Raitara Bele Nashta Parihara- ರೈತರ ಬೆಳೆನಷ್ಟ ಪರಿಹಾರ ಹೆಚ್ಚಳ | ಯಾವ ಬೆಳೆಗೆ ಎಷ್ಟು ಪರಿಹಾರ? ಇಲ್ಲಿದೆ ಸಂಪೂರ್ಣ ಮಾಹಿತಿ
Raitara Bele Nashta Parihara Hechchala 2025

ರಾಜ್ಯ ಸರ್ಕಾರ ರೈತರ ಬೆಳೆನಷ್ಟ ಪರಿಹಾರ (Raitara Bele Nashta Parihara) ಮೊತ್ತವನ್ನು ಹೆಚ್ಚಳ ಮಾಡಿದೆ. ಪ್ರತಿ ಹೆಕ್ಟೇರ್‌ಗೆ 8,500 ರೂ. ಹೆಚ್ಚಳ ಮಾಡಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಮುಂಗಾರು ಮಳೆಯಿಂದಾಗಿ ಬೆಳೆ ನಷ್ಟ ಅನುಭವಿಸಿದ ರಾಜ್ಯದ ರೈತರಿಗೆ ದೊಡ್ಡ ಮಟ್ಟದ ಪರಿಹಾರ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಬೆಳೆನಷ್ಟ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಿದ್ದು; ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.
ನನ್ನೆ ಅಕ್ಟೋಬರ್ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರೈತರಿಗೆ ಹೆಚ್ಚುವರಿ ಇನ್‌ಪುಟ್ ಸಬ್ಸಿಡಿ ನೀಡುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಪ್ರತಿ ಹೆಕ್ಟೇರ್‌ಗೆ 8,500 ರೂ. ಹೆಚ್ಚುವರಿ ಪರಿಹಾರ
ಮುಂಗಾರು ಹಂಗಾಮಿನಲ್ಲಿ ಮಳೆಯ ಆವಾಂತರದಿಂದಾಗಿ ನಷ್ಟಕ್ಕೀಡಾದ ಬೆಳೆಗಳಿಗೆ ಸರ್ಕಾರವು ಹೆಚ್ಚುವರಿ ಪರಿಹಾರ ನೀಡಲು ನಿರ್ಧರಿಸಿದೆ. ಇದುವರೆಗೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ನೀಡಲಾಗುತ್ತಿದ್ದ ಮೊತ್ತಕ್ಕಿಂತ ಹೆಚ್ಚುವರಿ ಪರಿಹಾರ ನೀಡಲಾಗುತ್ತಿದೆ.
ಪ್ರತಿ ಹೆಕ್ಟೇರ್‌ಗೆ 8,500 ರೂ. ಹೆಚ್ಚುವರಿ ಇನ್‌ಪುಟ್ ಸಬ್ಸಿಡಿ ನೀಡುವುದರಿಂದ ರೈತರಿಗೆ ಹೆಚ್ಚಿನ ನೆರವು ಸಿಗಲಿದೆ. ಒಟ್ಟಾರೆಯಾಗಿ 12.82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಈ ಹೊಸ ತೀರ್ಮಾನದಿಂದ ಪ್ರಯೋಜನ ಆಗಲಿದೆ.

ಯಾವ ಬೆಳೆಗೆ ಎಷ್ಟೆಷ್ಟು ಹೆಚ್ಚುವರಿ ಪರಿಹಾರ?
ಈ ಪರಿಹಾರ ಮೊತ್ತವನ್ನು ಮಳೆಯಾಶ್ರಿತ, ನೀರಾವರಿ ಮತ್ತು ಬಹುವಾರ್ಷಿಕ ಬೆಳೆಗಳ ಪ್ರಕಾರ ವಿಭಜಿಸಿ ಪರಿಷ್ಕರಿಸಲಾಗಿದೆ. ಮಳೆಯಾಶ್ರಿತ ಬೆಳೆಗಳಿಗೆ ಈ ಮೊದಲು 8,500 ರೂ. ಪರಿಹಾರ ನೀಡಲಾಗುತ್ತಿತ್ತು. ಇದೀಗ ಈ ಮೊತ್ತವನ್ನು 17,000 ರೂ.ಗೆ ಏರಿಸಲಾಗಿದೆ.
