Monsoon rains return again: ಮತ್ತೆ ಮರಳಿದ ಮುಂಗಾರು ಮಳೆ | ಕರ್ನಾಟಕದ 13 ಜಿಲ್ಲೆಗಳಿಗೆ ಭಾರೀ ಮಳೆ | ವಲಯವಾರು ಹವಾಮಾನ ಮುನ್ಸೂಚನೆ ಇಲ್ಲಿದೆ…

Spread the love

WhatsApp Group Join Now
Telegram Group Join Now

Monsoon rains return again: ಕರ್ನಾಟಕದಲ್ಲಿ ಮತ್ತೆ ಮುಂಗಾರು ಮಳೆ ಚುರುಕಾಗಿದೆ. 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ, ಕರಾವಳಿ-ಮಲೆನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ ಸಂಪೂರ್ಣ ಮಾಹಿತಿ ಇಲ್ಲಿದೆ…

ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಸಾರ್ವಜನಿಕರಿಗೆ ಹಾಗೂ ಬಿತ್ತನೆಗಾಗಿ ಮಳೆಯನ್ನೇ ನಂಬಿ ಆಗಸದತ್ತ ಮುಖ ಮಾಡಿದ್ದ ರೈತರಿಗೆ ಹವಾಮಾನ ಇಲಾಖೆ (Meteorological Department) ಶುಭ ಸುದ್ದಿ ನೀಡಿದೆ.

ರಾಜ್ಯದಲ್ಲಿ ಕಳೆದೆರಡು ವಾರಗಳಿಂದ ದುರ್ಬಲಗೊಂಡು ಆತಂಕ ಸೃಷ್ಟಿಸಿದ್ದ ಮುಂಗಾರು ಮಳೆ (Monsoon Rain) ಈಗ ಮತ್ತೆ ಚುರುಕುಗೊಂಡಿದೆ. ಮುಂಬರುವ ದಿನಗಳಲ್ಲಿ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವೆಡೆ ವರುಣನ ಆರ್ಭಟ ಜೋರಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: Uchita Solar Vidyut Yojane: ಪ್ರತಿ ಮನೆಗೂ ಉಚಿತ ಸೋಲಾರ್ ಕರೆಂಟ್ ಭಾಗ್ಯ | ಪಿಎಂ ಸೂರ್ಯ ಘರ್ ಯೋಜನೆ ಸಂಪೂರ್ಣ ಮಾಹಿತಿ

13 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ (Yellow Alert)

ಬದಲಾದ ಹವಾಮಾನ ಪರಿಸ್ಥಿತಿಯಿಂದಾಗಿ ಜೂನ್ 23 ರಂದು (ಮಂಗಳವಾರ) ರಾಜ್ಯದ 13 ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ (Heavy Rainfall) ಮುನ್ಸೂಚನೆ ಇದೆ.

ಈ ಕೆಳಗಿನ ಜಿಲ್ಲೆಗಳಲ್ಲಿ ಕನಿಷ್ಠ 65 ಮಿ.ಮೀ ನಿಂದ 115 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಒಂದು ದಿನದ ಮಟ್ಟಿಗೆ ‘ಯೆಲ್ಲೋ ಅಲರ್ಟ್’ (Yellow Alert) ನೀಡಲಾಗಿದೆ:

  • ಕರಾವಳಿ ಮತ್ತು ಮಲೆನಾಡು: ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ.
  • ಒಳನಾಡು: ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ವಿಜಯನಗರ.

ಇದರ ಜೊತೆಗೆ, ಜೂನ್ 26 ರಂದು ಕಲಬುರಗಿ, ಯಾದಗಿರಿ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲೂ ಭಾರೀ ಮಳೆಯಾಗಲಿದ್ದು, ಅಂದೂ ಕೂಡ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಇದನ್ನೂ ಓದಿ: Gruha Lakshmi Yojana Mane Mane Survey: ಗೃಹಲಕ್ಷ್ಮಿ ಯೋಜನೆ ಮನೆ ಮನೆ ಸರ್ವೆ | ಫಲಾನುಭವಿಗಳ ಮರು ಪರಿಶೀಲನೆಗೆ ಸರ್ಕಾರದ ತಯಾರಿ

ವಲಯವಾರು ಹವಾಮಾನ ಮುನ್ಸೂಚನೆ (Regional Weather Forecast)

