B khata To A khata Application- ನವೆಂಬರ್ 2ರಿಂದ ‘ಬಿ’ ಖಾತಾ ಸ್ವತ್ತುಗಳಿಗೆ ‘ಎ’ ಖಾತಾ ವಿತರಣೆಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
B khata To A khata Application Full Details

ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ‘ಬಿ’ ಖಾತಾ ಸ್ವತ್ತುಗಳಿಗೆ ಅಧಿಕೃತ ‘ಎ’ ಖಾತಾ (B khata To A khata Application) ನೀಡಲು ತಯಾರಿ ನಡೆಸಿದೆ. ಇದೇ ನವೆಂಬರ್ 2ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಜಿಬಿಎ ಅರ್ಥಾತ್ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ‘ಬಿ’ ಖಾತಾ ಸ್ವತ್ತುಗಳಿಗಳಿಗೆ ‘ಎ’ ಖಾತಾ ಅಭಿಯಾನಕ್ಕೆ ನವೆಂಬರ್ 2ರಿಂದ ಚಾಲನೆ ನೀಡಲಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಿದ್ದು; ಇದಕ್ಕಾಗಿ ಪ್ರತ್ಯೇಕ ವೆಬ್‌ಸೈಟ್ ಹಾಗೂ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.
ಇದನ್ನೂ ಓದಿ: Free Nati Kolimari – ಗ್ರಾಮೀಣ ಮಹಿಳೆಯರಿಗೆ ಉಚಿತ ನಾಟಿ ಕೋಳಿಮರಿ ವಿತರಣೆಗೆ ಅರ್ಜಿ ಆಹ್ವಾನ
ಯಾವೆಲ್ಲ ಸ್ವತ್ತುಗಳಿಗೆ ಈ ಸೌಲಭ್ಯ ಸಿಗಲಿದೆ?
ಜಿಬಿಎ ಸ್ಪಷ್ಟಪಡಿಸಿರುವ ಅಧಿಕೃತ ಮಾಹಿತಿ ಪ್ರಕಾರ 2,000 ಚದರ ಮೀಟರ್ ವಿಸ್ತೀರ್ಣದ ಸ್ವತ್ತುಗಳ ವರೆಗೂ ‘ಎ’ ಖಾತಾ ಸೌಲಭ್ಯ ದೊರೆಯಲಿದೆ. ನಿವೇಶನಗಳಾದರೆ 30X40 ಅಡಿ ವಿಸ್ತೀರ್ಣಕ್ಕೆ ಮಾತ್ರ ‘ಎ’ ಖಾತಾ ಅವಕಾಶವಿದೆ.
ಮೊದಲು ನಿವೇಶನಕ್ಕೆ ಮಾತ್ರ ‘ಎ’ ಖಾತಾ ನೀಡಲಿದ್ದು; ನಂತರ ಸರ್ಕಾರ ಇದಕ್ಕಾಗಿ ಪ್ರತ್ಯೇಕವಾಗಿ ರೂಪಿಸಿರುವ ನಿಯಮದಡಿ ಆ ನಿವೇಶನದಲ್ಲಿ ನಿರ್ಮಾಣ ಮಾಡಿರುವ ಕಟ್ಟಡಗಳಿಗೆ ‘ಎ’ ಖಾತಾ ಒದಗಿಸಲಾಗುತ್ತದೆ. ನಿವೇಶನ ಮತ್ತು ಕಟ್ಟಡ ಎರಡಕ್ಕೂ ಪ್ರತ್ಯೇಕವಾಗಿ ಸೌಲಭ್ಯ ಪಡೆಯಬೇಕಾಗುತ್ತದೆ.

ಯಾವೆಲ್ಲ ದಾಖಲಾತಿಗಳು ಬೇಕು?
