
ಇನ್ಮುಂದೆ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಟ ಬ್ಯಾಲೆನ್ಸ್ (Minimum Balance Rule Cancelled) ಕಿರಿಕಿರಿ ಇರುವುದಿಲ್ಲ. ದೇಶದ ಹಲವು ಬ್ಯಾಂಕುಗಳು ಈ ನಿಬಂಧನೆಯನ್ನು ರದ್ದು ಮಾಡಿದ್ದು; ಈ ಕುರಿತ ಮಾಹಿತಿ ಇಲ್ಲಿದೆ…
ಬ್ಯಾಂಕ್ ಖಾತೆ ವಿಚಾರವಾಗಿ ಸಿಹಿಸುದ್ದಿಯೊಂದು ಹೊರ ಬಿದ್ದಿದೆ. ಇನ್ಮುಂದೆ ಉಳಿತಾಯ ಖಾತೆಯಲ್ಲಿ (Savings Bank Accounts) ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯವಿಲ್ಲ. ನಿಗದಿತ ಹಣ ಇಲ್ಲದಿದ್ದರೆ, ದಂಡ ತೆರುವ ಕಿರಿಕಿರಿ ಇರುವುದಿಲ್ಲ.
ಹೌದು, ದೇಶದ ಪ್ರಮುಖ ಸರ್ಕಾರಿ ಬ್ಯಾಂಕುಗಳು ಉಳಿತಾಯ ಖಾತೆಗಳಲ್ಲಿ ಕನಿಷ್ಟ ಕಾಯ್ದುಕೊಳ್ಳುವ ನಿಬಂಧನೆಯನ್ನು ಸಂಪೂರ್ಣ ತೆಗೆದು ಹಾಕಿವೆ. ಕನಿಷ್ಠ ಬ್ಯಾಲೆನ್ಸ್ ಕಿರಿಕಿರಿ ಹಾಗೂ ದಂಡ ಪಾವತಿಸುವ ಒತ್ತಡಕ್ಕೆ ಈ ಪ್ರಮುಖ ಬ್ಯಾಂಕುಗಳು ಇತಿಶ್ರೀ ಹಾಡಿವೆ.
ಇದನ್ನೂ ಓದಿ: ಅಕ್ಟೋಬರ್ ತಿಂಗಳಿನಲ್ಲಿ ಸಾಲು ಸಾಲು ಸರ್ಕಾರಿ ರಜೆ | ಯಾರಿಗೆ ಎಷ್ಟೆಷ್ಟು ರಜೆ? ಸಂಪೂರ್ಣ ಮಾಹಿತಿ ಇಲ್ಲಿದೆ…
ಕನಿಷ್ಟ ಬ್ಯಾಲೆನ್ಸ್ ನಿಯಮ ರದ್ದಾದ ಬ್ಯಾಂಕುಗಳು
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SಃI)
- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
- ಬ್ಯಾಂಕ್ ಆಫ್ ಬರೋಡಾ
- ಇಂಡಿಯನ್ ಬ್ಯಾಂಕ್
- ಕೆನರಾ ಬ್ಯಾಂಕ್
- ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)
- ಬ್ಯಾಂಕ್ ಆಫ್ ಇಂಡಿಯಾ
- ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (IBO)
ಕಳೆದ ಸೆಪ್ಟೆಂಬರ್ 30, 2025ರಂದು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ತನ್ನ ಎಸ್ಬಿ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಅಗತ್ಯವನ್ನು ಅಕ್ಟೋಬರ್ 1, 2025 ರಿಂದ ಸಂಪೂರ್ಣವಾಗಿ ತೆಗೆದು ಹಾಕುತ್ತಿರುವುದಾಗಿ ಘೋಷಿಸಿದೆ. ಅಲ್ಲಿಗೆ ಒಟ್ಟು ಎಂಟು ಬ್ಯಾಂಕುಗಳು ಕನಿಷ್ಠ ಬ್ಯಾಲೆನ್ಸ್ ನಿಬಂಧನೆ ರದ್ದುಗೊಳಿಸಿದಂತಾಗಿದೆ.

ಇದನ್ನೂ ಓದಿ: ಪಿಯುಸಿ ಪಾಸಾದವರಿಗೆ ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳು | 509 ಹುದ್ದೆಗಳಿಗೆ ಅರ್ಜಿ ಆಹ್ವಾನ
ಬ್ಯಾಂಕುಗಳು ಈ ನಿರ್ಧಾರಕ್ಕೆ ಯಾಕೆ ಬಂದವು?
