FinanceNews

PhonePe Personal Loan- ₹5 ಲಕ್ಷದ ವರೆಗೆ ಫೋನ್‌ಪೇ ಪರ್ಸನಲ್ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಹಾಕಿ…

Spread the love

ಫೋನ್‌ಪೇ ಮೂಲಕ 50,000 ರೂ. ದಿಂದ 5 ಲಕ್ಷ ರೂ. ವರೆಗೆ ಪರ್ಸನಲ್ ಲೋನ್ (PhonePe Personal Loan) ಪಡೆಯಲು ಅವಕಾಶವಿದೆ. ಈ ಸಾಲವನ್ನು ಹೇಗೆ ಪಡೆಯುವುದು ಎಂಬ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ವಿವಿಧ ಬ್ಯಾಂಕುಗಳು ಸೇರಿದಂತೆ ಬಹುತೇಕ ಯುಪಿಐ ಆ್ಯಪ್’ಗಳು ತುರ್ತು ಹಣಕಾಸಿನ ಅಗತ್ಯ ಇರುವವರಿಗೆ ಬ್ಯಾಂಕುಗಳಿಗೆ ಅಲೆಯದೇ ಮೊಬೈಲ್ ಮೂಲಕ ಸಾಲ ನೀಡುವ ಡಿಜಿಟಲ್ ವ್ಯವಸ್ಥೆಯನ್ನು ಮಾಡಿವೆ. ಈ ವ್ಯವಸ್ಥೆಯ ಮೂಲಕ ಮೊಬೈಲ್‌ನಲ್ಲಿಯೇ ಅರ್ಜಿ ಹಾಕಿ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆಯಬಹುದಾಗಿದೆ.

ಅದರಲ್ಲೂ ಗೂಗಲ್ ಪೇ, ಫೋನ್‌ಪೇ (PhonePe) ಥರದ ಜನಪ್ರಿಯ ಯುಪಿಐ ಪಾವತಿ ಆ್ಯಪ್’ಗಳು ಇದೀಗ ಅತ್ಯಂತ ತುರ್ತಾಗಿ ಸಾಲ ಒದಗಿಸುತ್ತಿವೆ. ಈ ಆ್ಯಪ್’ಗಳನ್ನು ಬಳಸುವ ಗ್ರಾಹಕರು ಅತ್ಯಂತ ಸುಲಭದಲ್ಲಿ ಪರ್ಸನಲ್ ಲೋನ್ ಪಡೆಯಬಹುದಾಗಿದೆ.

ಇದನ್ನೂ ಓದಿ: Karnataka Early Winter- ವಾಡಿಕೆಗಿಂತ ಮೊದಲೇ ರಾಜ್ಯದಲ್ಲಿ ಈ ಬಾರಿ ರಣ ಭಯಂಕರ ಚಳಿ | ಹವಾಮಾನ ಇಲಾಖೆ ಎಚ್ಚರಿಕೆ

5 ಲಕ್ಷ ರೂ. ವರೆಗೆ ಫೋನ್‌ಪೇ ಲೋನ್

ತುರ್ತು ಹಣದ ಅಗತ್ಯ ಇರುವವರಿಗೆ ತ್ವರಿತವಾಗಿ ಸಾಲ ಒದಗಿಸುವುದರಲ್ಲಿ ಫೋನ್‌ಪೇ ಯುಪಿಐ ಆ್ಯಪ್ ಮುಂಚೂಣಿಯಲ್ಲಿದೆ. ನೀವು ಈಗಾಗಲೇ ಫೋನ್‌ಪೇ ಬಳಸುತ್ತಿದ್ದರೆ ಇನ್ನೂ ಸುಲಭವಾಗಿ ಸಾಲ ಪಡೆಯಲು ಅವಕಾಶವಿದೆ.

