Karnataka Zilla Panchayat Election: ಕರ್ನಾಟಕ ಜಿಲ್ಲಾ ಪಂಚಾಯಿತಿ ಚುನಾವಣೆ: 1129 ಕ್ಷೇತ್ರಗಳ ಮೀಸಲಾತಿ ಪಟ್ಟಿ ಪ್ರಕಟ, ಸಂಪೂರ್ಣ ವಿವರ ಇಲ್ಲಿದೆ

Spread the love

WhatsApp Group Join Now
Telegram Group Join Now

ಕರ್ನಾಟಕದ 31 ಜಿಲ್ಲಾ ಪಂಚಾಯಿತಿಗಳ ಒಟ್ಟು 1,129 ಕ್ಷೇತ್ರಗಳ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ಇದರಲ್ಲಿ 571 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಯ (Zilla Panchayat Election) ಕಾವು ಮತ್ತೆ ಶುರುವಾಗಿದೆ. ಕರ್ನಾಟಕ ಸರ್ಕಾರವು ಒಟ್ಟು 31 ಜಿಲ್ಲಾ ಪಂಚಾಯಿತಿಗಳ ಮೀಸಲಾತಿ ಪಟ್ಟಿಯನ್ನು (Reservation List) ಅಧಿಕೃತವಾಗಿ ಪ್ರಕಟಿಸಿದೆ. ಒಟ್ಟು 1,129 ಕ್ಷೇತ್ರಗಳಿಗೆ (Seats) ಹೊಸ ಮೀಸಲಾತಿ ನಿಗದಿಯಾಗಿದೆ.

ಇದನ್ನೂ ಓದಿ: Karnataka Vokkaliga Nigama Schemes: ಗಂಗಾ ಕಲ್ಯಾಣ, ಶೈಕ್ಷಣಿಕ ಸಾಲ, ಸ್ವಯಂ ಉದ್ಯೋಗ ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನ

ಈ ಬಾರಿ ಮಹಿಳೆಯರಿಗೆ ಭರ್ಜರಿ ಅವಕಾಶ ಸಿಕ್ಕಿದೆ. ಒಟ್ಟು 1129 ಸ್ಥಾನಗಳಲ್ಲಿ 571 ಸ್ಥಾನಗಳು ಮಹಿಳೆಯರಿಗೇ ಮೀಸಲಾಗಿವೆ (Women’s Reservation). ಅಂದರೆ ಒಟ್ಟು ಸ್ಥಾನಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ಮಹಿಳೆಯರದ್ದಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು (RDPR) ಈ ಬಗ್ಗೆ ವಿಶೇಷ ರಾಜ್ಯಪತ್ರ ಹೊರಡಿಸಿದೆ. ಈ ಹಿಂದಿನ ಎಲ್ಲ ಹಳೆಯ ಪಟ್ಟಿಗಳನ್ನು ರದ್ದುಪಡಿಸಿ, ಹೊಸದಾಗಿ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: Karnataka Veerashaiva-Lingayat Schemes 2026: ಕರ್ನಾಟಕ ವೀರಶೈವ-ಲಿಂಗಾಯತ ನಿಗಮದಿಂದ ಬಂಪರ್ ಯೋಜನೆಗಳು | ಅರ್ಜಿ ಆಹ್ವಾನ

ಯಾವ ವರ್ಗಕ್ಕೆ ಎಷ್ಟು ಸ್ಥಾನ? (Category-wise Seats Detail)

ಯಾವ ಯಾವ ವರ್ಗಕ್ಕೆ ಎಷ್ಟೆಷ್ಟು ಸ್ಥಾನಗಳು ಸಿಕ್ಕಿವೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ:

  • ಎಸ್‌ಸಿ (SC): 225 ಸ್ಥಾನಗಳು (ಇದರಲ್ಲಿ ಮಹಿಳೆಯರಿಗೆ 121 ಸ್ಥಾನ)

  • ಎಸ್‌ಟಿ (ST): 102 ಸ್ಥಾನಗಳು (ಇದರಲ್ಲಿ ಮಹಿಳೆಯರಿಗೆ 59 ಸ್ಥಾನ)

ಇದನ್ನೂ ಓದಿ: Gruha Lakshmi New Guidelines: ಗೃಹಲಕ್ಷ್ಮಿ ಹಣ ಪಡೆಯುವವರಿಗೆ ಹೊಸ ರೂಲ್ಸ್: ಇನ್ಮುಂದೆ ಪತಿ ಆಧಾರ್ ಲಿಂಕ್ ಕೂಡ ಕಡ್ಡಾಯ!

