Ration Card Correction: ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಆಹ್ವಾನ | ಯಾವ ದಾಖಲೆಗಳು ಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

Spread the love

WhatsApp Group Join Now
Telegram Group Join Now

Ration Card Correction: ರೇಷನ್ ಕಾರ್ಡ್ ತಿದ್ದುಪಡಿಗೆ ರಾಜ್ಯ ಸರ್ಕಾರ ಮತ್ತೆ ಅವಕಾಶ ನೀಡಿದೆ. ಏನೆಲ್ಲ ತಿದ್ದುಪಡಿ ಮಾಡಬಹುದು? ಅಗತ್ಯ ದಾಖಲೆಗಳೇನು? ಅರ್ಜಿ ಸಲ್ಲಿಸುವ ವಿಧಾನ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ರೇಷನ್ ಕಾರ್ಡ್ (Ration Card) ಹೊಂದಿರುವವರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಮಹತ್ವದ ಅವಕಾಶ ನೀಡಿದೆ. ಹಲವು ಕಾರಣಗಳಿಂದ ತಮ್ಮ ರೇಷನ್ ಕಾರ್ಡ್’ನಲ್ಲಿ ತಿದ್ದುಪಡಿ (Correction) ಮಾಡಿಸಬೇಕೆಂದು ಕಾಯುತ್ತಿದ್ದವರಿಗೆ ಇದೀಗ ಸಿಹಿಸುದ್ದಿ ಸಿಕ್ಕಿದೆ.

ಇದನ್ನೂ ಓದಿ: Panchayat Election 2026: ಪಂಚಾಯಿತಿ ಫೈಟ್ 2026: ಗ್ರಾಪಂ ಜೊತೆಗೆ ತಾಪಂ, ಜಿಪಂ ಚುನಾವಣೆಗೂ ಗ್ರೀನ್ ಸಿಗ್ನಲ್ | ಸರ್ಕಾರದಿಂದ ಮಹತ್ವದ ಸಿದ್ಧತೆ

ಕುಟುಂಬದ ಸದಸ್ಯರ ಹೆಸರು ಸೇರಿಸುವುದು, ಹೆಸರು ತೆಗೆದುಹಾಕುವುದು, ಮೊಬೈಲ್ ಸಂಖ್ಯೆ ಬದಲಾಯಿಸುವುದು ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ.

ಕೆಲವು ಸಂದರ್ಭಗಳಲ್ಲಿ ಪರಿಷ್ಕರಣೆ ವೇಳೆ ಅರ್ಹ ಫಲಾನುಭವಿಗಳ ಬಿಪಿಎಲ್ ಕಾರ್ಡ್ಗಳು ರದ್ದಾಗಿರುವ ಘಟನೆಗಳೂ ನಡೆದಿದ್ದವು. ಇಂತಹವರು ಕೂಡ ಈಗ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ತಮ್ಮ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬಹುದು.

ಇದನ್ನೂ ಓದಿ: Karnataka VAO Recruitment 2026: 505 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪಿಯುಸಿ ಪಾಸಾದವರಿಗೆ ಭರ್ಜರಿ ಅವಕಾಶ | ಜಿಲ್ಲಾವಾರು ಹುದ್ದೆಗಳ ಪಟ್ಟಿ ಇಲ್ಲಿದೆ…

ಯಾವ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು?

ರೇಷನ್ ಕಾರ್ಡ್ನಲ್ಲಿ ತಿದ್ದುಪಡಿ ಮಾಡಿಸಬೇಕಿರುವವರು 2027ರ ಮಾರ್ಚ್ 31ರೊಳಗೆ ಅರ್ಜಿ ಸಲ್ಲಿಸಬಹುದು. ಕೊನೆಯ ಕ್ಷಣದವರೆಗೆ ಕಾಯದೆ ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ. ಸಾರ್ವಜನಿಕರು ತಮ್ಮ ಹತ್ತಿರದ ಕೆಳಕಂಡ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.

ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ, ಕರ್ನಾಟಕ ಒನ್ ಕೇಂದ್ರ, ಬೆಂಗಳೂರು ಒನ್ ಕೇಂದ್ರ ಹಾಗೂ ಅಧಿಕೃತ ಸೈಬರ್ ಸೆಂಟರ್‌ಗಳಿಗೆ ಅಗತ್ಯ ದಾಖಲೆಗಳೊಂದಿಗೆ ತೆರಳಿ ಅರ್ಜಿ ಸಲ್ಲಿಸಿದರೆ ತಿದ್ದುಪಡಿ ಪ್ರಕ್ರಿಯೆ ಆರಂಭವಾಗುತ್ತದೆ.

