Mudra Loan: ಗ್ಯಾರಂಟಿ ಇಲ್ಲದೆ ₹20 ಲಕ್ಷ ಮುದ್ರಾ ಲೋನ್ | ಈ ಸಾಲ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ

Spread the love

WhatsApp Group Join Now
Telegram Group Join Now

Mudra Loan: ಗ್ಯಾರಂಟಿ ಇಲ್ಲದೆ ₹20 ಲಕ್ಷದವರೆಗೆ ಮುದ್ರಾ ಸಾಲ ಪಡೆಯುವುದು ಹೇಗೆ? ಅರ್ಹತೆ, ಬೇಕಾಗುವ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ…

ಸ್ವಂತ ಉದ್ಯಮ (Business) ಶುರು ಮಾಡಬೇಕು ಎಂಬುದು ಹಲವರ ಕನಸು. ಆದರೆ, ಬಂಡವಾಳದ ಕೊರತೆ (Capital) ಬಹುತೇಕರಿಗೆ ಅಡ್ಡಿಯಾಗುತ್ತದೆ. ಇಂತಹ ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ನೆರವಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅದ್ಭುತ ಯೋಜನೆಯೇ ಪ್ರಧಾನ ಮಂತ್ರಿ ಮುದ್ರಾ ಯೋಜನೆ (PM Mudra Yojana).

ಇದನ್ನೂ ಓದಿ: Karnataka Gram Panchayat Election 2026: ಇನ್ನೆರಡು ತಿಂಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ? ರಾಜ್ಯ ಸರ್ಕಾರದಿಂದ ಬಂತು ಮಹತ್ವದ ಮಾಹಿತಿ

ಈ ಮೊದಲು ಮುದ್ರಾ ಯೋಜನೆಯಡಿ ಗರಿಷ್ಠ ₹10 ಲಕ್ಷದವರೆಗೆ ಮಾತ್ರ ಸಾಲ ಸಿಗುತ್ತಿತ್ತು. ಆದರೆ, ಈಗ ಈ ಮಿತಿಯನ್ನು ₹20 ಲಕ್ಷದವರೆಗೆ ಹೆಚ್ಚಿಸಲಾಗಿದೆ.

ಯಾವುದೇ ಆಸ್ತಿ, ಮನೆ ಅಥವಾ ಒಡವೆಗಳನ್ನು ಅಡಮಾನ ಇಡದೆ, ಅಂದರೆ ಗ್ಯಾರಂಟಿ ಇಲ್ಲದೆ ಸಾಲ (Collateral Free Loan) ಪಡೆಯಲು ಮುದ್ರಾ ಯೋಜನೆ ಅತ್ಯುತ್ತಮ ಮಾರ್ಗವಾಗಿದೆ. ಇದು ವಿಶೇಷವಾಗಿ ಮಹಿಳೆಯರಿಗೆ ಮತ್ತು ಯುವಕರಿಗೆ ದೊಡ್ಡ ವರದಾನವಾಗಿದೆ.

ಇದನ್ನೂ ಓದಿ: Government Employees DA Hike: ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ | ಜುಲೈನಿಂದ 3% ಡಿಎ ಹೆಚ್ಚಳ? ಸಂಬಳ ಎಷ್ಟು ಏರಿಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಮುದ್ರಾ ಸಾಲದ 4 ಪ್ರಮುಖ ವಿಭಾಗಗಳು

ಮುದ್ರಾ ಯೋಜನೆಯಡಿ ನಿಮ್ಮ ಉದ್ಯಮದ ಅಗತ್ಯಕ್ಕೆ ತಕ್ಕಂತೆ 4 ಹಂತಗಳಲ್ಲಿ ಸಾಲ ಪಡೆಯಬಹುದು:

  • ಶಿಶು ಮುದ್ರಾ ಸಾಲ (Shishu Loan): ಹೊಸ ಉದ್ಯಮ ಆರಂಭಿಸುವವರಿಗೆ (Startups) ₹50,000 ವರೆಗೆ ಸಾಲ ಸಿಗಲಿದೆ.
  • ಕಿಶೋರ್ ಮುದ್ರಾ ಸಾಲ (Kishor Loan): ಲಕ್ಷಸಣ್ಣ ವ್ಯಾಪಾರ ವಿಸ್ತರಣೆಗೆ (Business Expansion) ₹50,000 ದಿಂದ ₹5 ವರೆಗೆ ಲೋನ್ ಲಭ್ಯ
  • ತರುಣ್ ಮುದ್ರಾ ಸಾಲ (Tarun Loan): ಸ್ಥಾಪಿತ ಉದ್ಯಮಗಳಿಗೆ ₹5 ಲಕ್ಷದಿಂದ ₹10 ಲಕ್ಷ ಸಾಲ ಸೌಲಭ್ಯ ಸಿಗುತ್ತದೆ.
  • ತರುಣ್ ಪ್ಲಸ್ ಮುದ್ರಾ ಸಾಲ (Tarun Plus): ಹಿಂದಿನ ಸಾಲವನ್ನು ಸರಿಯಾಗಿ ತೀರಿಸಿದವರಿಗೆ ₹10 ಲಕ್ಷದಿಂದ ₹20 ಲಕ್ಷ ವರೆಗೂ ಸಾಲ ನೀಡಲಾಗುತ್ತದೆ.