ಅರಬ್ಬಿ ಸಮುದ್ರದಲ್ಲಿ ಮುಂಗಾರು ಮಾರುತಗಳ ಚಲನೆಗೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿದ್ದು, ರಾಜ್ಯದ ವಿವಿಧೆಡೆ ಹವಾಮಾನ ಹೇಗಿರಲಿದೆ ಎಂಬುದರ ವಿವರ ಇಲ್ಲಿದೆ:

ಕರಾವಳಿ ಭಾಗ (Coastal Karnataka)

ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಕಡಿಮೆಯಾಗಿ ಮೋಡ ಮುಚ್ಚಿದ ವಾತಾವರಣ ಇರಲಿದೆ. ಉತ್ತರ ಕನ್ನಡದಲ್ಲಿ ಬಿಸಿಲು ಮತ್ತು ಮೋಡದ ಕಣ್ಣಾಮುಚ್ಚಾಲೆ ಇರಲಿದ್ದು, ಜೂನ್ 22 ರಿಂದಲೇ ಮುಂಗಾರು ಚೇತರಿಕೆ ಕಾಣಲಿದೆ. ಜೂನ್ 24 ರಿಂದ ಸಾಧಾರಣ ಮಳೆ ಆರಂಭವಾಗಿ, 26 ರ ನಂತರ ಮಳೆಯ ಪ್ರಮಾಣ ಹೆಚ್ಚಾಗುವ (Rainfall Increase) ಸ್ಪಷ್ಟ ಲಕ್ಷಣಗಳಿವೆ.

Monsoon rains return again
Monsoon rains return again

ಇದನ್ನೂ ಓದಿ: Karnataka Horticulture Subsidy Schemes: ತೋಟಗಾರಿಕೆ ಇಲಾಖೆ 2026-27ನೇ ಸಾಲಿನ ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನ

ಮಲೆನಾಡು (Malnad Region)

ಕರಾವಳಿಗೆ ಅಂಟಿಕೊAಡಿರುವ ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿ ಭಾಗಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ. ಶಿವಮೊಗ್ಗದಲ್ಲಿ ತುಂತುರು ಮಳೆಯಾಗಬಹುದು. ಜೂನ್ 27 ರಿಂದ ಮಲೆನಾಡಿನಲ್ಲಿ ಮುಂಗಾರು ಸಂಪೂರ್ಣವಾಗಿ ಚುರುಕಾಗಲಿದೆ.

ಉತ್ತರ ಒಳನಾಡು (North Interior Karnataka)

ವಿಜಯಪುರ, ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್ ಮತ್ತು ಯಾದಗಿರಿಯಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾದರೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ ಹಾಗೂ ಬಾಗಲಕೋಟೆಯಲ್ಲಿ ಮೋಡ ಕವಿದ ವಾತಾವರಣ ಇರಲಿದೆ.

ಇದನ್ನೂ ಓದಿ: July August Rainfall Forecast: ಜೂನ್‌ನಲ್ಲಿ ಮಳೆ ಕೈಕೊಟ್ಟಿತು! ಜುಲೈ-ಆಗಸ್ಟ್‌ನಲ್ಲಿ ಹೇಗಿರಲಿದೆ ಮಾನ್ಸೂನ್? ತಜ್ಞರ ಮಹತ್ವದ ಎಚ್ಚರಿಕೆ

ದಕ್ಷಿಣ ಒಳನಾಡು (South Interior Karnataka)

WhatsApp Group Join Now
Telegram Group Join Now

ಮೈಸೂರು, ಮಂಡ್ಯ, ರಾಮನಗರ, ಕೋಲಾರ, ತುಮಕೂರು, ದಾವಣಗೆರೆ ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ತುಂತುರು ಮಳೆಯ (Drizzle) ನಿರೀಕ್ಷೆ ಇದೆ. ಜೂನ್ 26 ರಿಂದ ಇಲ್ಲಿಯೂ ಮುಂಗಾರು ಚೇತರಿಸಿಕೊಳ್ಳಲಿದೆ.

ಇದನ್ನೂ ಓದಿ: BPL Ration Card New Application: ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ | ಮಹತ್ವದ ಮಾಹಿತಿ ಇಲ್ಲಿದೆ…

ತಂಪಾದ ಬೆಂಗಳೂರು, ಕುದಿಯುತ್ತಿರುವ ಉತ್ತರ ಕರ್ನಾಟಕ!