ಸುಮಾರು 50,000 ರೂ. ದಿಂದ 5 ಲಕ್ಷ ರೂ. ವರೆಗೆ ಫೋನ್‌ಪೇ ಮೂಲಕ ಪರ್ಸನಲ್ ಲೋನ್ ಪಡೆಯಲು ಅವಕಾಶವಿದೆ. ನೀವು ಅರ್ಹರಿದ್ದು; ಮೊಬೈಲ್‌ನಲ್ಲೇ ಅರ್ಜಿ ಹಾಕಿದರೆ, ಕೆಲವೇ ಗಂಟೆಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.

ಇದನ್ನೂ ಓದಿ: Railway JE Recruitment 2025- ಬೆಂಗಳೂರು ರೈಲ್ವೆ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವಿ, ಡಿಪ್ಲೋಮಾ ಅಭ್ಯರ್ಥಿಗಳಿಗೆ ಅವಕಾಶ

ಅರ್ಹತೆ ಮತ್ತು ಬಡ್ಡಿದರದ ವಿವರ

ಫೋನ್‌ಪೇ ಮೂಲಕ ಪಡೆಯುವ ಪರ್ಸನಲ್ ಲೋನ್’ಗೆ ನಿಮ್ಮ ಸಿಬಿಲ್ ಸ್ಕೋರ್ (CIBIL Score) ಆಧಾರದ ಮೇಲೆ ವಾರ್ಷಿಕ ಶೇ.12ರಿಂದ ಶೇ.36ರ ವರೆಗೆ ಬಡ್ಡಿದರ ನಿಗದಿಪಡಿಸಲಾಗುತ್ತದೆ. 6 ರಿಂದ 60 ತಿಂಗಳವರೆಗೆ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಇನ್ನು ಸಾಲ ಪಡೆಯಲು ನೀವು ಕನಿಷ್ಠ 21ರಿಂದ ಗರಿಷ್ಟ 55 ವರ್ಷದವರಾಗಿರಬೇಕು. ನಿಮ್ಮ ಮಾಸಿಕ ಆದಾಯ ಕನಿಷ್ಠ 15,000 ರೂ. ಇರಬೇಕು. ಆಧಾರ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಬೇಕಾಗುತ್ತದೆ.

ಇದನ್ನೂ ಓದಿ: Canara Bank Personal Loan- ಕೆನರಾ ಬ್ಯಾಂಕ್ ಪರ್ಸನಲ್ ಲೋನ್ | ಕಮ್ಮಿ ಬಡ್ಡಿದರದಲ್ಲಿ 10 ಲಕ್ಷ ರೂ. ವರೆಗೂ ಸಾಲ ಸೌಲಭ್ಯ

ಫೋನ್‌ಪೇ ಮೂಲಕ 50,000 ರೂ. ದಿಂದ 5 ಲಕ್ಷ ರೂ. ವರೆಗೆ ಪರ್ಸನಲ್ ಲೋನ್ ಪಡೆಯಲು ಅವಕಾಶವಿದೆ. ಈ ಸಾಲವನ್ನು ಹೇಗೆ ಪಡೆಯುವುದು ಎಂಬ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ...
PhonePe Personal Loan
ಏನೆಲ್ಲಾ ದಾಖಲಾತಿಗಳು ಬೇಕು?

ಸಾಮಾನ್ಯವಾಗಿ ಕಡಿಮೆ ದಾಖಲಾತಿಗಳ ಆಧಾರದ ಮೇಲೆ ತ್ವರಿತವಾಗಿ ನೀಡಲಾಗುವುದನ್ನೇ ‘ಪರ್ಸನಲ್ ಲೋನ್’ ಎಂದು ಕರೆಯಲಾಗುತ್ತದೆ. ಫೋನ್‌ಪೇ ಪರ್ಸನಲ್ ಲೋನ್ ಪಡೆಯಲು ಕೂಡ ಹೆಚ್ಚಿನ ದಾಖಲಾತಿಗಳ ಅಗತ್ಯವಿಲ್ಲ.

