Gruha Jyothi Free Electricity: ಗೃಹಜ್ಯೋತಿ ಯೋಜನೆಯಡಿ 82,220 ಕುಟುಂಬಗಳು ದಾಖಲೆ ಪರಿಶೀಲನೆಗೆ ಮಾಹಿತಿ ನೀಡದ ಕಾರಣ ಉಚಿತ ವಿದ್ಯುತ್ ಸೌಲಭ್ಯ ಕಳೆದುಕೊಂಡಿವೆ. ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ…
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ (Gruha Jyothi) ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಫಲಾನುಭವಿಗಳ ದಾಖಲೆಗಳ ಪರಿಶೀಲನೆ (Verification) ಕಾರ್ಯ ರಾಜ್ಯಾದ್ಯಂತ ನಡೆಯುತ್ತಿದೆ.
ಈ ಪರಿಶೀಲನೆ ವೇಳೆ ಸುಮಾರು 82,220 ಕುಟುಂಬಗಳು ಅಗತ್ಯ ಮಾಹಿತಿಯನ್ನು ನೀಡಲು ನಿರಾಕರಿಸಿರುವುದರಿಂದ, ಆ ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ಮುಂದುವರಿಯುವುದಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಸರ್ಕಾರದ ಸೂಚನೆಯಂತೆ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಸಂಸ್ಥೆಗಳು (ESCOMs) ಕಳೆದ ಎರಡು ತಿಂಗಳಿಂದ ಮನೆ-ಮನೆಗೆ ತೆರಳಿ ಫಲಾನುಭವಿಗಳ ವಿವರಗಳನ್ನು ಪರಿಶೀಲಿಸುತ್ತಿವೆ. ಈ ವೇಳೆ ಆಧಾರ್ ಸಂಖ್ಯೆ ಸೇರಿದಂತೆ ಕೆಲವು ಮೂಲಭೂತ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ITR Filing: ಐಟಿಆರ್ ಸಲ್ಲಿಕೆ | ಯಾರಿಗೆ ದಂಡ, ಯಾರಿಗೆ ವಿನಾಯಿತಿ? ಸರ್ಕಾರದ ಹೊಸ ಅಪ್ಡೇಟ್ ಇಲ್ಲಿದೆ…
ಏಕೆ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ?
ಗೃಹಜ್ಯೋತಿ ಯೋಜನೆಯಡಿ ಪ್ರತಿ ವಿದ್ಯುತ್ ಸಂಪರ್ಕವನ್ನು ಫಲಾನುಭವಿಯ ಆಧಾರ್ (Aadhaar) ಸಂಖ್ಯೆಗೆ ಜೋಡಿಸಲಾಗಿದೆ. ಆದ್ದರಿಂದ ಯೋಜನೆಯ ಸೌಲಭ್ಯ ಸರಿಯಾದ ವ್ಯಕ್ತಿಗೆ ತಲುಪುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಪರಿಶೀಲನೆ ನಡೆಸುತ್ತಿದೆ.
ಈ ಪ್ರಕ್ರಿಯೆಯಲ್ಲಿ ಪ್ಯಾನ್ ಕಾರ್ಡ್ (PAN Card) ಅಥವಾ ಜಾತಿ ಪ್ರಮಾಣಪತ್ರ ಕಡ್ಡಾಯವಲ್ಲ. ಆದರೆ ಫಲಾನುಭವಿಯ ಗುರುತಿನ ಮೂಲಭೂತ ಮಾಹಿತಿಯನ್ನು ನೀಡುವುದು ಅಗತ್ಯವಾಗಿದೆ.
