KCET Counseling Delay: ಕರ್ನಾಟಕ ಸಿಇಟಿ ಕೌನ್ಸೆಲಿಂಗ್ ಯಾವಾಗ? ಕೆಇಎ ಮಹತ್ವದ ಮಾಹಿತಿ ಇಲ್ಲಿದೆ…

Spread the love

WhatsApp Group Join Now
Telegram Group Join Now

KCET Counseling Delay: ಕೆಇಎ ಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ವಿಳಂಬಕ್ಕೆ ಕಾರಣವೇನು? ಇಂಜಿನಿಯರಿAಗ್ ಮತ್ತು ನರ್ಸಿಂಗ್ ಸೀಟ್ ಮ್ಯಾಟ್ರಿಕ್ಸ್ ಗೊಂದಲ, ಕೌನ್ಸೆಲಿಂಗ್ ದಿನಾಂಕದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ

ಸಿಇಟಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಫಲಿತಾಂಶವೇನೋ ಸಿಕ್ಕಿದೆ, ಆದರೆ ಈಗ ಮುಂದಿನ ಹಂತವಾದ ಕೌನ್ಸೆಲಿಂಗ್ (KCET Counseling) ಯಾವಾಗ ಶುರುವಾಗುತ್ತದೆ ಎಂಬ ಆತಂಕ ಶುರುವಾಗಿದೆ.

ವಿದ್ಯಾರ್ಥಿಗಳು ಮತ್ತು ಪೋಷಕರ ಈ ಗೊಂದಲಕ್ಕೆ ಮುಖ್ಯ ಕಾರಣ ‘ಸೀಟ್ ಮ್ಯಾಟ್ರಿಕ್ಸ್’ (Seat Matrix) ಅಥವಾ ಲಭ್ಯವಿರುವ ಸೀಟುಗಳ ಅಧಿಕೃತ ಪಟ್ಟಿ ಇನ್ನು ಅಂತಿಮಗೊಳ್ಳದಿರುವುದು. ಈ ವಿಳಂಬಕ್ಕೆ ಕಾರಣವೇನು ಮತ್ತು ಪ್ರಕ್ರಿಯೆ ಯಾವಾಗ ಶುರುವಾಗಬಹುದು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಇದನ್ನೂ ಓದಿ: PMMSY Scheme Subsidy: ಬೈಕ್, ಇ-ರಿಕ್ಷಾ ಖರೀದಿಗೆ ಸರ್ಕಾರದಿಂದ ಸಹಾಯಧನ | ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ

ಕೆಇಎ ಕೈಕಟ್ಟಿ ಕುಳಿತುಕೊಳ್ಳಲು ಕಾರಣವೇನು?

ಸಿಇಟಿ ಫಲಿತಾಂಶ ಪ್ರಕಟವಾದ ಜೂನ್ 10ರಿಂದಲೇ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ಮೊದಲು ಭರವಸೆ ನೀಡಿತ್ತು.

ಆದರೆ ಉನ್ನತ ಶಿಕ್ಷಣ ಇಲಾಖೆಯು (Higher Education Department) ಇದುವರೆಗೂ ಅಂತಿಮ ಸೀಟ್ ಮ್ಯಾಟ್ರಿಕ್ಸ್ ಅನ್ನು ಕೆಇಎಗೆ ಹಸ್ತಾಂತರಿಸಿಲ್ಲ.

ಈ ಬಗ್ಗೆ ಕೆಇಎ ಅಧಿಕಾರಿಗಳನ್ನು ಕೇಳಿದರೆ, ‘ನಮಗೆ ಅಂತಿಮ ಸೀಟುಗಳ ಪಟ್ಟಿ ಸಿಕ್ಕ ತಕ್ಷಣವೇ ನಾವು ಪ್ರಕ್ರಿಯೆ ಆರಂಭಿಸುತ್ತೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Gruhajyothi Gruhalakshmi Beneficiaries New: ಗೃಹಜ್ಯೋತಿ, ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹೊಸ ನಿಯಮ | ಸರ್ಕಾರದ ಕಟ್ಟುನಿಟ್ಟಿನ ಕ್ರಮ

ಇಂಜಿನಿಯರಿಂಗ್ ಮತ್ತು ನರ್ಸಿಂಗ್ ಸೀಟುಗಳ ಹಿಂದಿರುವ ಗೊಂದಲಗಳೇನು?

ಇಂಜಿನಿಯರಿಂಗ್ (Engineering): ಈ ಬಾರಿ ಡಾ. ಸಡಗೋಪನ್ ವರದಿಯನ್ನು ಜಾರಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ, ಸಾಕಷ್ಟು ಇಂಜಿನಿಯರಿಂಗ್ ಕಾಲೇಜುಗಳು ತಮ್ಮ ಕಂಪ್ಯೂಟರ್ ಸೈನ್ಸ್ (Computer Science) ಸೀಟುಗಳಿಗೆ ನಿರಾಕ್ಷೇಪಣಾ ಪತ್ರ (NOC) ಪಡೆಯಲು ಪರದಾಡುತ್ತಿವೆ. ಉನ್ನತ ಶಿಕ್ಷಣ ಇಲಾಖೆಯಿಂದ ಎನ್‌ಒಸಿ ಸಿಗದ ಕಾರಣ ಸೀಟುಗಳ ಸಂಖ್ಯೆ ಇನ್ನು ಖಚಿತವಾಗಿಲ್ಲ.

