
ಬಿಡಿಎ, ಕೆಎಸ್‌ಆರ್‌ಟಿಸಿ ಸೇರಿ ರಾಜ್ಯ ಸರ್ಕಾರದ ವಿವಿಧ ಇಲಾಖೆ-ನಿಗಮಗಳ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ (KEA Recruitment 2025) ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯ ಸರ್ಕಾರ ವಿವಿಧ ಇಲಾಖೆ, ನಿಗಮ-ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ವಿವಿಧ ಇಲಾಖೆಗಳಲ್ಲಿನ ಒಟ್ಟು 708 ಹುದ್ದೆಗಳ ಭರ್ತಿಗೆ ಮುಂದಾಗಿದ್ದು, ಇದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಧಿಸೂಚನೆ ಪ್ರಕಟಿಸಿದೆ.
ಸರ್ಕಾರಿ ಇಲಾಖೆ, ನಿಗಮ, ಸಂಸ್ಥೆಗಳಲ್ಲಿ ಉಳಿಕೆ ಮೂಲವೃಂದದ 387, ಕಲ್ಯಾಣ ಕರ್ನಾಟಕ ವೃಂದದ 321 ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯಲಿದೆ. ಇಂದಿನಿಂದ (ಅಕ್ಟೋಬರ್9) ಅರ್ಜಿ ಸಲ್ಲಿಕೆ ಆರಂಭವಾಗಿದ್ದು; ನವೆಂಬರ್ 01ರ ವೆಗೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: Dasara Holiday Extension- ಮತ್ತೆ 10 ದಿನ ದಸರಾ ರಜೆ ವಿಸ್ತರಣೆ | ಅಕ್ಟೋಬರ್ 23ರಿಂದ ಶಾಲೆಗಳು ಆರಂಭ
ಯಾವ್ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಹುದ್ದೆಗಳು?
- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ): 25
- ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ಸ್: 21
- ರಾಜೀವ್‌ಗಾಂಧಿ ಆರೋಗ್ಯ ವಿವಿ: 44
- ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ: 316
- ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ: 19
- ಕೃಷಿ ಮಾರಾಟ ಇಲಾಖೆ: 180
- ತಾಂತ್ರಿಕ ಶಿಕ್ಷಣ ಇಲಾಖೆ: 93
- ಶಾಲಾ ಶಿಕ್ಷಣ ಇಲಾಖೆ (ಪಿಯು): 10
- ಒಟ್ಟು ಹುದ್ದೆಗಳು: 708
ಪ್ರತಿ ಇಲಾಖೆಯಲ್ಲಿ ಲಭ್ಯವಿರುವ ಹುದ್ದೆಗಳು ಹಾಗೂ ಅವುಗಳಿಗೆ ನಿಗದಿಯಾಗಿರುವ ವಿದ್ಯಾರ್ಹತೆ ಮತ್ತು ವಯೋಮಾನವನ್ನು ಪ್ರಾಧಿಕಾರದ ವಿಸ್ತ್ರತ ಅಧಿಸೂಚನೆಯಲ್ಲಿ ಅಕ್ಟೋಬರ್ 9ರಂದು ನೀಡಲಾಗುತ್ತದೆ. ಪ್ರವರ್ಗವಾರು ಮೀಸಲು, ಅರ್ಜಿ ಸಲ್ಲಿಸುವ ವಿಧಾನ, ಸ್ಪರ್ಧಾತ್ಮಕ ಪರೀಕ್ಷೆಯ ವಿಷಯಗಳು, ಪ್ರವರ್ಗವಾರು ಹುದ್ದೆಗಳ ಮಾಹಿತಿ ನೀಡಲಾಗುತ್ತದೆ ಎಂದು ಪ್ರಾಧಿಕಾರ ಹೇಳಿದೆ.

ಯಾವ್ಯಾವ ಹುದ್ದೆಗಳು?
