Karnataka Domestic Workers Welfare Bill 2025- ಮನೆ ಕೆಲಸದವರಿಗೂ ಇನ್ಮುಂದೆ ಸರ್ಕಾರಿ ನೌಕರರಂತೆ ಸಂಬಳ-ಸವಲತ್ತುಗಳು | ‘ಕಲ್ಯಾಣ’ ಮಸೂದೆ ಮಂಡನೆ
Karnataka Domestic Workers Welfare Bill 2025

ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಮನೆ ಕೆಲಸದವರಿಗೂ ಸರ್ಕಾರಿ ನೌಕರರ ರೀತಿಯ ಸಂಬಳ-ಸವಲತ್ತುಗಳನ್ನು ನೀಡುವಂತಹ ಮಸೂದೆ ಮಂಡನೆಗೆ (Karnataka Domestic Workers Welfare Bill 2025) ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ….
ಯಾವುದೇ ಕಾನೂನಿನ ರಕ್ಷಣೆ ಇಲ್ಲದೇ, ನಿಗದಿತ ಸಂಬಳ, ಸವಲತ್ತು, ರಜೆ, ಬೋನಸ್, ಪಿಂಚಣಿಗಳಿಲ್ಲದೇ ದುಡಿಯುವ ಮನೆಗೆಲಸದವರಿಗೂ ಇನ್ಮುಂದೆ ಸರ್ಕಾರಿ ನೌಕರರ ಹಾಗೆ ಸಂಬಳ-ಸವಲತ್ತುಗಳು ಸಿಗಲಿವೆ. ಹೌದು, ಇಂತಹದೊಂದು ಮಸೂದೆ ಅಂಗೀಕಾರಕ್ಕೆ ರಾಜ್ಯ ಸರ್ಕಾರ ಅಧಿಕೃತ ಹೆಜ್ಜೆ ಇರಿಸಿದೆ.
ಮನೆಗೆಲಸ ಕಾರ್ಮಿಕರ ಜೀವನಕ್ಕೆ ಗೌರವ, ಭದ್ರತೆ ಮತ್ತು ಹಕ್ಕು ಒದಗಿಸುವ ಮಹತ್ವದ ‘ಕರ್ನಾಟಕ ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ – 2025’ (Karnataka Domestic Workers (Social Security and Welfare) Act, 2025) ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಅಂಗೀಕರಿಸಲು ಸಿದ್ಧವಾಗಿದೆ. ಆ ಮೂಲಕ ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಮನೆ ಕೆಲಸದವರಿಗೆ ಸಾಮಾಜಿಕ ಭದ್ರತೆ ಒದಗಿಸಲು ಸರ್ಕಾರ ಮುಂದಾಗಿದೆ.
ಮನೆ ಕೆಲಸದವರ ಬದುಕಿಗೆ ಹೊಸ ಆಶಾಕಿರಣ
ಈ ಮಸೂದೆಯು ಮನೆ ಕೆಲಸದವರ ಬದುಕಿಗೆ ಹೊಸ ಆಶಾಕಿರಣ ಆಗುವುದರಲ್ಲಿ ಎರಡು ಮಾತಿಲ್ಲ. ಇದರಲ್ಲಿ ಮೊದಲ ಬಾರಿಗೆ ಮನೆ ಕೆಲಸದವರಿಗೆ ಕನಿಷ್ಠ ವೇತನ, ನಿಗದಿತ ಕೆಲಸದ ಸಮಯ, ವಾರಕ್ಕೊಂದು ರಜೆ, ಮಾತೃತ್ವ ರಜೆ, ಪಿಂಚಣಿ, ಚಿಕಿತ್ಸಾ ನೆರವು, ಅಪಘಾತ ಪರಿಹಾರ ಹಾಗೂ ಕುಂದುಕೊರತೆ ಪರಿಹಾರ ಸಮಿತಿಗಳಂತಹ ಬಲಿಷ್ಠ ಅಂಶಗಳನ್ನು ಸೇರಿಸಲಾಗಿದೆ.