ರಾಜಧಾನಿ ಬೆಂಗಳೂರು (Bengaluru Weather) ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಬ್ಬು ಕವಿದ, ತಂಪಾದ ವಾತಾವರಣವಿದ್ದು, ಆಗಾಗ ಜೋರು ಮಳೆಯಾಗುತ್ತಿದೆ. ಇದರಿಂದಾಗಿ ಬಿಸಿಲಿನ ಝಳ ಕೊಂಚ ತಗ್ಗಿದೆ.

ಇದನ್ನೂ ಓದಿ: Crop Loan Waiver: ರೈತರಿಗೆ ಭರ್ಜರಿ ಗಿಫ್ಟ್ | ₹75,000 ಸಾಲ ಮನ್ನಾ ಘೋಷಣೆ; ಕರ್ನಾಟಕದಲ್ಲೂ ಜಾರಿಯಾಗುತ್ತಾ?

ಆದರೆ, ರಾಜ್ಯದ ಇತರ ಭಾಗಗಳಲ್ಲಿ ಬಿಸಿಲಿನ ಪ್ರಖರತೆ (Summer Heat) ಮುಂದುವರಿದಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ ಬರೋಬ್ಬರಿ 39 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ತುಮಕೂರು (ಚಿಕ್ಕನಹಳ್ಳಿ) ಮತ್ತು ಕೊಪ್ಪಳದಲ್ಲಿ 38 ಡಿಗ್ರಿ, ಬೀದರ್ ಹಾಗೂ ರಾಯಚೂರಿನಲ್ಲಿ 36 ಡಿಗ್ರಿ, ಮತ್ತು ಬಳ್ಳಾರಿಯಲ್ಲಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಮಳೆಗಾಲದಲ್ಲೂ ಜನ ಬೇಸಿಗೆಯ ಅನುಭವ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Drought Alert Karnataka: ಈ ವರ್ಷ ಬರ ಖಚಿತ? ಕರ್ನಾಟಕ ಸೇರಿ 12 ರಾಜ್ಯಗಳಿಗೆ ಕೇಂದ್ರದಿಂದ ತುರ್ತು ಎಚ್ಚರಿಕೆ!

ಕೃಷಿ ಚಟುವಟಿಕೆಗಳಿಗೆ ಬಿತ್ತು ಬ್ರೇಕ್ (Impact on Agriculture)

ಜೂನ್ ಮೊದಲ ವಾರದಲ್ಲಿ ಬಿತ್ತನೆ ಕಾರ್ಯ (Sowing) ಆರಂಭಿಸಿದ್ದ ರೈತರಿಗೆ, ಕಳೆದ ಎರಡು ವಾರಗಳ ಮಳೆ ಕೊರತೆ ಭಾರೀ ಆತಂಕ ತಂದೊಡ್ಡಿತ್ತು. ಕೊಪ್ಪಳ, ರಾಯಚೂರು, ವಿಜಯಪುರದಂತಹ ಜಿಲ್ಲೆಗಳಲ್ಲಿ ಮಳೆಯಿಲ್ಲದೆ ಬಿತ್ತನೆಯೇ ಆಗಿಲ್ಲ. ಬರಗಾಲದ (Drought) ಭೀತಿಯಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.

ಇದೀಗ ದಿಢೀರನೆ ಹವಾಮಾನ ಬದಲಾಗಿದ್ದು, ಮರಳಿ ಬಂದಿರುವ ಮುಂಗಾರು ಬಿಸಿಲಿಗೆ ಬಾಡಿದ್ದ ಬೆಳೆಗಳಿಗೆ ಮತ್ತು ಕಂಗಾಲಾಗಿದ್ದ ರೈತರ ಮೊಗದಲ್ಲಿ ತುಸು ಮಂದಹಾಸ ಮೂಡಿಸುವ ಭರವಸೆ ಮೂಡಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆಯಾದರೆ, ರಾಜ್ಯದ ಕೃಷಿ ವಲಯ ದೊಡ್ಡ ಆರ್ಥಿಕ ಸಂಕಷ್ಟದಿAದ ಪಾರಾಗಲಿದೆ.

Gruha Lakshmi Yojana Mane Mane Survey: ಗೃಹಲಕ್ಷ್ಮಿ ಯೋಜನೆ ಮನೆ ಮನೆ ಸರ್ವೆ | ಫಲಾನುಭವಿಗಳ ಮರು ಪರಿಶೀಲನೆಗೆ ಸರ್ಕಾರದ ತಯಾರಿ


Spread the love
error: Content is protected !!