ಇದನ್ನೂ ಓದಿ: Karnataka Mungaru Churuku: ಮತ್ತೆ ರಿಟರ್ನ್ ಆದ ಮುಂಗಾರು | ಜುಲೈ 4ರಿಂದ ರಾಜ್ಯಾದ್ಯಂತ ಭಾರಿ ಮಳೆ | ಜಿಲ್ಲಾವಾರು ಮಳೆ ಮಾಹಿತಿ ಇಲ್ಲಿದೆ…

Tarun Plus Loan Mudra Laon
Tarun Plus Loan Mudra Laon

ಏನಿದು ಹೊಸ ‘ತರುಣ್ ಪ್ಲಸ್’ (Tarun Plus Loan)?

ಗರಿಷ್ಠ ₹20 ಲಕ್ಷದವರೆಗಿನ ಸಾಲ ಸೌಲಭ್ಯ ಒದಗಿಸಲು ಮುದ್ರಾ ಯೋಜನೆಯಲ್ಲಿ ‘ತರುಣ್ ಪ್ಲಸ್’ ಎಂಬ ಹೊಸ ವಿಭಾಗವನ್ನು ಪರಿಚಯಿಸಲಾಗಿದೆ. ಆದರೆ, ನೆನಪಿರಲಿ, ಇದು ನೇರವಾಗಿ ಎಲ್ಲರಿಗೂ ಸಿಗುವುದಿಲ್ಲ.

ಈ ಮೊದಲು ‘ತರುಣ್’ ವಿಭಾಗದಲ್ಲಿ ಸಾಲ ಪಡೆದು, ಅದನ್ನು ನಿಗದಿತ ಸಮಯಕ್ಕೆ ಸರಿಯಾಗಿ ಮರುಪಾವತಿ (Loan Repayment) ಮಾಡಿದವರಿಗೆ ಮಾತ್ರ ಈ ಸೌಲಭ್ಯ ಲಭ್ಯವಿರುತ್ತದೆ.

ಬ್ಯಾಂಕ್‌ಗಳು ನಿಮ್ಮ ಹಿಂದಿನ ಸಾಲದ ಇತಿಹಾಸ ಹಾಗೂ ಸಿಬಿಲ್ ಸ್ಕೋರ್ (CIBIL Score) ಅನ್ನು ಕೂಲಂಕಷವಾಗಿ ಪರಿಶೀಲಿಸಿದ ಮೇಲೆಯೇ ಈ ದೊಡ್ಡ ಮೊತ್ತವನ್ನು ಮಂಜೂರು ಮಾಡುತ್ತವೆ.

ಇದನ್ನೂ ಓದಿ: Mane Manege e-Swathu: ‘ಮನೆ ಮನೆಗೆ ಇ-ಸ್ವತ್ತು’ ಅಭಿಯಾನ | ಮುಂದಿನ ತಿಂಗಳಿಂದ ಮನೆ ಬಾಗಿಲಲ್ಲೇ ಸಿಗಲಿದೆ ಇ-ಸ್ವತ್ತು

ಸಾಲ ಪಡೆಯಲು ಅರ್ಹರು ಯಾರು? (Eligibility)

ಈ ಕೆಳಗಿನ ವರ್ಗದವರು ಮುದ್ರಾ ಸಾಲಕ್ಕೆ ಅರ್ಜಿ ಸಲ್ಲಿಸಬಹುದು:

  • ಸಣ್ಣ ವ್ಯಾಪಾರಿಗಳು (Small Traders)
  • ಹೊಸ ಸ್ಟಾರ್ಟ್ಅಪ್‌ಗಳು (Startup Entrepreneurs)
  • ಮಹಿಳಾ ಉದ್ಯಮಿಗಳು (Women Entrepreneurs)
  • ನಿರುದ್ಯೋಗಿ ಯುವಕರು (Unemployed Youth)
  • ಟೀ ಅಂಗಡಿ, ಬೇಕರಿ, ಬ್ಯೂಟಿ ಪಾರ್ಲರ್, ಟೈಲರಿಂಗ್, ಮೊಬೈಲ್ ರಿಪೇರಿ ಮುಂತಾದ ಸೇವಾ ವಲಯದ ಉದ್ಯಮಗಳು (Service Sector Business).

