿ ಹೊಂಡ, ಜೇನು ಕೃಷಿ ಸೇರಿದಂತೆ ಹತ್ತು ಹಲವು ಯೋಜನೆಗಳಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳಡಿ ಪ್ರೋತ್ಸಾಹಧನ ಲಭ್ಯವಿದ್ದು, ಇದರ ಸಂಪೂರ್ಣ ವಿವರ ಇಲ್ಲಿದೆ.
ಯಂತ್ರಗಳ ಬಳಕೆಗೆ ಇಲಾಖೆಯ ಸಾಥ್
ಮಿನಿ ಟ್ರ‍್ಯಾಕ್ಟರ್ ಸಬ್ಸಿಡಿ (Mini Tractor Subsidy): ತೋಟಗಾರಿಕೆ ಬೆಳೆಗಳಲ್ಲಿ ಕಳೆ ಕೀಳುವುದು, ಅಂತರ ಬೇಸಾಯ ಹಾಗೂ ಉಳುಮೆ ಮಾಡಲು ಅನುಕೂಲವಾಗುವಂತೆ 20 ಹೆಚ್.ಪಿ (20 HP) ಸಾಮರ್ಥ್ಯದ ಒಳಗಿನ ಟ್ರ‍್ಯಾಕ್ಟರ್ ಖರೀದಿಗೆ ಸಹಾಯಧನ ನೀಡಲಾಗುತ್ತಿದೆ.
ಕೃಷಿ ಉಪಕರಣಗಳು: ಕೃಷಿ ಯಾಂತ್ರೀಕರಣ ಉಪ ಅಭಿಯಾನದಡಿ ತೋಟಗಾರಿಕೆ ಇಲಾಖೆಯಿಂದ ಅನುಮೋದಿತಗೊಂಡ ಸಂಸ್ಥೆಗಳಿಂದ ಖರೀದಿಸುವ ವಿವಿಧ ಕೃಷಿ ಯಂತ್ರೋಪಕರಣಗಳಿಗೂ (Agricultural Implements) ಸಬ್ಸಿಡಿ ಪಡೆಯಲು ಅವಕಾಶವಿದೆ.
ಸೌರಶಕ್ತಿ ಪಂಪ್‌ಸೆಟ್ (Solar Pump Set): ವಿದ್ಯುತ್ ಕಡಿತದ ಸಮಸ್ಯೆಯಿಂದ ಬೆಳೆ ಒಣಗುವುದನ್ನು ತಪ್ಪಿಸಲು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳಲು ರೈತರಿಗೆ ಸಹಾಯಧನ ಒದಗಿಸಲಾಗುತ್ತಿದೆ.
ನೀರಾವರಿ ಸೌಲಭ್ಯಕ್ಕೆ ಆರ್ಥಿಕ ನೆರವು
ಹನಿ ನೀರಾವರಿಗೆ 90% ಸಬ್ಸಿಡಿ (Drip Irrigation Subsidy): ಕೇಂದ್ರ ಪುರಸ್ಕೃತ ‘ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ’ (ಪ್ರತಿ ಹನಿಗೆ ಅಧಿಕ ಬೆಳೆ) ಅಡಿಯಲ್ಲಿ ಎಲ್ಲಾ ವರ್ಗದ ರೈತರಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಬರೋಬ್ಬರಿ ಶೇ. 90 ರಷ್ಟು ಬೃಹತ್ ಸಹಾಯಧನ ಲಭ್ಯವಿದೆ.
ಕೃಷಿ ಹೊಂಡ (Farm Pond): ಮಳೆಗಾಲದಲ್ಲಿ ನೀರು ಸಂಗ್ರಹಿಸಿ, ಬೇಸಿಗೆಯಲ್ಲಿ ಬೆಳೆ ಉಳಿಸಿಕೊಳ್ಳಲು 2250 ಘನ ಮೀಟರ್ ಸಾಮರ್ಥ್ಯದ ವೈಯಕ್ತಿಕ ಕೃಷಿ ಹೊಂಡ ನಿರ್ಮಾಣಕ್ಕೂ ಇಲಾಖೆ ನೆರವು ನೀಡುತ್ತಿದೆ.