ಇದನ್ನೂ ಓದಿ: LPG Cylinder Price: ಎಲ್‌ಪಿಜಿ ಸಿಲಿಂಡರ್ ಬೆಲೆ ಭರ್ಜರಿ ಇಳಿಕೆ
82,000ಕ್ಕೂ ಹೆಚ್ಚು ಕುಟುಂಬಗಳು ಮಾಹಿತಿ ನೀಡಲಿಲ್ಲ
ಇಲ್ಲಿಯವರೆಗೆ ರಾಜ್ಯದಲ್ಲಿ ಸುಮಾರು 87.81 ಲಕ್ಷ ಕುಟುಂಬಗಳ ಪರಿಶೀಲನೆ ಪೂರ್ಣಗೊಂಡಿದೆ. ಈ ವೇಳೆ 82,220 ಕುಟುಂಬಗಳು ಮೀಟರ್ ರೀಡರ್‌ಗಳು ಕೇಳಿದ ಮಾಹಿತಿಯನ್ನು ನೀಡಲು ನಿರಾಕರಿಸಿವೆ.
ಈ ಕುಟುಂಬಗಳ ವಿವರವನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತಿದ್ದು, ಯೋಜನೆಯ ಸೌಲಭ್ಯದಿಂದ ಹೊರಗಿಡುವ ಪ್ರಕ್ರಿಯೆ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Karnataka One Week Heavy Rain: ಕರ್ನಾಟಕದಲ್ಲಿ ಒಂದು ವಾರ ಭಾರೀ ಮಳೆ | ಜಿಲ್ಲಾವಾರು ಮಳೆ ಮಾಹಿತಿ ಇಲ್ಲಿದೆ…

ಬೆಂಗಳೂರಿನಲ್ಲಿ ಹೆಚ್ಚು ನಿರಾಕರಣೆ ಏಕೆ?
ಮಾಹಿತಿ ನೀಡಲು ನಿರಾಕರಿಸಿದ ಕುಟುಂಬಗಳ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚು ಕಂಡುಬAದಿದೆ. ಇದಕ್ಕೆ ಪ್ರಮುಖ ಕಾರಣ ವಲಸೆ (Migration).
ಗ್ರಾಮಗಳಿಂದ ಬೆಂಗಳೂರಿಗೆ ಉದ್ಯೋಗಕ್ಕಾಗಿ ಬಂದಿರುವ ಅನೇಕ ಕುಟುಂಬಗಳ ಆಧಾರ್ ವಿಳಾಸ ಮತ್ತು ಪ್ರಸ್ತುತ ವಾಸದ ವಿಳಾಸ ಒಂದೇ ಆಗಿಲ್ಲ. ಈ ಕಾರಣದಿಂದ ಹಲವು ಮಂದಿ ಪರಿಶೀಲನೆ ವೇಳೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಇನ್ನೂ ಕೆಲವರು ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ‘ನಾವು ವಿದ್ಯುತ್ ಬಿಲ್ ಪಾವತಿಸುತ್ತೇವೆ, ಉಚಿತ ಯೋಜನೆ ಬೇಡ’ ಎಂದು ಸ್ವಯಂಪ್ರೇರಿತವಾಗಿ ಯೋಜನೆಯನ್ನು ತ್ಯಜಿಸುತ್ತಿರುವವರ ಸಂಖ್ಯೆಯೂ ಇದೆ.
ಗ್ರಾಮೀಣ ಪ್ರದೇಶದಲ್ಲೂ ಇದೇ ಪರಿಸ್ಥಿತಿ
ಗ್ರಾಮೀಣ ಭಾಗದಲ್ಲೂ ಕೆಲವು ಫಲಾನುಭವಿಗಳು ಯೋಜನೆಯ ಸೌಲಭ್ಯ ಪಡೆಯಲು ಮುಂದಾಗುತ್ತಿಲ್ಲ. ಒಂದು ಕಡೆ ಗ್ರಾಮದಲ್ಲಿ ದಾಖಲೆ ನೀಡಿ ಯೋಜನೆಗೆ ನೋಂದಾಯಿಸಿಕೊಂಡು, ಮತ್ತೊಂದು ಕಡೆ ಬೆಂಗಳೂರಿನಲ್ಲಿ ವಾಸಿಸುವ ಕುಟುಂಬಗಳಿಗೆ ಯೋಜನೆಯ ಲಾಭ ಸಿಗುವುದಿಲ್ಲ. ಈ ಕಾರಣದಿಂದ ಎರಡು ಕಡೆ ವಿದ್ಯುತ್ ಬಿಲ್ ಪಾವತಿಸಿದರೂ ಪರವಾಗಿಲ್ಲ ಎಂಬ ನಿರ್ಧಾರಕ್ಕೆ ಕೆಲವರು ಬಂದಿದ್ದಾರೆ.
