NMMS Scholarship 2026-27: ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹12,000 ನೆರವು | 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

Spread the love

WhatsApp Group Join Now
Telegram Group Join Now

NMMS Scholarship 2026-27: 9, 10ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹12,000 ಸ್ಕಾಲರ್‌ಶಿಪ್ ಪಡೆಯಲು ಸರ್ಕಾರದಿಂದ ಅರ್ಜಿ ಆಹ್ವಾನಿಸಲಾಗಿದೆ. ಅಗತ್ಯ ದಾಖಲೆಗಳು, ಅರ್ಜಿ ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯದ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ ಇದೆ. 2026-27ನೇ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಅರ್ಹತೆ ಹಾಗೂ ಆದಾಯ ಆಧಾರಿತ ವಿದ್ಯಾರ್ಥಿವೇತನ (National Means-cum-Merit Scholarship – NMMS) ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: BPL Ration Card Reactivation: ಬಿಪಿಎಲ್ ಕಾರ್ಡ್ ವಿತರಣೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್! ರದ್ದಾದ ಕಾರ್ಡ್ ಮತ್ತೆ ಪಡೆಯಲು ಅವಕಾಶ, ಇಲ್ಲಿದೆ ಸಂಪೂರ್ಣ ಮಾಹಿತಿ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ಕುರಿತು ಮಾಹಿತಿ ನೀಡಿದ್ದು, ಅರ್ಹ ವಿದ್ಯಾರ್ಥಿಗಳು ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್ (National Scholarship Portal – NSP) scholarships.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಈ ಯೋಜನೆಯ ಮುಖ್ಯ ಉದ್ದೇಶ ಆರ್ಥಿಕ ಸಮಸ್ಯೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣ ಅರ್ಧಕ್ಕೆ ನಿಲ್ಲದಂತೆ ನೋಡಿಕೊಳ್ಳುವುದು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಯಾವುದೇ ಅಡಚಣೆ ಇಲ್ಲದೆ ಮುಂದುವರಿಸಬೇಕೆAಬ ಉದ್ದೇಶದಿಂದ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಈ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: Gruha Jyothi Free Electricity: ಗೃಹಜ್ಯೋತಿ ಉಚಿತ ವಿದ್ಯುತ್ ಪಡೆಯುವವರಿಗೆ ಹೊಸ ರೂಲ್ಸ್ | ಈ ದಾಖಲೆ ಇಲ್ಲದಿದ್ದರೆ ಕರೆಂಟ್ ಕಟ್!

ವರ್ಷಕ್ಕೆ ₹12,000 ವಿದ್ಯಾರ್ಥಿವೇತನ

ಎನ್‌ಎಂಎಎಸ್ (NMMS) ಯೋಜನೆಯಡಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದ 12ನೇ ತರಗತಿಯವರೆಗೆ ಪ್ರತಿ ವರ್ಷ ₹12,000 ವಿದ್ಯಾರ್ಥಿವೇತನ ದೊರೆಯುತ್ತದೆ.

ಅಂದರೆ, ತಿಂಗಳಿಗೆ ₹1,000ರಂತೆ ಹಣವನ್ನು ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ (DBT) ಜಮೆ ಮಾಡಲಾಗುತ್ತದೆ. ಈ ಹಣವನ್ನು ಪುಸ್ತಕ ಖರೀದಿ, ಶಾಲಾ ಶುಲ್ಕ, ಅಧ್ಯಯನ ಸಾಮಗ್ರಿಗಳು ಸೇರಿದಂತೆ ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ಅಗತ್ಯಗಳಿಗೆ ಬಳಸಿಕೊಳ್ಳಬಹುದು.

ಇದನ್ನೂ ಓದಿ: Mudra Loan: ಗ್ಯಾರಂಟಿ ಇಲ್ಲದೆ ₹20 ಲಕ್ಷ ಮುದ್ರಾ ಲೋನ್ | ಈ ಸಾಲ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ

ಯಾರು ಅರ್ಜಿ ಸಲ್ಲಿಸಬಹುದು?

ಈ ಬಾರಿ ಅರ್ಜಿ ಸಲ್ಲಿಸಲು ಎರಡು ವಿಭಾಗದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ.