ಇನ್ನು ನೀರಾವರಿ ಬೆಳೆಗಳಿಗೆ ಈ ಮೊದಲು 17,000 ರೂ. ನೀಡುತ್ತಿದ್ದು; ಈಗ 25,500 ರೂ.ಗೆ ಏರಿಸಲಾಗಿದೆ. ಹಾಗೇನೇ ಬಹುವಾರ್ಷಿಕ ಬೆಳೆಗಳಿಗೆ ಈ ಹಿಂದಿನ 22,500 ರೂ. ಬದಲು 31,000 ರೂ. ನೀಡಲು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ: E-Swathu- ದೀಪಾವಳಿ ನಂತರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ವಿತರಣೆ
ಈ ಜಿಲ್ಲೆಯ ರೈತರಿಗೆ ಹೆಚ್ಚು ಪರಿಹಾರ
ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು, ಸರ್ಕಾರವು ರೈತರ ಸಂಕಷ್ಟವನ್ನು ತಗ್ಗಿಸಲು ತೀರ್ಮಾನ ತೆಗೆದುಕೊಂಡಿದೆ ಎಂದು ಹೇಳಿದ್ದು; ಈ ಪರಿಹಾರ ಸಬ್ಸಿಡಿ ಎರಡು ಹೆಕ್ಟೇರ್ ವರೆಗೆ ಸೀಮಿತವಾಗಿರುತ್ತದೆ ಎಂದು ಅವರು ವಿವರಿಸಿದರು.
ವಿಶೇಷವೆಂದರೆ ರಾಜ್ಯದಲ್ಲಿ 2025ನೇ ಸಾಲಿನ ಮುಂಗಾರು ಮಳೆಗೆ ಕಲಬುರ್ಗಿ, ವಿಜಯಪುರ, ಬೀದರ್, ಧಾರವಾಡ, ಹಾವೇರಿ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ಹೀಗಾಗಿ ಈ ಜಿಲ್ಲೆಯ ರೈತರಿಗೆ ಹೆಚ್ಚಿನ ನೆರವು ದೊರೆಯುವ ನಿರೀಕ್ಷೆ ಇದೆ.
ಇದನ್ನೂ ಓದಿ: Minimum Balance Rule Cancelled- ಇನ್ಮುಂದೆ ಈ ಬ್ಯಾಂಕ್ ಖಾತೆಗಳಲ್ಲಿ `ಕನಿಷ್ಠ ಬ್ಯಾಲೆನ್ಸ್’ ನಿಯಮ ರದ್ದು!
ರೈತರಲ್ಲಿ ಹೊಸ ಉತ್ಸಾಹ
ಈ ಬಾರಿ ಮುಂಗಾರು ಮಳೆಯ ಪ್ರಕೋಪದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅನೇಕ ರೈತರು ತೀವ್ರ ನಷ್ಟವನ್ನು ಅನುಭವಿಸಿದ್ದರು. ಹೀಗೆ ಬೆಳೆ ನಾಶವಾಗಿ ಸಾಕಷ್ಟು ಸಂಕಷ್ಟಕ್ಕೆ ಈಡಾಗಿದ್ದ ರೈತರಿಗೆ ಸರ್ಕಾರದ ಈ ಕ್ರಮ ತಾತ್ಕಾಲಿಕ ಆರ್ಥಿಕ ಚೇತರಿಕೆಗೆ ನೀಡಿದೆ.
ಈ ನಿರ್ಧಾರದಿಂದ ರೈತರಿಗೆ ಆರ್ಥಿಕ ನೆರವು ದೊರಕುವುದಷ್ಟೇ ಅಲ್ಲ, ಅವರಲ್ಲಿ ಪುನಃ ಕೃಷಿ ಚಟುವಟಿಕೆಗೆಯಲ್ಲಿ ಉತ್ಸಾಹವನ್ನೂ ಹೆಚ್ಚಿಸುವ ಸಾಧ್ಯತೆ ಇದೆ. ಸರ್ಕಾರದ ಈ ಹೊಸ ಪರಿಹಾರ ಯೋಜನೆ, ರಾಜ್ಯದ ಕೃಷಿ ವಲಯದಲ್ಲಿ ಹೊಸ ಶಕ್ತಿ ತುಂಬಲಿದೆ ಎಂಬ ನಂಬಿಕೆಯನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.