ತೋಟಗಾರಿಕೆ ಬೆಳೆಗಳು ಮತ್ತು ಉಪಕಸುಬು ಪ್ರೋತ್ಸಾಹ
ಹಣ್ಣು ಮತ್ತು ತರಕಾರಿ ಬೆಳೆಗಳು (Horticulture Farming): ರಾಷ್ಟ್ರೀಯ ತೋಟಗಾರಿಕೆ ಮಿಷನ್ (NHM) ಅಡಿಯಲ್ಲಿ ಬಾಳೆ, ದ್ರಾಕ್ಷಿ, ದಾಳಿಂಬೆ, ಮಾವು, ಡ್ರ‍್ಯಾಗನ್ ಫ್ರೂಟ್, ಪೇರಲ ಹಾಗೂ ಹೈಬ್ರಿಡ್ ತರಕಾರಿಗಳನ್ನು ಬೆಳೆಯಲು ಶೇ. 40 ರಷ್ಟು ಸಹಾಯಧನವಿದೆ. ರೈತರು ಕನಿಷ್ಠ 0.5 ಎಕರೆಯಿಂದ ಗರಿಷ್ಠ 2 ಹೆಕ್ಟೇರ್‌ವರೆಗೆ ಈ ಸೌಲಭ್ಯ ಪಡೆಯಬಹುದು.
ಜೇನು ಕೃಷಿ (Apiculture/Beekeeping): ಕೃಷಿಯ ಜೊತೆಗೆ ಉಪಕಸುಬಾಗಿ ಜೇನು ಕೃಷಿ ಮಾಡಲು ಜೇನು ಪೆಟ್ಟಿಗೆ ಹಾಗೂ ಜೇನು ಕುಟುಂಬ ಖರೀದಿಗೆ ಶೇ. 40 ರಷ್ಟು ಸಬ್ಸಿಡಿ ನೀಡಲಾಗುತ್ತಿದ್ದು, ಎಲ್ಲಾ ವರ್ಗದ ರೈತರೂ ಇದರ ಲಾಭ ಪಡೆಯಬಹುದು.
ವಾಣಿಜ್ಯ ಬೆಳೆ: ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಡಿ ತಾಳೆ ಬೆಳೆ (Oil Palm cultivation) ಪ್ರದೇಶ ವಿಸ್ತರಣೆ, ನಿರ್ವಹಣೆ ಮತ್ತು ಅಂತರ ಬೆಳೆ ಕಾರ್ಯಕ್ರಮಗಳಿಗೂ ಸಹಾಯಧನ ಲಭ್ಯವಿದೆ.
ಇದನ್ನೂ ಓದಿ: Hani Neeravari Sahayadhana: ರೈತರಿಗೆ ಬಂಫರ್ ಕೊಡುಗೆ: ಹನಿ ನೀರಾವರಿ ಅಳವಡಿಕೆಗೆ ಸರ್ಕಾರಿ ಸಹಾಯಧನ | ಈಗಲೇ ಅರ್ಜಿ ಹಾಕಿ…
ಸಂರಕ್ಷಿತ ಬೇಸಾಯ ಮತ್ತು ಮಣ್ಣಿನ ಆರೋಗ್ಯ
ಹವಾಮಾನ ಆಧಾರಿತ ಕೃಷಿ (Protected Cultivation): ಅತಿಯಾದ ಮಳೆ ಅಥವಾ ಬಿಸಿಲಿನಿಂದ ಬೆಳೆ ರಕ್ಷಿಸಲು ಹಸಿರು ಮನೆ (Greenhouse), ಪಾಲಿಮನೆ (Polyhouse), ಪ್ಲಾಸ್ಟಿಕ್ ಹೊದಿಕೆ (Plastic Mulching), ಮತ್ತು ಪಕ್ಷಿ/ಕೀಟ ನಿರೋಧಕ ಬಲೆ ಅಳವಡಿಸಿಕೊಳ್ಳಲು ಶೇ. 50 ರಷ್ಟು ಸಹಾಯಧನ ನಿಗದಿಪಡಿಸಲಾಗಿದೆ.
ಪೋಷಕಾಂಶಗಳ ನಿರ್ವಹಣೆ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಲಘು ಪೋಷಕಾಂಶಗಳ ಮಿಶ್ರಣ (Micronutrients) ಹಾಗೂ ಜೈವಿಕ ಗೊಬ್ಬರಗಳ ಬಳಕೆಗೆ ಸಬ್ಸಿಡಿ ಕಲ್ಪಿಸಲಾಗಿದೆ.

ಎಸ್.ಸಿ/ಎಸ್.ಟಿ ರೈತರಿಗೆ ವಿಶೇಷ ಆದ್ಯತೆ (Schemes for SC/ST Farmers)
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿ ಸಮಗ್ರ ಪೋಷಕಾಂಶ ನಿರ್ವಹಣೆ ಸೌಲಭ್ಯವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಮೀಸಲಾಗಿದೆ. ಇದರ ಜೊತೆಗೆ, ಭೂಮಿಯ ಫಲವತ್ತತೆ ಹೆಚ್ಚಿಸುವ ಎರೆಹುಳು ಗೊಬ್ಬರ ಘಟಕ (Vermicompost Unit) ನಿರ್ಮಾಣಕ್ಕೆ ಪರಿಶಿಷ್ಟ ಜಾತಿಯ ರೈತರಿಗೆ ವಿಶೇಷ ಸಹಾಯಧನ ನೀಡಲಾಗುತ್ತಿದೆ.