2026-27ನೇ ಸಾಲಿನಲ್ಲಿ ಎನ್‌ಎಂಎಎಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿ 9ನೇ ತರಗತಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಹೊಸದಾಗಿ (Fresh Application) ಅರ್ಜಿ ಸಲ್ಲಿಸಬಹುದು.

ಇನ್ನು ಈಗಾಗಲೇ ಈ ವಿದ್ಯಾರ್ಥಿವೇತನ ಪಡೆಯುತ್ತಿರುವ 10ನೇ ತರಗತಿ, ಪ್ರಥಮ ಪಿಯುಸಿ (11ನೇ ತರಗತಿ) ಹಾಗೂ ದ್ವಿತೀಯ ಪಿಯುಸಿ (12ನೇ ತರಗತಿ) ವಿದ್ಯಾರ್ಥಿಗಳು ಹೊಸ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅವರು ತಮ್ಮ ವಿದ್ಯಾರ್ಥಿವೇತನವನ್ನು ಮುಂದುವರಿಸಿಕೊಳ್ಳಲು ರಿನಿವಲ್ (Renewal) ಮಾಡಬೇಕು.

ಇದನ್ನೂ ಓದಿ: Government Employees DA Hike: ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ | ಜುಲೈನಿಂದ 3% ಡಿಎ ಹೆಚ್ಚಳ? ಸಂಬಳ ಎಷ್ಟು ಏರಿಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ

ಈ ವಿದ್ಯಾರ್ಥಿವೇತನ ಪಡೆಯಲು ಕೆಲವು ಷರತ್ತುಗಳನ್ನು ಸರ್ಕಾರ ನಿಗದಿಪಡಿಸಿದೆ.

WhatsApp Group Join Now
Telegram Group Join Now

ವಿದ್ಯಾರ್ಥಿಯು 8ನೇ ತರಗತಿಯನ್ನು ಸರ್ಕಾರಿ ಅಥವಾ ಅನುದಾನಿತ ಶಾಲೆಯಲ್ಲಿ ವ್ಯಾಸಂಗ ಮಾಡಿರಬೇಕು. ಜೊತೆಗೆ 7ನೇ ತರಗತಿಯಲ್ಲಿ ಕನಿಷ್ಠ 55 ಶೇಕಡಾ ಅಂಕಗಳನ್ನು ಪಡೆದಿರಬೇಕು.

ಇದರ ಜೊತೆಗೆ ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ₹3.50 ಲಕ್ಷ ಮೀರಿರಬಾರದು. ಆದಾಯ ಮಿತಿಯನ್ನು ಮೀರುವ ಕುಟುಂಬಗಳ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರಾಗುವುದಿಲ್ಲ.

ಇದನ್ನೂ ಓದಿ: Karnataka Mungaru Churuku: ಮತ್ತೆ ರಿಟರ್ನ್ ಆದ ಮುಂಗಾರು | ಜುಲೈ 4ರಿಂದ ರಾಜ್ಯಾದ್ಯಂತ ಭಾರಿ ಮಳೆ | ಜಿಲ್ಲಾವಾರು ಮಳೆ ಮಾಹಿತಿ ಇಲ್ಲಿದೆ…

NMMS Scholarship 2026-27
NMMS Scholarship 2026-27

ಆಯ್ಕೆ ಹೇಗೆ ನಡೆಯುತ್ತದೆ?

ಎನ್‌ಎಂಎಎಸ್ ವಿದ್ಯಾರ್ಥಿವೇತನವನ್ನು ನೇರವಾಗಿ ನೀಡುವುದಿಲ್ಲ. ಇದಕ್ಕಾಗಿ ಮೊದಲು ಪರೀಕ್ಷೆ ನಡೆಸಲಾಗುತ್ತದೆ.

ಈ ಪರೀಕ್ಷೆಯನ್ನು ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಆಯೋಜಿಸುತ್ತದೆ. ಪರೀಕ್ಷೆಯಲ್ಲಿ ಎರಡು ಪ್ರಶ್ನೆ ಪತ್ರಿಕೆಗಳಿರುತ್ತವೆ.