ಈ ಮಸೂದೆ ಅನ್ವಯ ಮನೆ ಕೆಲಸ ಮಾಡುವವರು ಹಾಗೂ ಉದ್ಯೋಗದಾತರು ಡಿಜಿಟಲ್ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಈ ನೋಂದಣಿಯಿಂದ ಮನೆಗೆಲಸದವರಿಗೆ ನೋಂದಾಯಿತ ಕಾರ್ಮಿಕರ ವಿಶೇಷತೆ ಸಿಗಲಿದದು; ಇದರಿಂದ ಅವರಿಗೆ ಕಾನೂನಾತ್ಮಕ ಹಕ್ಕುಗಳು ಲಭ್ಯವಾಗಲಿವೆ.

ಇದನ್ನೂ ಓದಿ: Free Nati Kolimari – ಗ್ರಾಮೀಣ ಮಹಿಳೆಯರಿಗೆ ಉಚಿತ ನಾಟಿ ಕೋಳಿಮರಿ ವಿತರಣೆಗೆ ಅರ್ಜಿ ಆಹ್ವಾನ
ಏನೆಲ್ಲ ಸೌಲಭ್ಯಗಳು ಸಿಗಲಿವೆ?
ಮಸೂದೆಯ ಅತ್ಯಂತ ಪ್ರಮುಖ ಅಂಶವೆಂದರೆ ‘ಕಲ್ಯಾಣ ನಿಧಿ’. ಮನೆ ಕೆಲಸದವರು ಪಡೆಯುವ ಸಂಭಾವನೆಯ ಶೇ.5ರಷ್ಟು ನಿಧಿಗೆ ಸೇರಿಸಲಾಗುತ್ತದೆ. ಈ ಹಣದಿಂದ ಮನೆ ಕೆಲಸದವರಿಗೆ ಅಗತ್ಯವಿರುವ ಸಾಮಾಜಿಕ ಭದ್ರತೆ ಕ್ರಮಗಳನ್ನು ಸರ್ಕಾರ ಜಾರಿಗೆ ತರುತ್ತದೆ.
ಈ ನಿಧಿಯಿಂದ ಅವರು ಚಿಕಿತ್ಸಾ ವೆಚ್ಚದ ನೆರವು, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಧನ, ಅಪಘಾತ ಪರಿಹಾರ ಮತ್ತು ಅಂತ್ಯಕ್ರಿಯೆ ಸಹಾಯಧನ, ನಿವೃತ್ತಿಯ ನಂತರ ಪಿಂಚಣಿ, ಇಬ್ಬರು ಮಕ್ಕಳಿಗೆ ವೇತನ ಸಹಿತ ಮಾತೃತ್ವ ರಜೆ ಪಡೆಯಬಹುದಾಗಿದೆ.
ಇದನ್ನೂ ಓದಿ: Raitara Bele Nashta Parihara- ರೈತರ ಬೆಳೆನಷ್ಟ ಪರಿಹಾರ ಹೆಚ್ಚಳ | ಯಾವ ಬೆಳೆಗೆ ಎಷ್ಟು ಪರಿಹಾರ? ಇಲ್ಲಿದೆ ಸಂಪೂರ್ಣ ಮಾಹಿತಿ
ಗೌರವದ ಬದುಕಿಗೆ ಬಲ
ಇದುವರೆಗೂ ಮನೆ ಕೆಲಸದವರು ‘ಅನೌಪಚಾರಿಕ ವಲಯದ’ ಭಾಗವಾಗಿದ್ದರು. ಆದರೆ ಈ ಮಸೂದೆ ಅವರಿಗೊಂದು ಕಾನೂನಾತ್ಮಕ ಗುರುತು, ಗೌರವ ಮತ್ತು ಹಕ್ಕಿನ ಜೀವನ ನೀಡಲಿದೆ.
ಯಾವುದೇ ಮನೆಯ ಕೆಲಸದವರು ಇನ್ನು ಮುಂದೆ ಕೇವಲ ‘ಹೆಲ್ಪರ್’ ಅಲ್ಲ; ಅವರು ಕೂಡ ನೋಂದಾಯಿತ ಕಾರ್ಮಿಕರು. ಅವರಿಗೂ ಸೌಲಭ್ಯಗಳು, ರಜೆಗಳು, ಪಿಂಚಣಿಗಳು ಸಿಗಲಿವೆ.