ಈ ರೈತರಿಂದ ಅರ್ಜಿ ಆಹ್ವಾನ
ಅನುದಾನ ಲಭ್ಯತೆಯ ಆಧಾರದಲ್ಲಿ ಸದ್ಯಕ್ಕೆ ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ಹುಕ್ಕೇರಿ ತಾಲೂಕಿನ ರೈತರಿಗೆ ವಿವಿಧ ಯೋಜನೆಗಳಡಿ ಭರ್ಜರಿ ಸಹಾಯಧನ (Agriculture Subsidy) ನೀಡಲು ಅರ್ಜಿ ಆಹ್ವಾನಿಸಿದೆ.
ಇದನ್ನೂ ಓದಿ: Uchita Holige Yantra: ಸರ್ಕಾರದಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಯೋಜನೆ | ಸಂಪೂರ್ಣ ಮಾಹಿತಿ
ಅಥಣಿ ತಾಲೂಕಿನ ತೋಟಗಾರಿಕೆ ಇಲಾಖೆಯು ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮೇಲ್ಕಾಣಿಸಿದ 20 ಹೆಚ್.ಪಿ ಒಳಗಿನ ಮಿನಿ ಟ್ರ‍್ಯಾಕ್ಟರ್ ಖರೀದಿ ಸಹಾಯಧನ ಸೇರಿದಂತೆ ಹಲವಾರು ಯೋಜನೆಗಳನ್ನು ಪ್ರಕಟಿಸಿದೆ.
ಇನ್ನು ಹುಕ್ಕೇರಿ ತಾಲೂಕಿನ ತೋಟಗಾರಿಕೆ ಇಲಾಖೆಯೂ ಸಹ 2026-27ನೇ ಸಾಲಿಗೆ ವಿವಿಧ ಯೋಜನೆಗಳಡಿ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಿದೆ. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎಂ.ಆರ್. ಕಳ್ಳಿಮನಿ ಅವರು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ.
ಅರ್ಜಿ ಸಲ್ಲಿಸುವುದು ಹೇಗೆ? (How to Apply?)
ಈ ಮೇಲಿನ ಯಾವುದೇ ಯೋಜನೆಗಳ ಲಾಭ ಪಡೆಯಲು ಆಸಕ್ತಿ ಹೊಂದಿರುವ ರೈತರು ತಮ್ಮ ಜಮೀನಿನ ಪಹಣಿ (RTC), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ನಕಲು, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಸಿದ್ಧಪಡಿಸಿಕೊಳ್ಳಬೇಕು.
ಅರ್ಜಿ ಸಲ್ಲಿಸುವ ಸ್ಥಳ: ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ (Raitha Samparka Kendra) ಭೇಟಿ ನೀಡಿ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಅಥವಾ ನಿಮ್ಮ ತಾಲೂಕು ತೋಟಗಾರಿಕೆ ಕಚೇರಿಗೆ ಹೋಗಿ ಮಾಹಿತಿ ಪಡೆಯಿರಿ.
ಇದನ್ನೂ ಓದಿ: Karnataka Monsoon Rain Started: ಕರ್ನಾಟಕದಲ್ಲಿ ಮುಂಗಾರು ಮಳೆ ಆರಂಭ | ಜಿಲ್ಲಾವಾರು ಮಳೆ ಮಾಹಿತಿ ಇಲ್ಲಿದೆ…
ಕೊನೆಯ ದಿನಾಂಕ: ಸಾಮಾನ್ಯವಾಗಿ ಆರ್ಥಿಕ ವರ್ಷದ ಆರಂಭದಲ್ಲಿ (ಜೂನ್ 30ರ ಆಸುಪಾಸಿನಲ್ಲಿ) ಅರ್ಜಿ ಆಹ್ವಾನಿಸಲಾಗುತ್ತದೆ (ಜಿಲ್ಲೆ ಮತ್ತು ತಾಲೂಕುಗಳಿಗೆ ಅನುಗುಣವಾಗಿ ದಿನಾಂಕದಲ್ಲಿ ಸ್ವಲ್ಪ ಬದಲಾವಣೆಯಾಗಬಹುದು).
ರೈತ ಬಾಂಧವರೇ, ಆಧುನಿಕ ಕೃಷಿಗೆ ಸರ್ಕಾರವೇ ಆರ್ಥಿಕ ಬೆಂಬಲ ನೀಡುತ್ತಿರುವಾಗ ವಿಳಂಬವೇಕೆ? ಇಂದೇ ನಿಮ್ಮ ತಾಲೂಕಿನ ತೋಟಗಾರಿಕೆ ಕಚೇರಿಗೆ ಭೇಟಿ ನೀಡಿ, ಯೋಜನೆಗಳ ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಿ!

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.