
ವಿದ್ಯಾರ್ಥಿನಿಯರಿಗೆ 1 ಲಕ್ಷ ರೂ. ಆರ್ಥಿಕ ನೆರವು ನೀಡಲು ಇನ್ಫೋಸಿಸ್ ಫೌಂಡೇಶನ್ ವತಿಯಿಂದ (Infosys Foundation STEM Scholarship) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಪ್ರತಿಷ್ಠಿತ ಇನ್ಫೋಸಿಸ್ ಫೌಂಡೇಶನ್ ವಿದ್ಯಾರ್ಥಿನಿಯರಿಗೆ ವಿಶೇಷವಾಗಿ ಆರ್ಥಿಕ ಬೆಂಬಲ ನೀಡಲು ‘Infosys Foundation STEM Stars Scholarship’ ಕಾರ್ಯಕ್ರಮವನ್ನು ಆಯೋಜಿಸಿದೆ. ಸದರಿ ಕಾರ್ಯಕ್ರಮದಡಿ 2025-26ನೇ ಸಾಲಿಗೆ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನಿಸಿದೆ.
ವಿಜ್ಞಾನ, ತಂತ್ರಜ್ಞಾನ, ಇಂಜನೀಯರಿಂಗ್ ಹಾಗೂ ಗಣಿತ ವಿಷಯಗಳನ್ನೊಳಗೊಂಡ STEM (Science, Technology, Engineering and Mathematics) ಪದವಿಪೂರ್ವ ಕೋರ್ಸ್ ಅನ್ನು ಮುಂದುವರಿಸಲು ಬಯಸುವ ಮಹಿಳಾ ವಿದ್ಯಾರ್ಥಿಗಳಿಗೆ ಈ ಸಹಾಯಧನ ನೀಡಲಾಗುತ್ತದೆ.
ಇದನ್ನೂ ಓದಿ: KEA Recruitment 2025- ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ 708 ಹುದ್ದೆಗಳ ನೇಮಕಾತಿ | ಕೆಇಎಯಿಂದ ಅರ್ಜಿ ಆಹ್ವಾನ
ವಿದ್ಯಾರ್ಥಿವೇತನ ಮೊತ್ತವೆಷ್ಟು?
STEM ಕೋರ್ಸ್ ಅವಧಿಗೆ ವಿದ್ಯಾರ್ಥಿವೇತನವು ₹1,00,000 ವರೆಗಿನ ಸಂಪೂರ್ಣ ಆರ್ಥಿಕ ಬೆಂಬಲವನ್ನು ನೀಡುತ್ತದೆ. ಇದು ಕೋರ್ಸ್ ಅವದಿಗೆ ಅಧ್ಯಯನ ಸಾಮಗ್ರಿಗಳು ಹಾಗೂ ಹಾಸ್ಟೆಲ್ ವೆಚ್ಚವಾಗಿ ಈ ಮೊತ್ತವನ್ನು ವಿದ್ಯಾರ್ಥಿನಿಯರು ಬಳಸಬಹುದಾಗಿದೆ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು?
- ಅಭ್ಯರ್ಥಿಗಳು ಭಾರತೀಯ ವಿದ್ಯಾರ್ಥಿನಿಯರಾಗಿರಬೇಕು ಹಾಗೂ 12ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
- ವಿದ್ಯಾರ್ಥಿಗಳು NIRF ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪದವಿಪೂರ್ವ STEM ಸಂಬಂಧಿತ ಕೋರ್ಸ್ಗಳಿಗೆ ದಾಖಲಾಗಿರಬೇಕು.
- ಎರಡನೇ ವರ್ಷದ ಬಿ.ಆರ್ಕ್ ಅಥವಾ ಐದು ವರ್ಷಗಳ ಇಂಟಿಗ್ರೇಟೆಡ್/ಡ್ಯುಯಲ್ ಪದವಿ ಕೋರ್ಸ್’ಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
- ಪ್ರಮುಖವಾಗಿ ವಿದ್ಯಾರ್ಥಿನಿಯರ ಕುಟುಂಬದ ವಾರ್ಷಿಕ ಆದಾಯವು ₹8 ಲಕ್ಷಕ್ಕಿಂತ ಕಡಿಮೆ ಅಥವಾ ಸಮಾನವಾಗಿರಬೇಕು.
