
ಪ್ರತಿಷ್ಟಿತ ಸೈನಿಕ ಶಾಲೆ ಪ್ರವೇಶಕ್ಕೆ 6 ಮತ್ತು 9ನೇ ತರಗತಿ ಮಕ್ಕಳಿಂದ ಅರ್ಜಿ (Sainik School Admission 2026) ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ದೇಶಾದ್ಯಂತ ಸೈನಿಕ ಶಾಲೆಗಳಲ್ಲಿ ಪ್ರವೇಶ ಪಡೆಯಲು 6 ಮತ್ತು 9ನೇ ತರಗತಿ ಮಕ್ಕಳಿಂದ (Sainik School Admission 2026) ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಅಖಿಲ ಭಾರತ ಸೈನಿಕ ಸ್ಕೂಲ್ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆ (AISSEE 2026) ನಡಸುತ್ತದೆ. ಲಿಖಿತ ಪರೀಕ್ಷೆಯಲ್ಲಿ ಉತೀರ್ಣರಾದ ಬಾಲಕಿ ಮತ್ತು ಬಾಲಕಿಯರಿಗೆ ಪ್ರವೇಶ ನೀಡಲಾಗುತ್ತದೆ.
ಏನಿದು ಸೈನಿಕ ಶಾಲೆ
ರಕ್ಷಣಾ ಇಲಾಖೆ ಅಧೀನದಲ್ಲಿರುವ ಸೈನಿಕ ಸ್ಕೂಲ್ ಸೊಸೈಟಿ (Sainik School Society) ಮೂಲಕ ಸೈನಿಕ ಶಾಲೆಗಳನ್ನು ನಿರ್ವಹಿಸಲಾಗುತ್ತಿದೆ. ಇಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಸಿಬಿಎಸ್‌ಇ ಪಠ್ಯಕ್ರಮವನ್ನು ಬೋಧಿಸಲಾಗುತ್ತದೆ. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಇಂಡಿಯನ್ ನೇವಲ್ ಅಕಾಡೆಮಿ ಹಾಗೂ ಟ್ರೇನಿಂಗ್ ಅಕಾಡೆಮಿ ಫಾರ್ ಆಫೀಸರ್ ಸಂಸ್ಥೆಗಳಿಗೆ ಇಲ್ಲಿ ಕಡೆಟ್’ಗಳನ್ನು ರೂಪಿಸಲಾಗುತ್ತದೆ.
ರಾಜ್ಯದಲ್ಲಿ ಎಲ್ಲೆಲ್ಲಿವೆ ಸೈನಿಕ ಶಾಲೆಗಳು?
ದೇಶಾದ್ಯಂತ ಒಟ್ಟು ಸರ್ಕಾರಿ ಸ್ವಾಮ್ಯದ 33 ಹಾಗೂ ಖಾಸಗಿ ಸಹಭಾಗಿತ್ವದ 69 ಸೈನಿಕ ಶಾಲೆಗಳು ಸೇರಿ ಒಟ್ಟು 102 ಸೈನಿಕ ಶಾಲೆಗಳಿವೆ. ಕರ್ನಾಟಕದಲ್ಲಿ ಆರು ಸೈನಿಕ ಶಾಲೆಗಳನ್ನು ವಿಜಯಪುರ, ಕೊಡಗು, ಮೈಸೂರು, ಬೆಳಗಾವಿ, ಬೀದರ್ ಹಾಗೂ ರಾಯಚೂರಿನಲ್ಲಿ ಸ್ಥಾಪಿಸಲಾಗಿದೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಆರನೇ ತರಗತಿ ಪ್ರವೇಶ ಪಡೆಯಲು ಮಾರ್ಚ್ 31ಕ್ಕೆ ಅನ್ವಯಿಸುವಂತೆ 10ರಿಂದ 12ದ ಒಳಗಿರಬೇಕು. ದಿನಾಂಕ: 01-04-2014 ಮತ್ತು 31-06-2016 ಜನಿಸಿರಬೇಕು.