ಕಳೆದ ಕೆಲವು ವರ್ಷಗಳಲ್ಲಿ ಬ್ಯಾಂಕುಗಳು ಜನರನ್ನು ಅಧಿಕೃತ ಬ್ಯಾಂಕಿಂಗ್ ವ್ಯವಸ್ಥೆಯತ್ತ ಆಕರ್ಷಿಸಲು ಹಲವು ಪ್ರಯತ್ನಗಳನ್ನು ಕೈಗೊಂಡಿವೆ. ಆದರೆ ಕನಿಷ್ಠ ಬ್ಯಾಲೆನ್ಸ್ ನಿಯಮದಿಂದ ಬಡ ಜನರು ಖಾತೆ ತೆರೆದು ಅದನ್ನು ಬಳಸದೆ ಬಿಟ್ಟುಬಿಡುವ ಪರಿಸ್ಥಿತಿ ಎದುರಿಸುತ್ತಿದ್ದರು.
ಈ ಸಮಸ್ಯೆಯನ್ನು ಅರಿತು, ಬ್ಯಾಂಕುಗಳು ಈಗ ‘ಗ್ರಾಹಕಸ್ನೇಹಿ’ ನೀತಿ ಅಳವಡಿಸಿಕೊಂಡಿವೆ. ಪ್ರತಿ ನಾಗರಿಕನಿಗೂ ಬ್ಯಾಂಕಿAಗ್ ಸೌಲಭ್ಯ ಸಿಗಬೇಕು ಎಂಬ ಧ್ಯೇಯದತ್ತ ಈ ಕ್ರಮ ನಿಜವಾದ ಹೆಜ್ಜೆಯಾಗಿದೆ.
ಇದನ್ನೂ ಓದಿ: ಮೊಬೈಲ್‌ನಲ್ಲಿ ನೀವೇ ಮಾಡಿಕೊಳ್ಳಿ ಜಾತಿಗಣತಿ ಸಮೀಕ್ಷೆ | ನೇರ ಲಿಂಕ್ ಇಲ್ಲಿದೆ…
ಇದರಿಂದ ಯಾರಿಗೆ ಹೆಚ್ಚು ಲಾಭ?
ಆರ್ಥಿಕ ಸಂಕಷ್ಟ ಅಥವಾ ನಿರ್ಲಕ್ಷ್ಯದಿಂದಾಗಿ ತಮ್ಮ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಲು ಸಾಧ್ಯವಾಗದ ಮತ್ತು ಆಗಾಗ್ಗೆ ದಂಡ ವಿಧಿಸಲ್ಪಡುವ ಗ್ರಾಹಕರಿಗೆ ಈ ನಿರ್ಧಾರವು ವಿಶೇಷವಾಗಿ ಪ್ರಯೋಜನವನ್ನು ನೀಡುತ್ತದೆ. ಪ್ರಮುಖವಾಗಿ ಪಿಂಚಣಿದಾರರಿಗೆ ದೊಡ್ಡ ಪ್ರಯೋಜನವಾಗಲಿದೆ.
ಈ ಹೊಸ ಗ್ರಾಹಕಸ್ನೇಹಿ ವ್ಯವಸ್ಥೆಯು ಭಾರತೀಯ ಬ್ಯಾಂಕಿಂಗ್ ವಲಯದಲ್ಲಿ ಮತ್ತಷ್ಟು ಸುಧಾರಣೆಗಳ ಭರವಸೆಯನ್ನು ಹುಟ್ಟುಹಾಕುತ್ತದೆ. ವಿಶೇಷವಾಗಿ ಕಡಿಮೆ ಅಥವಾ ಅನಿಯಮಿತ ಬ್ಯಾಂಕಿಂಗ್ ಅಗತ್ಯತೆಗಳನ್ನು ಹೊಂದಿರುವವರಿಗೆ ಮತ್ತು ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಲು ಸಾಧ್ಯವಾಗದವರಿಗೆ ಇದರ ದೊಡ್ಡ ಪ್ರಯೋಜನ ಸಿಗಲಿದೆ.
ಇದನ್ನೂ ಓದಿ: ಕಡಿಮೆ ಬಡ್ಡಿಯಲ್ಲಿ ಪರ್ಸನಲ್ ಲೋನ್ ಪಡೆಯಲು ಈ ಬ್ಯಾಂಕುಗಳು ಬೆಸ್ಟ್ | ಟಾಪ್ ಫೈವ್ ಬ್ಯಾಂಕುಗಳ ಪಟ್ಟಿ ಇಲ್ಲಿದೆ…



