Karnataka Govt DA Hike – ರಾಜ್ಯ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ | ಯಾರಿಗೆ ಎಷ್ಟು ಹೆಚ್ಚಳವಾಗಲಿದೆ ಸಂಬಳ? ಇಲ್ಲಿದೆ ಫುಲ್ ಡೀಟೆಲ್ಸ್
Karnataka Govt DA Hike 2025

ರಾಜ್ಯ ಸರ್ಕಾರಿ ನೌಕರರಿಗೆ 2024ರ ಜುಲೈ 1ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆ ಶೇ.12.25ರಿಂದ 14.25ಕ್ಕೆ ಹೆಚ್ಚಳ (Karnataka Govt DA Hike) ಮಾಡಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ರಾಜ್ಯ ಸರ್ಕಾರಿ ನೌಕರರ ಬಹುಕಾಲದ ನಿರೀಕ್ಷೆ ಕೊನೆಗೂ ಈಡೇರಿದೆ. ರಾಜ್ಯ ಸರ್ಕಾರವು ದೀಪಾವಳಿಗೂ ಮುನ್ನ ನೌಕರರಿಗೆ ದೊಡ್ಡ ಉಡುಗೊರೆಯೊಂದನ್ನು ನೀಡಿದೆ. ತುಟ್ಟಿಭತ್ಯೆ (DA) ಪರಿಷ್ಕರಣೆ ಕುರಿತಂತೆ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದ್ದು, ಈ ನಿರ್ಧಾರದಿಂದ ಲಕ್ಷಾಂತರ ನೌಕರರು ಹಾಗೂ ನಿವೃತ್ತಿ ವೇತನದಾರರು ನೇರವಾಗಿ ಲಾಭ ಪಡೆಯಲಿದ್ದಾರೆ.
ಡಿಎ ಎಷ್ಟು ಶೇಕಡಾ ಹೆಚ್ಚಳ?
ರಾಜ್ಯ ಸರ್ಕಾರ ನಿನ್ನೆ (ಅಕ್ಟೋಬರ್ 15) ಹೊರಡಿಸಿದ ಆದೇಶದ ಪ್ರಕಾರ, ಪ್ರಸ್ತುತ ನೌಕರರಿಗೆ ನೀಡಲಾಗುತ್ತಿರುವ ಶೇ.12.25ರ ತುಟ್ಟಿಭತ್ಯೆಯನ್ನು ಶೇ.14.25ಕ್ಕೆ ಹೆಚ್ಚಿಸಲಾಗಿದೆ. ಅಂದರೆ ಒಟ್ಟು ಶೇ.2ರಷ್ಟು ಹೆಚ್ಚಳ ದೊರೆಯಲಿದೆ.
ಈ ಹೆಚ್ಚಳವು 2024ರ ಜುಲೈ 1ರಿಂದ ಹಿಂದಿನ ದಿನಾಂಕದಿಂದಲೇ ಜಾರಿಗೆ ಬರುತ್ತದೆ. ಈ ಹೆಚ್ಚಳದಿಂದಾಗಿ ನೌಕರರ ತಿಂಗಳ ವೇತನದಲ್ಲಿ ಸ್ಪಷ್ಟವಾದ ಏರಿಕೆ ಕಂಡುಬರುವುದಲ್ಲದೆ, ಬಾಕಿಯ ಭಾಗವನ್ನು ಸರ್ಕಾರ ಮುಂದಿನ ಆದೇಶದ ವರೆಗೆ ನಗದಾಗಿ ಪಾವತಿಸಲು ಸೂಚಿಸಿದೆ.
ಯಾರಿಗೆ ಈ ಡಿಎ ಹೆಚ್ಚಳ ಅನ್ವಯವಾಗಲಿದೆ?
ಸರ್ಕಾರದ ಪ್ರಕಟಣೆಯ ಪ್ರಕಾರ, ಈ ತುಟ್ಟಿಭತ್ಯೆ ಹೆಚ್ಚಳವು ರಾಜ್ಯ ಸರ್ಕಾರದ ಪೂರ್ಣಾವಧಿ ನೌಕರರು, ಜಿಲ್ಲಾ ಪಂಚಾಯತ್‌ಗಳ ನೌಕರರು, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್ ಚಾರ್ಜ್ ನೌಕರರು, ಸರ್ಕಾರದಿಂದ ಸಹಾಯಧನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿರುವ ಕಾಲಿಕ ವೇತನ ಶ್ರೇಣಿಯ ಪೂರ್ಣಾವಧಿ ನೌಕರರಿಗೆ ಅನ್ವಯಿಸುತ್ತದೆ.