ಇದನ್ನೂ ಓದಿ: Crop Insurance Release: ರೈತರಿಗೆ ಬೆಳೆ ವಿಮೆ ಪರಿಹಾರ ಬಿಡುಗಡೆ: ₹585.72 ಕೋಟಿ ಮಂಜೂರು, ಮೊಬೈಲ್‌ನಲ್ಲೇ ಸ್ಟೇಟಸ್ ಪರಿಶೀಲಿಸುವುದು ಹೇಗೆ?

ರೇಷನ್ ಕಾರ್ಡ್’ನಲ್ಲಿ ಯಾವೆಲ್ಲಾ ಬದಲಾವಣೆ ಮಾಡಬಹುದು?

ಸರ್ಕಾರ ನೀಡಿರುವ ಅವಕಾಶದ ಮೂಲಕ ಹಲವು ರೀತಿಯ ತಿದ್ದುಪಡಿಗಳನ್ನು ಮಾಡಿಸಬಹುದು.

  • ಹೊಸ ಸದಸ್ಯರ ಹೆಸರು ಸೇರಿಸುವುದು
  • ಕುಟುಂಬದಿಂದ ಸದಸ್ಯರ ಹೆಸರು ತೆಗೆದುಹಾಕುವುದು
  • ನ್ಯಾಯಬೆಲೆ ಅಂಗಡಿ ಬದಲಾಯಿಸುವುದು
  • ಮೊಬೈಲ್ ಸಂಖ್ಯೆ ಸೇರಿಸುವುದು ಅಥವಾ ಬದಲಾಯಿಸುವುದು
  • ಕುಟುಂಬದ ಮುಖ್ಯಸ್ಥರ ಹೆಸರನ್ನು ಬದಲಾಯಿಸುವುದು
  • ಫೋಟೋ ಬದಲಾಯಿಸುವುದು
  • ಪತ್ನಿಯ ಹೆಸರು ಸೇರಿಸಬೇಕಾದರೆ ಏನು ಮಾಡಬೇಕು?

ಇದನ್ನೂ ಓದಿ: Gruhalakshmi Scheme Money Transfer: ಗೃಹಲಕ್ಷ್ಮಿ ಹಣ ಜಮೆ ಆರಂಭ: ರಾಜ್ಯದ ಮಹಿಳೆಯರಿಗೆ ಸರ್ಕಾರದಿಂದ ಮಹತ್ವದ ಮಾಹಿತಿ

Ration Card Correction
Ration Card Correction

ಮದುವೆಯಾದ ಬಳಿಕ ಪತ್ನಿಯ ಹೆಸರನ್ನು ರೇಷನ್ ಕಾರ್ಡ್’ಗೆ ಸೇರಿಸಲು ಈ ದಾಖಲೆಗಳು ಅಗತ್ಯ.

  • ಆಧಾರ್ ಕಾರ್ಡ್
  • ಮದುವೆ ಪ್ರಮಾಣ ಪತ್ರ
  • ಪೋಷಕರ ರೇಷನ್ ಕಾರ್ಡ್

ಈ ದಾಖಲೆಗಳನ್ನು ಸಲ್ಲಿಸಿದ ಬಳಿಕ ಸಂಬಂಧಿತ ಅಧಿಕಾರಿಗಳು ಪರಿಶೀಲನೆ ನಡೆಸಿ ಹೆಸರು ಸೇರಿಸುತ್ತಾರೆ.

ಇದನ್ನೂ ಓದಿ: Karnataka Farm Loan Waiver: ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಹಿನ್ನಲೆ ರೈತರ ಸಾಲ ಮನ್ನಾ | ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುಳಿವು!

ಮಗುವಿನ ಹೆಸರು ಸೇರಿಸಲು ಬೇಕಾಗುವ ದಾಖಲೆಗಳು

WhatsApp Group Join Now
Telegram Group Join Now

ಹೊಸ ಮಗುವಿನ ಹೆಸರನ್ನು ಕುಟುಂಬದ ರೇಷನ್ ಕಾರ್ಡ್ಗೆ ಸೇರಿಸಲು ಈ ದಾಖಲೆಗಳು ಅಗತ್ಯ.

  • ಮಗುವಿನ ಜನನ ಪ್ರಮಾಣ ಪತ್ರ
  • ಪೋಷಕರ ಆಧಾರ್ ಕಾರ್ಡ್

ಜನನ ಪ್ರಮಾಣ ಪತ್ರದಲ್ಲಿ ಇರುವ ಮಾಹಿತಿಯ ಆಧಾರದ ಮೇಲೆ ಮಗುವಿನ ಹೆಸರು ಸೇರ್ಪಡೆ ಮಾಡಲಾಗುತ್ತದೆ.