ಎಷ್ಟು ಕುಟುಂಬಗಳು ಗೃಹಜ್ಯೋತಿ ಲಾಭ ಪಡೆಯುತ್ತಿವೆ?
ಪ್ರಸ್ತುತ ಕರ್ನಾಟಕದಲ್ಲಿ ಸುಮಾರು 1.65 ಕೋಟಿ ಕುಟುಂಬಗಳು ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿವೆ.
ಯೋಜನೆಯಡಿ ಅರ್ಹ ಕುಟುಂಬಗಳಿಗೆ ತಿಂಗಳಿಗೆ 200 ಯೂನಿಟ್ (Units) ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ರಾಜ್ಯದ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಇದೂ ಒಂದಾಗಿದೆ.
ಇದನ್ನೂ ಓದಿ: 10th Pass Women: 10ನೇ ತರಗತಿ ಪಾಸಾದ ಮಹಿಳೆಯರಿಗೆ ಉದ್ಯೋಗಾವಕಾಶ | 232 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಯಾವ ಎಸ್ಕಾಂನಲ್ಲಿ (ESCOM) ಎಷ್ಟು ಫಲಾನುಭವಿಗಳಿದ್ದಾರೆ?
ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಸಂಸ್ಥೆಗಳ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಸಂಖ್ಯೆ ಹೀಗಿದೆ:
- ಬೆಸ್ಕಾಂ (BESCOM): 35.94 ಲಕ್ಷ
- ಹೆಸ್ಕಾಂ (HESCOM): 20.99 ಲಕ್ಷ
- ಮೆಸ್ಕಾಂ (MESCOM): 11.84 ಲಕ್ಷ
- ಸೆಸ್ಕ್ (CESC): 10.63 ಲಕ್ಷ
- ಗೆಸ್ಕಾಂ (GESCOM): 8.15 ಲಕ್ಷ
- ಎಸ್‌ಆರ್‌ಇಸಿಎಸ್ (SRECS): 24,226
ಇದನ್ನೂ ಓದಿ: Karmikara Makkalige Scholarship 2026: ಕಾರ್ಮಿಕರ ಮಕ್ಕಳಿಗೆ ₹25,000 ವರೆಗೆ ವಿದ್ಯಾರ್ಥಿವೇತನ | ಆನ್‌ಲೈನ್ ಅರ್ಜಿ ಆಹ್ವಾನ
ಸರಿಯಾದ ದಾಖಲೆಗಳನ್ನು ನೀಡಿ
ಗೃಹಜ್ಯೋತಿ ಯೋಜನೆಯ ಲಾಭ ಮುಂದುವರಿಯಬೇಕಾದರೆ ಸರ್ಕಾರ ನಡೆಸುತ್ತಿರುವ ಪರಿಶೀಲನೆ ವೇಳೆ ಅಗತ್ಯ ಮಾಹಿತಿಯನ್ನು ಒದಗಿಸುವುದು ಮುಖ್ಯ. ಮಾಹಿತಿ ನೀಡದೆ ನಿರಾಕರಿಸಿದ ಕುಟುಂಬಗಳು ಉಚಿತ ವಿದ್ಯುತ್ ಸೌಲಭ್ಯವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಹೀಗಾಗಿ ಅಧಿಕಾರಿಗಳು ಸಂಪರ್ಕಿಸಿದಾಗ ಸರಿಯಾದ ದಾಖಲೆಗಳನ್ನು ನೀಡಿ ಪರಿಶೀಲನೆ ಪೂರ್ಣಗೊಳಿಸುವುದು ಒಳಿತು. ಇದರಿಂದ ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ಯಾವುದೇ ತೊಂದರೆಯಿಲ್ಲದೆ ಮುಂದುವರಿಯಲಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.