ಸಹಾಯಕ, ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕ, ಮಾರುಕಟ್ಟೆ ಅಧಿಕಾರಿ, ಕಿರಿಯ ಅಧಿಕಾರಿ, ಇಂಜಿನಿಯರ್, ಗ್ರಂಥಪಾಲಕ, ಸಂಚಾರ ನಿರೀಕ್ಷಕ, ನಿರ್ವಾಹಕ, ಸಹಾಯಕ ಲೆಕ್ಕಿಗ ಸೇರಿದಂತೆ ಹತ್ತು ಪದನಾದದ ಹುದ್ದೆಗಳ ಭರ್ತಿ ನಡೆಯಲಿವೆ.
ಒಂದೇ ಪಠ್ಯಕ್ರಮವಿರುವ ವಿವಿಧ ಇಲಾಖೆಗಳ ಹುದ್ದೆಗಳಿಗೆ ಒಂದೇ ಪರೀಕ್ಷೆಯನ್ನು ನಡೆಸಿ, ಸಂಬAಧಪಟ್ಟ ಇಲಾಖೆಗಳಿಗೆ ಮೆರಿಟ್ ಪಟ್ಟಿಯನ್ನು ಒದಗಿಸಲಾಗುತ್ತದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: PUC Pass Head Constable – ಪಿಯುಸಿ ಪಾಸಾದವರಿಗೆ ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳು | 509 ಹುದ್ದೆಗಳಿಗೆ ಅರ್ಜಿ ಆಹ್ವಾನ
ಇಲಾಖೆವಾರು ಹುದ್ದಗಳ ವಿವರ
ಬಿಡಿಎ ಅರ್ಥಾತ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ 25 ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿವೆ.
ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್’ನಲ್ಲಿ ಲೆಕ್ಕಪತ್ರ- ಮಾರುಕಟ್ಟೆ ಅಧಿಕಾರಿ, ವಿವಿಧ ವಿಭಾಗಗಳಲ್ಲಿ ಕಿರಿಯ ಅಧಿಕಾರಿಗಳ ಒಟ್ಟು 21 ಹುದ್ದೆಗಳನ್ನು ಗುರುತಿಸಲಾಗಿದೆ.
ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ಜೂನಿಯರ್ ಪ್ರೋಗ್ರಾಮರ್, ಸಹಾಯಕ ಇಂಜಿನಿಯರ್, ಸಹಾಯಕ ಗ್ರಂಥಪಾಲಕ, ಸಹಾಯಕ, ಕಿರಿಯ ಸಹಾಯಕ ಸೇರಿ ಒಟ್ಟು 44 ಹುದ್ದೆಗಳಿವೆ.
ಇದನ್ನೂ ಓದಿ: Sub Inspector Recruitment- 3,073 ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಸುವರ್ಣಾವಕಾಶ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 316 ಸಹಾಯಕ ಲೆಕ್ಕಿಗ ಹಾಗೂ ನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ವಾಯವ್ಯ ಕರ್ನಾಟಕ ಸಾರಿಗೆ ನಿಗಮದಲ್ಲಿ 19 ಸಹಾಯಕ ಸಂಚಾರ ನಿರೀಕ್ಷಕ ಹುದ್ದೆಗಳಿವೆ.
ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಅಭಿಯಂತರ, ಕಿರಿಯ ಅಭಿಯಂತರ, ಮಾರುಕಟ್ಟೆ ಮೇಲ್ವಿಚಾರಕ, ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರು, ಮಾರಾಟ ಸಹಾಯಕ ಸೇರಿ ಒಟ್ಟು 180 ಹುದ್ದೆಗಳಿವೆ.
ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ 93 ಪ್ರಥಮ ದರ್ಜೆ ಸಹಾಯಕ ಹುದ್ದೆಗಳು ಹಾಗೂ ಶಾಲಾ ಶಿಕ್ಷಣ ಇಲಾಖೆಯಲ್ಲಿ 10 ಗ್ರಂಥಪಾಲಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 01-11-2025
- ಅಧಿಸೂಚನೆ: Download
- ಅಧಿಕೃತ ಜಾಲತಾಣ: cetonline.karnataka.gov.in/kea