ಇದನ್ನೂ ಓದಿ: Karnataka Cancelled BPL Card: ಹೊಸ ಬಿಪಿಎಲ್ ಕಾರ್ಡ್ ವಿತರಣೆ | ಸರ್ಕಾರದಿಂದ ಸಿಹಿಸುದ್ದಿ

ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು

ರೇಷನ್ ಕಾರ್ಡ್ ತಿದ್ದುಪಡಿಗೆ ಸೇವಾ ಕೇಂದ್ರಗಳಿಗೆ ತೆರಳುವ ಜೊತೆಗೆ ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಹಾರ ಇಲಾಖೆಯ ಅಧಿಕೃತ ಪೋರ್ಟಲ್ ahara.karnataka.gov.in ಗೆ ಭೇಟಿ ನೀಡಿ ಇ-ಸೇವೆಗಳ ವಿಭಾಗದಲ್ಲಿ ತಿದ್ದುಪಡಿ ಅಥವಾ ಹೊಸ ಸೇರ್ಪಡೆ ಆಯ್ಕೆಯನ್ನು ಆರಿಸಬೇಕು.

ನಂತರ ಅಗತ್ಯ ಮಾಹಿತಿಯನ್ನು ನಮೂದಿಸಿ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್ಲೋಡ್ ಮಾಡಬೇಕು. ಎಲ್ಲಾ ವಿವರಗಳು ಸರಿಯಾಗಿದ್ದರೆ ಅರ್ಜಿ ಸ್ವೀಕರಿಸಲಾಗುತ್ತದೆ.

ಇದನ್ನೂ ಓದಿ: PM-Kisan Hosa arji: ಪಿಎಂ ಕಿಸಾನ್ ಹೊಸ ಅರ್ಜಿ ಆಹ್ವಾನ | ಯಾವ ರೈತರು ಅರ್ಜಿ ಹಾಕಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

ಅರ್ಜಿ ಸಲ್ಲಿಸುವ ಮುನ್ನ ಈ ವಿಚಾರ ಗಮನಿಸಿ

ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಆಧಾರ್ ಕಾರ್ಡ್ ಹಾಗೂ ಇತರ ದಾಖಲೆಗಳಲ್ಲಿರುವ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಹೆಸರು, ವಿಳಾಸ ಅಥವಾ ಜನ್ಮ ದಿನಾಂಕದಲ್ಲಿ ವ್ಯತ್ಯಾಸ ಇದ್ದರೆ ಅರ್ಜಿ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ ಇದೆ.

ಹಾಗೆಯೇ ಅರ್ಜಿ ಸಲ್ಲಿಸಿದ ನಂತರ ದೊರೆಯುವ ಸ್ವೀಕೃತಿ ಸಂಖ್ಯೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. ಇದರ ಮೂಲಕ ಮುಂದೆ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು.

ಇದನ್ನೂ ಓದಿ: Indira Kit Distribution: ಬಿಪಿಎಲ್ ಕಾರ್ಡುದಾರರಿಗೆ ಇಂದಿರಾ ಕಿಟ್ ವಿತರಣೆ | ಸರ್ಕಾರದ ಮಹತ್ವದ ಮಾಹಿತಿ ಇಲ್ಲಿದೆ…

ಈ ಅವಕಾಶವನ್ನು ಬಳಸಿಕೊಳ್ಳಿ

ರೇಷನ್ ಕಾರ್ಡ್ ಕುಟುಂಬದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಹಾಗೂ ಪಡಿತರ ಸೌಲಭ್ಯ ಪಡೆಯಲು ಇದು ಅಗತ್ಯವಾಗಿರುತ್ತದೆ.

ಆದ್ದರಿಂದ ನಿಮ್ಮ ರೇಷನ್ ಕಾರ್ಡ್’ನಲ್ಲಿ ಯಾವುದೇ ತಪ್ಪು ಅಥವಾ ತಿದ್ದುಪಡಿ ಅಗತ್ಯವಿದ್ದರೆ ಈ ಅವಕಾಶವನ್ನು ಬಳಸಿಕೊಂಡು ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸುವುದು ಒಳಿತು. ಇದರಿಂದ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ.

Karnataka Cancelled BPL Card: ಹೊಸ ಬಿಪಿಎಲ್ ಕಾರ್ಡ್ ವಿತರಣೆ | ಸರ್ಕಾರದಿಂದ ಸಿಹಿಸುದ್ದಿ


Spread the love
error: Content is protected !!