ನಿವೃತ್ತಿ ವೇತನದಾರರಿಗೂ ಲಾಭ
ಈ ಪರಿಷ್ಕರಣೆ ಕೇವಲ ಪ್ರಸ್ತುತ ಸೇವೆಯಲ್ಲಿರುವ ನೌಕರರಿಗೆ ಮಾತ್ರವಲ್ಲದೇ, ನಿವೃತ್ತಿ ವೇತನದಾರರು ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೂ ಅನ್ವಯವಾಗಲಿದೆ. ಅಂದರೆ, ಪಿಂಚಣಿ ಪಡೆಯುತ್ತಿರುವ ಹಿರಿಯ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೂ ಇದೇ ಪ್ರಮಾಣದ ಡಿಎ ಹೆಚ್ಚಳ ದೊರೆಯಲಿದೆ.

ಇದನ್ನೂ ಓದಿ: PF 100 Percent Withdrawal – ಇನ್ಮುಂದೆ 100% ಪಿಎಫ್ ಹಣ ಹಿಂಪಡೆಯಲು ಅವಕಾಶ | ಉದ್ಯೋಗಿಗಳಿಗೆ ಶುಭಸುದ್ದಿ
ಯುಜಿಸಿ, ಎಐಸಿಟಿಇ ಹಾಗೂ ನ್ಯಾಯಾಂಗ ನೌಕರರಿಗೆ?
ಯುಜಿಸಿ (UGC), ಎಐಸಿಟಿಇ (AICTE), ಐಸಿಎಆರ್ (ICAR) ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ನೌಕರರು ಹಾಗೂ ಎನ್‌ಜೆಪಿಪಿಸಿ (NJPC) ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಸರ್ಕಾರವು ಪ್ರತ್ಯೇಕ ಆದೇಶ ಹೊರಡಿಸುವ ನಿರೀಕ್ಷೆಯಿದೆ.
ಹೆಚ್ಚಿದ ತುಟ್ಟಿಭತ್ಯೆ ಪಾವತಿ ಯಾವಾಗ?
ಹೆಚ್ಚಳಗೊಂಡಿರುವ ತುಟ್ಟಿಭತ್ಯೆಯನ್ನು ನಗದು ಆಗಿ ಪಾವತಿಸಲು ರಾಜ್ಯ ಸರ್ಕಾರ ಸೂಚನೆ ನೀಡಿದೆ. ಆದರೆ, ಬಾಕಿ ಮೊತ್ತವನ್ನು 2025ರ ಅಕ್ಟೋಬರ್ ತಿಂಗಳ ವೇತನ ಬಟವಾಡೆ ಒಳಗೆ ಸಿಗುವುದಿಲ್ಲ. ಕೆಲ ತಿಂಗಳಲ್ಲಿಯೇ ಬಾಕಿ ಪಾವತಿಯ ಕುರಿತು ಸರ್ಕಾದಿಂದ ಹೊಸ ನಿರ್ದೇಶನ ಹೊರಬರುವ ಸಂಭವವಿದೆ.
ನೌಕರರ ಸಂತೋಷದ ಪ್ರತಿಕ್ರಿಯೆ
ಈ ಡಿಎ ಹೆಚ್ಚಳದ ಸುದ್ದಿ ಪ್ರಕಟವಾದಂತೆಯೇ ರಾಜ್ಯದ ಸರ್ಕಾರಿ ನೌಕರರ ವಲಯದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿದೆ. ‘ಬಹುಕಾಲದ ಬೇಡಿಕೆ ಪೂರ್ಣಗೊಂಡಿದೆ, ಆದರೆ ಮುಂದಿನ ದಿನಗಳಲ್ಲಿ ಕೇಂದ್ರದ ಮಾದರಿಯಲ್ಲಿ ಪೂರ್ಣ ಪ್ರಮಾಣದ ಡಿಎ ಪರಿಷ್ಕರಣೆ ಆಗಬೇಕಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯ ಸರ್ಕಾರದ ಈ ತೀರ್ಮಾನದಿಂದ ಸಾವಿರಾರು ಕೋಟಿ ರೂಪಾಯಿಗಳ ಹಣಕಾಸು ಭಾರ ಸರ್ಕಾರದ ಖಜಾನೆಯ ಮೇಲೆ ಬೀಳಲಿದೆ. ಆದರೆ ನೌಕರರ ಮನೋಬಲ ಹೆಚ್ಚಿಸುವಲ್ಲಿ ಈ ನಿರ್ಧಾರ ಮಹತ್ವದ ಹೆಜ್ಜೆಯಾಗಿದೆ.
E-Swathu- ದೀಪಾವಳಿ ನಂತರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ವಿತರಣೆ