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ನಿಗದಿಪಡಿಸಿರುವ ಈ ಕೆಳಕಂಡ ಮೂಲ ದಾಖಲಾತಿಗಳನ್ನು ಒದಗಿಸಬೇಕಾಗುತ್ತದೆ:
- ಆಧಾರ್ ಕಾರ್ಡ್
- ಸ್ವತ್ತಿನ ನೋಂದಣಿ ಪತ್ರ
- ‘ಬಿ’ ಖಾತಾ
- ವಾಸಸ್ಥಳದ ವಿಳಾಸ
- ಕಂದಾಯ ಹಾಗೂ ಇತರ ಶುಲ್ಕ ಪಾವತಿ
ಈ ದಾಖಲಾತಿಗಳನ್ನು ಅರ್ಜಿ ಸಲ್ಲಿಕೆಯ ಸಂದರ್ಭದಲ್ಲಿ ಮಾಲೀಕರು ವೆಬ್‌ಸೈಟ್’ಗೆ ಅಪ್‌ಲೋಡ್ ಮಾಡಬೇಕಾಗುತ್ತದೆ. ಈ ದಾಖಲಾತಿಗಳನ್ನು ಹೇಗೆ ಸಲ್ಲಿಸಬೇಕು ಎಂಬುವುದನ್ನು ಜಿಬಿಎ ಶೀಘ್ರದಲ್ಲಿಯೇ ಹಂತ ಹಂತದ ಮಾಹಿತಿ ನೀಡಲಿದೆ.
ಶುಲ್ಕ ಪಾವತಿ ಹೇಗೆ?
ಹೀಗೆ ಸ್ವತ್ತಿನ ಮಾಲೀಕರು ನಿಗದಿತ ದಾಖಲಾತಿಗಳೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ಕಾಲಮಿತಿಯಲ್ಲಿ ಜಿಬಿಎ ಅಧಿಕಾರಿಗಳು ಸ್ವತ್ತು ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಅಲ್ಲಿ ಮತ್ತೊಮ್ಮೆ ಅಗತ್ಯ ದಾಖಲೆ ದೃಢೀಕರಣ ಮಾಡಿಕೊಳ್ಳಲಾಗುತ್ತದೆ. ಎಲ್ಲಾ ದಾಖಲಾತಿಗಳು ‘ಎ’ ಖಾತಾ ಮಾರ್ಗಸೂಚಿಗೆ ಅನ್ವಯವಾದಲ್ಲಿ ಅಧಿಕೃತ ‘ಎ’ ಖಾತಾ ಸೌಲಭ್ಯ ಸಿಗಲಿದೆ.
ಅರ್ಜಿ ಸಲ್ಲಿಕೆ ಸಮಯದಲ್ಲಿ ಅರ್ಜಿ ನೋಂದಣಿ ಶುಲ್ಕವಾಗಿ 500 ರೂ. ಸಲ್ಲಿಕೆ ಮಾಡಬೇಕಾಗುತ್ತದೆ. ನಂತರದ ಹಂತದಲ್ಲಿ ನಿವೇಶನದ ವಿಸ್ತೀರ್ಣ, ನಿವೇಶನ ಇರುವ ಪ್ರದೇಶವಾರು ಶುಲ್ಕದ ಲೆಕ್ಕಾಚಾರ ಹಾಕಿ ಶುಲ್ಕ ಪಾವತಿಗೆ ಗಡುವು ನೀಡಲಾಗುತ್ತದೆ. ಸಂಪೂರ್ಣ ಶುಲ್ಕ ಪಾವತಿಸಿದ ನಂತರವೇ ‘ಎ’ ಖಾತಾ ವಿತರಣೆ ಮಾಡಲಾಗುತ್ತದೆ.
ಐದು ಬಗೆಯ ಶುಲ್ಕ ಪಾವತಿಸಬೇಕು
‘ಎ’ ಖಾತಾ ಸೌಲಭ್ಯ ನೀಡಲು ಜಿಬಿಎ ಒಟ್ಟು ಐದು ಬಗೆಯ ಶುಲ್ಕ ನಿಗದಿಪಡಿಸಿದ್ದು; ಆ ಐದು ಬಗೆಯ ಶುಲ್ಕಗಳು ಹೀಗಿವೆ:
- ಅರ್ಜಿ ನೋಂದಣಿ ಶುಲ್ಕ 500 ರೂ.
- ಮಾರ್ಗಸೂಚಿ ದರದ ಶೇ.5ರಷ್ಟು ಶುಲ್ಕ
- ಭೂ ಪರಿವರ್ತನೆ ಶುಲ್ಕ
- ನಕ್ಷೆ ಅನುಮೋದನೆ ಶುಲ್ಕ
- ಅಭಿವೃದ್ಧಿ ಶುಲ್ಕ
- ಕಂದಾಯ ಶುಲ್ಕ
ಯಾವ ಪ್ರದೇಶದಲ್ಲಿ ಎಷ್ಟೆಷ್ಟು ಶುಲ್ಕ ನಿಗದಿ?
