Daughter Property Rights: ತಂದೆಯ ಆಸ್ತಿಯಲ್ಲಿ ಮಗಳಿಗೆ ಯಾವೆಲ್ಲ ಹಕ್ಕುಗಳಿವೆ? ಯಾವ ಆಸ್ತಿಗಳ ಮೇಲೆ ಹಕ್ಕಿಲ್ಲ? 2005ರ ಹಿಂದೂ ಉತ್ತರಾಧಿಕಾರ ಕಾಯ್ದೆಯ ಪ್ರಮುಖ ನಿಯಮಗಳೇನು? ಸಂಪೂರ್ಣ ವಿವರ ಇಲ್ಲಿದೆ…
ಭಾರತದಲ್ಲಿ ಮಹಿಳೆಯರ ಆಸ್ತಿ ಹಕ್ಕುಗಳ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದ್ದರೂ, ಇಂದಿಗೂ ಅನೇಕ ಹೆಣ್ಣುಮಕ್ಕಳು ತಮ್ಮ ಕಾನೂನುಬದ್ಧ ಹಕ್ಕುಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿಲ್ಲ.
ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಕೆಲ ಕುಟುಂಬಗಳಲ್ಲಿ ‘ಮಗಳಿಗೆ ಮದುವೆ ಮಾಡಿ ಕಳಿಸಿದರೆ ಸಾಕು, ಆಸ್ತಿಯಲ್ಲಿ ಪಾಲು ಬೇಕಾಗಿಲ್ಲ’ ಎಂಬ ಹಳೆಯ ಮನೋಭಾವನೆ ಇನ್ನೂ ಜೀವಂತವಾಗಿದೆ.
ಇದನ್ನೂ ಓದಿ: LPG Cylinder Subsidy Cut: ಇನ್ಮುಂದೆ ಮೂರು ತಿಂಗಳಿಗೆ ಒಂದೇ ಸಿಲಿಂಡರ್ | ಕೇಂದ್ರ ಸರ್ಕಾರದ ಹೊಸ ನಿಯಮ
ಹೆಣ್ಣುಮಕ್ಕಳ ಆಸ್ತಿ ಹಕ್ಕಿಗೆ ಕಾನೂನು ಬಲ!
ಆದರೆ, ಕಾನೂನು ಪ್ರಕಾರ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. 2005ರಲ್ಲಿ ಜಾರಿಗೆ ಬಂದ ಹಿಂದೂ ಉತ್ತರಾಧಿಕಾರ (Hindu Succession Amendment Act, 2005)ತಿದ್ದುಪಡಿಯಿಂದ ಹೆಣ್ಣುಮಕ್ಕಳಿಗೂ ಗಂಡುಮಕ್ಕಳಂತೆ ಸಮಾನ ಆಸ್ತಿ ಹಕ್ಕು ದೊರೆತಿದೆ.
ಆದರೂ, ತಂದೆಯ ಹೆಸರಿನಲ್ಲಿರುವ ಪ್ರತಿಯೊಂದು ಆಸ್ತಿಯ ಮೇಲೂ ಮಗಳಿಗೆ ಹಕ್ಕು ಇರುತ್ತದೆ ಎಂದು ಭಾವಿಸುವುದು ಸರಿಯಲ್ಲ. ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಗಳಿಗೆ ಆಸ್ತಿಯ ಮೇಲಿನ ಹಕ್ಕು ಅನ್ವಯಿಸುವುದಿಲ್ಲ.
ಹಾಗಾದರೆ, ಮಗಳಿಗೆ ಯಾವ ಆಸ್ತಿಗಳ ಮೇಲೆ ಹಕ್ಕು ಇದೆ? ಯಾವ ಆಸ್ತಿಗಳ ಮೇಲೆ ಹಕ್ಕಿಲ್ಲ? ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ.
ಇದನ್ನೂ ಓದಿ: Uchita Holige Yantra: ಸರ್ಕಾರದಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಯೋಜನೆ | ಸಂಪೂರ್ಣ ಮಾಹಿತಿ
ಹೆಣ್ಣುಮಕ್ಕಳಿಗೆ ಕಾನೂನು ನೀಡಿರುವ ಪ್ರಮುಖ ಹಕ್ಕುಗಳು
2005ರ ತಿದ್ದುಪಡಿಯ ನಂತರ ಮಗಳು ಕೂಡ ಕುಟುಂಬದ ಸಹವಾರಸುದಾರಳಾಗಿ (Coparcener) ಪರಿಗಣಿಸಲ್ಪಟ್ಟಿದ್ದಾಳೆ. ಅಂದರೆ, ಪಿತೃಪಾರಂಪರ್ಯ ಆಸ್ತಿಯಲ್ಲಿ (Ancestral Property) ಗಂಡುಮಕ್ಕಳಷ್ಟೇ ಅಲ್ಲ, ಹೆಣ್ಣುಮಕ್ಕಳಿಗೂ ಸಮಾನ ಹಕ್ಕು ಇದೆ. ಕಾನೂನು ಪ್ರಕಾರ ಮಗಳಿಗೆ:
- ತಂದೆಯ ಪಿತೃಪಾರಂಪರ್ಯ ಆಸ್ತಿಯಲ್ಲಿ ಸಮಾನ ಪಾಲು ದೊರೆಯುತ್ತದೆ.
- ಆಸ್ತಿಯ ವಿಭಜನೆ (Partition) ಕೇಳುವ ಹಕ್ಕು ಇರುತ್ತದೆ.
- ತನ್ನ ಪಾಲಿನ ಆಸ್ತಿಯನ್ನು ಮಾರಾಟ ಮಾಡಬಹುದು.
- ಬಾಡಿಗೆಗೆ ನೀಡಬಹುದು.
- ವಿಲ್ (Will) ಬರೆದು ಬೇರೆ ಯಾರಿಗಾದರೂ ವರ್ಗಾಯಿಸಬಹುದು.
- ಆಸ್ತಿಯ ಸಂಪೂರ್ಣ ಮಾಲೀಕತ್ವ (Ownership Rights) ಹೊಂದಿರುತ್ತಾಳೆ.
ಹೀಗಾಗಿ, ಮದುವೆಯಾದ ಮಗಳಿಗೆ ಆಸ್ತಿ ಹಕ್ಕಿಲ್ಲ ಎನ್ನುವುದು ಸಂಪೂರ್ಣ ತಪ್ಪು ಕಲ್ಪನೆಯಾಗಿದೆ.
ಇದನ್ನೂ ಓದಿ: Karnataka New BPL Ration Card : ಬಿಪಿಎಲ್ ಕಾರ್ಡಿಗೆ ಅರ್ಜಿ ಹಾಕಿದವರಿಗೆ ಗುಡ್ ನ್ಯೂಸ್ | ಹೊಸ ಅಪ್ಡೇಟ್ ಪ್ರಕಟ
ಮಗಳಿಗೆ ಹಕ್ಕಿಲ್ಲದ ಆಸ್ತಿಗಳು ಯಾವುವು?
ಕಾನೂನು ಹಲವು ಹಕ್ಕುಗಳನ್ನು ನೀಡಿದರೂ, ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಗಳಿಗೆ ಆಸ್ತಿಯ ಮೇಲೆ ಹಕ್ಕು ಇರುವುದಿಲ್ಲ.
1. ತಂದೆಯ ಸ್ವಂತ ಸಂಪಾದಿತ ಆಸ್ತಿ (Self-Acquired Property)
ತಂದೆಯು ತನ್ನ ಸ್ವಂತ ಆದಾಯದಿಂದ ಖರೀದಿಸಿದ ಮನೆ, ಜಮೀನು, ಅಂಗಡಿ ಅಥವಾ ಇತರ ಆಸ್ತಿಗಳು ಪಿತೃಪಾರಂಪರ್ಯ ಆಸ್ತಿಯಾಗುವುದಿಲ್ಲ.