  • ಹಿಂದುಳಿದ ವರ್ಗ ‘ಅ’ (OBC-A): 183 ಸ್ಥಾನಗಳು (ಮಹಿಳೆಯರಿಗೆ 98 ಸ್ಥಾನ)

  • ಹಿಂದುಳಿದ ವರ್ಗ ‘ಬ’ (OBC-B): 43 ಸ್ಥಾನಗಳು (ಮಹಿಳೆಯರಿಗೆ 25 ಸ್ಥಾನ)

  • ಸಾಮಾನ್ಯ ವರ್ಗ (General Category): 576 ಸ್ಥಾನಗಳು (ಮಹಿಳೆಯರಿಗೆ 268 ಸ್ಥಾನ)

ಇದನ್ನೂ ಓದಿ: Udyogini Scheme 2026: ಮಹಿಳೆಯರಿಗೆ ಬಡ್ಡಿ ಇಲ್ಲದೇ ₹3 ಲಕ್ಷ ಸಾಲ | ₹2 ಲಕ್ಷ ಸಾಲ ಮನ್ನಾ | ಅಕ್ಟೋಬರ್ 31 ಕೊನೆಯ ದಿನ

ZP Election Reservation List
ZP Election Reservation List

ಅತಿ ಹೆಚ್ಚು ಮತ್ತು ಕಡಿಮೆ ಕ್ಷೇತ್ರಗಳೆಲ್ಲಿ?

ರಾಜ್ಯದಲ್ಲೇ ಬೆಳಗಾವಿ ಜಿಲ್ಲಾ ಪಂಚಾಯಿತಿಯಲ್ಲಿ ಅತಿ ಹೆಚ್ಚು ಕ್ಷೇತ್ರಗಳಿವೆ. ಇಲ್ಲಿ ಒಟ್ಟು 90 ಸ್ಥಾನಗಳಿವೆ. ಇನ್ನು ಗದಗ ಜಿಲ್ಲಾ ಪಂಚಾಯಿತಿ ಅತ್ಯಂತ ಚಿಕ್ಕದಾಗಿದ್ದು, ಇಲ್ಲಿ ಕೇವಲ 25 ಕ್ಷೇತ್ರಗಳಿವೆ (Constituencies).

ಇದನ್ನೂ ಓದಿ: Karnataka Gram Panchayat Election 2026: ಗ್ರಾಮ ಪಂಚಾಯತಿ ಚುನಾವಣೆಗೆ ಸಿದ್ಧತೆ ಚುರುಕು | ಜಿಲ್ಲಾಧಿಕಾರಿಗಳಿಗೆ ಆಯೋಗದ ಖಡಕ್ ಸೂಚನೆ

ಚುನಾವಣೆ ಯಾವಾಗ ನಡೆಯಬಹುದು? (Election Date)

ಮೀಸಲಾತಿ ಪಟ್ಟಿ ಪ್ರಕಟವಾಗಿರುವುದರಿಂದ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ. ಡಿಸೆಂಬರ್ ತಿಂಗಳಲ್ಲಿ ಚುನಾವಣಾ ಆಯೋಗವು (Election Commission) ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಹೀಗಾಗಿ ಬರುವ ಜನವರಿಯಲ್ಲಿ ಮತದಾನ ಮತ್ತು ಫಲಿತಾಂಶ (Voting and Results) ಹೊರಬೀಳುವ ನಿರೀಕ್ಷೆ ಇದೆ.

ಇದನ್ನೂ ಓದಿ: Swavalambi Sarathi Yojana 2026: ಸ್ವಾವಲಂಬಿ ಸಾರಥಿ ಯೋಜನೆ: ವಾಹನ ಖರೀದಿಗೆ 3 ಲಕ್ಷ ರೂ. ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ

10 ವರ್ಷಗಳ ಬಳಿಕ ಚುನಾವಣೆ!

ಕಳೆದ ಬಾರಿ 2016ರ ಜನವರಿಯಲ್ಲಿ ಜಿ.ಪಂ. ಚುನಾವಣೆ ನಡೆದಿತ್ತು. ಆಯ್ಕೆಯಾದ ಸದಸ್ಯರ 5 ವರ್ಷದ ಅವಧಿ 2021ರ ಮೇ 4ಕ್ಕೆ ಮುಗಿದಿತ್ತು. ಆ ಬಳಿಕ ಕ್ಷೇತ್ರಗಳ ಮರುವಿಂಗಡಣೆ (Delimitation) ಮಾಡಲಾಗಿತ್ತು. ಆದರೆ ಇದು ಸರಿಯಿಲ್ಲ ಎಂದು ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಚುನಾವಣೆ ಮುಂದಕ್ಕೆ ಹೋಗುತ್ತಲೇ ಇತ್ತು. ಇದೀಗ ಎಲ್ಲ ಅಡೆತಡೆಗಳು ನಿವಾರಣೆಯಾಗಿದ್ದು, ಬರೋಬ್ಬರಿ 10 ವರ್ಷಗಳ ನಂತರ ಮತ್ತೆ ಚುನಾವಣಾ ಅಖಾಡ ಸಿದ್ಧವಾಗಿದೆ.

Udyogini Scheme 2026: ಮಹಿಳೆಯರಿಗೆ ಬಡ್ಡಿ ಇಲ್ಲದೇ ₹3 ಲಕ್ಷ ಸಾಲ | ₹2 ಲಕ್ಷ ಸಾಲ ಮನ್ನಾ | ಅಕ್ಟೋಬರ್ 31 ಕೊನೆಯ ದಿನ

WhatsApp Group Join Now
Telegram Group Join Now


Spread the love
error: Content is protected !!