
ಎಸ್‌ಬಿಐನಲ್ಲಿ ಖಾಲಿ ಇರುವ ವಿವಿಧ ಸ್ಪೆಷಲಿಸ್ಟ್ ಕೇಡರ್ ಆಫೀಸರ್‌ಗಳ ಹುದ್ದೆಗೆ (SBI Specialist Officers Recruitment 2025) ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಭಾರತದ ಬಹುರಾಷ್ಟ್ರೀಯ ಮತ್ತು ಸಾರ್ವಜನಿಕ ವಲಯದ ಪ್ರತಿಷ್ಟಿತ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸ್ಪೆಷಲಿಸ್ಟ್ ಕೇಡರ್ ಆಫೀಸರ್‌ಗಳ ಒಟ್ಟು 103 ಹುದ್ದೆಗಳಿಗೆ ನೇಮಕಾತಿಯನ್ನು ನಡೆಸಲಾಗುತ್ತಿದೆ. ಆಸಕ್ತರು ಆನ್‌ಲೈನ್ ಮೂಲಕ ನವೆಂಬರ್ 17ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನೂ ಓದಿ: Montha Cyclone Effect- ಮೋಂಥಾ ಚಂಡಮಾರುತ ಎಫೆಕ್ಟ್: ಕರ್ನಾಟಕದ ಈ ಜಿಲ್ಲೆಗಳಲ್ಲಿ ಜೋರು ಮಳೆ | ಹವಾಮಾನ ಇಲಾಖೆ ಮುನ್ಸೂಚನೆ
ಹುದ್ದೆಗಳ ವಿವರ
- ಹೆಡ್ (ಪ್ರಾಡಕ್ಟ್, ಇನ್ವೆಸ್ಟ್ಮೆಂಟ್ ಮತ್ತು ರಿಸರ್ಚ್) – 01
- ರೋನಲ್ ಹೆಡ್ – 04
- ರೀಜನಲ್ ಹೆಡ್ – 07
- ರಿಲೇಷನ್‌ಶಿಪ್ ಮ್ಯಾನೇಜರ್ ಟೀಮ್ ಲೀಡ್- 19
- ಇನ್ವೆಸ್ಟ್ಮೆಂಟ್ ಸ್ಪೆಷಲಿಸ್ಟ್-22
- ಇನ್ವೆಸ್ಟ್ಮೆಂಟ್ ಆಫೀಸರ್- 46
- ಪ್ರಾಜೆಕ್ಟ್ ಡೆವಲಪ್‌ಮೆಂಟ್ ಮ್ಯಾನೇಜರ್- 02
- ಸೆಂಟ್ರಲ್ ರಿಸರ್ಚ್ ಟೀಮ್ – 02
- ಒಟ್ಟು ಹುದ್ದೆಗಳು – 103
ಶೈಕ್ಷಣಿಕ ಅರ್ಹತೆಗಳೇನು?
ಬಿ.ಎ, ಬಿಕಾಂ, ಪಿಜಿ ಡಿಪ್ಲೊಮಾ, ಸಿಎ, ಸಿಎಂಎ ಇನ್ನಿತರ ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಮಾನ್ಯತೆ ಪಡೆದ ಕಾಲೇಜಿನಿಂದ ಪೂರ್ಣಗೊಳಿಸಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: BEL Recruitment 2025- ಬಿಇಎಲ್‌ನಲ್ಲಿ ವಾರ್ಷಿಕ 13 ಲಕ್ಷ ರೂ. ವೇತನ ಹುದ್ದೆಗಳಿಗೆ ಅರ್ಜಿ ಆಹ್ವಾನ | 340 ಹುದ್ದೆಗಳು
ವಯೋಮಿತಿ ವಿವರ
ಕನಿಷ್ಠ 25ರಿಂದ 50 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಜತೆಗೆ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಹುದ್ದೆಗಳ ಅನುಸಾರವಾಗಿ ವಯೋಮಿತಿಯಲ್ಲಿ ವ್ಯತ್ಯಾಸಗಳಿವೆ ಹಾಗೂ ನಿಯಮಾನುಸಾರ ವಯೋಸಡಿಲಿಕೆ ಇರಲಿದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗ, ಒಬಿಸಿ, ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳು 750 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ರತೀ ಅರ್ಜಿಗೂ ಪ್ರತ್ಯೇಕ ಅರ್ಜಿ ಶುಲ್ಕ ಪಾವತಿಸಬೇಕು.
ಸ್ವೀಕೃತ ಅರ್ಜಿಗಳನ್ನು ಪರಿಶೀಲಿಸಿ ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ನಂತರ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಮೆರಿಟ್ ಹಾಗೂ ಮೀಸಲು ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಆಯಾಯ ಹುದ್ದೆಗಳಿಗೆ ಸಂಬಂಧಿಸಿದ ಅರ್ಹತೆಗಳು ಹಾಗೂ ಅನುಭವಗಳು ಇದ್ದಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳ ಜತೆಗೆ ಬ್ಯಾಂಕ್ ಇ-ಮೇಲ್ ಮೂಲಕ ಸಂವಹನ ನಡೆಸುವುದರಿಂದ, ನಮೂದಿಸಲಾಗಿರುವ ಇಮೇಲ್ ಐಡಿಯನ್ನು ನೇಮಕಾತಿ ಪ್ರಕ್ರಿಯೆಯ ಮುಗಿಯುವವರೆಗೂ ಚಾಲ್ತಿಯಲ್ಲಿಟ್ಟುಕೊಳ್ಳಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನಾಂಕ: 17-11-2025
- ಅಧಿಸೂಚನೆ: Download
- ಹೆಚ್ಚಿನ ಮಾಹಿತಿಗಾಗಿ : sbi.co.in