  • Mental Ability Test (MAT) – ಬೌದ್ಧಿಕ ಸಾಮರ್ಥ್ಯ ಪರೀಕ್ಷೆ
  • Scholastic Aptitude Test (SAT) – ಶೈಕ್ಷಣಿಕ ಪ್ರವೃತ್ತಿ ಪರೀಕ್ಷೆ

ಈ ಎರಡೂ ಪರೀಕ್ಷೆಗಳಲ್ಲಿ ಒಟ್ಟು ಕನಿಷ್ಠ 40 ಶೇಕಡಾ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಹರಾಗುತ್ತಾರೆ.

ಆದರೆ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ವಿಕಲಚೇತನ (PwD) ವಿದ್ಯಾರ್ಥಿಗಳಿಗೆ ಕನಿಷ್ಠ 32 ಶೇಕಡಾ ಅಂಕ ಪಡೆದರೆ ಸಾಕು.

ಇದನ್ನೂ ಓದಿ: Mane Manege e-Swathu: ‘ಮನೆ ಮನೆಗೆ ಇ-ಸ್ವತ್ತು’ ಅಭಿಯಾನ | ಮುಂದಿನ ತಿಂಗಳಿಂದ ಮನೆ ಬಾಗಿಲಲ್ಲೇ ಸಿಗಲಿದೆ ಇ-ಸ್ವತ್ತು

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

ಅರ್ಜಿ ಸಲ್ಲಿಸುವ ಮೊದಲು ಈ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಅಗತ್ಯ.

  • ಆಧಾರ್ ಕಾರ್ಡ್ (Aadhaar Card)
  • ಜಾತಿ ಪ್ರಮಾಣ ಪತ್ರ (Caste Certificate)
  • ನವೀಕೃತ ಆದಾಯ ಪ್ರಮಾಣ ಪತ್ರ (Income Certificate)
  • ಆಧಾರ್‌ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಯ ಪಾಸ್‌ಬುಕ್
  • ಅಗತ್ಯವಿರುವ ಇತರೆ ದಾಖಲೆಗಳು

ವಿಶೇಷವಾಗಿ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆಯಾಗಿರಬೇಕು. ಇಲ್ಲದಿದ್ದರೆ ವಿದ್ಯಾರ್ಥಿವೇತನದ ಹಣ ಜಮೆಯಾಗಲು ತೊಂದರೆಯಾಗಬಹುದು.

ಇದನ್ನೂ ಓದಿ: Indira Kit Distribution: ಬಿಪಿಎಲ್ ಕಾರ್ಡುದಾರರಿಗೆ ಇಂದಿರಾ ಕಿಟ್ ವಿತರಣೆ | ಸರ್ಕಾರದ ಮಹತ್ವದ ಮಾಹಿತಿ ಇಲ್ಲಿದೆ…

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ವಿದ್ಯಾರ್ಥಿಗಳು ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್ (NSP) ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರು Fresh Registration ಆಯ್ಕೆ ಮಾಡಿಕೊಂಡು ನೋಂದಣಿ ಮಾಡಬೇಕು. ಈಗಾಗಲೇ ವಿದ್ಯಾರ್ಥಿವೇತನ ಪಡೆಯುತ್ತಿರುವವರು ತಮ್ಮ ಹಳೆಯ ವಿವರಗಳನ್ನು ಬಳಸಿಕೊಂಡು Renewal Application ಮೂಲಕ ಅರ್ಜಿಯನ್ನು ನವೀಕರಿಸಬೇಕು.

ಅರ್ಜಿ ಸಲ್ಲಿಸುವಾಗ ವೈಯಕ್ತಿಕ ಮಾಹಿತಿ, ಶಾಲೆಯ ವಿವರ, ಬ್ಯಾಂಕ್ ಮಾಹಿತಿ ಹಾಗೂ ದಾಖಲೆಗಳನ್ನು ಸರಿಯಾಗಿ ಅಪ್‌ಲೋಡ್ ಮಾಡಬೇಕು. ತಪ್ಪು ಮಾಹಿತಿ ನೀಡಿದರೆ ಅಥವಾ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದರೆ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: Gruha Jyothi Scheme Status: ಗೃಹಜ್ಯೋತಿ ಉಚಿತ ವಿದ್ಯುತ್: ನಿಮ್ಮ ಹೆಸರು ಲಿಸ್ಟ್’ನಲ್ಲಿದೆಯಾ? ಸುಲಭವಾಗಿ ಚೆಕ್ ಮಾಡಿಕೊಳ್ಳಿ!

ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವುದು?

2026-27ನೇ ಸಾಲಿನ ಎನ್‌ಎಂಎಎಸ್ ವಿದ್ಯಾರ್ಥಿವೇತನಕ್ಕೆ 2026ರ ಆಗಸ್ಟ್ 31 ಕೊನೆಯ ದಿನಾಂಕವಾಗಿದೆ. ಕೊನೆಯ ದಿನದವರೆಗೆ ಕಾಯದೆ ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸುವುದು ಒಳಿತು.

ಇದನ್ನೂ ಓದಿ: Pitrarjita Aasti Hakku: ಪಿತ್ರಾರ್ಜಿತ ಆಸ್ತಿ ಎಂದರೇನು? ಯಾರಿಗೆಲ್ಲ ಹಕ್ಕು ಇರುತ್ತದೆ? ಆಸ್ತಿ ಹಕ್ಕುಗಳ ಸಂಪೂರ್ಣ ಮಾಹಿತಿ

ವಿದ್ಯಾರ್ಥಿಗಳು ಗಮನಿಸಬೇಕಾದ ಸಂಗತಿಗಳು

ಅರ್ಜಿ ಸಲ್ಲಿಸುವ ಮೊದಲು ಆದಾಯ ಪ್ರಮಾಣ ಪತ್ರ ನವೀಕೃತವಾಗಿದೆಯೇ, ಬ್ಯಾಂಕ್ ಖಾತೆ ಸಕ್ರಿಯವಾಗಿದೆಯೇ ಹಾಗೂ ಆಧಾರ್‌ಗೆ ಜೋಡಣೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಈಗಾಗಲೇ ವಿದ್ಯಾರ್ಥಿವೇತನ ಪಡೆಯುತ್ತಿರುವವರು ಹೊಸದಾಗಿ ಅರ್ಜಿ ಸಲ್ಲಿಸುವ ಬದಲು ರಿನಿವಲ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಹೊಸ ಅರ್ಜಿ ಸಲ್ಲಿಸಿದರೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: PM Awas Yojana 2026: ಪಿಎಂ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನ | ಯಾರಿಗೆ ಸಿಗಲಿದೆ ಈ ಸೌಲಭ್ಯ? ಇಲ್ಲಿದೆ ಸಂಪೂರ್ಣ ಮಾಹಿತಿ

ಈ ಯೋಜನೆಯ ಲಾಭ ಪಡೆಯಿರಿ

ಎನ್‌ಎಂಎಂಎಸ್ (NMMS) ವಿದ್ಯಾರ್ಥಿವೇತನವು ಪ್ರತಿಭೆ ಇದ್ದರೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ದೊಡ್ಡ ನೆರವಾಗುವ ಯೋಜನೆಯಾಗಿದೆ.

ವರ್ಷಕ್ಕೆ ₹12,000 ವಿದ್ಯಾರ್ಥಿವೇತನ ಪಡೆಯುವ ಅವಕಾಶವನ್ನು ಅರ್ಹ ವಿದ್ಯಾರ್ಥಿಗಳು ಕೈಚೆಲ್ಲಬಾರದು. ಅಗತ್ಯ ದಾಖಲೆಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಿ, ಆಗಸ್ಟ್ 31, 2026ರೊಳಗೆ ಅರ್ಜಿ ಸಲ್ಲಿಸಿದರೆ ಈ ಯೋಜನೆಯ ಲಾಭ ಪಡೆಯಬಹುದು.

ಅರ್ಜಿ ಲಿಂಕ್: scholarships.gov.in

Indira Kit Distribution: ಬಿಪಿಎಲ್ ಕಾರ್ಡುದಾರರಿಗೆ ಇಂದಿರಾ ಕಿಟ್ ವಿತರಣೆ | ಸರ್ಕಾರದ ಮಹತ್ವದ ಮಾಹಿತಿ ಇಲ್ಲಿದೆ…


Spread the love
error: Content is protected !!