Mysuru District Court Recruitment 2026: SSLC, PUC ಪಾಸಾದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಸರ್ಕಾರಿ ಉದ್ಯೋಗದ ಅವಕಾಶ. ಅರ್ಹತೆ, ವೇತನ, ವಯೋಮಿತಿ, ಅರ್ಜಿ ಸಲ್ಲಿಕೆ ಹಾಗೂ ಸಂಪೂರ್ಣ ವಿವರ ಇಲ್ಲಿದೆ…
ಸರ್ಕಾರಿ ಉದ್ಯೋಗ (Government Job) ಪಡೆಯಲು ಕಾಯುತ್ತಿರುವ ಯುವಜನತೆಗೆ ಇದೀಗ ಉತ್ತಮ ಅವಕಾಶ ಬಂದಿದೆ. ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Mysuru District Court Recruitment 2026) ತನ್ನ ಅಧೀನದಲ್ಲಿರುವ ವಿವಿಧ ನ್ಯಾಯಾಂಗ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.
ಒಟ್ಟು 93 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವ ಈ ನೇಮಕಾತಿ, ವಿಶೇಷವಾಗಿ 10ನೇ ತರಗತಿ (SSLC) ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ.
ಈ ನೇಮಕಾತಿಯಲ್ಲಿ ಜವಾನ, ಆದೇಶ ಜಾರಿಕಾರ, ಬೆರಳಚ್ಚು ನಕಲುಗಾರ ಮತ್ತು ಶೀಘ್ರಲಿಪಿಗಾರ ಹುದ್ದೆಗಳು ಒಳಗೊಂಡಿವೆ. ಸರಿಯಾದ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: Karnataka Rain Alert: ಕರ್ನಾಟಕದಲ್ಲಿ ಒಂದು ವಾರ ಮಳೆ ಆರ್ಭಟ | ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಹುದ್ದೆಗಳ ಸಂಪೂರ್ಣ ವಿವರ (Post Details)
ಈ ನೇಮಕಾತಿಯಲ್ಲಿ ಒಟ್ಟು 93 ಹುದ್ದೆಗಳಿದ್ದು, ಅವುಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜವಾನ ಹುದ್ದೆಗಳಿವೆ.
- ಜವಾನರು (Peon) – 75 ಹುದ್ದೆಗಳು
- ಆದೇಶ ಜಾರಿಕಾರರು (Process Server) – 11 ಹುದ್ದೆಗಳು
- ಶೀಘ್ರಲಿಪಿಗಾರರು ಗ್ರೇಡ್-III (Stenographer Grade-III) – 4 ಹುದ್ದೆಗಳು
- ಬೆರಳಚ್ಚು ನಕಲುಗಾರರು (Typist) – 3 ಹುದ್ದೆಗಳು
ಇದರಿಂದ ಸ್ಪಷ್ಟವಾಗುವಂತೆ, SSLC ಪಾಸಾದವರಿಗೆ ಹೆಚ್ಚಿನ ಅವಕಾಶ ಜವಾನ ಹಾಗೂ ಆದೇಶ ಜಾರಿಕಾರ ಹುದ್ದೆಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ: Super El Nino: ಹೆಚ್ಚಿದ ತಾಪಮಾನ ಈ ವರ್ಷ ಬರಗಾಲದ ಛಾಯೆ? | ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ…
ವಿದ್ಯಾರ್ಹತೆ (Educational Qualification)
ಪ್ರತಿ ಹುದ್ದೆಗೆ ವಿಭಿನ್ನ ಅರ್ಹತೆ ನಿಗದಿಪಡಿಸಲಾಗಿದೆ:
- ಜವಾನರು (Peon): 10ನೇ ತರಗತಿ ಅಥವಾ ಸಮಾನ ವಿದ್ಯಾರ್ಹತೆ (SSLC Pass) ಇರಬೇಕು.
- ಆದೇಶ ಜಾರಿಕಾರರು (Process Server): 10ನೇ ತರಗತಿ ಉತ್ತೀರ್ಣರಾಗಿರಬೇಕು.
- ಬೆರಳಚ್ಚು ನಕಲುಗಾರರು (Typist): ಪಿಯುಸಿ (PUC) ಅಥವಾ ಸಮಾನ ವಿದ್ಯಾರ್ಹತೆ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ (Typing) ಕೌಶಲ್ಯ ಕಡ್ಡಾಯ. ಕಂಪ್ಯೂಟರ್ ಜ್ಞಾನ (Computer Knowledge) ಇರಬೇಕು.