ನರ್ಸಿಂಗ್ ಮತ್ತು ವೈದ್ಯಕೀಯ (Nursing and Medical Allied): ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು (RGUHS) ನರ್ಸಿಂಗ್, ಯೋಗ ಮತ್ತು ನ್ಯಾಚುರೋಪಥಿ ಸೀಟುಗಳ ಅಂತಿಮ ಪಟ್ಟಿಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ಈಗಾಗಲೇ ನೀಡಿದೆ. ಆದರೆ, ಅಲ್ಲಿಂದ ಈ ಪಟ್ಟಿ ಇನ್ನೂ ಕೆಇಎ ಕೈಸೇರಿಲ್ಲ ಎಂಬುದು ಅಚ್ಚರಿಯ ವಿಚಾರ.

KCET Counseling Delay
KCET Counseling Delay

ಇದನ್ನೂ ಓದಿ: Police Constable Recruitment 2026: 3,991 ಸಿವಿಲ್ ಕಾನ್‌ಸ್ಟೇಬಲ್‌  ಹುದ್ದೆಗಳಿಗೆ ಅರ್ಜಿ ಆಹ್ವಾನ | ಪಿಯುಸಿ, ಡಿಪ್ಲೊಮಾ, ಐಟಿಐ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್

ಸಚಿವರ ಗೈರುಹಾಜರಿಯಿಂದ ಹೆಚ್ಚಾದ ವಿಳಂಬ!

ಉನ್ನತ ಶಿಕ್ಷಣ ಇಲಾಖೆಗೆ ಸದ್ಯ ಪೂರ್ಣಪ್ರಮಾಣದ ಸಚಿವರ (Higher Education Minister) ಕೊರತೆ ಇರುವುದು ಕೂಡ ಈ ಗೊಂದಲಕ್ಕೆ ತುಪ್ಪ ಸುರಿದಂತಾಗಿದೆ. ಸಚಿವರು ಇಲ್ಲದ ಕಾರಣ ಸೀಟ್ ಮ್ಯಾಟ್ರಿಕ್ಸ್’ನಂತಹ ಪ್ರಮುಖ ನಿರ್ಧಾರಗಳನ್ನು (Major Decisions) ಅಧಿಕಾರಿಗಳೇ ತೆಗೆದುಕೊಳ್ಳಬೇಕಿದೆ.

ಆದರೆ, ದೊಡ್ಡ ಮಟ್ಟದ ನಿರ್ಣಯಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಸಚಿವರೇನಾದರೂ ಇದ್ದಿದ್ದರೆ, ಈ ಸಮಸ್ಯೆಗಳು ಬಹಳ ಬೇಗ ಬಗೆಹರಿಯುತ್ತಿದ್ದವು ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: PM Kisan 23ne Kantina Hana: ಪಿಎಂ ಕಿಸಾನ್ 23ನೇ ಕಂತಿನ ಹಣ ರಿಲೀಸ್ | ಮಹತ್ವದ ಮಾಹಿತಿ ಇಲ್ಲಿದೆ…

ಸದ್ಯದ ಮಾಹಿತಿ ಪ್ರಕಾರ ಲಭ್ಯವಿರುವ ಸೀಟುಗಳ ವಿವರ (Available Seat Matrix)

WhatsApp Group Join Now
Telegram Group Join Now

ಅಂತಿಮ ಪಟ್ಟಿ ಬರುವ ಮುನ್ನ, ಇಲಾಖೆಯ ಬಳಿ ಇರುವ ಅಂದಾಜು ಸೀಟುಗಳ ಮಾಹಿತಿ ಈ ಕೆಳಗಿನಂತಿದೆ:

  • ಇಂಜಿನಿಯರಿಂಗ್ (Engineering): 75,041 ಸೀಟುಗಳು
  • ಕೃಷಿ ವಿಜ್ಞಾನ (Agriculture Science): 2,130 ಸೀಟುಗಳು
  • ಯೋಗ ಮತ್ತು ನ್ಯಾಚುರೋಪಥಿ (Yoga / Naturopathy): 990 ಸೀಟುಗಳು
  • ನರ್ಸಿಂಗ್ (Nursing): 53,780 ಸೀಟುಗಳು
  • ಫಾರ್ಮಸಿ (Pharmacy): 11,900 ಸೀಟುಗಳು
  • ಫಿಸಿಯೋಥೆರಪಿ (Physiotherapy): 8,700 ಸೀಟುಗಳು

ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ, ಸದ್ಯದಲ್ಲೇ ಕೌನ್ಸೆಲಿಂಗ್ ಪ್ರಕ್ರಿಯೆಗಳು ಸುಗಮವಾಗಿ ಆರಂಭವಾಗುವ ಲಕ್ಷಣಗಳಿವೆ.

Airtel Scholarship 2026: ಏರ್‌ಟೆಲ್ ವಿದ್ಯಾರ್ಥಿವೇತನ 2026: ಉಚಿತ ಲ್ಯಾಪ್ಟಾಪ್ + ಸಂಪೂರ್ಣ ಫೀಸ್ ಫ್ರೀ | ವಿದ್ಯಾರ್ಥಿಗಳಿಗೆ ಗೋಲ್ಡನ್ ಚಾನ್ಸ್


Spread the love
error: Content is protected !!