ಇನ್ನು ಫೋನ್‌ಪೇ ಸಾಲ ಪಡೆಯಲು ಅರ್ಜಿದಾರರ ಪ್ಯಾನ್ ಕಾರ್ಡ್ (PAN Card), ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್, ಆಧಾರ್ ಕಾರ್ಡ್ ಮತ್ತು ಭಾವಚಿತ್ರದಂತಹ ಸಾಮಾನ್ಯ ದಾಖಲಾತಿಗಳು ಸಾಕು.

ಇದನ್ನೂ ಓದಿ: SBI Home Loan Interest Rate Cut- ಇಂದಿನಿಂದ ಎಸ್‌ಬಿಐ ಬ್ಯಾಂಕಿನಲ್ಲಿ ಕಡಿಮೆ ಬಡ್ಡಿಗೆ ಸಾಲ ಸೌಲಭ್ಯ | ಹೊಸ ನಿಯಮ ಜಾರಿ | ಸಂಪೂರ್ಣ ಮಾಹಿತಿ ಇಲ್ಲಿದೆ…

ಅರ್ಜಿ ಸಲ್ಲಿಸುವುದು ಹೇಗೆ?

ನೀವು ಈಗಾಗಲೇ ಫೋನ್‌ಪೇ ಬಳಸುತ್ತಿದ್ದರೆ ಫೋನ್‌ಪೇ ಆ್ಯಪ್ ಓಪನ್ ಮಾಡಿ ‘Loan’ ವಿಭಾಗಕ್ಕೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ವೇಳೆ ಹೊಸದಾಗಿ ಫೋನ್‌ಪೇ ಬಳಸುವವರಾಗಿದ್ದರೆ ಗೂಗಲ್ ಪ್ಲೇ ಸ್ಟೋರ್’ನಿಂದ (Google Play Store) ಫೋನ್‌ಪೇ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ.

ನಂತರ ‘Loan’ ವಿಭಾಗಕ್ಕೆ ತೆರಳಿ ನಿಮಗೆ ಅಗತ್ಯ ಇರುವಷ್ಟು ಸಾಲದ ಮೊತ್ತವನ್ನು ಆಯ್ಕೆ ಮಾಡಿ, ಅಲ್ಲಿ ಕೇಳುವ ವಿವರಗಳನ್ನು ಭರ್ತಿ ಮಾಡಿ. ಪಾನ್ ಕಾರ್ಡ್ ಮಾಹಿತಿ ನಮೂದಿಸಿದರೆ ಸಿಬಿಲ್ ಸ್ಕೋರ್ ಸೇರಿದಂತೆ ಬಹುತೇಕ ನಿಮ್ಮ ಹಣಕಾಸು ವಹಿವಾಟು ಲಭ್ಯವಾಗುತ್ತದೆ.

ನೀವು ಅರ್ಹರಾಗಿದ್ದರೆ ತಕ್ಷಣವೇ ವೈಯಕ್ತಿಕ ಸಾಲ ಮಂಜೂರಾಗುತ್ತದೆ. ಮುಂದಿನ ಒಂದು ಗಂಟೆಯ ಒಳಗೇ ನೀವು ನೀಡಿದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ನಿಜಕ್ಕೂ ತುರ್ತು ಅಗತ್ಯ ಇರುವವರಿಗೆ ತ್ವರಿತ ಸಾಲ ಪಡೆಯಲು ಇದು ಅತ್ಯಂತ ಉಪಯುಕ್ತ ಮಾರ್ಗವಾಗಿದೆ.

Google Pay Instant Loan Info- 9 ಲಕ್ಷ ರೂ. ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲಿಯೇ ಅರ್ಜಿ ಹಾಕಿ | ಇಲ್ಲಿದೆ ಸಂಪೂರ್ಣ ಮಾಹಿತಿ…


Spread the love
WhatsApp Group Join Now
Telegram Group Join Now

Related Articles

Back to top button
error: Content is protected !!