ಈ ಯೋಜನೆಯಡಿ ‘ಎ’ ಖಾತಾ ಸೌಲಭ್ಯ ಪಡೆಯಲು ಅಂದಾಜು ವೆಚ್ಚವು (30X40 ನಿವೇಶನಕ್ಕೆ) ನಗರದ ವಿವಿಧ ಪ್ರದೇಶವಾರು ಭಿನ್ನವಾಗಿದ್ದು; ಮಾರ್ಗಸೂಚಿ ದರ ಹಾಗೂ ಶೇ.5ರ ಅನುಮೋದನೆ ಶುಲ್ಕದ ವಿವರ ಹೀಗಿದೆ:
- ಕೋಗಿಲು ಪ್ರದೇಶದಲ್ಲಿ ಮಾರ್ಗಸೂಚಿ ದರ 2,500 ಹಾಗೂ ಶೇ. 5 ಅನುಮೋದನೆ ಶುಲ್ಕ 1.5 ಲಕ್ಷ ರೂ.
- ಶ್ರೀರಾಮಪುರದಲ್ಲಿ ಮಾರ್ಗಸೂಚಿ ದರ 3,000 ರೂ., ಶೇ. 5 ಅನುಮೋದನೆ ಶುಲ್ಕ 1.80 ರೂ.
- ಕೊಡಿಗೇಹಳ್ಳಿ ಪ್ರದೇಶದಲ್ಲಿ ಮಾರ್ಗಸೂಚಿ ದರ 3,720 ರೂ., ಶೇ. 5 ಅನುಮೋದನೆ ಶುಲ್ಕ 2.23 ಲಕ್ಷ ರೂ.
- ವರ್ತೂರು ಪ್ರದೇಶದಲ್ಲಿ ಮಾರ್ಗಸೂಚಿ ದರ 5,000 ರೂ., ಶೇ. 5 ಅನುಮೋದನೆ ಶುಲ್ಕ 3 ಲಕ್ಷ ರೂ.
- ಯಲಹಂಕ ಪ್ರದೇಶದಲ್ಲಿ ಮಾರ್ಗಸೂಚಿ ದರ 6,000 ರೂ., ಶೇ. 5 ಅನುಮೋದನೆ ಶುಲ್ಕ 3.60 ಲಕ್ಷ ರೂ.
- ನಾಗಶೆಟ್ಟಿಹಳ್ಳಿ ಪ್ರದೇಶದಲ್ಲಿ ಮಾರ್ಗಸೂಚಿ ದರ 6,500 ರೂ., ಶೇ. 5 ಅನುಮೋದನೆ ಶುಲ್ಕ 3.90 ಲಕ್ಷ ರೂ.
- ಬೆಳ್ಳಂದೂರು ಪ್ರದೇಶದಲ್ಲಿ ಮಾರ್ಗಸೂಚಿ ದರ 8,640 ರೂ., ಶೇ. 5 ಅನುಮೋದನೆ ಶುಲ್ಕ 5.18 ಲಕ್ಷ ರೂ.
ಈ ವೆಚ್ಚವು ಕೇವಲ ‘ಬಿ’ ಖಾತಾ ನಿವೇಶನವನ್ನು ‘ಎ’ ಖಾತಾ ಆಗಿ ಪರಿವರ್ತಿಸಲು ತಗಲುವ ವೆಚ್ಚವಾಗಿದೆ. ಬಳಿಕ ಸದರಿ ನಿವೇಶನದಲ್ಲಿ ನಿರ್ಮಾಣ ಮಾಡಿದ ಕಟ್ಟಡವನ್ನು ಸಕ್ರಮಗೊಳಿಸಲು ಮತ್ತೆ 1-2 ಲಕ್ಷ ರೂ. ವೆಚ್ಚ ಮಾಡಬೇಕಾಗುತ್ತದೆ.
ನವೆಂಬರ್ 2ರಿಂದ ‘ಎ’ ಖಾತಾದಿಂದ ‘ಬಿ’ ಖಾತಾ ಅಭಿಯಾನವು ಆರಂಭವಾಗಲಿದ್ದು; ಅಂದಿನಿAದಲೇ ಸಾರ್ವಜನಿಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಸಬಹುದಾಗಿದೆ.



