Ballari DCC Bank Nemakati 2026: ಡಿಸಿಸಿ ಬ್ಯಾಂಕ್ ನೇರ ನೇಮಕಾತಿ: ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರಿ ಪಾಸ್ ಆದವರಿಗೆ ಭರ್ಜರಿ ಅವಕಾಶ!

Spread the love

WhatsApp Group Join Now
Telegram Group Join Now

Ballari DCC Bank Nemakati 2026: 10ನೇ ತರಗತಿ, ಪಿಯುಸಿ ಹಾಗೂ ಡಿಗ್ರಿ ಅಭ್ಯರ್ಥಿಗಳಿಗೆ ಬಳ್ಳಾರಿ ಡಿಸಿಸಿ ಬ್ಯಾಂಕ್ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿವೆ…

ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ದೊರೆತಿದೆ. ಬಳ್ಳಾರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಲಿಮಿಟೆಡ್ (Ballari District Central Co-operative Bank – DCC Bank) ತನ್ನ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ.

10ನೇ ತರಗತಿ, ಪಿಯುಸಿ ಹಾಗೂ ಪದವಿ (Degree) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ (Banking Sector) ವೃತ್ತಿಜೀವನ ಕಟ್ಟಿಕೊಳ್ಳಲು ಬಯಸುವ ಯುವಕರಿಗೆ ಇದು ಉತ್ತಮ ಅವಕಾಶವಾಗಿದೆ.

ಇದನ್ನೂ ಓದಿ: PM Surya Ghar Yojana: ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು 78,000 ವರೆಗೆ ಸಹಾಯಧನ | ಅರ್ಜಿ ಆಹ್ವಾನ

ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಪ್ರಮುಖ ಮಾಹಿತಿ

ಬಳ್ಳಾರಿ ಡಿಸಿಸಿ ಬ್ಯಾಂಕ್ ವತಿಯಿಂದ 2026ರ ಏಪ್ರಿಲ್ 6ರಂದು ಪ್ರಕಟಿಸಲಾಗಿದ್ದ ಹಿಂದಿನ ಅಧಿಸೂಚನೆಯಡಿ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ಗಮನಿಸಬೇಕಾದ ವಿಷಯವೆಂದರೆ, ಅವರು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗಿದೆ.

ಆದರೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೆ ಅರ್ಜಿ ಶುಲ್ಕ ಪಾವತಿಸುವ ಅಗತ್ಯವಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: One Family One LPG Connection: ಒಂದು ಕುಟುಂಬಕ್ಕೆ ಒಂದೇ ಗ್ಯಾಸ್ ಸಂಪರ್ಕ | ಜೂನ್ 1ರಿಂದ ಹೊಸ ನಿಯಮ ಜಾರಿ | ಗ್ರಾಹಕರು ತಿಳಿಯಬೇಕಾದ ಸಂಪೂರ್ಣ ಮಾಹಿತಿ

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

1. ಪ್ರಥಮ ದರ್ಜೆ ಸಹಾಯಕರು (FDA): ಒಟ್ಟು 22 ಹುದ್ದೆಗಳು ಖಾಲಿ ಇದ್ದು; ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಹತೆ (Degree) ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ.

2. ದ್ವಿತೀಯ ದರ್ಜೆ ಸಹಾಯಕರು (SDA): ಒಟ್ಟು 28 ಹುದ್ದೆಗಳು ಖಾಲಿ ಹುದ್ದೆಗಳಿದ್ದು; ಪಿಯುಸಿ (PUC) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಲು ಅವಕಶವಿದೆ.

ಇದನ್ನೂ ಓದಿ: KMF Nemakati 2026: ಕೆಎಂಎಫ್ ವಿವಿಧ ಹುದ್ದೆಗಳಿಗೆ ಭರ್ಜರಿ ನೇಮಕಾತಿ | SSLC, ITI, ಡಿಗ್ರಿ ಆದವರಿಗೆ ಸುವರ್ಣಾವಕಾಶ | ತಿಂಗಳಿಗೆ ರೂ. 1.5 ಲಕ್ಷದವರೆಗೆ ವೇತನ!

3. ಕಿರಿಯ ಸಹಾಯಕರು (Junior Assistant): 32 ಖಾಲಿ ಹುದ್ದೆಗಳಿದ್ದು ಎಸ್‌ಎಸ್‌ಎಲ್‌ಸಿ (SSLC) ವಿದ್ಯಾರ್ಹತೆ ಹೊಂದಿದವರು ಅರ್ಜಿ ಹಾಕಬಹುದಾಗಿದೆ.

