Karnataka Vokkaliga Nigama Schemes: ಗಂಗಾ ಕಲ್ಯಾಣ, ಶೈಕ್ಷಣಿಕ ಸಾಲ, ಸ್ವಯಂ ಉದ್ಯೋಗ ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನ

Spread the love

WhatsApp Group Join Now
Telegram Group Join Now

Karnataka Vokkaliga Nigama Schemes: ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ 2026-27ನೇ ಸಾಲಿನ ಸಾಲ ಮತ್ತು ಸಹಾಯಧನ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ…

2026-27ನೇ ಸಾಲಿನ ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ (Karnataka Vokkaliga Nigama Schemes) ಸಾಲ ಮತ್ತು ಸಹಾಯಧನ ಯೋಜನೆಗಳು ಈಗ ಲಭ್ಯವಿವೆ. ಆನ್‌ಲೈನ್ ಮೂಲಕ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದೆ. ಮೊದಲು ಅರ್ಜಿ ಸಲ್ಲಿಸಲು ಅಕ್ಟೋಬರ್ 1 ಕೊನೆಯ ದಿನವಾಗಿತ್ತು. ಆದರೆ ಈಗ ಆ ದಿನಾಂಕವನ್ನು ಅಕ್ಟೋಬರ್ 15, 2026ರವರೆಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ: Karnataka Veerashaiva-Lingayat Schemes 2026: ಕರ್ನಾಟಕ ವೀರಶೈವ-ಲಿಂಗಾಯತ ನಿಗಮದಿಂದ ಬಂಪರ್ ಯೋಜನೆಗಳು | ಅರ್ಜಿ ಆಹ್ವಾನ

ಯಾರು ಅರ್ಜಿ ಹಾಕಬಹುದು?

ಹಿಂದುಳಿದ ವರ್ಗಗಳ ಪ್ರವರ್ಗ-3ಎ ಅಡಿಯಲ್ಲಿ ಬರುವ ಎಲ್ಲರೂ ಅರ್ಜಿ ಹಾಕಬಹುದು. ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಗೌಡ, ಕುಂಚಿಟಿಗ, ಹಳ್ಳಿಕಾರ್ ಮುಂತಾದ ಉಪಪಂಗಡಗಳಿಗೆ ಇದು ಅನ್ವಯಿಸುತ್ತದೆ. ಇದರ ಜೊತೆಗೆ ಕಾಪು, ಕಮ್ಮ, ಹೆಗ್ಗಡೆ, ಗೌಂಡರ್, ನಾಮಧಾರಿ ಒಕ್ಕಲಿಗ ಮುಂತಾದ 20ಕ್ಕೂ ಹೆಚ್ಚು ಉಪಜಾತಿಗಳ ಜನರಿಗೂ ಈ ಸೌಲಭ್ಯ ಸಿಗಲಿದೆ. ಬನ್ನಿ, ನಿಗಮದ 7 ಪ್ರಮುಖ ಯೋಜನೆಗಳು ಯಾವುವು ಎಂದು ಸರಳವಾಗಿ ತಿಳಿದುಕೊಳ್ಳೋಣ.

ಇದನ್ನೂ ಓದಿ: Karnataka Weather Forecast: ರಾಜ್ಯದ 12 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ | ಅಕ್ಟೋಬರ್ 15ರ ವರೆಗೆ ಮುಂಗಾರು ವಿಸ್ತರಣೆ

1. ಸ್ವಯಂ ಉದ್ಯೋಗ ನೇರ ಸಾಲ ಯೋಜನೆ (Self-Employment Direct Loan)

ಸ್ವಂತ ಉದ್ಯಮ ಶುರು ಮಾಡುವ ಕನಸು ನಿಮಗಿದೆಯೇ? ಸಣ್ಣ ವ್ಯಾಪಾರ ಮಾಡಲು ಬಂಡವಾಳ ಬೇಕೇ? ಹಾಗಾದರೆ ಈ ಯೋಜನೆ ನಿಮಗಾಗಿ ಇದೆ.

ಅರ್ಜಿ ಹಾಕಲು ನಿಮ್ಮ ವಯಸ್ಸು 18 ರಿಂದ 55 ವರ್ಷದೊಳಗೆ ಇರಬೇಕು. ವಾರ್ಷಿಕ ಆದಾಯಕ್ಕೆ ಒಂದು ಮಿತಿ ಇದೆ. ಹಳ್ಳಿಗಳಲ್ಲಿ ವಾಸಿಸುವವರ ಆದಾಯ 98,000 ರೂಪಾಯಿ ಮೀರಿರಬಾರದು.

ನಗರ ಪ್ರದೇಶದವರ ಆದಾಯ 1,20,000 ರೂಪಾಯಿ ಮೀರಿರಬಾರದು. ಈ ಯೋಜನೆಯಡಿ 2 ಲಕ್ಷ ರೂಪಾಯಿ ಸಾಲ ಸಿಗುತ್ತದೆ.

ಇದನ್ನೂ ಓದಿ: Gruha Lakshmi New Guidelines: ಗೃಹಲಕ್ಷ್ಮಿ ಹಣ ಪಡೆಯುವವರಿಗೆ ಹೊಸ ರೂಲ್ಸ್: ಇನ್ಮುಂದೆ ಪತಿ ಆಧಾರ್ ಲಿಂಕ್ ಕೂಡ ಕಡ್ಡಾಯ!

ಇದರಲ್ಲಿ 30,000 ರೂಪಾಯಿ ಉಚಿತ ಸಹಾಯಧನ (Subsidy) ಇರುತ್ತದೆ. ಇದನ್ನು ನೀವು ವಾಪಸ್ ಕಟ್ಟುವಂತಿಲ್ಲ.

ಉಳಿದ 1,70,000 ರೂಪಾಯಿಯನ್ನು ಸಾಲವಾಗಿ ನೀಡುತ್ತಾರೆ. ಇದಕ್ಕೆ ಬಡ್ಡಿ ದರ ಕೇವಲ ಶೇಕಡಾ 4ರಷ್ಟು ಮಾತ್ರ ಇರುತ್ತದೆ.

ಒಂದು ವೇಳೆ ನೀವು 1 ಲಕ್ಷಕ್ಕಿಂತ ಹೆಚ್ಚು ಸಾಲ ಪಡೆದರೆ ನಿಯಮವೊಂದಿದೆ. ನಿಮ್ಮ ಆಸ್ತಿಯನ್ನು ನಿಗಮಕ್ಕೆ ಅಡಮಾನ (Mortgage) ಮಾಡಬೇಕಾಗುತ್ತದೆ.

ಇದನ್ನೂ ಓದಿ: Udyogini Scheme 2026: ಮಹಿಳೆಯರಿಗೆ ಬಡ್ಡಿ ಇಲ್ಲದೇ ₹3 ಲಕ್ಷ ಸಾಲ | ₹2 ಲಕ್ಷ ಸಾಲ ಮನ್ನಾ | ಅಕ್ಟೋಬರ್ 31 ಕೊನೆಯ ದಿನ

2. ಗಂಗಾ ಕಲ್ಯಾಣ ನೀರಾವರಿ ಯೋಜನೆ (Ganga Kalyana Scheme)

ನೀವು ಸಣ್ಣ ಅಥವಾ ಅತಿ ಸಣ್ಣ ರೈತರೇ? ನಿಮ್ಮ ಜಮೀನಿಗೆ ನೀರಾವರಿ ಸೌಲಭ್ಯ ಇಲ್ಲವೇ? ಚಿಂತೆ ಬೇಡ. ಸರ್ಕಾರವೇ ನಿಮ್ಮ ಜಮೀನಿಗೆ ಉಚಿತವಾಗಿ ಕೊಳವೆ ಬಾವಿ ಕೊರೆಸಿಕೊಡುತ್ತದೆ.

WhatsApp Group Join Now
Telegram Group Join Now

ಈ ಯೋಜನೆಗೂ ರೈತರ ವಾರ್ಷಿಕ ಆದಾಯ 98,000 ರೂಪಾಯಿ ಒಳಗಿರಬೇಕು.

ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ರೈತರಿಗೆ 4.75 ಲಕ್ಷ ರೂಪಾಯಿ ಘಟಕ ವೆಚ್ಚ ನಿಗದಿ ಮಾಡಲಾಗಿದೆ.

ಇದರಲ್ಲಿ 4.25 ಲಕ್ಷ ರೂಪಾಯಿ ಸಹಾಯಧನ ಇರುತ್ತದೆ. 50,000 ರೂಪಾಯಿಯನ್ನು ಸಾಲವಾಗಿ ನೀಡುತ್ತಾರೆ.

ಇದನ್ನೂ ಓದಿ: Free Sewing Machine: ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ! ಸೆಪ್ಟೆಂಬರ್ 30 ಕೊನೆಯ ದಿನ

ಉಳಿದ ಜಿಲ್ಲೆಗಳಿಗೆ 3.75 ಲಕ್ಷ ರೂಪಾಯಿ ವೆಚ್ಚ ನಿಗದಿ ಮಾಡಲಾಗಿದೆ. ಇದರಲ್ಲಿ 3.25 ಲಕ್ಷ ರೂಪಾಯಿ ಸಹಾಯಧನ ಇರುತ್ತದೆ.

ಪಂಪ್‌ಸೆಟ್ ಮತ್ತು ವಿದ್ಯುತ್ ಸಂಪರ್ಕಕ್ಕೆ 75,000 ರೂಪಾಯಿ ಬೇಕಾಗುತ್ತದೆ. ಇದನ್ನು ಸರ್ಕಾರವೇ ನೇರವಾಗಿ ವಿದ್ಯುತ್ ಇಲಾಖೆಗೆ (ESCOM) ಪಾವತಿ ಮಾಡುತ್ತದೆ.

ಜಮೀನಿನ ವಿಸ್ತೀರ್ಣಕ್ಕೂ ಷರತ್ತುಗಳಿವೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಕನಿಷ್ಠ 1 ಎಕರೆ ಜಮೀನು ಇದ್ದರೆ ಸಾಕು. ಉಳಿದೆಡೆ ಕನಿಷ್ಠ 2 ಎಕರೆ ಜಮೀನು ಇರಬೇಕು.

ಕರಾವಳಿ ಮತ್ತು ಮಲೆನಾಡು ಪ್ರದೇಶದ ರೈತರು ಕೊಳವೆ ಬಾವಿ ಬದಲು ತೆರೆದ ಬಾವಿ (Open well) ಕೂಡ ನಿರ್ಮಾಣ ಮಾಡಿಕೊಳ್ಳಬಹುದು.

ಇದನ್ನೂ ಓದಿ: Karnataka Gram Panchayat Election 2026: ಗ್ರಾಮ ಪಂಚಾಯತಿ ಚುನಾವಣೆಗೆ ಸಿದ್ಧತೆ ಚುರುಕು | ಜಿಲ್ಲಾಧಿಕಾರಿಗಳಿಗೆ ಆಯೋಗದ ಖಡಕ್ ಸೂಚನೆ

3. ಸ್ವಾವಲಂಬಿ ಸಾರಥಿ ಯೋಜನೆ (Swavalambi Sarathi)

ಇದು ಯುವಜನರಿಗೆ ಬಹಳ ಉಪಯುಕ್ತವಾದ ಯೋಜನೆ. ಸ್ವಂತ ವಾಹನ ಖರೀದಿಸಿ ಬಾಡಿಗೆ ಓಡಿಸುವ ಆಸೆ ಇದ್ದರೆ ಇದನ್ನು ಬಳಸಿ.

ನಿಮ್ಮ ವಯಸ್ಸು 21 ರಿಂದ 45 ವರ್ಷ ಇರಬೇಕು. ಆದಾಯ ಮಿತಿ ಹಳ್ಳಿಗೆ 98,000 ಮತ್ತು ನಗರಕ್ಕೆ 1.20 ಲಕ್ಷ ರೂಪಾಯಿ ಇರಬೇಕು.

ನಾಲ್ಕು ಚಕ್ರದ ವಾಹನ ಖರೀದಿಸಲು ನಿಗಮವು ಸಹಾಯಧನ ನೀಡುತ್ತದೆ. ಗರಿಷ್ಠ 3 ಲಕ್ಷ ರೂಪಾಯಿವರೆಗೆ ಅಥವಾ ವಾಹನದ ಬೆಲೆಯ ಶೇಕಡಾ 50ರಷ್ಟು ಸಬ್ಸಿಡಿ ಸಿಗುತ್ತದೆ.

ವಾಹನ ಖರೀದಿಸಲು ಬೇಕಾದ ಉಳಿದ ಹಣವನ್ನು ನೀವು ಬ್ಯಾಂಕ್ ಮೂಲಕ ಸಾಲವಾಗಿ ಪಡೆಯಬೇಕು. ಆ ಬ್ಯಾಂಕ್ ವಿಧಿಸುವ ಬಡ್ಡಿಯನ್ನು ನೀವು ಕಟ್ಟಬೇಕು.

ಇದನ್ನೂ ಓದಿ: Gram Panchayat E-Swathu: ಹಳ್ಳಿ ಜನರಿಗೆ ಗುಡ್ ನ್ಯೂಸ್: ಸೆಪ್ಟೆಂಬರ್ 21ರಿಂದ ಸುಲಭವಾಗಿ ಸಿಗಲಿದೆ ನಿಮ್ಮ ಆಸ್ತಿಯ ‘ಇ-ಸ್ವತ್ತು’!

4. ಬ್ಯಾಂಕುಗಳ ಸಹಯೋಗದೊಂದಿಗೆ ಸಾಲ ಯೋಜನೆ (Bank Linked Scheme)

ನೀವು ದೊಡ್ಡ ಮಟ್ಟದ ಬಿಸ್ನೆಸ್ ಮಾಡಲು ಯೋಚಿಸುತ್ತಿದ್ದೀರಾ? ಬ್ಯಾಂಕ್ ಮೂಲಕ ದೊಡ್ಡ ಮೊತ್ತದ ಸಾಲ ಪಡೆಯುತ್ತೀರಾ? ಹಾಗಾದರೆ ಈ ಯೋಜನೆಯ ಲಾಭ ಪಡೆಯಿರಿ.

ವಯಸ್ಸು 18 ರಿಂದ 55 ವರ್ಷದೊಳಗೆ ಇರಬೇಕು. ಆದಾಯ ಮಿತಿ ಮೊದಲಿನಂತೆಯೇ ಅನ್ವಯ.

ಇದನ್ನೂ ಓದಿ: Swavalambi Sarathi Yojana 2026: ಸ್ವಾವಲಂಬಿ ಸಾರಥಿ ಯೋಜನೆ: ವಾಹನ ಖರೀದಿಗೆ 3 ಲಕ್ಷ ರೂ. ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ

ನೀವು ಮಾಡುವ ಉದ್ಯಮಕ್ಕೆ ಬ್ಯಾಂಕ್ ಸಾಲ ಮಂಜೂರು ಮಾಡಿದರೆ ನಿಗಮ ನಿಮ್ಮ ಬೆಂಬಲಕ್ಕೆ ನಿಲ್ಲುತ್ತದೆ. ನಿಮ್ಮ ಒಟ್ಟು ಸಾಲದ ಮೊತ್ತದಲ್ಲಿ ಶೇಕಡಾ 20ರಷ್ಟು ಹಣವನ್ನು ನಿಗಮವೇ ಭರಿಸುತ್ತದೆ.

ಗರಿಷ್ಠ 1 ಲಕ್ಷ ರೂಪಾಯಿವರೆಗೆ ಇಲ್ಲಿ ಸಹಾಯಧನ ಸಿಗುತ್ತದೆ. ಇದರಿಂದ ನಿಮ್ಮ ಬ್ಯಾಂಕ್ ಸಾಲದ ಹೊರೆ ಬಹಳ ಕಡಿಮೆಯಾಗುತ್ತದೆ.

ಇದನ್ನೂ ಓದಿ: Ration Card e-KYC: ರೇಷನ್ ಕಾರ್ಡುದಾರರಿಗೆ ಸರ್ಕಾರದ ಮಹತ್ವದ ಎಚ್ಚರಿಕೆ

Karnataka Vokkaliga Nigama Schemes 2026
Karnataka Vokkaliga Nigama Schemes 2026

5. ಶೈಕ್ಷಣಿಕ ಸಾಲ ಯೋಜನೆ (Education Loan)

ಹಣದ ಕೊರತೆಯಿಂದ ಮಕ್ಕಳ ಶಿಕ್ಷಣ ನಿಲ್ಲಬಾರದು ಎಂಬುದು ಸರ್ಕಾರದ ಉದ್ದೇಶ. ಸಿಇಟಿ (CET) ಅಥವಾ ನೀಟ್ (NEET) ಪರೀಕ್ಷೆ ಬರೆದು ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಈ ಸಾಲ ಸಿಗುತ್ತದೆ.

ಮೆಡಿಕಲ್, ಇಂಜಿನಿಯರಿಂಗ್, ಡೆಂಟಲ್ ಸೇರಿದಂತೆ 28 ವೃತ್ತಿಪರ ಕೋರ್ಸ್ಗಳಿಗೆ ಸಾಲ ನೀಡಲಾಗುತ್ತದೆ.

ಇದನ್ನೂ ಓದಿ: Coconut Farming Subsidy: ಹೊಸದಾಗಿ ತೆಂಗಿನ ತೋಟ ಮಾಡ್ತಿದ್ದೀರಾ? ಸರ್ಕಾರದಿಂದ ಸಿಗುತ್ತೆ ₹56,000 ಸಹಾಯ!

ವರ್ಷಕ್ಕೆ 1 ಲಕ್ಷ ರೂಪಾಯಿಯಂತೆ ಕೋರ್ಸ್ ಮುಗಿಯುವವರೆಗೆ ಒಟ್ಟು 4 ರಿಂದ 5 ಲಕ್ಷ ರೂಪಾಯಿ ಸಾಲ ಪಡೆಯಬಹುದು. ಬಡ್ಡಿ ದರ ತೀರಾ ಕಡಿಮೆ. ಅಂದರೆ ಕೇವಲ ಶೇಕಡಾ 2ರಷ್ಟು ಬಡ್ಡಿ ಇರುತ್ತದೆ.

ಹಳೆಯ ವಿದ್ಯಾರ್ಥಿಗಳು ಸಾಲವನ್ನು ನವೀಕರಣ (Renewal) ಮಾಡಿಕೊಳ್ಳಬಹುದು. ಇದಕ್ಕಾಗಿ ಹಿಂದಿನ ವರ್ಷದ ಅಂಕಪಟ್ಟಿ ಮತ್ತು ಕಾಲೇಜಿನ ದೃಢೀಕರಣ ಪತ್ರವನ್ನು ನೀಡಿ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Mudra Loan: ಗ್ಯಾರಂಟಿ ಇಲ್ಲದೆ ₹20 ಲಕ್ಷ ಮುದ್ರಾ ಲೋನ್ | ಈ ಸಾಲ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ

6. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ (Foreign Education Loan)

ವಿದೇಶದಲ್ಲಿ ಓದುವ ಕನಸು ನಿಮ್ಮದಾಗಿದ್ದರೆ ಇದು ಅತ್ಯುತ್ತಮ ಯೋಜನೆ. ಜಗತ್ತಿನ ಟಾಪ್ 1000 ರ‍್ಯಾಂಕಿಂಗ್ ಒಳಗೆ ಬರುವ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ನಿಮಗೆ ಸೀಟು ಸಿಕ್ಕಿರಬೇಕು.

ಮಾಸ್ಟರ್ ಡಿಗ್ರಿ, ಪಿಹೆಚ್‌ಡಿ ಅಥವಾ ಪೋಸ್ಟ್ ಡಾಕ್ಟೋರಲ್ ಓದಲು ಸಾಲ ನೀಡಲಾಗುತ್ತದೆ. ವರ್ಷಕ್ಕೆ ಗರಿಷ್ಠ 25 ಲಕ್ಷ ರೂಪಾಯಿಯಂತೆ ಕೋರ್ಸ್ ಮುಗಿಯುವವರೆಗೆ ಒಟ್ಟು 50 ಲಕ್ಷ ರೂಪಾಯಿ ಸಾಲ ಸಿಗುತ್ತದೆ.

ಇದರ ಅತಿ ದೊಡ್ಡ ವಿಶೇಷ ಎಂದರೆ ಈ ಸಾಲಕ್ಕೆ ಯಾವುದೇ ಬಡ್ಡಿ ಇರುವುದಿಲ್ಲ (Zero Interest Rate). ಆದರೆ ಇಷ್ಟು ದೊಡ್ಡ ಮೊತ್ತದ ಸಾಲ ಪಡೆಯಲು, ನಿಮ್ಮ ಸ್ಥಿರಾಸ್ತಿಯನ್ನು ನಿಗಮಕ್ಕೆ ಅಡಮಾನ ಮಾಡುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: BharatPe Flex UPI Loan: ಮೊಬೈಲ್‌ನಲ್ಲೇ ಸಿಗುತ್ತೆ ಬಡ್ಡಿ ಇಲ್ಲದ ಸಾಲ | ಬ್ಯಾಂಕ್ ಖಾತೆಯಲ್ಲಿ ಕಾಸಿಲ್ಲದಿದ್ದರೂ ಯುಪಿಐ ಪೇಮೆಂಟ್ ಮಾಡಿ

7. ಕೌಶಲ್ಯಾಭಿವೃದ್ಧಿ ತರಬೇತಿ (Skill Development Training)

ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ಈ ಅಮೃತ ಮುನ್ನಡೆ ಯೋಜನೆ ತರಲಾಗಿದೆ. ನಿರುದ್ಯೋಗಿ ಯುವಜನರಿಗೆ ಉದ್ಯೋಗ ಕಲ್ಪಿಸಲು ಉಚಿತ ಕೌಶಲ್ಯ ತರಬೇತಿ ನೀಡಲಾಗುತ್ತದೆ.

ಐಟಿಐ (ITI), ಜಿಟಿಟಿಸಿ (GTTC), ವಿಟಿಯು (VTU) ಕೇಂದ್ರಗಳಲ್ಲಿ ಈ ತರಬೇತಿ ನೀಡಲಾಗುತ್ತದೆ. ಬೆಂಗಳೂರು, ಮುದ್ದೇನಹಳ್ಳಿ, ದಾಂಡೇಲಿ, ಇಳಕಲ್, ದಾವಣಗೆರೆ, ಕಲಬುರಗಿ ಹಾಗೂ ಮೈಸೂರಿನ ಕೌಶಲ್ಯ ಕೇಂದ್ರಗಳಲ್ಲಿ ತರಬೇತಿ ಉಂಟು.

ಗದಗದ ಕಾಳಿದಾಸ ಶಿಕ್ಷಣ ಸಂಸ್ಥೆ ಮತ್ತು ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದಲ್ಲೂ ತರಬೇತಿ ನೀಡಲಾಗುತ್ತದೆ. ತರಬೇತಿ ಮುಗಿದ ಮೇಲೆ ಯುವಕರಿಗೆ ಸೂಕ್ತ ಉದ್ಯೋಗ ಮಾರ್ಗದರ್ಶನ ಕೂಡ ಸಿಗುತ್ತದೆ.

ಇದನ್ನೂ ಓದಿ: SBI Digital Personal Loan- ಎಸ್‌ಬಿಐ ಡಿಜಿಟಲ್ ಪರ್ಸನಲ್ ಲೋನ್ | ₹35 ಲಕ್ಷದ ವರೆಗೆ ಸಾಲ ಸೌಲಭ್ಯ | ಸಂಪೂರ್ಣ ಮಾಹಿತಿ ಇಲ್ಲಿದೆ…

ಅರ್ಜಿ ಸಲ್ಲಿಕೆಯ ಪ್ರಮುಖ ನಿಯಮಗಳು

ಈ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಸಮಿತಿಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯಾ ಕ್ಷೇತ್ರದ ಶಾಸಕರು ಅಥವಾ ಜಿಲ್ಲಾ ಪಂಚಾಯತ್ ಸಿಇಒ ಇದರ ಅಧ್ಯಕ್ಷರಾಗಿರುತ್ತಾರೆ.

ಸರ್ಕಾರದ ವಿವೇಚನಾ ಕೋಟಾ ಅಥವಾ ನಿಗಮದ ಅಧ್ಯಕ್ಷರ ಕೋಟಾದಡಿ ಸೌಲಭ್ಯ ಪಡೆಯಲು ಬಯಸುವವರೂ ಸಹ ಕಡ್ಡಾಯವಾಗಿ ಆನ್‌ಲೈನ್‌ನಲ್ಲೇ ಅರ್ಜಿ ಹಾಕಬೇಕು.

ಒಂದು ಕುಟುಂಬದಿAದ ಕೇವಲ ಒಬ್ಬರು ಮಾತ್ರ ಸೌಲಭ್ಯ ಪಡೆಯಬಹುದು. ಒಂದೇ ಬಾರಿ ಎರಡು ಮೂರು ಯೋಜನೆಗಳಿಗೆ ಅರ್ಜಿ ಹಾಕುವಂತಿಲ್ಲ.

ಇದನ್ನೂ ಓದಿ: SBI Stree Shakti Package Loan: ಎಸ್‌ಬಿಐ ಸ್ತ್ರೀ ಶಕ್ತಿ ಪ್ಯಾಕೇಜ್ ಲೋನ್ | ಮಹಿಳೆಯರಿಗೆ ₹10 ಲಕ್ಷವರೆಗೆ ಮೇಲಾಧಾರ ರಹಿತ ಸಾಲ

ಹಳೆಯ ಅರ್ಜಿದಾರರಿಗೆ ಮುಖ್ಯ ಸೂಚನೆ

ನೀವು 2023-24, 2024-25 ಅಥವಾ 2025-26ನೇ ಸಾಲಿನಲ್ಲಿ ಈಗಾಗಲೇ ಅರ್ಜಿ ಹಾಕಿದ್ದೀರಾ? ಕಾರಣಾಂತರಗಳಿಂದ ನೀವು ಆಗ ಆಯ್ಕೆ ಆಗಿಲ್ಲವೇ? ಹಾಗಾದರೆ ನೀವು ಈ ಬಾರಿ ಮತ್ತೆ ಹೊಸದಾಗಿ ಅರ್ಜಿ ಹಾಕುವ ಅಗತ್ಯವಿಲ್ಲ. ನೀವು ಈ ಹಿಂದೆ ಸಲ್ಲಿಸಿದ ಅರ್ಜಿಯನ್ನೇ ಈ ವರ್ಷದ ಆಯ್ಕೆ ಸಮಿತಿಯ ಮುಂದೆ ಮಂಡಿಸಲಾಗುತ್ತದೆ.

ಇದನ್ನೂ ಓದಿ: Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ

ಅರ್ಜಿ ಸಲ್ಲಿಸುವ ವಿಧಾನ

7ನೇ ಕ್ರಮಸಂಖ್ಯೆಯಲ್ಲಿರುವ ‘ಕೌಶಲ್ಯ ತರಬೇತಿ’ ಯೋಜನೆಗೆ ಮಾತ್ರ ಕೌಶಲ್ಯ ಕರ್ನಾಟಕ ಅಭಿವೃದ್ಧಿ ನಿಗಮದ ಜಾಲತಾಣ skillmission.com ಮೂಲಕ ಅರ್ಜಿ ಸಲ್ಲಿಸಿ.

ಉಳಿದ ಎಲ್ಲಾ ಆರೂ ಯೋಜನೆಗಳಿಗೆ ಸೇವಾಸಿಂಧು ಪೋರ್ಟಲ್ (Seva Sindhu) ಮೂಲಕ ಅರ್ಜಿ ಹಾಕಬೇಕು. ನಿಮ್ಮ ಸಮೀಪದ ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: PhonePe Personal Loan- ₹5 ಲಕ್ಷದ ವರೆಗೆ ಫೋನ್‌ಪೇ ಪರ್ಸನಲ್ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಹಾಕಿ…

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಅಕ್ಟೋಬರ್ 2026. (ಗಮನಿಸಿ: ಶೈಕ್ಷಣಿಕ ಸಾಲ ಯೋಜನೆಗಳಿಗೆ ಯಾವುದೇ ಕೊನೆಯ ದಿನಾಂಕ ನಿಗದಿ ಮಾಡಿಲ್ಲ).

ಹೆಚ್ಚಿನ ಮಾಹಿತಿ ಹಾಗೂ ಯಾವ ಯೋಜನೆಗೆ ಯಾವೆಲ್ಲಾ ದಾಖಲಾತಿಗಳು ಬೇಕು ಎಂದು ತಿಳಿಯಲು ನಿಗಮದ ಅಧಿಕೃತ ವೆಬ್‌ಸೈಟ್ kvcdc.karnataka.gov.in ಗೆ ಭೇಟಿ ನೀಡಿ. ಅಥವಾ ನಿಗಮದ ಸಹಾಯವಾಣಿ ಸಂಖ್ಯೆಗಳಾದ 080-29904350 ಮತ್ತು 080-29904268 ಗೆ ಕರೆ ಮಾಡಬಹುದು.

ನಿಮ್ಮ ಜಿಲ್ಲೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಗೂ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆಯಬಹುದು. ತಡ ಮಾಡಬೇಡಿ, ಈ ಕೂಡಲೇ ಅರ್ಜಿ ಸಲ್ಲಿಸಿ ನಿಮ್ಮ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಿ.

Karnataka Veerashaiva-Lingayat Schemes 2026: ಕರ್ನಾಟಕ ವೀರಶೈವ-ಲಿಂಗಾಯತ ನಿಗಮದಿಂದ ಬಂಪರ್ ಯೋಜನೆಗಳು | ಅರ್ಜಿ ಆಹ್ವಾನ


Spread the love
error: Content is protected !!