ಅರ್ಜಿ ಸಲ್ಲಿಕೆ ಬೇಕಾಗುವ ಅಗತ್ಯ ದಾಖಲೆಗಳು
- ಪ್ರಸ್ತುತ ಪಾಸ್‌ಪೋರ್ಟ್ ಗಾತ್ರದ ಫೋಟೋ
- ಜೆಇಇ ಮುಖ್ಯ/ಸಿಇಟಿ/ನೀಟ್ ಅಂಕಪಟ್ಟಿ ಮತ್ತು 12ನೇ ತರಗತಿಯ ಅಂಕಪಟ್ಟಿ ಮತ್ತು ಉತ್ತೀರ್ಣ ಪ್ರಮಾಣಪತ್ರಗಳು
- ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ರೇಷನ್ ಕಾರ್ಡ್ (ಯಾವುದಾದರು ಒಂದು)
- ಪ್ರಸ್ತುತ ವರ್ಷದ ಪ್ರವೇಶದ ಪುರಾವೆ
- ಕುಟುಂಬದ ಆದಾಯ ಪ್ರಮಾಣಪತ್ರ
- ಕಳೆದ 6 ತಿಂಗಳ ವಿದ್ಯುತ್ ಬಿಲ್
- ಬ್ಯಾಂಕ್ ಖಾತೆ ವಿವರಗಳು
ಅರ್ಜಿ ಸಲ್ಲಿಸುವ ವಿಧಾನ
ಇನ್ಫೋಸಿಸ್ ಫೌಂಡೇಶನ್ ‘Infosys Foundation STEM Stars Scholarship’ ಪಡೆಯಲು ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಅದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ:
ಹಂತ-1: ಮೊದಲು ಈ ಅಧಿಕೃತ ಲಿಂಕ್ Infosys STEM Stars Scholarship ಬಳಸಿಕೊಂಡು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ. ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು ಹಾಗೂ ಮೊಬೈಲ್ ನಂಬರ್ ಅಥವಾ ಇ-ಮೇಲ್ ಐಡಿ ಮುಖಾಂತರ ರಿಜಿಸ್ಟರ್ ಮಾಡಿಕೊಳ್ಳಿ. ರಿಜಿಸ್ಟರ್ ಆದ ನಂತರ ಪುನಃ ವೆಬ್‌ಸೈಟ್ ಪೋರ್ಟಲ್’ಗೆ ಹೋಗಿ ಲಾಗಿನ್ ಮಾಡಿ.
ಹಂತ-2: ಲಾಗಿನ್ ಆದ ನಂತರ ಇನ್ಫೋಸಿಸ್ ಫೌಂಡೇಶನ್ ಸ್ಕಾಲರ್ಶಿಪ್ 2025 ಆಪ್ಷನ್’ಗೆ ಹೋಗಿ ಕ್ಲಿಕ್ ಮಾಡಿ. ಆಗ ನಿಮಗೆ ಒಂದು ಅರ್ಜಿ ಫಾರಂ ತೆರೆದುಕೊಳ್ಳುತ್ತದೆ. ಅದನ್ನು ಸರಿಯಾಗಿ ಭರ್ತಿ ಮಾಡಿ.
ಹಂತ-3: ಅಲ್ಲಿ ಕೇಳಲಾಗುವ ಎಲ್ಲಾ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಹಾಗೂ ಅಪ್ಲೋಡ್ ಮಾಡಿ. ಅಪ್ಲೋಡ್ ಮಾಡಿಕೊಂಡಿದ ನಂತರ ನಿಮ್ಮ ಅರ್ಜಿಯನ್ನು ಪುನಃ ಪರಿಶೀಲಿಸಿ ನಂತರ Submit ಬಟನ್ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ಪ್ರಕ್ರಿಯೆ ಮುಗಿಯುತ್ತದೆ.
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 30-10-2025
ಅರ್ಜಿ ಲಿಂಕ್: Infosys STEM Stars Scholarship



