Aadhaar Card Authentication History Check: ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ, ಯಾರಾದರೂ ದುರುಪಯೋಗ mಂತಿiಕೊAಡಿದ್ದಾರೆಯೇ ಎಂಬುದನ್ನು ಮೊಬೈಲ್ನಲ್ಲೇ ಹೇಗೆ ಚೆಕ್ ಮಾಡುವುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ…
ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ (Aadhaar Card) ಪ್ರತಿಯೊಬ್ಬರಿಗೂ ಅತ್ಯಂತ ಪ್ರಮುಖ ದಾಖಲೆ ಆಗಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯುವವರೆಗೆ, ಹೊಸ ಸಿಮ್ ಕಾರ್ಡ್ ಖರೀದಿ, ಪ್ಯಾನ್ ಕಾರ್ಡ್ ಲಿಂಕ್, ವೋಟರ್ ಐಡಿ, ವಿದ್ಯಾರ್ಥಿ ವೇತನ, ಪಿಂಚಣಿ, ರೈತ ಯೋಜನೆಗಳು ಸೇರಿದಂತೆ ಅನೇಕ ಸೇವೆಗಳಿಗೆ ಆಧಾರ್ ಕಡ್ಡಾಯವಾಗಿದೆ.
ಇದನ್ನೂ ಓದಿ: Low Pressure Heavy Rain Alert : ವಾಯುಭಾರ ಕುಸಿತ: ಕರ್ನಾಟದಲ್ಲಿ ಒಂದು ವಾರ ಭಾರೀ ಮಳೆ ಮುನ್ಸೂಚನೆ
ಆದರೆ ಇದೇ ಆಧಾರ್ ಕಾರ್ಡ್ ಅನ್ನು ಕೆಲವರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಯೂ ಇದೆ. ನಮ್ಮ ಗಮನಕ್ಕೆ ಬರದೆ ಯಾರಾದರೂ ನಮ್ಮ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಸೌಲಭ್ಯ ಪಡೆದುಕೊಂಡಿದ್ದಾರೆಯೇ? ಅಥವಾ ನಮ್ಮ ಆಧಾರ್ ಯಾವೆಲ್ಲ ಕಡೆ ಬಳಸಲಾಗಿದೆ? ಎಂಬುದನ್ನು ಈಗ ಮನೆಯಲ್ಲೇ ಕುಳಿತು ಮೊಬೈಲ್ ಮೂಲಕವೇ ಸುಲಭವಾಗಿ ಪರಿಶೀಲಿಸಬಹುದು.
ಬಹುತೇಕ ಜನರಿಗೆ ಈ ಸೌಲಭ್ಯದ ಬಗ್ಗೆ ಮಾಹಿತಿ ಇಲ್ಲ. ಆದರೆ ಯುಐಡಿಎಐ (UIDAI) ವೆಬ್ಸೈಟ್ನಲ್ಲಿ ಇರುವ ‘Aadhaar Authentication History’ ಆಯ್ಕೆಯ ಮೂಲಕ ಕಳೆದ ಕೆಲವು ತಿಂಗಳಲ್ಲಿ ನಿಮ್ಮ ಆಧಾರ್ ಎಲ್ಲೆಲ್ಲಿ ಬಳಸಲಾಗಿದೆ ಎಂಬ ವಿವರವನ್ನು ನೋಡಬಹುದು.
ಇದನ್ನೂ ಓದಿ: Govt Housing Scheme 2026: ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದ ಸಹಾಯಧನ | ಗ್ರಾಮ ಪಂಚಾಯತಿಗಳಿಂದ ಅರ್ಜಿ ಆಹ್ವಾನ
ನಿಮ್ಮ ಆಧಾರ್ ಎಲ್ಲೆಲ್ಲಿ ಬಳಕೆಯಾಗಿದೆ? ಹೀಗೆ ಚೆಕ್ ಮಾಡಿ
ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಕೆಲವೇ ನಿಮಿಷಗಳಲ್ಲಿ ಈ ಮಾಹಿತಿ ತಿಳಿದುಕೊಳ್ಳಬಹುದು.
ಹಂತ 1: ಮೊದಲು ಯುಐಡಿಎಐ (UIDAI) ಅಧಿಕೃತ uidai.gov.in ವೆಬ್ಸೈಟ್ ತೆರೆಯಬೇಕು.
ಹಂತ 2: ‘My Aadhaar’ ವಿಭಾಗದಲ್ಲಿ ಕೆಳಗೆ ಸ್ಕ್ರೋಲ್ ಮಾಡಿದರೆ ‘Aadhaar Services’ ಎಂಬ ಆಯ್ಕೆ ಕಾಣಿಸುತ್ತದೆ. ಅಲ್ಲಿ Aadhaar Authentication History ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: KCET Result 2026: ಸಿಇಟಿ ಫಲಿತಾಂಶ ಪ್ರಕಟಣೆ | ಕೆಇಎ ಮಹತ್ವದ ಅಪ್ಡೇಟ್!
ಹಂತ 3: ಈಗ ಹೊಸ ಪುಟ ತೆರೆಯುತ್ತದೆ. ಅಲ್ಲಿ ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆ, Captcha Code ನಮೂದಿಸಬೇಕು. ನಂತರ Login with OTP ಮೇಲೆ ಕ್ಲಿಕ್ ಮಾಡಬೇಕು.
ಹಂತ 4: ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಆ ಒಟಿಪಿ ಅನ್ನು ನಮೂದಿಸಿ ಲಾಗಿನ್ ಆಗಬೇಕು.
ಹಂತ 5: ಲಾಗಿನ್ ಆದ ನಂತರ ‘All’ ಆಯ್ಕೆ ಮಾಡಿ. ನಂತರ ‘Authentication History’ ಪರಿಶೀಲಿಸಿ ಅಲ್ಲಿ ಕಳೆದ ಆರು ತಿಂಗಳವರೆಗೆ ನಿಮ್ಮ ಆಧಾರ್ ಯಾವ ಸೇವೆಗಳಿಗೆ ಬಳಸಲಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ಉದಾಹರಣೆಗೆ:
- ಬ್ಯಾಂಕ್ KYC
- ಸಿಮ್ ಕಾರ್ಡ್ ಪರಿಶೀಲನೆ
- ಸರ್ಕಾರಿ ಯೋಜನೆ
- ಬಯೋಮೆಟ್ರಿಕ್ ಬಳಕೆ
- OTP Authentication
ಹೀಗೆ ಸಂಪೂರ್ಣ ವಿವರಗಳನ್ನು ನೋಡಬಹುದು.
ಇದನ್ನೂ ಓದಿ: Monsoon Delay Karnataka: ಕರ್ನಾಟಕಕ್ಕೆ ಮುಂಗಾರು ಎಂಟ್ರಿ ಡೇಟ್ ಫಿಕ್ಸ್ | ಈ ದಿನದಿಂದ ಭಾರೀ ಮಳೆ ಶುರು
ಅನುಮಾನಾಸ್ಪದ ಬಳಕೆ ಕಂಡುಬಂದರೆ ಏನು ಮಾಡಬೇಕು?
ನಿಮಗೆ ಗೊತ್ತಿಲ್ಲದ ಯಾವುದೇ Authentication ಕಂಡುಬಂದರೆ ತಕ್ಷಣ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ತಕ್ಷಣ ಮಾಡಬೇಕಾದ ಕೆಲಸಗಳು:
- UIDAIಗೆ ದೂರು ನೀಡಬೇಕು
- ಬಯೋಮೆಟ್ರಿಕ್ ಲಾಕ್ (Biometric Lock) ಮಾಡಬಹುದು
- ಬ್ಯಾಂಕ್ ಖಾತೆ ಪರಿಶೀಲಿಸಬೇಕು
- ಅನಧಿಕೃತ ಸಿಮ್ ಕಾರ್ಡ್ ಇದ್ದರೆ ಟೆಲಿಕಾಂ ಕಂಪನಿಯನ್ನು ಸಂಪರ್ಕಿಸಬೇಕು
UIDAI ಪೋರ್ಟಲ್ನಲ್ಲಿ ಬಯೋಮೆಟ್ರಿಕ್ ಲಾಕ್ ಮಾಡುವ ಸೌಲಭ್ಯವೂ ಇದೆ. ಇದರಿಂದ ನಿಮ್ಮ ಫಿಂಗರ್ಪ್ರಿಂಟ್ ಅಥವಾ ಐರಿಸ್ ಮಾಹಿತಿ ದುರುಪಯೋಗವಾಗುವುದನ್ನು ತಡೆಯಬಹುದು.
ಇದನ್ನೂ ಓದಿ: New BPL Card Income Limit Hike: ಹೊಸ ಬಿಪಿಎಲ್ ಕಾರ್ಡ್ ಅರ್ಜಿದಾರರಿಗೆ ಶುಭಸುದ್ದಿ | ಹೊಸ ರೂಲ್ಸ್ ಜಾರಿಗೆ ಸರ್ಕಾರ ಚಿಂತನೆ

ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಗೊತ್ತಿಲ್ಲವೇ?
ಬಹಳ ಜನರಿಗೆ ಆಧಾರ್ ಕಾರ್ಡ್ ಮಾಡಿಸುವಾಗ ಯಾವ ಮೊಬೈಲ್ ಸಂಖ್ಯೆ ಕೊಟ್ಟಿದ್ದೇವೆ ಎಂಬುದು ನೆನಪಿರುವುದಿಲ್ಲ. ಇಂತಹ ಸಂದರ್ಭದಲ್ಲೂ ಸಮಸ್ಯೆ ಇಲ್ಲ.
ಈಗ ಬ್ಯಾಂಕ್ಗಳಲ್ಲಿ, ಗ್ರಾಮ ಒನ್ ಕೇಂದ್ರಗಳಲ್ಲಿ, ಸೇವಾ ಕೇಂದ್ರಗಳಲ್ಲಿ ಹಾಗೂ Aadhaar Seva Kendraಗಳಲ್ಲಿ ಮೊಬೈಲ್ ಸಂಖ್ಯೆ ಅಪ್ಡೇಟ್ ಮಾಡುವ ಅವಕಾಶ ಇದೆ. ಹೊಸ ಮೊಬೈಲ್ ಸಂಖ್ಯೆಯನ್ನು ನೀಡಿ ಕೆಲವೇ ನಿಮಿಷಗಳಲ್ಲಿ ಅಪ್ಡೇಟ್ ಮಾಡಿಸಬಹುದು.
ಆಧಾರ್ ಅಪ್ಡೇಟ್ ಮಾಡುವಾಗ ಯಾವ ಸೇವೆಗಳು ಲಭ್ಯ?
ಈಗ ಆಧಾರ್ ಕೇಂದ್ರಗಳಲ್ಲಿ ಕೆಳಗಿನ ಸೇವೆಗಳು ಲಭ್ಯವಿವೆ:
- ಮೊಬೈಲ್ ಸಂಖ್ಯೆ ಬದಲಾವಣೆ
- ವಿಳಾಸ ಬದಲಾವಣೆ
- ಹೊಸ ಫೋಟೋ ಅಪ್ಲೋಡ್
- ಹೆಸರು ತಿದ್ದುಪಡಿ
- ಜನ್ಮ ದಿನಾಂಕ ತಿದ್ದುಪಡಿ
ಹೀಗಾಗಿ ಆಧಾರ್ ವಿವರಗಳನ್ನು ಸದಾ ನವೀಕರಿಸಿಕೊಂಡಿರುವುದು ಸುರಕ್ಷತೆಯ ದೃಷ್ಟಿಯಿಂದ ಬಹಳ ಮುಖ್ಯ.
ರೈತರು ಮತ್ತು ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ
ಸರ್ಕಾರದ ಅನೇಕ ಯೋಜನೆಗಳು ಈಗ DBT (Direct Benefit Transfer) ಮೂಲಕ ನೇರವಾಗಿ ಆಧಾರ್ ಲಿಂಕ್ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿವೆ. ಆದ್ದರಿಂದ ರೈತರು ಮತ್ತು ಸಾರ್ವಜನಿಕರು ತಮ್ಮ ಆಧಾರ್ ಮಾಹಿತಿ ಸುರಕ್ಷಿತವಾಗಿದೆಯೇ ಎಂಬುದನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು. ವಿಶೇಷವಾಗಿ:
- ಪಿಎಂ ಕಿಸಾನ್
- ಅನ್ನಭಾಗ್ಯ
- ಪಿಂಚಣಿ ಯೋಜನೆ
- ವಿದ್ಯಾರ್ಥಿ ವೇತನ
- ಗೃಹ ಯೋಜನೆಗಳು
ಇವುಗಳಿಗೆ ಆಧಾರ್ ಪ್ರಮುಖ ದಾಖಲೆ ಆಗಿರುವುದರಿಂದ ಅದರ ಬಳಕೆಯ ಮೇಲೆ ಗಮನ ಇರಬೇಕು.
ಇದನ್ನೂ ಓದಿ: A Kharabu B Kharabu Land: ‘ಅ’ ಖರಾಬು, ‘ಬ’ ಖರಾಬು ಜಮೀನು ಅಂದ್ರೇನು? ರೈತರು ತಪ್ಪದೇ ತಿಳಿಯಬೇಕಾದ ಮಾಹಿತಿ
ಆಧಾರ್ ಕಾರ್ಡ್ ಇಂದು ಪ್ರತಿಯೊಬ್ಬ ಭಾರತೀಯರ ಪ್ರಮುಖ ಗುರುತಿನ ಚೀಟಿ (Identity Document) ಆಗಿದೆ. ಅದರ ದುರುಪಯೋಗ ತಡೆಯಲು ಸಾರ್ವಜನಿಕರು ಸ್ವತಃ ಜಾಗರೂಕರಾಗಬೇಕು.
UIDAI ನೀಡಿರುವ ‘Aadhaar Authentication History’ ಸೌಲಭ್ಯವನ್ನು ಬಳಸಿಕೊಂಡು ನಿಮ್ಮ ಆಧಾರ್ ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದನ್ನು ನಿಯಮಿತವಾಗಿ ಪರಿಶೀಲಿಸುವುದು ಉತ್ತಮ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.