
ರೈಲ್ವೆ ನೇಮಕಾತಿ ಮಂಡಳಿಯು (ಆರ್‌ಆರ್‌ಬಿ) ಮತ್ತೊಂದು ಅಧಿಸೂಚನೆಯನ್ನು ಹೊರಡಿಸಿದ್ದು, ಈ ಬಾರಿ ದೇಶಾದ್ಯಂತ ವಿವಿಧ ವಲಯಗಳಲ್ಲಿ ಜೂನಿಯರ್ ಇಂಜಿನಿಯರ್‌ಗಳ (Railway JE Recruitment 2025) ಭರ್ತಿಗೆ ಅರ್ಜಿ ಆಹ್ವಾನಿಸಿದೆ…
ಬೆಂಗಳೂರು ಸೇರಿದಂತೆ ಒಟ್ಟು 21 ಆರ್‌ಆರ್‌ಬಿಗಳಲ್ಲಿ 2,569 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಮುಂಬೈ ವಲಯದಲ್ಲಿ ಅತ್ಯಧಿಕ 624 ಹುದ್ದೆಗಳಿದ್ದರೆ, ಬೆಂಗಳೂರಿನಲ್ಲಿ 80 ಹುದ್ದೆಗಳನ್ನು ಗುರುತಿಸಲಾಗಿದೆ.
ಜೂನಿಯರ್ ಇಂಜಿನಿಯರ್ (ಜೆಇ), ಕೆಮಿಕಲ್ ಆ್ಯಂಡ್ ಮೆಟಲರ್ಜಿಕಲ್ ಅಸಿಸ್ಟೆಂಟ್ (ಸಿಎಂಎ) ಹಾಗೂ ಡಿಪೋ ಮೆಟಿರಿಯಲ್ ಸೂಪರಿಂಟೆಂಡೆಂಟ್ (ಡಿಎಂಎಸ್) ಮೂರು ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಹುದ್ದೆಗಳು?
- ಬೆಂಗಳೂರು: 80
- ಚೆನ್ನೈ: 160
- ಸಿಕಂದರಾಬಾದ್: 103
- ತಿರುವನಂತಪುರA: 62
- ಮುಂಬೈ: 434
- ಕೋಲ್ಕತ: 628
- ಅಹಮದಾಬಾದ್: 151
- ಬಿಲಾಸ್‌ಪುರ: 127
ವಿದ್ಯಾರ್ಹತೆ ವಿವರ
ರೈಲ್ವೆ ಇಲಾಖೆಯ ಈ ಹುದ್ದೆಗಳಿಗೆ ತಾಂತ್ರಿಕ ಶಿಕ್ಷಣಗಳಲ್ಲಿ ಬಿಇ, ಬಿ.ಟೆಕ್ ಸೇರಿ ಇತರ ಪದವಿ, ಡಿಪ್ಲೋಮಾ ಪೂರೈಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಮುಖ್ಯವಾಗಿ ಸಿವಿಲ್, ಎಲೆಕ್ಟ್ರಿಕಲ್, ಮೆಕಾನಿಕಲ್, ಅಟೋಮೊಬೈಲ್, ಎಲೆಕ್ಟ್ರಾನಿಕ್ಸ್, ಕೆಮಿಕಲ್, ಡಿಸೈನ್ ಮೊದಲಾದ ವಿಷಯಗಳಲ್ಲಿ ವ್ಯಾಸಂಗ ಮಾಡಿದವರಿಗೆ ಅವಕಾಶವಿದೆ.
ಅಭ್ಯರ್ಥಿಗಳು ಮೂರು ವರ್ಷಗಳ ಡಿಪ್ಲೊಮಾ/ ಭೌತಶಾಸ್ತ್ರ, ರಸಾಯನಶಾಸ್ತ್ರದಲ್ಲಿ ಬಿಎಸ್‌ಸಿ/ ಬಿ.ಇ. ಬಿಟೆಕ್ ಪದವಿ ಹಾಗೂ ತತ್ಸಮಾನ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ವಯೋಮಿತಿ ವಿವರ
ಕನಿಷ್ಟ 18 ಮತ್ತು ಗರಿಷ್ಟ 33 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು; 2026ರ ಜನವರಿ 1ಕ್ಕೆ ಅನ್ವಯವಾಗುವಂತೆ ವಯೋಮಿತಿಯನ್ನು ಪರಿಗಣಿಸಲಾಗುತ್ತದೆ.
ದಿನಾಂಕ: 02-01-1993 ರಿಂದ 01-01-2008ರ ನಡುವೆ ಜನಿಸಿರಬೇಕು. ಇನ್ನುಳಿದಂತೆ ಆಯಾ ವರ್ಗದ ಮೀಸಲಾತಿಗೆ ಅನುಗುಣವಾಗಿ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕದ ವಿವರ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಹಿಳೆಯರು, ಪರಿಶಿಷ್ಟರು, ಮಾಜಿ ಸೈನಿಕರು, ಆರ್ಥಿಕವಾಗಿ ಹಿಂದುಳಿದವರಿಗೆ 250 ರೂ. ಹಾಗೂ ಉಳಿದ ವರ್ಗಗಳ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಈ ಪೈಕಿ ಮೊದಲ ಹಂತದ ಪರೀಕ್ಷೆಗೆ ಹಾಜರಾದವರಿಗೆ ಪಾವತಿಸಿದ ಶುಲ್ಕದಲ್ಲಿ 250 ರೂ. ಹಾಗೂ 400 ರೂ.ಗಳನ್ನು ಮರು ಪಾವತಿಸಲಾಗುತ್ತದೆ.
ನೇಮಕಾತಿ ಪ್ರಕ್ರಿಯೆ ಹೇಗೆ?
ಎರಡು ಹಂತದ ಕಂಪ್ಯೂಟರ್ ಪರೀಕ್ಷೆ ನಡೆಸಲಾಗುತ್ತದೆ. ಮೊದಲ ಹಂತದ ಕಂಪ್ಯೂಟರ್ ಪರೀಕ್ಷೆಯಲ್ಲಿ ಅರ್ಹತೆ ಪಡೆದವರನ್ನು ಎರಡನೇ ಹಂತಕ್ಕೆ ಪರಿಗಣಿಸಲಾಗುತ್ತದೆ. ಇದರಲ್ಲಿ ಆಯ್ಕೆಯಾದವರ ದಾಖಲಾತಿಗಳನ್ನು ಪರಿಶೀಲಿಸಿ, ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಲಾಗುತ್ತದೆ.
ಮೊದಲ ಹಂತದ ಪರೀಕ್ಷೆಯಲ್ಲಿ 100 ಪ್ರಶ್ನೆಗಳಿಗೆ 90 ನಿಮಿಷಗಳಲ್ಲಿ ಉತ್ತರಿಸಬೇಕಾಗುತ್ತದೆ. ಗಣಿತ, ಸಾಮಾನ್ಯ ಬುದ್ಧಿಮತ್ತೆ ಮತ್ತು ರೀಸನಿಂಗ್, ಸಾಮಾನ್ಯ ಜ್ಞಾನ, ಸಾಮಾನ್ಯ ವಿಜ್ಞಾನದ ಪ್ರಶ್ನೆಗಳಿರುತ್ತವೆ.
ಎರಡನೇ ಹಂತದ ಪರೀಕ್ಷೆಯಲ್ಲಿ 150 ಪ್ರಶ್ನೆಗಳಿಗೆ 120 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಸಾಮಾನ್ಯ ಜ್ಞಾನ, ಭೌತಶಾಸ್ತ್ರ, ರಸಾಯನಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಪ್ರಶ್ನೆಗಳಿರುತ್ತವೆ.
ಈ ಪೈಕಿ ಹಾಗೂ ತಾಂತ್ರಿಕ ಸಾಮರ್ಥ್ಯವನ್ನು ಅಳೆಯುವ 100 ಪ್ರಶ್ನೆಗಳಿರಲಿವೆ. ತಪ್ಪಾದ ಉತ್ತರಗಳಿಗೆ ಒಟ್ಟು ಅಂಕದ 1/3 ರಷ್ಟು ಅಂಕಗಳನ್ನು ಕಡಿಮೆ ಮಾಡಲಾಗುತ್ತದೆ.
ಮಾಸಿಕ ವೇತನವೆಷ್ಟು?
ಈ ಹುದ್ದೆಗಳಿಗೆ 6ನೇ ಹಂತದ ವೇತನ ಶ್ರೇಣಿ ನಿಗದಿ ಮಾಡಲಾಗಿದ್ದು, ನೇಮಕವಾದ ಅಭ್ಯರ್ಥಿಗಳಿಗೆ ಆರಂಭದಲ್ಲಿ ಮಾಸಿಕ 35,400 ರೂ. ವೇತನ ಇರಲಿದೆ. ಇದರ ಜೊತೆಗೆ ಇತರ ಭತ್ಯೆಗಳು ಅನ್ವಯಿಸುತ್ತವೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 31-11-2025
- ಶುಲ್ಕ ಪಾವತಿಗೆ ಕೊನೆಯ ದಿನಾಂಕ: 02-12-2025
- ಅರ್ಜಿ ತಿದ್ದುಪಡಿ ಅವಕಾಶ: 03-12-2025
ಅಧಿಸೂಚನೆ: Download
ಅಧಿಕೃತ ವೆಬ್‌ಸೈಟ್: rrbbnc.gov.in