ಈ ರೀತಿಯ ಆಸ್ತಿಯ ಮೇಲೆ ತಂದೆಗೆ ಸಂಪೂರ್ಣ ಹಕ್ಕು ಇರುತ್ತದೆ. ಅವರು ತಮ್ಮ ಇಚ್ಛೆಯಂತೆ:
- ಮಾರಾಟ ಮಾಡಬಹುದು,
- ದಾನ ಮಾಡಬಹುದು,
- ಉಡುಗೊರೆಯಾಗಿ ನೀಡಬಹುದು,
- ವಿಲ್ ಮೂಲಕ ಯಾರಿಗಾದರೂ ಬರೆದು ಕೊಡಬಹುದು.
ಹೀಗಾಗಿ, ತಂದೆ ಜೀವಂತವಾಗಿರುವವರೆಗೆ ಮಗಳಿಗೆ ಈ ಆಸ್ತಿಯ ಮೇಲೆ ಸ್ವಯಂಚಾಲಿತ ಹಕ್ಕು ಇರುವುದಿಲ್ಲ. ಆದರೆ ತಂದೆ ಯಾವುದೇ ವಿಲ್ ಬರೆದು ಹೋಗದೆ ಮೃತಪಟ್ಟರೆ, ಆ ಸಂದರ್ಭದಲ್ಲಿ ಉತ್ತರಾಧಿಕಾರ ಕಾನೂನು ಅನ್ವಯವಾಗುತ್ತದೆ ಮತ್ತು ಮಗಳು ಕೂಡ ವಾರಸುದಾರಳಾಗಬಹುದು.
2. 2005ರ ಮೊದಲು ಕಾನೂನುಬದ್ಧವಾಗಿ ವಿಭಜನೆಯಾದ ಆಸ್ತಿ
ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯ್ದೆ 2005ರ ಸೆಪ್ಟೆಂಬರ್ 9ರಿಂದ ಜಾರಿಗೆ ಬಂದಿದೆ. ಈ ದಿನಾಂಕಕ್ಕಿಂತ ಮೊದಲು ಕಾನೂನುಬದ್ಧವಾಗಿ, ನೋಂದಾಯಿತ ದಾಖಲೆಗಳ ಮೂಲಕ, ನ್ಯಾಯಾಲಯದ ಆದೇಶದ ಮೂಲಕ ಆಸ್ತಿ ವಿಭಜನೆ ನಡೆದಿದ್ದರೆ, ನಂತರ ಮಗಳು ಅದರಲ್ಲಿ ಹೊಸದಾಗಿ ಪಾಲು ಕೇಳಲು ಸಾಧ್ಯವಿಲ್ಲ.
ಆದರೆ ಆಸ್ತಿ ಹಂಚಿಕೆ ವೇಳೆ ಮೋಸ, ಸುಳ್ಳು ದಾಖಲೆ ಅಥವಾ ಅನ್ಯಾಯ ನಡೆದಿದೆ ಎಂದು ಸಾಬೀತಾದರೆ, ನ್ಯಾಯಾಲಯದಲ್ಲಿ ಸವಾಲು ಹಾಕುವ ಅವಕಾಶ ಇರುತ್ತದೆ.
ಇದನ್ನೂ ಓದಿ: PMMSY Scheme Subsidy: ಬೈಕ್, ಇ-ರಿಕ್ಷಾ ಖರೀದಿಗೆ ಸರ್ಕಾರದಿಂದ ಸಹಾಯಧನ | ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ

3. ಉಡುಗೊರೆಯಾಗಿ ನೀಡಿರುವ ಆಸ್ತಿ (Gift Deed)
ಕೆಲ ಸಂದರ್ಭಗಳಲ್ಲಿ ತಂದೆ ಅಥವಾ ಕುಟುಂಬದ ಹಿರಿಯರು ತಮ್ಮ ಆಸ್ತಿಯನ್ನು ಯಾರಿಗಾದರೂ ಉಡುಗೊರೆಯಾಗಿ (Gift Deed) ನೀಡಿರಬಹುದು.
ಅಂತಹ ಉಡುಗೊರೆ ಕಾನೂನುಬದ್ಧವಾಗಿದ್ದರೆ, ನೋಂದಾಯಿತ ದಾಖಲೆ ಹೊಂದಿದ್ದರೆ ನಂತರ ಮಗಳು ಆ ಆಸ್ತಿಯಲ್ಲಿ ಪಾಲು ಕೇಳಲು ಸಾಧ್ಯವಿಲ್ಲ.
