
ಪ್ರತಿಷ್ಠಿತ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಬೆಂಗಳೂರು ಸೇರಿ ದೇಶದ ವಿವಿಧೆಡೆಯ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ (BEL Recruitment 2025) ಮಾಡಿಕೊಳ್ಳುತ್ತಿದ್ದು; ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಬಿಇಎಲ್ (Bharat Electronics Limited- BEL) ಕೇಂದ್ರ ರಕ್ಷಣಾ ಇಲಾಖೆ ಅಧೀನದ ಸಾರ್ವಜನಿಕ ವಲಯದ ಉದ್ಯಮವಾಗಿದೆ. ಮಿಲಿಟರಿ ಕಮ್ಯುನಿಕೇಷನ್, ವೆಪನ್ ಸಿಸ್ಟಂ, ಆಂತರಿಕ ಭದ್ರತೆಗೆ ಸಂಬಂಧಿಸಿದ 350ಕ್ಕೂ ಅಧಿಕ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿದೆ. ಉದಯೋನ್ಮುಖ ವೃತ್ತಿಪರರನ್ನು ರೂಪಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಯಾವ ಹುದ್ದೆಗಳು ಎಷ್ಟೆಷ್ಟು?
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನಲ್ಲಿ ಒಟ್ಟು 340 ಪ್ರೊಬೇಷನರಿ ಇಂಜಿನಿಯರ್ ಹುದ್ದೆಗಳ ನೇಮಕಾತಿ ನಡೆಯಲಿದ್ದು; ಹುದ್ದೆಗಳ ವಿವರ ಈ ಕೆಳಗಿನಂತಿದೆ:
- ಎಲೆಕ್ಟ್ರಾನಿಕ್ಸ್ ಗ್ರೇಡ್ II: 175
- ಮೆಕಾನಿಕಲ್ ಗ್ರೇಡ್ II: 109
- ಕಂಪ್ಯೂಟರ್ ಸೈನ್ಸ್ ಗ್ರೇಡ್ II: 42
- ಎಲೆಕ್ಟಿಕಲ್ ಗ್ರೇಡ್ II: 14
ಎಲ್ಲೆಲ್ಲಿ ಅವಕಾಶವಿದೆ?
ಬೆಂಗಳೂರು, ಚೆನ್ನೈ, ಹೈದರಾಬಾದ್/ ಇಬ್ರಾಹಿಂಪಪಟ್ಟಣಂ, ನವಿ ಮುಂಬೈ, ಮಚಲಿಪಟ್ಟಣ (ಆಂಧ್ರಪಪ್ರದೇಶ), ಗಾಜಿಯಾಬಾದ್(ಯುಪಿ), ಪಂಚಕುಲಾ (ಹರಿಯಾಣ) ಹಾಗೂ ಕೋಟ್ ದ್ವಾರಾ (ಉತ್ತರಾಖಾಂಡ) ಗಳಲ್ಲಿ ಈ ಹುದ್ದೆಗಳು ಖಾಲಿ ಇವೆ. ಸಂಸ್ಥೆಯ ಅಗತ್ಯಗಳಿಗೆ ಅನುಗುಣವಾಗಿ ಬಿಇಎಲ್‌ನ ಯಾವುದೇ ಘಟಕಗಳಲ್ಲಿ ಅಥವಾ ದೇಶದ ಯಾವುದೇ ಭಾಗದಲ್ಲಿ ಕರ್ತವ್ಯಕ್ಕೆ ನಿಯೋಜಿಸಬಹುದು.
ಇದನ್ನೂ ಓದಿ: E-Swathu- ಇನ್ಮುಂದೆ ಗ್ರಾಮ ಪಂಚಾಯತಿ ಎಲ್ಲಾ ಆಸ್ತಿಗಳಿಗೂ ಕೇವಲ 15 ದಿನಗಳಲ್ಲಿ ಇ-ಸ್ವತ್ತು ವಿತರಣೆ | ಹೊಸ ಅಧಿಸೂಚನೆ ಬಿಡುಗಡೆ
ವಿದ್ಯಾರ್ಹತೆ ಎಷ್ಟಿರಬೇಕು?
ಅಭ್ಯರ್ಥಿಗಳು ಆಯಾ ವಿಭಾಗದ ಹುದ್ದೆಗಳಿಗಾಗಿ ವಿಷಯಕ್ಕೆ ಸಂಬಂಧಿಸಿದಂತೆ ಬಿ.ಇ/ ಬಿ.ಟೆಕ್/ ಬಿಎಸ್‌ಸಿ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು. ಎಲೆಕ್ಟ್ರಾನಿಕ್ಸ್ ಹುದ್ದೆಗಳಿಗೆ ಎಲೆಕ್ಟ್ರಾನಿಕ್ಸ್, ಕಮ್ಯುನಿಕೇಷನ್, ಟೆಲಿಕಮ್ಯುನಿಕೇಷನ್ ವಿಷಯಗಳನ್ನು ವ್ಯಾಸಂಗ ಮಾಡಿರಬೇಕು.