4. ವಾಹನ ಚಾಲಕ (Driver): 01 ಹುದ್ದೆಗೆ ಅರ್ಜಿ ಆಹ್ವನಿಸಲಾಗಿದ್ದು; 10ನೇ ತರಗತಿ ಉತ್ತೀರ್ಣರಾದವರು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಇದನ್ನೂ ಓದಿ: SBI Apprentice Recruitment 2026: ಎಸ್‌ಬಿಐ ಭರ್ಜರಿ ನೇಮಕಾತಿ 2026: 7,150 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಕನ್ನಡಿಗರಿಗೆ ಸುವರ್ಣಾವಕಾಶ!

ವೇತನ (Salary) ಎಷ್ಟು ಸಿಗಲಿದೆ?

ಬಳ್ಳಾರಿ ಡಿಸಿಸಿ ಬ್ಯಾಂಕ್‌ನಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆಕರ್ಷಕ ವೇತನವನ್ನು ನೀಡಲಾಗುತ್ತದೆ.

  • ಪ್ರಥಮ ದರ್ಜೆ ಸಹಾಯಕ: ₹44,425 ರಿಂದ ₹83,700
  • ದ್ವಿತೀಯ ದರ್ಜೆ ಸಹಾಯಕ: ₹34,100 ರಿಂದ ₹67,600
  • ವಾಹನ ಚಾಲಕ: ₹31,775 ರಿಂದ ₹61,300
  • ಕಿರಿಯ ಸಹಾಯಕ: ₹29,600 ರಿಂದ ₹52,800
WhatsApp Group Join Now
Telegram Group Join Now

ಬ್ಯಾಂಕ್ ಉದ್ಯೋಗಗಳಲ್ಲಿ ಸಿಗುವ ಇತರೆ ಭತ್ಯೆಗಳು (Allowances) ಹಾಗೂ ಸೌಲಭ್ಯಗಳು ನಿಯಮಾನುಸಾರ ಲಭ್ಯವಾಗುತ್ತವೆ.

ಇದನ್ನೂ ಓದಿ: IMD Monsoon Forecast 2026: ಈ ವರ್ಷ ಕಡಿಮೆ ಮಳೆ; ದೇಶದಲ್ಲಿ ಬರದ ಛಾಯೆ! | ಹವಾಮಾನ ಇಲಾಖೆ ಪರಿಷ್ಕೃತ ಮುನ್ಸೂಚನೆ ಬಿಡುಗಡೆ

ವಯೋಮಿತಿ (Age Limit) ವಿವರ

ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಕಂಡ ವಯೋಮಿತಿಯನ್ನು ಹೊಂದಿರಬೇಕು.

  • ಕನಿಷ್ಠ ವಯಸ್ಸು: 18 ವರ್ಷ
  • ಗರಿಷ್ಠ ವಯಸ್ಸು: 35 ವರ್ಷ

ಇದನ್ನೂ ಓದಿ: PM Kisan 23rd Installment: ಪಿಎಂ ಕಿಸಾನ್ 23ನೇ ಕಂತಿನ ಹಣ ಬಿಡುಗಡೆ | ಸರ್ಕಾರದಿಂದ ಹೊಸ ಅಪ್ಡೇಟ್

Ballari DCC Bank Nemakati 2026
Ballari DCC Bank Nemakati 2026

ವಯೋಮಿತಿ ಸಡಿಲಿಕೆ

ಸರ್ಕಾರದ ಮೀಸಲಾತಿ ನಿಯಮಗಳ ಪ್ರಕಾರ ಈ ಕೆಳಗಿನಂತೆ ವಯೋಮಿತಿ ಸಡಿಲಿಕೆ (Age Relaxation) ನೀಡಲಾಗಿದೆ:

  • ಒಬಿಸಿ ಅಭ್ಯರ್ಥಿಗಳಿಗೆ – 3 ವರ್ಷ
  • ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ – 5 ವರ್ಷ
  • ಮಹಿಳಾ ಅಭ್ಯರ್ಥಿಗಳು – 10 ವರ್ಷ
  • ಅಂಗವಿಕಲ ಅಭ್ಯರ್ಥಿಗಳು – 10 ವರ್ಷ

ಇದನ್ನೂ ಓದಿ: 15 Lakh Fake Old Age Pension Cancelled: 15 ಲಕ್ಷ ಅಕ್ರಮ ವೃದ್ಧಾಪ್ಯ ವೇತನ ರದ್ದು | ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಅರ್ಜಿ ಶುಲ್ಕ (Application Fee) ಎಷ್ಟು?