ಆದರೆ ದಾಖಲೆ ನಕಲಿ ಆಗಿದ್ದರೆ ಅಥವಾ ಕಾನೂನು ಪ್ರಕ್ರಿಯೆ ಪಾಲಿಸದೇ ಉಡುಗೊರೆ ನೀಡಿದ್ದರೆ, ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.
4. ಸ್ವಯಂಪ್ರೇರಿತವಾಗಿ ಹಕ್ಕು ಬಿಟ್ಟುಕೊಟ್ಟಿದ್ದರೆ
ಕೆಲವೊಮ್ಮೆ ಕುಟುಂಬದ ಒಪ್ಪಂದದ ಪ್ರಕಾರ ಹೆಣ್ಣುಮಕ್ಕಳು ತಮ್ಮ ಆಸ್ತಿ ಹಕ್ಕನ್ನು ಸ್ವಯಂಪ್ರೇರಿತವಾಗಿ ಬಿಟ್ಟುಕೊಡುತ್ತಾರೆ. ಇದನ್ನು Relinquishment Deed ಅಥವಾ Release Deed ಎಂದು ಕರೆಯಲಾಗುತ್ತದೆ.
ಒಮ್ಮೆ ಕಾನೂನುಬದ್ಧವಾಗಿ ದಾಖಲೆ ಮಾಡಿ, ಸ್ವಯಂಪ್ರೇರಿತವಾಗಿ ಸಹಿ ಮಾಡಿ, ಯಾವುದೇ ಒತ್ತಡವಿಲ್ಲದೆ ಹಕ್ಕು ಬಿಟ್ಟಿದ್ದರೆ ನಂತರ ಆ ಆಸ್ತಿಯ ಮೇಲೆ ಹಕ್ಕು ಕೇಳುವುದು ಕಷ್ಟವಾಗುತ್ತದೆ. ಆದರೆ ಒತ್ತಡ, ಬೆದರಿಕೆ ಅಥವಾ ಮೋಸದ ಮೂಲಕ ಸಹಿ ಪಡೆದಿದ್ದರೆ, ನ್ಯಾಯಾಲಯದ ಮೂಲಕ ಪರಿಹಾರ ಪಡೆಯಬಹುದು.
5. ವಿಲ್ ಮೂಲಕ ಮಗಳನ್ನು ಹೊರಗಿಟ್ಟಿದ್ದರೆ
ತಂದೆಯ ಸ್ವಂತ ಸಂಪಾದಿತ ಆಸ್ತಿಯ ವಿಷಯದಲ್ಲಿ ವಿಲ್ಗೆ (Will) ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ತಂದೆ ತನ್ನ ವಿಲ್ನಲ್ಲಿ:
- ಮಗಳ ಹೆಸರನ್ನು ಸೇರಿಸದೇ ಇರಬಹುದು,
- ಬೇರೆ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ಆಸ್ತಿ ನೀಡಬಹುದು,
- ಸಂಪೂರ್ಣ ಆಸ್ತಿಯನ್ನು ಒಬ್ಬ ವ್ಯಕ್ತಿಯ ಹೆಸರಿಗೆ ಬರೆಯಬಹುದು.
ಇಂತಹ ಸಂದರ್ಭಗಳಲ್ಲಿ ಮಗಳಿಗೆ ಆಸ್ತಿಯ ಮೇಲೆ ಹಕ್ಕು ಇರುವುದಿಲ್ಲ. ಆದರೆ ವಿಲ್ ನಕಲಿ, ಒತ್ತಡದಡಿ ಬರೆಯಲ್ಪಟ್ಟದ್ದು ಅಥವಾ ಕಾನೂನುಬದ್ಧವಾಗಿಲ್ಲ ಎಂದು ಸಾಬೀತಾದರೆ, ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶ ಇರುತ್ತದೆ.
ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿರಬೇಕು
ಇAದಿನ ಸಮಾಜದಲ್ಲಿ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆಯ ಜೊತೆಗೆ ಕಾನೂನು ಅರಿವೂ ಅತ್ಯಂತ ಮುಖ್ಯವಾಗಿದೆ. ಹೆಣ್ಣುಮಕ್ಕಳು ತಮ್ಮ ಆಸ್ತಿ ಹಕ್ಕುಗಳ ಬಗ್ಗೆ ತಿಳಿದಿರದ ಕಾರಣ ಅನೇಕ ಸಂದರ್ಭಗಳಲ್ಲಿ ತಮ್ಮ ಪಾಲಿನ ಆಸ್ತಿಯನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ:
- ಕುಟುಂಬದ ಆಸ್ತಿ ದಾಖಲೆಗಳ ಬಗ್ಗೆ ಮಾಹಿತಿ ಹೊಂದಿರಿ.
- ಯಾವುದೇ ದಾಖಲೆಗಳಿಗೆ ಸಹಿ ಮಾಡುವ ಮುನ್ನ ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.
- ಆಸ್ತಿ ಹಂಚಿಕೆ ವೇಳೆ ಕಾನೂನು ಸಲಹೆ ಪಡೆಯಿರಿ.
- ನಿಮ್ಮ ಹಕ್ಕುಗಳನ್ನು ತಿಳಿದುಕೊಂಡು ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ.
ಇದನ್ನೂ ಓದಿ: PM Kisan 23ne Kantina Hana: ಪಿಎಂ ಕಿಸಾನ್ 23ನೇ ಕಂತಿನ ಹಣ ರಿಲೀಸ್ | ಮಹತ್ವದ ಮಾಹಿತಿ ಇಲ್ಲಿದೆ…
ಅನುಭವಿ ವಕೀಲರ ಸಲಹೆ ಪಡೆಯಿರಿ
2005ರ ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯ್ದೆಯ ನಂತರ ಹೆಣ್ಣುಮಕ್ಕಳಿಗೂ ಪಿತೃಪಾರಂಪರ್ಯ ಆಸ್ತಿಯಲ್ಲಿ ಸಮಾನ ಹಕ್ಕು ದೊರೆತಿದೆ. ಆದರೆ ತಂದೆಯ ಎಲ್ಲಾ ಆಸ್ತಿಗಳ ಮೇಲೂ ಮಗಳಿಗೆ ಹಕ್ಕು ಇರುತ್ತದೆ ಎಂಬುದು ಸಂಪೂರ್ಣ ಸತ್ಯವಲ್ಲ.
ಸ್ವಂತ ಸಂಪಾದಿತ ಆಸ್ತಿ, ವಿಲ್ ಮೂಲಕ ವರ್ಗಾಯಿಸಲಾದ ಆಸ್ತಿ, ಉಡುಗೊರೆ ನೀಡಲಾದ ಆಸ್ತಿ ಹಾಗೂ ಕಾನೂನುಬದ್ಧವಾಗಿ ಹಕ್ಕು ಬಿಟ್ಟುಕೊಟ್ಟ ಸಂದರ್ಭಗಳಲ್ಲಿ ಮಗಳಿಗೆ ಹಕ್ಕು ಅನ್ವಯಿಸದಿರಬಹುದು.
ಆದರೆ ಪ್ರತಿಯೊಂದು ಪ್ರಕರಣದ ವಾಸ್ತವಾಂಶಗಳು ವಿಭಿನ್ನವಾಗಿರುತ್ತವೆ. ಆದ್ದರಿಂದ ಆಸ್ತಿ ಸಂಬAಧಿತ ವಿವಾದಗಳು ಎದುರಾದರೆ ಅನುಭವಿ ವಕೀಲರ ಸಲಹೆ ಪಡೆಯುವುದು ಅತ್ಯಂತ ಸೂಕ್ತ.
Subsidy Cow Purchase Scheme: ಮಹಿಳೆಯರಿಗೆ ಹಸು ಖರೀದಿಗೆ ₹56,700 ಸಹಾಯಧನ | ಸರ್ಕಾರದಿಂದ ಅರ್ಜಿ ಆಹ್ವಾನ

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.