ಇದನ್ನೂ ಓದಿ: Indira Kit Distribution: ಬಿಪಿಎಲ್ ಕಾರ್ಡುದಾರರಿಗೆ ಇಂದಿರಾ ಕಿಟ್ ವಿತರಣೆ | ಸರ್ಕಾರದ ಮಹತ್ವದ ಮಾಹಿತಿ ಇಲ್ಲಿದೆ…

ಅರ್ಜಿ ಸಲ್ಲಿಸುವ ವಿಧಾನ ಮತ್ತು ಬೇಕಾಗುವ ದಾಖಲೆಗಳು

WhatsApp Group Join Now
Telegram Group Join Now

ನಿಮ್ಮ ಹತ್ತಿರದ ಯಾವುದೇ ಸರ್ಕಾರಿ ಅಥವಾ ಖಾಸಗಿ ಬ್ಯಾಂಕ್‌ಗೆ (Bank) ಭೇಟಿ ನೀಡಿ. ಅಲ್ಲಿ ಮುದ್ರಾ ಸಾಲದ ಅರ್ಜಿ ಫಾರ್ಮ್ (Application Form) ಪಡೆದು ಸಂಪೂರ್ಣವಾಗಿ ಭರ್ತಿ ಮಾಡಿ. ಇದರೊಂದಿಗೆ ಈ ಕೆಳಗಿನ ಪ್ರಮುಖ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ:

  • ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ (Aadhaar & PAN Card)
  • ವಿಳಾಸದ ದೃಢೀಕರಣ ಪತ್ರ (Address Proof)
  • ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್ (Bank Statement)
  • ನಿಮ್ಮ ಉದ್ಯಮದ ಸ್ಪಷ್ಟ ರೂಪುರೇಷೆ ಅಥವಾ ಬಿಸಿನೆಸ್ ಪ್ಲಾನ್ (Business Plan)

ಇದನ್ನೂ ಓದಿ: Gruha Jyothi Scheme Status: ಗೃಹಜ್ಯೋತಿ ಉಚಿತ ವಿದ್ಯುತ್: ನಿಮ್ಮ ಹೆಸರು ಲಿಸ್ಟ್’ನಲ್ಲಿದೆಯಾ? ಸುಲಭವಾಗಿ ಚೆಕ್ ಮಾಡಿಕೊಳ್ಳಿ!

₹20 ಲಕ್ಷದ ಸಾಲ ಪಡೆಯಲು ಸರಳ ಟಿಪ್ಸ್!

ಒಮ್ಮೇಲೆ ನೇರವಾಗಿ ₹20 ಲಕ್ಷ ಸಾಲಕ್ಕೆ ಅರ್ಜಿ ಸಲ್ಲಿಸಿದರೆ ಸಿಗುವುದು ಕಷ್ಟ. ಹೀಗಾಗಿ, ಮೊದಲು ‘ಶಿಶು’ ಅಥವಾ ‘ಕಿಶೋರ್’ ಹಂತದಿಂದ ಸಣ್ಣ ಸಾಲ ಪಡೆದು ಉದ್ಯಮ ಶುರುಮಾಡಿ.

ಪ್ರತಿ ತಿಂಗಳ ಇಎಂಐ (EMI) ಅನ್ನು ಸಮಯಕ್ಕೆ ಸರಿಯಾಗಿ ಕಟ್ಟಿ, ಉತ್ತಮ ಕ್ರೆಡಿಟ್ ಹಿಸ್ಟರಿ (Strong Credit Profile) ಬೆಳೆಸಿಕೊಳ್ಳಿ.

ಇದನ್ನೂ ಓದಿ: Pitrarjita Aasti Hakku: ಪಿತ್ರಾರ್ಜಿತ ಆಸ್ತಿ ಎಂದರೇನು? ಯಾರಿಗೆಲ್ಲ ಹಕ್ಕು ಇರುತ್ತದೆ? ಆಸ್ತಿ ಹಕ್ಕುಗಳ ಸಂಪೂರ್ಣ ಮಾಹಿತಿ

ಆನಂತರ ಹಂತ ಹಂತವಾಗಿ ‘ತರುಣ್’ ಮತ್ತು ‘ತರುಣ್ ಪ್ಲಸ್’ ಹಂತಕ್ಕೆ ಏರಿದರೆ ಬ್ಯಾಂಕ್‌ಗಳು ನಿಮ್ಮ ವ್ಯವಹಾರದ ಬೆಳವಣಿಗೆಯನ್ನು (Business Performance) ನೋಡಿ ಸುಲಭವಾಗಿ ₹20 ಲಕ್ಷದವರೆಗೆ ಸಾಲ ನೀಡುತ್ತವೆ.

ಸ್ಪಷ್ಟವಾದ ಮತ್ತು ಲಾಭದಾಯಕವಾದ ಬಿಸಿನೆಸ್ ಪ್ಲಾನ್ (Profitable Business Plan) ಇದ್ದು, ಶಿಸ್ತಿನಿಂದ ಮುನ್ನಡೆದರೆ ಮುದ್ರಾ ಸಾಲವು ನಿಮ್ಮ ಉದ್ಯಮವನ್ನು ದೊಡ್ಡ ಮಟ್ಟಕ್ಕೆ ಬೆಳೆಸಲು ಖಂಡಿತ ನೆರವಾಗುತ್ತದೆ.

Mane Manege e-Swathu: ‘ಮನೆ ಮನೆಗೆ ಇ-ಸ್ವತ್ತು’ ಅಭಿಯಾನ | ಮುಂದಿನ ತಿಂಗಳಿಂದ ಮನೆ ಬಾಗಿಲಲ್ಲೇ ಸಿಗಲಿದೆ ಇ-ಸ್ವತ್ತು


Spread the love
error: Content is protected !!