- ಶೀಘ್ರಲಿಪಿಗಾರರು (Stenographer): ದ್ವಿತೀಯ ಪಿಯುಸಿ ಅಥವಾ 3 ವರ್ಷದ ಡಿಪ್ಲೊಮಾ (Commercial Practice). ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಶೀಘ್ರಲಿಪಿ (Shorthand) ಮತ್ತು ಟೈಪಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವೇತನ ಶ್ರೇಣಿ (Salary Details)
ಈ ಹುದ್ದೆಗಳು ಉತ್ತಮ ಸರ್ಕಾರಿ ವೇತನ ಮತ್ತು ವಿಶೇಷ ಭತ್ಯೆ, ಸೌಲಭ್ಯಗಳನ್ನು ಹೊಂದಿದ್ದು; ಮಾಸಿಕ ವೇತನ ಶ್ರೇಣಿ ಈ ಕೆಳಗಿನಂತಿದೆ:
- ಜವಾನರು: ₹27,000 – ₹46,675
- ಆದೇಶ ಜಾರಿಕಾರರು: ₹31,775 – ₹61,300
- ಬೆರಳಚ್ಚು ನಕಲುಗಾರರು: ₹34,100 – ₹67,600
- ಶೀಘ್ರಲಿಪಿಗಾರರು: ₹44,425 – ₹83,700
ವಯೋಮಿತಿ (Age Limit)
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ ವಯಸ್ಸು 18 ವರ್ಷ ಹೊಂದಿರಬೇಕು. ಗರಿಷ್ಠ ವಯಸ್ಸು ಸಾಮಾನ್ಯ ವರ್ಗ 40 ವರ್ಷ, 2A, 2B, 3A, 3B ಅಭ್ಯರ್ಥಿಗಳು 43 ವರ್ಷ ಹಾಗೂ ಎಸ್ಸಿ/ಎಸ್ಟಿ/ಪ್ರವರ್ಗ-1 45 ವರ್ಷ ನಿಗದಿಪಡಿಸಲಾಗಿದೆ.
ಸರ್ಕಾರದ ನಿಯಮಾನುಸಾರ ಅಂಗವಿಕಲರು, ವಿಧವೆಯರು ಮತ್ತು ಮಾಜಿ ಸೈನಿಕರಿಗೆ ಹೆಚ್ಚುವರಿ ವಯೋ ಸಡಿಲಿಕೆ (Age Relaxation) ದೊರೆಯುತ್ತದೆ.

ಅರ್ಜಿ ಶುಲ್ಕ (Application Fee)
ಜವಾನ ಹುದ್ದೆ:
- ಸಾಮಾನ್ಯ: ₹200
- OBC (2A/2B/3A/3B): ₹100
- SC/ST/Category-1/Disabled: ಶುಲ್ಕವಿಲ್ಲ
ಆದೇಶ ಜಾರಿಕಾರ & ಶೀಘ್ರಲಿಪಿಗಾರ:
- ಸಾಮಾನ್ಯ: ₹300
- OBC: ₹150
- SC/ST/Category-1: ಶುಲ್ಕವಿಲ್ಲ
ಟೈಪಿಸ್ಟ್ (Typist):
- ಸಾಮಾನ್ಯ: ₹300
- Category-1: ಶುಲ್ಕವಿಲ್ಲ
ಪ್ರಮುಖ ದಿನಾಂಕಗಳು (Important Dates)
- ಅರ್ಜಿ ಆರಂಭ ದಿನಾಂಕ: 28 ಏಪ್ರಿಲ್ 2026
- ಅರ್ಜಿ ಕೊನೆಯ ದಿನಾಂಕ: 31 ಮೇ 2026 (11:59 PM)
- ಶುಲ್ಕ ಪಾವತಿ ಕೊನೆಯ ದಿನಾಂಕ: 2 ಜೂನ್ 2026
ಅರ್ಜಿ ಸಲ್ಲಿಸುವ ವಿಧಾನ (How to Apply Online)
ಅಭ್ಯರ್ಥಿಗಳು ಮೈಸೂರು ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಮೊದಲಿಗೆ ಅಧಿಕೃತ ವೆಬ್ಸೈಟ್ ತೆರೆಯಿರಿ Recruitment / Careers ವಿಭಾಗಕ್ಕೆ ಹೋಗಿ.
ಅಲ್ಲಿರುವ ಸಂಬAಧಿತ ಹುದ್ದೆಯ ಅಧಿಸೂಚನೆ ಓದಿ, Online Application ಮೇಲೆ ಕ್ಲಿಕ್ ಮಾಡಿ. ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ, ಶುಲ್ಕ ಪಾವತಿಸುವ ಮೂಲಕ ಅರ್ಜಿಯನ್ನು ಸಲ್ಲಿಸಿ.
SSLC-PUC ಅಭ್ಯರ್ಥಿಗಳಿಗೆ ಉತ್ತಮ ಅವಕಾಶ
ಮೈಸೂರು ಜಿಲ್ಲಾ ನ್ಯಾಯಾಲಯ ನೇಮಕಾತಿ 2026 (Mysuru Court Jobs 2026) SSLC ಮತ್ತು PUC ಪಾಸಾದ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ. ಕಡಿಮೆ ವಿದ್ಯಾರ್ಹತೆಯಲ್ಲಿಯೇ ಸರ್ಕಾರಿ ಉದ್ಯೋಗ ಪಡೆಯಲು ಬಯಸುವವರು ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು.
ಉತ್ತಮ ವೇತನ, ಸ್ಥಿರ ಉದ್ಯೋಗ ಮತ್ತು ಸರ್ಕಾರಿ ಸೌಲಭ್ಯಗಳು ಈ ಹುದ್ದೆಗಳ ಪ್ರಮುಖ ಆಕರ್ಷಣೆ. ಅರ್ಹ ಅಭ್ಯರ್ಥಿಗಳು ಸಮಯ ಮೀರದಂತೆ ಅರ್ಜಿ ಸಲ್ಲಿಸಿ ತಮ್ಮ ಭವಿಷ್ಯವನ್ನು ಭದ್ರಗೊಳಿಸಿಕೊಳ್ಳಿ.
ಇದನ್ನೂ ಓದಿ: Affordable Electric Scooters: ಅರ್ಧ ಬೆಲೆಗೆ ಸಿಗ್ತಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು | ಬಂಪರ್ ಆಫರ್
ಪ್ರಮುಖ ಲಿಂಕುಗಳು

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.