ಇನ್ನು 9ನೇ ತರಗತಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು 13 ರಿಂದ 15 ವರ್ಷದೊಳಗಿನವರು ಆಗಿರಬೇಕು. ದಿನಾಂಕ: 01-04-2011 ಮತ್ತು 31-06-2013ರ ನಡುವೆ ಜನಿಸಿರಬೇಕು.
ಲಿಖಿತ ಪರೀಕ್ಷೆ ಹೇಗಿರುತ್ತದೆ?
ಪ್ರವೇಶ ಪರೀಕ್ಷೆಯು ಲಿಖಿತ ಸ್ವರೂಪದಾಗಿದ್ದು, 6ನೇ ತರಗತಿಗೆ 150 ನಿಮಿಷ ಹಾಗೂ 9ನೇ ತರಗತಿಗೆ 180 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಒಎಂಆರ್ ಶೀಟ್‌ನಲ್ಲಿ ಬಹು ಆಯ್ಕೆ ಮಾದರಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ.
6ನೇ ತರಗತಿಗೆ ಭಾಷೆಗೆ ಸಂಬಂಧಿಸಿದ 25 ಪ್ರಶ್ನೆಗಳಿಗೆ 50 ಅಂಕ, ಗಣಿತದ 50 ಪ್ರಶ್ನೆಗಳಿಗೆ 150 ಅಂಕ, ಬುದ್ಧಿಮತ್ತೆ, ಸಾಮಾನ್ಯ ಜ್ಞಾನ ತಲಾ 25 ಪ್ರಶ್ನೆಗಳಿಗೆ 50 ಅಂಕಗಳಿದ್ದು, ಒಟ್ಟಾರೆ 125 ಪ್ರಶ್ನೆಗಳಿಗೆ 300 ಅಂಕಗಳು ಇರಲಿವೆ. 9ನೇ ತರಗತಿಗೆ 150 ಪ್ರಶ್ನೆಗಳಿದ್ದು, 400 ಅಂಕಗಳು ಇರುತ್ತವೆ. ತಪ್ಪು ಉತ್ತರಗಳಿಗೆ ಅಂಕಗಳನ್ನು ಕಳೆಯಲಾಗುವುದಿಲ್ಲ.
9ನೇ ತರಗತಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಮಾತ್ರ ಪರೀಕ್ಷೆ ನಡೆಸಲಾಗುತ್ತದೆ. ಆದರೆ, 6ನೇ ತರಗತಿಗೆ ಕನ್ನಡ ಸೇರಿ ಇತರ ಭಾಷೆಗಳಲ್ಲಿ ಉತ್ತರ ನೀಡಬಹುದಾಗಿದೆ. ಅರ್ಹತೆಗೆ ಪ್ರವೇಶ ಪರೀಕ್ಷೆಯ ಪ್ರತಿ ಸೆಕ್ಷನ್‌ನಲ್ಲಿ ಶೇ.25 ಅಂಕ ಹಾಗೂ ಒಟ್ಟಾರೆಯಾಗಿ ಶೇ.40 ಅಂಕಗಳನ್ನು ಗಳಿಸಬೇಕು.
ಇದನ್ನೂ ಓದಿ: KEA Recruitment 2025- ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ 708 ಹುದ್ದೆಗಳ ನೇಮಕಾತಿ | ಕೆಇಎಯಿಂದ ಅರ್ಜಿ ಆಹ್ವಾನ
ಪರೀಕ್ಷಾ ಕೇಂದ್ರಗಳು
ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ಬೈಲಕುಪ್ಪೆ, ಚಿತ್ರದುರ್ಗ, ಧಾರವಾಡ, ಕಲಬುರಗಿ, ಮಡಿಕೇರಿ, ಮಂಗಳೂರು, ಮೈಸೂರು, ಶಿವಮೊಗ್ಗಗಳಲ್ಲಿ ಪರೀಕ್ಷಾ ಕೇಂದ್ರಗಳು ಇರುತ್ತವೆ.