  • ಸಾಮಾನ್ಯ, 2A, 2B, 3A, 3B: ₹1000
  • SC/ST, ಮಾಜಿ ಸೈನಿಕರು, PwD: ₹500

ಪಾವತಿ ವಿಧಾನ: ಡಿಮ್ಯಾಂಡ್ ಡ್ರಾಫ್ಟ್ (Demand Draft), ಪೋಸ್ಟಲ್ ಆರ್ಡರ್ (Postal Order) ಅಥವಾ ಮನಿ ಆರ್ಡರ್ (Money Order)

ಇದನ್ನೂ ಓದಿ: CET Result: ಜೂನ್ ಮೊದಲ ವಾರ ಸಿಇಟಿ ಫಲಿತಾಂಶ ಪ್ರಕಟ | ಕೆಇಎ ಪ್ರಮುಖ ಮಾಹಿತಿ

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಅಭ್ಯರ್ಥಿಗಳ ಆಯ್ಕೆಯು ಲಿಖಿತ ಪರೀಕ್ಷೆ (Written Examination) ಹಾಗೂ ಸಂದರ್ಶನ (Interview) ಎರಡು ಹಂತಗಳಲ್ಲಿ ನಡೆಯಲಿದೆ. ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಹಾಗೂ ಸಂದರ್ಶನದ ಪ್ರದರ್ಶನದ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಈ ಕ್ರಮಗಳನ್ನು ಅನುಸರಿಸಿ

ಬಳ್ಳಾರಿ ಡಿಸಿಸಿ ಬ್ಯಾಂಕ್ ಅಧಿಕೃತ ವೆಬ್‌ಸೈಟ್ bellarydcc.bank.in ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಕೆಳಗೆ ನೀಡುವ ಬಳ್ಳಾರಿ ಡಿಸಿಸಿ ಬ್ಯಾಂಕ್ ಅಧಿಕೃತ ವೆಬ್‌ಸೈಟ್ ಡೈರೆಕ್ಟ್ ಲಿಂಕ್ ಬಳಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: LPG Cylinder New Rules: ಎಲ್‌ಪಿಜಿ ಸಿಲಿಂಡರ್ ಹೊಸ ನಿಯಮಗಳು | ಈ ತಪ್ಪು ಮಾಡಿದ್ರೆ ನಿಮ್ಮ ಗ್ಯಾಸ್ ಕನೆಕ್ಷನ್ ಬ್ಲಾಕ್!

ಪ್ರಮುಖ ದಿನಾಂಕಗಳು

  • ಅರ್ಜಿ ಆರಂಭ ದಿನಾಂಕ: 01 ಜೂನ್ 2026
  • ಅರ್ಜಿ ಕೊನೆಯ ದಿನಾಂಕ: 30 ಜೂನ್ 2026

ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶ

ಪ್ರಸ್ತುತ ಕರ್ನಾಟಕದಲ್ಲಿ ಸರ್ಕಾರಿ ಹಾಗೂ ಸಹಕಾರಿ ಬ್ಯಾಂಕ್ ನೇಮಕಾತಿಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ಬಳ್ಳಾರಿ ಡಿಸಿಸಿ ಬ್ಯಾಂಕ್ ನೇಮಕಾತಿ ಅನೇಕ ಯುವಕರಿಗೆ ಉತ್ತಮ ಅವಕಾಶವಾಗಿದೆ. ವಿಶೇಷವಾಗಿ SSLC, PUC ಮತ್ತು Degree ಪೂರ್ಣಗೊಳಿಸಿರುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಥಿರ ಉದ್ಯೋಗ (Stable Career), ಉತ್ತಮ ವೇತನ ಹಾಗೂ ಭವಿಷ್ಯದ ಬೆಳವಣಿಗೆ ಅವಕಾಶಗಳನ್ನು ಬಯಸುವ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಶೀಘ್ರವೇ ಅರ್ಜಿ ಸಲ್ಲಿಸುವುದು ಉತ್ತಮ.

ಇದನ್ನೂ ಓದಿ: New BPL Card Income Limit Hike: ಹೊಸ ಬಿಪಿಎಲ್ ಕಾರ್ಡ್ ಅರ್ಜಿದಾರರಿಗೆ ಶುಭಸುದ್ದಿ | ಹೊಸ ರೂಲ್ಸ್ ಜಾರಿಗೆ ಸರ್ಕಾರ ಚಿಂತನೆ

ಪ್ರಮುಖ ಲಿಂಕುಗಳು

  • ಹೊಸ ಅಧಿಕೃತ ಅಧಿಸೂಚನೆ: Dwonload 
  • ಹಳೆಯ ಅಧಿಕೃತ ಅಧಿಸೂಚನೆ: Dwonload 
  • ಆನ್‌ಲೈನ್‌ನಲ್ಲಿ ಅರ್ಜಿ ಲಿಂಕ್: Apply Now
  • ಅಧಿಕೃತ ವೆಬ್‌ಸೈಟ್: bellarydcc.bank.in

KMF Nemakati 2026: ಕೆಎಂಎಫ್ ವಿವಿಧ ಹುದ್ದೆಗಳಿಗೆ ಭರ್ಜರಿ ನೇಮಕಾತಿ | SSLC, ITI, ಡಿಗ್ರಿ ಆದವರಿಗೆ ಸುವರ್ಣಾವಕಾಶ | ತಿಂಗಳಿಗೆ ರೂ. 1.5 ಲಕ್ಷದವರೆಗೆ ವೇತನ!


Spread the love
error: Content is protected !!