ಮೆಕಾನಿಕಲ್, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್, ಎಲೆಕ್ಟಿಕಲ್. ಎಲೆಕ್ನಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದಿರಬೇಕು ಎಂದು ಸೂಚಿಸಲಾಗಿದೆ. ಸಾಮಾನ್ಯ, ಹಿಂದುಳಿದ, ಆರ್ಥಿಕ ದುರ್ಬಲರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಇತರರು ಉತ್ತೀರ್ಣತಾ ಅಂಕ ಪಡೆದಿರಬೇಕು.

ವಯೋಮಿತಿ ವಿವರ
ಅಕ್ಟೋಬರ್ 1ಕ್ಕೆ ಅನ್ವಯವಾಗುವಂತೆ ಗರಿಷ್ಠ 25 ವರ್ಷದವರಾಗಿರಬೇಕು. ಪರಿಶಿಷ್ಟರಿಗೆ 5, ಹಿಂದುಳಿದ ವರ್ಗದವರಿಗೆ 3 ವರ್ಷ ವಯೋಮಿತಿ ಸಡಿಲಿಕೆಯಿದೆ. ವಯೋಮಿತಿ ನಿಗದಿಗೆ 10ನೇ ಕ್ಲಾಸ್ ಅಂಕಪಟ್ಟಿ ಪರಿಗಣಿಸಲಾಗುವುದು. ಜಾತಿ ಹಾಗೂ ಇತರ ಮೀಸಲಾತಿ ಪಡೆಯಲು ಆಯಾ ಸಕ್ರಮ ಪ್ರಾಧಿಕಾರಗಳಿಂದ ಪಡೆದ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು.
ಅರ್ಜಿ ಶುಲ್ಕವೆಷ್ಟು?
ಪರಿಶಿಷ್ಟರು, ಅಂಗವಿಕಲರು, ಮಾಜಿ ಸೈನಿಕರಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಈ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯ್ತಿ ನೀಡಲಾಗಿದ್ದು, ಉಳಿದವರು 1180 ರೂ. ಪಾವತಿಸಬೇಕು.
ಕರ್ನಾಟಕದಲ್ಲಿ ರಾಜಧಾನಿ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರಿನಲ್ಲಿ ಪರೀಕ್ಷೆ ನಡೆಸಲಾಗುವುದು.
ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. ಆನ್‌ಲೈನ್ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ಮುಂದಿನ ಹಂತವಾದ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.
ಪರೀಕ್ಷೆಯ ಶೇ.85 ಅಂಕ ಹಾಗೂ ಸಂದರ್ಶನಕ್ಕೆ ಶೇ.15 ಅಂಕ ಪರಿಗಣಿಸಿ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ. ಇದಕ್ಕೂ ಮುನ್ನ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ.
ಇದನ್ನೂ ಓದಿ: PUC Pass Head Constable – ಪಿಯುಸಿ ಪಾಸಾದವರಿಗೆ ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳು | 509 ಹುದ್ದೆಗಳಿಗೆ ಅರ್ಜಿ ಆಹ್ವಾನ
ವಾರ್ಷಿಕ 13 ಲಕ್ಷ ರೂ. ವೇತನ
40,000-3% ರಿಂದ 1,40,000 ರೂ.ಗಳ ವೇತನಶ್ರೇಣಿ ಹೊಂದಿದ್ದು, ಮೂಲವೇತನದೊಂದಿಗೆ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ, ವೈದ್ಯಕೀಯ ಸೌಲಭ್ಯ ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಒಟ್ಟಾರೆ ವಾರ್ಷಿಕ 13 ಲಕ್ಷ ರೂ.ಗಳವರೆಗೆ ವೇತನ ದೊರೆಯಲಿದೆ.
ಆಯ್ಕೆಯಾದ ಅಭ್ಯರ್ಥಿಗಳು ಕನಿಷ್ಠ ಆರು ತಿಂಗಳು ತರಬೇತಿ ಪಡೆಯಬೇಕಿದೆ. ಕನಿಷ್ಠ 2 ವರ್ಷ ಸೇವೆ ಸಲ್ಲಿಸುವ ಬಾಧ್ಯತೆಗೆ ಒಳಪಟ್ಟಿರುತ್ತಾರೆ. ಉಲ್ಲಂಘಿಸಿದಲ್ಲಿ 2 ಲಕ್ಷ ರೂ. ಪಾವತಿಸಬೇಕಿರುತ್ತದೆ.
ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 14-11-2025
ಅಧಿಸೂಚನೆ ಲಿಂಕ್: Download