ಅರ್ಜಿ ಸಲ್ಲಿಕೆ ವಿಧಾನ
ಅಭ್ಯರ್ಥಿಗಳು exams.nta.nic.in ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕಿದೆ. ನಂತರ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಿ ವಿವರಗಳನ್ನು ದಾಖಲಿಸಬೇಕು ಹಾಗೂ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುವಂತೆ ಸೂಚಿಸಲಾಗಿದೆ. ಶುಲ್ಕ ಸಲ್ಲಿಕೆ ಬಳಿಕವಷ್ಟೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ವಿದ್ಯಾರ್ಥಿಗಳು ಒಂದೇ ಅರ್ಜಿ ಸಲ್ಲಿಸಬೇಕಿದ್ದು, ಒಂದಕ್ಕಿಂತ ಹೆಚ್ಚು ಅರ್ಜಿಗಳಿದ್ದಲ್ಲಿ ತಿರಸ್ಕರಿಸಲಾಗುತ್ತದೆ. ಅರ್ಜಿ ಸಲ್ಲಿಸುವ ಮುನ್ನ ಮಾಹಿತಿ ಕೈಪಿಡಿಯನ್ನು ಡೌನ್‌ಲೋಡ್ ಮಾಡಿಕೊಂಡು ಗಮನಿಸುವಂತೆ ಸೂಚಿಸಲಾಗಿದೆ.
ಪ್ರವೇಶಪತ್ರದಲ್ಲಿ ನಮೂದಾಗುವ ಪರೀಕ್ಷಾ ದಿನ, ಸ್ಥಳ ಹಾಗೂ ಪರೀಕ್ಷಾ ಕೇಂದ್ರದ ಬದಲಾವಣೆ ಮನವಿ ಪುರಸ್ಕರಿಸಲಾಗುವುದಿಲ್ಲ, ಜತೆಗೆ ಪರೀಕ್ಷಾ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ.
ಸೀಟುಗಳ ಹಂಚಿಕೆ ಹೇಗೆ?
ಆಯಾ ಸೈನಿಕ ಶಾಲೆಗಳ ಒಟ್ಟಾರೆ ಸೀಟುಗಳಲ್ಲಿ ಶೇ.67 ಸ್ಥಾನಗಳನ್ನು ಆಯಾ ರಾಜ್ಯದವರಿಗೆ ಮೀಸಲಾಗಿರಿಸಲಾಗಿದೆ. ಉಳಿದ ಶೇ.37 ಸೀಟುಗಳನ್ನು ಹೊರರಾಜ್ಯದವರಿಗೆ ನೀಡಲಾಗುತ್ತದೆ. ಹೀಗಾಗಿ ದೇಶದ ಯಾವುದೇ ಸೈನಿಕ ಶಾಲೆಗಳಲ್ಲಿ ಪ್ರವೇಶ ಪಡೆಯುವ ಅವಕಾಶ ವಿದ್ಯಾರ್ಥಿಗಳಿಗೆ ಇರಲಿದೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಕೊನೆಯ ದಿನ: 30-10-2025
- ಶುಲ್ಕ ಪಾವತಿಗೆ ಕೊನೆಯ ದಿನ: 31-10-2025
- ಅರ್ಜಿ ತಿದ್ದುಪಡಿ ಅವಕಾಶ: ನವೆಂಬರ್ 2-4ರ ವರೆಗೆ
- ಲಿಖಿತ ಪರೀಕ್ಷೆ ಅವಧಿ: 2026ರ ಜನವರಿ
Minimum Balance Rule Cancelled- ಇನ್ಮುಂದೆ ಈ ಬ್ಯಾಂಕ್ ಖಾತೆಗಳಲ್ಲಿ `ಕನಿಷ್ಠ ಬ್ಯಾಲೆನ್ಸ್’ ನಿಯಮ ರದ್ದು!



