Karnataka Early Winter- ವಾಡಿಕೆಗಿಂತ ಮೊದಲೇ ರಾಜ್ಯದಲ್ಲಿ ಈ ಬಾರಿ ರಣ ಭಯಂಕರ ಚಳಿ | ಹವಾಮಾನ ಇಲಾಖೆ ಎಚ್ಚರಿಕೆ

ಈ ಬಾರಿ ವಾಡಿಕೆಗಿಂತ ಮೊದಲೇ ರಾಜ್ಯದಲ್ಲಿ ಚಳಿ (Karnataka Early Winter) ಆವರಿಸಿದ್ದು; ದಿನೆದಿನೆ ಥಂಡಿಗಾಳಿ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
‘ಮೊಂಥ’ ಚಂಡಮಾರುತ ಆರ್ಭಟಿಸಿದ ಬಳಿಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉಷ್ಣಾಂಶ ಹಠಾತ್ ಕುಸಿದಿದ್ದು; ರಾಜ್ಯಾದ್ಯಂತ ಮೈ ಕೊರೆಯುವ ಚಳಿ ಶುರುವಾಗಿದೆ. ತತ್ಪರಿಣಾಮ ಬಹುತೇಕ ಜಿಲ್ಲೆಗಳಲ್ಲಿ ಚಳಿಯ ಹೊಡೆತಕ್ಕೆ ಗಢಗಢ ನಡುಗುವಂತಹ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ: Canara Bank Personal Loan- ಕೆನರಾ ಬ್ಯಾಂಕ್ ಪರ್ಸನಲ್ ಲೋನ್ | ಕಮ್ಮಿ ಬಡ್ಡಿದರದಲ್ಲಿ 10 ಲಕ್ಷ ರೂ. ವರೆಗೂ ಸಾಲ ಸೌಲಭ್ಯ
ವಾಡಿಕೆಗಿಂತ ಮೊದಲೇ ಚಳಿಗಾಲ
ಪ್ರತೀ ವರ್ಷ ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಚಳಿ ಆರಂಭವಾಗುವುದು ವಾಡಿಕೆ. ಆದರೆ ಈ ಬಾರಿ ಚಂಡಮಾರುತದ ಪ್ರಭಾವದಿಂದ ಮೂರು ವಾರ ಮೊದಲೇ ಶೀತಗಾಳಿ ಶುರುವಾಗಿದೆ.
ಇದು ನವೆಂಬರ್ ಕೊನೆಯ ವೇಳೆಗೆ ಮತ್ತಷ್ಟು ಉಲ್ಭಣಗೊಳ್ಳಲಿದ್ದು; ಜನ-ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಎಲ್ಲೆಲ್ಲಿ ಅಧಿಕ ಚಳಿ?
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಈಗಾಗಲೇ ತೀವ್ರ ಸ್ವರೂಪದ ಚಳಿ ಶುರುವಾಗಿದೆ. ಇದು ದಿನೆದಿನೇ ಹೆಚ್ಚಾಗುತ್ತಿದ್ದು; ಬೆಳಗಿನ ಜಾವ ನಡುಗುತ್ತ ವಾಕಿಂಗ್ ಹೋಗುವ ಪರಿಸ್ಥಿತಿ ಇದೆ.

‘ಮೊಂಥ’ ಚಂಡಮಾರುತ ಆರ್ಭಟಿಸಿದ ನಂತರ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದಿಢೀರ್ ತಾಪಮಾನ ಕುಸಿತಗೊಂಡಿದ್ದು; ಈ ಕೆಳಗಿನ ಜಿಲ್ಲೆಗಳಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದೆ:
- ಬೆಂಗಳೂರು ನಗರ
- ಬೆಂಗಳೂರು ಗ್ರಾಮಾಂತರ
- ಹಾಸನ
- ಮಂಡ್ಯ
- ಮೈಸೂರು
- ಚಾಮರಾಜನಗರ
- ತುಮಕೂರು
- ಶಿವಮೊಗ್ಗ
- ಉಡುಪಿ
- ದಕ್ಷಿಣ ಕನ್ನಡ
- ಉತ್ತರ ಕನ್ನಡ
- ದಾವಣಗೆರೆ
- ಬೀದರ್
- ಬೆಳಗಾವಿ
ಇದನ್ನೂ ಓದಿ: E-Swathu- ಇನ್ಮುಂದೆ ಗ್ರಾಮ ಪಂಚಾಯತಿ ಎಲ್ಲಾ ಆಸ್ತಿಗಳಿಗೂ ಕೇವಲ 15 ದಿನಗಳಲ್ಲಿ ಇ-ಸ್ವತ್ತು ವಿತರಣೆ | ಹೊಸ ಅಧಿಸೂಚನೆ ಬಿಡುಗಡೆ
ಶೀತಗಾಳಿಯ ಅಬ್ಬರ
‘ಮೊಂಥ’ ಚಂಡಮಾರುತವು ಆಂಧ್ರಪ್ರದೇಶದ ಕರಾವಳಿ ತೀರದ ಮೂಲಕ ಹಾದು ಹೋಗಿದ್ದರಿಂದ ಅದು ದಕ್ಷಿಣ ಕರ್ನಾಟಕದ ಮೇಲೆ ಹೆಚ್ಚು ಪರಿಣಾಮ ಬೀರಿತ್ತು. ಹೀಗಾಗಿ ದಕ್ಷಿಣ ಕರ್ನಾಟಕದ ಪ್ರದೇಶಗಳಿಂದ ಉತ್ತರ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳತ್ತ ಶೀತಗಾಳಿ (Coldwave) ಬೀಸುವ ಸಂಭವವಿದೆ.
ಈ ಬಾರಿ ವಾಡಿಕೆಗಿಂತ ಮೊದಲೇ ಅಂದರೆ ಮೂರು ವಾರ ಮುಂಚೆಯೇ ಚಳಿಗಾಲ ಶುರುವಾಗಿದ್ದು; ವಾಡಿಕೆಗಿಂತ ಅಧಿಕ ಪ್ರಮಾಣದ ಚಳಿ ಸಾಧ್ಯತೆ ಇದೆ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.
ಉಸಿರಾಟದ ಸಮಸ್ಯೆ ಇರುವವರು, ಮಕ್ಕಳು, ವೃದ್ಧರು ಮನೆಯಿಂದ ಹೊರಗಡೆ ಹೋಗುವಾಗ ಎಚ್ಚರಿಕೆ ಅತ್ಯಗತ್ಯ. ಶೀತ, ಕೆಮ್ಮು, ನೆಗಡಿ, ಜ್ವರ, ಹಿಮ್ಮಡಿ ಬಿರುಕು, ಕೈ-ಕಾಲುಗಳ ಚರ್ಮದ ಬಗ್ಗೆ ಕಾಳಜಿ ವಹಿಸುವುದು ಕ್ಷೇಮಕರ.



